Home Crime ಓದಿರೋದು ಪಿಯುಸಿ, ಮಾಡ್ತಿರೋದು ಡಾಕ್ಟರ್ ಕೆಲ್ಸ.. ಈಕೆ ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ..

ಓದಿರೋದು ಪಿಯುಸಿ, ಮಾಡ್ತಿರೋದು ಡಾಕ್ಟರ್ ಕೆಲ್ಸ.. ಈಕೆ ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ..

523
0
SHARE

ಆಕೆ ಓದಿರೋದು ಪಿಯುಸಿ ಮಾತ್ತ ಆದ್ರೆ, ಡಾಕ್ಟರ್ ಮಾಡೋ ಎಲ್ಲಾ ಕೆಲ್ಸನೂ ಮಾಡ್ತಾಳೆ…. ಸ್ಟೆಥಸ್ಕೋಪ್ ಹಾಕೊಂಡು ಚೆಕಪ್ಪು ಮಾಡ್ತಾಳೆ, ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ…..ಇಂತ ಯುವತಿಯನ್ನು ಪ್ರೈವೇಟ್ ಕ್ಲಿನಿಕ್ ನಲ್ಲಿ ಇಟ್ಕೊಂಡು ಸುಲಿಗೆಗಿಳಿದಿರೋನು ಬೇರ್ಯಾರೂ ಅಲ್ಲ. ಆತ ಸರ್ಕಾರಿ ಆಸ್ಪತ್ರೆ ವೈದ್ಯ. ಏನೀ ಕತೆ ಈ ಸ್ಟೋರಿ ಓದಿ..ಈಕೆ ಹೆಸರು ಚೈತ್ರಾ ಶೆಟ್ಟಿ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿರುವ ಶ್ರೀ ಮಂಜುನಾಥ ಕ್ಲಿನಿಕ್ ಗೆ ಹೋದ್ರೆ, ” ಬನ್ನಿ ಬನ್ನಿ ಏನ್ ನಿಮ್ ಪ್ರಾಬ್ಲಮ್ಮು, ತಲೆ ನೋವಾ, ನೆಗಡಿನಾ, ಕೆಮ್ಮಾ…. ಏನೂ ಯೋಚಿಸ್ ಬೇಡಿ.

ಯಾವ ಕೊರೋನಾ ಟೆಸ್ಟು ಬೇಡಾ ಏನೂ ಬೇಡಾ. ನಾನೇ ಇಂಜೆಕ್ಷನ್ ಕೊಡ್ತೀನಿ, ಮಾತ್ರೆನೂ ಕೊಡ್ತೀನಿ…….” ಎನ್ನುತ್ತಾ ಈಕೆ ಟ್ರಿಟ್ಮೆಂಟ್ ಕೊಡ್ತಾಳೆ. ಅಂದಹಾಗೆ ಈಕೆ ಎಂಬಿಬಿಎಸ್ ಮಾಡಿಲ್ಲ ಓದಿರೋದು ಪಿಯುಸಿ ಮಾತ್ರ. ಸಮೀಪದ ಹೆಬ್ಬಲಗುಪ್ಪೆ ಗ್ರಾಮದವಳಾದ ಈ ಚೈತ್ರಶೆಟ್ಟಿ ಕಳೆದ 5 ವರ್ಷದಿಂದ ಇಲ್ಲಿ ತಾನೇ ಡಾಕ್ಟರ್ ಅನ್ನೊಂಡು ಟ್ರಿಟ್ಮೆಂಟ್ ಕೊಡ್ತಿದ್ದಾಳೆ.ಅಂದಹಾಗೆ, ಈ ಮಂಜುನಾಥ ಕ್ಲಿನಿಕ್ ನಡೆಸಿ ಈ ದಂಧೆಗೆ ಇಳಿದಿರುವ ವೈದ್ಯನ ಹೆಸರು ಡಾ.ರಘುನಾಥ್.

ಈತ ಹೆಚ್.ಡಿ.ಕೋಟೆ ತಾಲ್ಲೂಕು ಮುಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದಾನೆ. ಸೈಡ್ ಬುಸಿನೆಸ್ ಗಾಗಿ ಖಾಸಗಿ ಕ್ಲಿನಿಕ್ ಇಟ್ಟುಕೊಂಡಿರುವ ಈತ , ಸರ್ಕಾರಿ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಹೋಗೋದೇ ಇಲ್ಲವಂತೆ.

ಬೆಳಿಗ್ಗೆ 8.30 ರಿಂದ 11 ಗಂಟೆವರೆಗೂ ಟ್ರಿಟ್ಮೆಂಟ್ ಕೊಡ್ತಾಳೆ. 11 ಗಂಟೆಗೆ ಕ್ಲಿನಿಕ್ ಗೆ ಬರೋ ಸರ್ಕಾರಿ ಡಾಕ್ಟರ್ ಮಧ್ಯಾಹ್ನದವರೆಗೂ ಇದ್ದು ಜೇಬು ತುಂಬಿಸಿಕೊಂಡು ಕಾಟಾಚಾರಕ್ಕೆ ಸರ್ಕಾರಿ ಆಸ್ಪತ್ರೆಗೆ ವಿಸಿಟ್ ಮಾಡ್ತಾನೆ.ಇನ್ನೂ ಪ್ರಜಾ ಟಿವಿ ವರದಿಯಿಂದ ಎಚ್ಚೆತ್ತ ಹೆಚ್.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಸ್ಥಳಕ್ಕೆ ಬಂದ್ರು ಪರಿಶೀಲಿಸಿದ್ರು. ಈ ವೇಳೆ ಡಾ.ರಘುನಾಥ್ ನ ಇನ್ನಷ್ಟು ಬಣ್ಣ ಬಯಲಾಯ್ತು. ಈತನ ಮೇಲೆ ಮೂರ್ನಾಲ್ಕು ದೂರುಗಳಿದ್ದು, ಡಿಪಾರ್ಟ್‌ಮೆಂಟ್ ಎನ್ ಕ್ವೈರಿ ಕೂಡಾ ನಡೆದಿದೆ. ಅಲ್ಲದೇ ಈತನ ಕ್ಲಿನಿಕ್ ಕೆಪಿಎಂಇ ಯಿಂದ ನವೀಕರಣ ಆಗಿಯೇ ಇಲ್ಲ .ಇನ್ನು ಒಬ್ಬ ಸರ್ಕಾರಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ ಗೆ ಬೀಗ ಜಡಿದು. ಡಾ. ರಘುನಾಥ್ ಗೆ ನೊಟೀಸ್ ನೀಡಿರುವ ಟಿಎಚ್ ಒ ಸೂಕ್ತ ಕ್ರಮದ ಭರವಸೆ ನೀಡಿದರು.

ಕೊರೋನಾ ಸಂಕಷ್ಟದಲ್ಲಿ ಹಗಲು ಇರುಳು ಎನ್ನದೆ ಅನೇಕ ವೈದ್ಯರು , ಆರೋಗ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಸಂದರ್ಭದಲ್ಲಿ ಈ ಭ್ರಷ್ಟ ವೈದ್ಯ ಜನರ ಸೇವೆ ಮಾಡುವುದನ್ನು ಬಿಟ್ಟು ಪಿಯುಸಿ ಯುವತಿ ಮೂಲಕ ಚಿಕಿತ್ಸೆ ಕೊಡಿಸುವ ಮೂಲಕ ವೈದ್ಯ ವೃತ್ತಿಗೆ ಕಳಂಕ ತಂದೊಡ್ಡಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇಂತಹವರೂ ಇನ್ನೂ ಬಹಳಷ್ಟು ಮಂದಿ ಇದ್ದು ಜನತೆ ಇಂತಹ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಜೊತೆಗೆ ಸರ್ಕಾರ ಈ ಖತರ್ನಾಕ್ ವೈದ್ಯನಿಗೆ ತಕ್ಕ ಶಾಸ್ತಿ ಮಾಡಿ ವೈದ್ಯ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ.

LEAVE A REPLY

Please enter your comment!
Please enter your name here