Home Crime ಓದೋಕೆ ಬರೋ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ತಾಳೆ ಈ ಶಿಕ್ಷಕಿ..!! ಮಾಡ್ಲಿಲ್ಲಾ ಅಂದ್ರೆ ಅವಾಚ್ಯ ಶಬ್ಧಗಳಿಂದ ಬೈದು...

ಓದೋಕೆ ಬರೋ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ತಾಳೆ ಈ ಶಿಕ್ಷಕಿ..!! ಮಾಡ್ಲಿಲ್ಲಾ ಅಂದ್ರೆ ಅವಾಚ್ಯ ಶಬ್ಧಗಳಿಂದ ಬೈದು ಬಾರಿಸುತ್ತಾಳಂತೆ ಈ ರಾಕ್ಷಸಿ..!?

1757
0
SHARE

ಶಿಕ್ಷಣ ಹೇಳಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕಿಯೊಬ್ಬರು ಅವರಿಂದ ಕೈ ಕಾಲು ಒತ್ತಿಸಿಕೊಂಡು ಮಸಾಜ್ ಮಾಡಿಸಿಕೊಳ್ಳುತಾರೆ… ತಾವು ಹೇಳಿದಂತೆ ಕೇಳದ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸತಾರೆ. ಇದನ್ನ ವಿಚಾರಿಸೋಕೆ ಬಂದ್ರೆ ಪೋಷಕರಿಗೆ ಅವಾಜ್ ಹಾಕ್ತಾರೆ… ಕೇಳಿದ್ರೆ ನಾನು ಆ ಥರಾ ಮಾಡಿಲ್ಲಾ ಅಂತಾರೆ…ಸರ್ಕಾರಿ ಶಾಲೆಗೆ ಬೀಗ ಜಡಿದು ಆಕ್ರೋಷ ವ್ಯಕ್ತಪಡಿಸುತ್ತಿರುವ ಮಕ್ಕಳ ಪೋಷಕರು… ಶಿಕ್ಷಕಿ ವಿರುದ್ದ ಘೋಷಣೆ ಕೂಗ್ತಾಇರೋ ಸಾರ್ವಜನಿಕರು… ಅವ್ರ ಜೊತೆಗೆ ಶಾಲೆ ಆವರಣದಲ್ಲಿ ಕುಳಿತ ಮಕ್ಕಳು…ಇಂತಹದ್ದೋಂದು ದ್ರೂಷ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ…ಸರ್ಕಾರಿ ಶಾಲೆಗೆ ಬೀಗ ಜಡಿದು ಆಕ್ರೋಷ ವ್ಯಕ್ತಪಡಿಸುತ್ತಿರುವ ಮಕ್ಕಳ ಪೋಷಕರು…ಶಿಕ್ಷಕಿ ವಿರುದ್ದ ಘೋಷಣೆ ಕೂಗ್ತಾಇರೋ ಸಾರ್ವಜನಿಕರು… ಅವ್ರ ಜೊತೆಗೆ ಶಾಲೆ ಆವರಣದಲ್ಲಿ ಕುಳಿತ ಮಕ್ಕಳು…ಇಂತಹದ್ದೋಂದು ದ್ರೂಷ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ..ಶಿಕ್ಷಕಿಯ ಈ ವರ್ತನೆಯಿಂದ ಆಕ್ರೋಶ ಗೊಂಡ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ…ಶಿಕ್ಷಕಿಯ ಈ ವರ್ತನೆ ಯಿಂದ ರೋಷಿ ಹೋದ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬೀಡಿಸಿ ಬೇರೆ ಶಾಲೆಗೆ ಕರೆದೊಯ್ಯುವ ಪರಿಸ್ಥಿತಿ ಬಂದಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳೇದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ ಆದ್ದರಿಂದ ಅಥಣಿ ಪಟ್ಟಣದ ಮಹಂತೇಶ ನಗರದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಲಿತಾ ಬಿಳ್ಳೂರ ಎಂಬ ಶಿಕ್ಷಕಿಯನ್ನು ಬೇರೆಡೆ ವರ್ಗಾಯಿಸುವಂತೆ ಪೋಷಕರು ಆಗ್ರಹಿಸಿದ್ದಾರೆ…ಇನ್ನೂ ಈ ಬಗ್ಗೆ ಮಕ್ಕಳು ಕೂಡ ಆರೋಪ ಮಾಡಿದ್ದು  ಶಿಕ್ಷಕಿ ಲಲಿತಾ ಬಿಳ್ಳೂರ ಕೈ ಕಾಲು ಒತ್ತಿಸಿಕೊಳ್ಳುತ್ತಿದ್ದು ಪಾಠ ಮಾಡದೇ ತರಗತಿಯಲ್ಲಿ ನಿದ್ದೆ ಮಾಡುತ್ತಿದ್ದಾರೆ. ನಾವು ತರಗತಿ ಒಳಗೆ ಬಂದಾಗ ನಮ್ಮನ್ನು ಬೈದು ಆಟ ಆಡಿ ಹೋಗಿ ಇಲ್ಲೇಕೆ ಬರ್ತೀರಿ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ…ಇನ್ನೂ ಈ ಆರೋಪಗಳನ್ನು ಅಲ್ಲಗಳೆದ ಶಿಕ್ಷಕಿ ಲಲಿತಾ ತಾವು ಕೇವಲ ಕುರ್ಚಿ ಮೇಲೆ ಕುಳಿತು ಎದ್ದು ಹೊಗಿದ್ದೆನೆ ಪೋಷಕರು ಮಕ್ಕಳ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ ನಾನು ಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸಿಲ್ಲ  ಯಾರನ್ನೂಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ ಕಳೆದ ಹದಿಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಬೇಕಿದ್ದರೆ ಬೇರೆಡೆ ವರ್ಗಾವಣೆ ಮಾಡಲಿ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ…ಒಟ್ಟಾರೆಯಾಗಿ ಹಲವಾರು ದಿನಗಳಿಂದ ಈ ಶಾಲೆಯಲ್ಲಿ ಮಕ್ಕಳಿಂದ ಕೈ ಕಾಲು ಒತ್ತಿಸಿಕೊಳ್ಳುತ್ತಿದ್ದು ಅವರನ್ನು ಬೇರೇಡೆ ವರ್ಗಾಯಿಸಿ ಇಂತಹ ಶಿಕ್ಷಕಿ ನಮಗೆ ಬೇಡ ಎಂದು ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೋಷಕರ ಮನ್ ಒಲಿಸಿ ಬೀಗ ತೆಗೆಸಿದ್ದು ಮೂರುದಿನಗಳ ಕಾಲಾವಕಾಶ  ನೀಡೀದ್ದು ತಪ್ಪಿತಸ್ಥರ ವಿರುದ್ದ ಏನು ಕ್ರಮ ಕೈಗೊಳ್ಳುತ್ತಾರೆ ಅನ್ನುವದನ್ನುಕಾಯ್ದು ನೋಡಬೇಕಾಗಿದೆ….

.

LEAVE A REPLY

Please enter your comment!
Please enter your name here