Home Crime ಓದುವ ವಯಸ್ಸಿನಲ್ಲಿ ಪ್ರೇಮ ಪಾಶಕ್ಕೆ ಸಿಲುಕಿದ ಬಾಲಕ..! ಲವ್‌ಲೆಟರ್ ಕೊಡಲು ಹೋಗಿ ತಂದುಕೊಂಡ ಕಂಟಕ..! ಹೆದರಿ...

ಓದುವ ವಯಸ್ಸಿನಲ್ಲಿ ಪ್ರೇಮ ಪಾಶಕ್ಕೆ ಸಿಲುಕಿದ ಬಾಲಕ..! ಲವ್‌ಲೆಟರ್ ಕೊಡಲು ಹೋಗಿ ತಂದುಕೊಂಡ ಕಂಟಕ..! ಹೆದರಿ ಆತ್ಮಹತ್ಯೆ ಮಾಡಿಕೊಂಡು ಸೇರಿದ ಪರ ಲೋಕ..!

1054
0
SHARE

ಜಗತ್ತು ಬದಲಾಗ್ತಿದ್ದಂತೆ ಮಕ್ಕಳ ಮನಸ್ಥಿತಿಯೂ ಸಾಕಷ್ಟು ಬದಲಾಗ್ತಿದೆ. ಮಕ್ಕಳು ಕೂಡ ಈಗ ಅತಿವೇಗವಾಗಿ ಆಕರ್ಷಣೆಗೆ ಒಳಗಾಗುತ್ತಿದ್ದಾರೆ.ಹೀಗೆ ಪ್ರೀತಿಯೆಂಬ ಮಾಯೆಗೆ ಮರುಳಾಗಿ ಪ್ರಾಣ ಕಳೆದುಕೊಂಡಿದ್ದಾನೆ.

13 ವಯಸ್ಸಿನಲ್ಲಿಯೇ ಸಹಪಾಠಿ ಪ್ರೀತಿಸುತ್ತಿದ್ದ, ಆತ ಲವ್ ಲೆಟರ್ ಕೊಡಲು ಹೋದಾಗ ಆದ ಯಡವಟ್ಟಿನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ತಮ್ಮ ಕರುಳ ಕುಡಿಯ ಬಗ್ಗೆ ಪೋಷಕರು ಅದೇಷ್ಟೋ ಕನಸು ಹೊಂದಿರುತ್ತಾರೆ. ತಮ್ಮ ಬಡತನದ ಬಿಸಿ ಮಕ್ಕಳಿಗೆ ತಟ್ಟದಿರಲಿ ಅಂತ ದಿನವಿಡಿ ದುಡಿಯುತ್ತಾರೆ. ಮಕ್ಕಳನ್ನು ಓದಲು ಶಾಲೆಗೆ ಸೇರಿಸುತ್ತಾರೆ.

ಆದ್ರೆ, ಕೆಲವು ಮಕ್ಕಳು ಮಾತ್ರ ತಂದೆ ತಾಯಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಒಂದೇ ಕ್ಷಣದಲ್ಲಿ ಹೆತ್ತವರ ಹೊಂಗನಸ್ಸುಗಳನ್ನು ಛಿದ್ರ ಛಿದ್ರ ಮಾಡ್ತಾರೆ..ಅಂದಹಾಗೆ ಈ ಫೋಟೋದಲ್ಲಿರೋ ಬಾಲಕ 13ರ ಹರೆಯದ ಸಿದ್ದೇಶ್. ಆಂಧ್ರ ಮೂಲದ ಸಿದ್ದರಾಜು ಮತ್ತು ಸಣ್ಣಮಾರಕ್ಕ ಎಂಬ ದಂಪತಿಯ ಮುದ್ದಿನ ಮಗ.

ಬೆಂಗಳೂರು ಉತ್ತರ ತಾಲ್ಲೂಕಿನ ಹುಲ್ಲೇಗೌಡನಹಳ್ಳಿ ಸರ್ಕಾರಿ ಫ್ರೌಢ ಶಾಲೆಯಲ್ಲಿ 8 ನೇ ತರಗತಿ ಓದ್ತಿದ್ದ ಸಿದ್ದೇಶ್ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ.ಫೆಬ್ರವರಿ 14ರಂದು ಪ್ರೇಮಿಗಳ ದಿನ. ಹೀಗಾಗಿಯೇ ಪ್ರೇಮ ನಿವೇದನೆ ಮಾಡಿಕೊಳ್ಳಲು ಹುಡುಗಿಗೆ ಲವ್ ಲೆಟರ್ ಬರೆದಿದ್ದ. ಆದ್ರೆ, ಆ ಲೆಟರ್ ಟೀಚರ್ ಕೈಗೆ ಸಿಕ್ಕಿಬಿಡ್ತು.

ಸಿದ್ದೇಶನ ನಡವಳಿಕೆಯಿಂದ ಕೋಪಗೊಂಡ ಟೀಚರ್ ತಂದೆ ಕರೆದುಕೊಂಡು ಬರುವಂತೆ ಸೂಚಿಸಿದ್ರು… ಇದ್ರಿಂದ ಸಿದ್ದೇಶ್ ಅಕ್ಷರಶಃ ಗಾಬರಿಗೊಂಡಿದ್ದ. ತಂದೆಗೆ ವಿಷಯ ತಿಳಿದು ಏನ್ಮಾಡ್ತಾರೋ, ಮುಂದೆ ಏನಾಗುತ್ತೋ ಎಂಬ ಭಯದಲ್ಲಿದ್ದ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿಯೇಬಿಟ್ಟ.

ಕೆಂಗನಹಳ್ಳಿ ಹೊರವಲಯಕ್ಕೆ ತೆರಳಿ ಮಾವಿನಮರಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ.ಆದ್ರೆ, ಲವ್ ಲೆಟರ್ ಶಿಕ್ಷಕಿಗೆ ಸಿಕ್ಕಿ ಬಿಟ್ಟಿತು ಎಂಬ ಕಾರಣಕ್ಕೆ ಬಾಲಕ ಸಿದ್ದೇಶ್, ಪ್ರಾಣ ಕಳೆದುಕೊಳ್ಳುವಂತ ದುಸ್ಸಾಹಸಕ್ಕೆ ಕೈಹಾಕಿದ್ದಂತೂ ದುರಂತವೇ ಸರಿ. ಸದ್ಯಕ್ಕೆ ಮಾದನಾಯಕ ನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here