Home Cinema “ಒಬ್ಬಳು ಹುಡುಗಿ ಅಲ್ಲ 4 ಜನ ಹುಡುಗಿಯರಿದ್ದರು ನಾಲ್ಕು ಜನರು ನನ್ನ ತೊಡೆಯ ಮೇಲೆ ಕೂತಿದ್ದರು”...

“ಒಬ್ಬಳು ಹುಡುಗಿ ಅಲ್ಲ 4 ಜನ ಹುಡುಗಿಯರಿದ್ದರು ನಾಲ್ಕು ಜನರು ನನ್ನ ತೊಡೆಯ ಮೇಲೆ ಕೂತಿದ್ದರು” R U Happy..??? ಅಂದಿದ್ದೇಕೆ ದರ್ಶನ್..??!

3654
0
SHARE

ಮೈಸೂರಿನಲ್ಲಿ ಕಾರು ಅಪಘಾತದಿಂದ ಕೈ‌ ಮುರಿದುಕೊಂಡು ಆಸ್ಪತ್ರೆ ಸೇರಿದ್ದ ನಟ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ವರದಿಗೆ ಉದ್ದಟತನದ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆ ಮುಂಭಾಗದ ಹೆದ್ದಾರಿಯಲ್ಲಿ ಓನ್ ವೇ ಮಾರ್ಗದಲ್ಲಿ ಸಂಚರಿಸಿ ನಿಯಮ ಉಲ್ಲಂಘಿಸಿದ್ದಾರೆ. ಡಿಸ್ಚಾರ್ಜ್ ವೇಳೆ ಏನಾಯ್ತು.

ಕಳೆದ ಸೋಮವಾರ ಮುಂಜಾನೆ ಮೈಸೂರಿನ ರಿಂಗ್ ರೋಡ್ ನಲ್ಲಿ ಕಾರು ಅಪಘಾತವಾಗಿ ಬಲಗೈ ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಸಂಜೆ 4 ಗಂಟೆ 10 ನಿಮಿಷದ ವೇಳೆಯಲ್ಲಿ ದರ್ಶನ್ ಬಿಡುಗಡೆಯಾಗಿ ವಿಶ್ರಾಂತಿಗೆ ತೆರಳಿದ್ದಾರೆ. ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ವಿರುದ್ದ ನಟ ದರ್ಶನ್ ಗರಂ ಆದ್ರು. ಕಾರಿನಲ್ಲಿ ಇದ್ದದ್ದು ಐದು ಮಾತ್ರ.

ಕೆಲವೊಂದು ಚಾನಲ್ ನಲ್ಲಿ 6 ಮಂದಿ ಎಂದು ವರದಿಯಾಗಿದೆ. ಅಲ್ಲದೆ ಒಬ್ಬಳು ಹುಡುಗಿ ಕೂಡಾ ಇದ್ದಳು ಎಂದು ವರದಿ ಮಾಡಲಾಗಿದೆ. ಒಬ್ಬಳು ಹುಡುಗಿ ಅಲ್ಲ ಸ್ವಾಮಿ ನಾಲ್ಕು ಜನ ಹುಡುಗಿಯರಿದ್ದರು ನಾಲ್ಕು ಜನರು ನನ್ನ ತೊಡೆಯ ಮೇಲೆ ಕೂತಿದ್ದರು ಆರ್ ಯು ಹ್ಯಾಪಿ ಎನ್ನುವ ಮೂಲಕ ಉದ್ದಟತನ ಮೆರೆದ್ರು.

ಇನ್ನು ಅಪಘಾತ ನಂತರ ಕಾರು ನಾಪತ್ತೆಯಾಗಿದ್ದು ಹಾಗೂ ಆ ಕಾರನ್ನು ತೋಟವೊಂದರಲ್ಲಿ ಇರಿಸಿದ್ದ ಬಗ್ಗೆ ಮಾತನಾಡಿದ ದರ್ಶನ್, ಮತ್ತೊಂದು ವಾಹನ ಬಂದು ಡಿಕ್ಕಿ ಹೊಡೆಯಬಹುದು ಎಂಬ ಕಾರಣಕ್ಕೆ ಕಾರನ್ನು ತೋಟವೊಂದಕ್ಕೆ ಸಿಪ್ಟ್ ಮಾಡಲಾಗಿತ್ತು. ನಾವು ಯಾವುದೇ ಡಿವೈಡರ್ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿಲ್ಲ ಎನ್ನುವ ಮೂಲಕ ಕಾನೂನು ಬೋದನೆ ಮಾಡಿದ ದತ್ತ.

ಫಿಟ್ನೆಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಎಡಗೈ ಎತ್ತಿ ತೋರಿಸಿ ನಾನು ಫಿಟ್ ಆಗಿದ್ದೀನಿ. ಇದೇ ರೀತಿ ಅಭಿಮಾನಿಗಳ ಮುಂದೆ ಬರ್ತೀನಿ ಅಂದ್ರು.ಒಟ್ಟಾರೆ, ಕಾರು ಅಪಘಾತ ನಂತರ ಹಲವು ಟ್ವಿಸ್ಟ್ ಗಳ ನಡೆವೆ ಡಿಸ್ಚಾರ್ಜ್ ವೇಳೆಯಲ್ಲಿ ದರ್ಶನ್ ನಡವಳಿಕೆ ಹಲವರ ಬೇಸರಕ್ಕೂ ಕಾರಣವಾಗಿದೆ. ಇದೇನೇ ಇರಲಿ ಅಪಾಯದಿಂದ ಪಾರಾಗಿ ಬಂದಿರುವ ದರ್ಶನ್, ಸಧ್ಯ ವಿಶ್ರಾಂತಿ ತೆರಳಿದ್ದಾರೆ.

 

LEAVE A REPLY

Please enter your comment!
Please enter your name here