Home Crime “ಓಜಿ ಕುಪ್ಪಂ” ಮಾದರಿಯ ಮತ್ತೊಂದು ಗ್ಯಾಂಗ್ ಆರೆಸ್ಟ್..! ಒಂಟಿ ಮಹಿಳೆಯರು, ವೃದ್ದರೇ ಇವರ ಟಾರ್ಗೆಟ್…!

“ಓಜಿ ಕುಪ್ಪಂ” ಮಾದರಿಯ ಮತ್ತೊಂದು ಗ್ಯಾಂಗ್ ಆರೆಸ್ಟ್..! ಒಂಟಿ ಮಹಿಳೆಯರು, ವೃದ್ದರೇ ಇವರ ಟಾರ್ಗೆಟ್…!

681
0
SHARE

ಅಂಟೆನ್ಷನ್ ಡೈವರ್ಷನ್ ಅಂದ್ರೆ ನಮಗೆ ನೆನಪಾಗೋದು ಓಜಿಕುಪ್ಪಂ ಗ್ಯಾಂಗ್. ಅವರಂತೇ ಕೈ ಚಳ ತೋರಿಸಿ ಚಿನ್ನದ ಸರ ಎಗರಿಸೋ ಪಕ್ಕಾ 420 ಗ್ಯಾಂಗ್ ಇಲ್ಲೊಂದಿದೆ.. ಇವ್ರು ಒಂದ್ಸಲ ಫೀಲ್ಡಿಗಿಳಿದ್ರೆ ಕೈ‌ಚಳಕ ತೋರಿಸದೇ ಬರಿಗೈ ನಲ್ಲಿ ಹಿಂದಿರುಗ್ತಾನೇ ಇರಲಿಲ್ಲ. ಇಂತ ಖರ್ತನಾಕ್ ಗಳನ್ನ ಕಡೆಗೂ ಖಾಕಿ ಎಡೆಮುರಿಕಟ್ಟಿದೆ..ಹೀಗೆ ವೃದ್ದೆಯ ಮುಂದೆ ಬ್ಯಾಗ್ ಇಟ್ಕೊಂಡು ಒಬ್ಳು ಮಹಿಳೆ ಹೋಗ್ತಿದ್ರೆ.ವೃದ್ದೆಯ ಹಿಂದೆಯೇ ಇನ್ನೊಬ್ಳು ಹೇಗೆ ಬರ್ತಾಳೆ ಅಂತ. ಇವರ್ಯಾರೋ ದಾರಿ ಹೋಕರಲ್ಲ.. ಆ ವೃದ್ದರನ್ನೆ ಟಾರ್ಗೆಟ್ ಮಾಡಿ ಚೈನ್ ಎಗರಿಸಲು ಬಂದಿರೋ ಪಕ್ಕಾ ಖರ್ತನಾಕ್ ಕಳ್ಳಿಯರು…

ಯೆಸ್… ಹೀಗೆ ಗಮನ ಬೇರೆಡೆ ಸೆಳೆದು ಕೈ ಚಳಕ ತೋರುತ್ತಿದ್ದ ಮೂವರು ಆರೋಪಿಗಳನ್ನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ನೇತ್ರಾವತಿ, ಶಿವರಾಜ್ ಹಾಗೂ ಪ್ರವೀಣ್ ಬಂಧಿತ ಆರೋಪಿಗಳು. ಮೂಲತ: ಮಳವಳ್ಳಿಯವರಾಗಿದ್ದ ಆರೋಪಿಗಳು. ಕನಕಪುರದಿಂದ ಆಟೋದಲ್ಲಿ ಬೆಂಗಳೂರಿಗೆ ಬಂದು ಕೈ ಚಳಕ ತೋರಿಸಿ ಎಸ್ಕೆಪ್ ಆಗ್ತಿದ್ರು.

ಇನ್ನು ಈ ಗ್ಯಾಂಗ್ ನಲ್ಲಿ‌ ಮಹಿಳೆಯರೇ ಮಾಸ್ಟರ್ ಮೈಂಡ್ ಗಳಾಗಿದ್ದು‌ ನೇತ್ರಾವತಿ ಒಂಟಿ‌ಯಾಗಿ ನಡೆದು ಬರೋ ವೃದ್ದರ ಮುಂದೆ ಹೋಗಿ ಹಣವಿರೋ ಪರ್ಸ್ ಬೀಳಿಸಿ ತಗೊಳುವಂತೆ ಮಾಡಿ ಹೋಗ್ತಾಳೆ‌. ಹಿಂದಿನಿಂದ ಬರೋ ಪದ್ಮಾ ನಿಮ್ಮ ಹಣವಿರಬೇಕು ನೋಡಿ ತಗೋಳಿ ಅಂತ ಮಹಿಳೆಯರ ಜೊತೆ ಮಾತಿಗೆ ಇಳಿತಿದ್ಲು. ಅಷ್ಟರಲ್ಲಿ ಇದೇ ಗ್ಯಾಂಗ್ ನ ಮತ್ತೊಬ್ಬ ಕಳ್ಳ ಶಿವರಾಜ್ ಬಂದು ಎಲ್ಲರನ್ನ ಸಮಾಧಾನ ಮಾಡೊ ನಾಟಕ ಮಾಡ್ತಿದ್ದ.

ಆಕೆ ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ರೆ ನಿಮ್ಮ ಬಳಿ ಇರುವ ಚಿನ್ನದ ಸರ ಕೂಡ ನಮ್ಮದೆ ಅಂತ ಕೇಸ್ ಹಾಕಿಬಿಡ್ತಾರೆ ಅಂತ ಭಯಪಡಿಸಿ.. ಸರವನ್ನ ಬ್ಯಾಗ್ ನಲ್ಲಿ ಅಥವಾ ಕವರ್ ನಲ್ಲಿ ಇಟ್ಕೊಂಡು ಮನೆಗ್ ಹೋಗಿ ಅಂತ ಕಥೆ ಕಟ್ತಿದ್ರು.. ಈ ವೇಳೆ ವೃದ್ದ ಮಹಿಳೆಯರು ಸರ ತೆಗೆಯುವ ವೇಳೆ ಸರವನ್ನ ಕ್ಷಣ ಮಾತ್ರದಲ್ಲೆ ಬದಲಿಸ್ತಿದ್ರು.ಸದ್ಯ ಬಂಧಿತ ಆರೋಪಿಗಳಿಂದ ಸುಬ್ರಹ್ಮಣ್ಯಪುರ, ಕೋಣನಕುಂಟೆ, ಸೇರಿ ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಸುಮಾರು 8 ಪ್ರಕರಣಗಳನ್ನ ಪೊಲೀಸರು ಭೇದಿಸಿದ್ದು ಪರಾರಿಯಾಗಿರುವ ಆರೊಪಿಗಾಗಿ ಬಲೆಬಿಸಿದ್ದಾರೆ.

LEAVE A REPLY

Please enter your comment!
Please enter your name here