Home Crime ಓಲಾ ಕ್ಯಾಬ್ ಚಾಲಕರೇ ಎಚ್ಚರ..! ಎಚ್ಚರ..! ಯಾಮಾರಿದ್ರೆ ನಿಮ್ಮ ಜೀವಕ್ಕೆ ಬರುತ್ತದೆ ಆಪತ್ತು..!?

ಓಲಾ ಕ್ಯಾಬ್ ಚಾಲಕರೇ ಎಚ್ಚರ..! ಎಚ್ಚರ..! ಯಾಮಾರಿದ್ರೆ ನಿಮ್ಮ ಜೀವಕ್ಕೆ ಬರುತ್ತದೆ ಆಪತ್ತು..!?

1325
0
SHARE

ಬೆಂಗಳೂರಿನಲ್ಲಿ ಡ್ಯೂಟಿ ಮಾಡೋ ಓಲಾ ಚಾಲಕರೇ, ನೀವು ಈ ಸ್ಟೋರಿ ಓದಲೇಬೇಕು. ಇದು ನಿಮ್ಗೆ ಸಂಬಂಧಿಸಿದ ಸ್ಟೋರಿ. ಯಾವುದೋ ಏರಿಯಾಗೆ ಹೋಗ್ಬೇಕು ಅಂತ ನಾಲ್ಕೈದು ಜನ ಒಟ್ಟಾಗಿ ಬಂದು ನಿಮ್ಮ ಕಾರಿಗೆ ಹತ್ಕೊಂಡ್ರೆ ಎಚ್ಚರವಹಿಸಿ. ಅಸಲಿಗೆ ಅವರ ಉದ್ದೇಶವೇ ಬೇರೆಯದು ಆಗಿರುತ್ತದೆ.

ಇಲ್ಲಿ ಹೀಗೆ ಕೂಳಿತಿರೋ ವ್ಯಕ್ತಿ ಹೆಸರು ಸೋಮಶೇಖರ್. ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಓಡಿಸ್ಕೊಂಡು ಜೀವನ ನಿರ್ವಹಣೆ ಮಾಡ್ತಿದ್ದ. ನಿನ್ನೆ ಸಂಜೆ 4 ಗಂಟೆಗೆ ಎಂದಿನಂತೆ ತನ್ನ ಡ್ಯೂಟಿ ಶುರು ಮಾಡಿದ್ದ. ಮೂರ್ನಾಲ್ಕು ಟ್ರಿಪ್ ಮುಗಿಸಿದ್ದ ಸೋಮಶೇಖರ್‌ಗೆ ರಾತ್ರಿ 10.30ರ ಸುಮಾರಿಗೆ ಒಂದು ಬುಕ್ಕಿಂಗ್ ಬಂದಿತ್ತು.

ಆಡುಗೋಡಿಯಿಂದ ದೊಮ್ಮಸಂದ್ರ ಹೋಗೋಕೆ. ಬುಕ್ಕಿಂಗ್ ಕನ್ಫರ್ಮ್ ಮಾಡಿದ ಸೋಮಶೇಖರ್ ಆಡುಗೋಡಿ ಮಸೀದಿ ಹತ್ತಿರ ಹೋಗಿದ್ದ. ಅಲ್ಲಿ ನಾಲ್ವರು ಸೋಮಶೇಖರ್ ಇಂಡಿಕಾ ಕಾರಿಗೆ ಹತ್ಕೊಂಡ್ರು. ಅಲ್ಲಿಂದ ಬುಕ್ಕಿಂಗ್ ಪ್ರಕಾರ ಕಾರು ದೊಮ್ಮಸಂದ್ರ ತಲುಪಿತ್ತು. ಮೇನ್‌ ರೋಡ್‌ನಲ್ಲೇ ಲೊಕೇಶನ್ ಇದ್ರೂ ಕಾರಿನಲ್ಲಿದ್ದವರು ಮಾತ್ರ ನಮ್ಮ ಮನೆ ಸ್ವಲ್ಪ ಒಳಗಡೆ ಎಂದು ಹೇಳಿ ನಿರ್ಜನ ರಸ್ತೆಗೆ ಕರ್ಕೊಂಡು ಹೋದ್ರು.

ಅಲ್ಲಿ ನಾಲ್ವರೂ ಸೇರ್ಕೊಂಡು ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ರು.ಇನ್ನೂ ಇಡೀ ರಾತ್ರಿ ಬೆಂಗಳೂರು ಸುತ್ತಿಸಿದ್ದ ಕಿರಾತಕರು, ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಸೋಮಶೇಖರ್‌ನ ಕರ್ಕೊಂಡು ರಾಮನಗರಕ್ಕೆ ಬಂದಿದ್ರು. ರಾಮನಗರದ ಫೆಡರಲ್ ಬ್ಯಾಂಕ್ ಎಟಿಎಮ್ ನಲ್ಲಿ 29 ಸಾವಿರ ಹಣವನ್ನ ಕೂಡ ಡ್ರಾ ಮಾಡಿಸಿಕೊಂಡಿದ್ರು. ಬಳಿಕ ಚನ್ನಪಟ್ಟಣ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಆನಂದ ಭವನ ಅನ್ನೋ ಲಾಡ್ಜ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಈ ಎಲ್ಲಾ ದೃಶ್ಯಗಳು ಲಾಡ್ಜ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರೂಮ್ ಸಿಗ್ತಿದ್ದಂಗೆ ಒಬ್ಬ ಆರೋಪಿ ಸೋಮಶೇಖರ್ ಬೆನ್ನಿಗೆ ಚಾಕು ಹಿಡ್ಕೊಂಡು ರೂಮ್‌ಗೆ ಕರ್ಕೊಂಡು ಹೋಗ್ತಾನೆ. ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳೋದು ಅಂತ ಯೋಚ್ನೆ ಮಾಡ್ತಿದ್ದ ಸೋಮಶೇಖರ್, ಲಾಡ್ಜ್ ನ ಟಾಯ್ಲೆಟ್‌ ಒಳಗೆ ಹೋಗಿದ್ದ. ನಂತ್ರ ಟಾಯ್ಲೆಟ್‌ನ ಕಿಟಕಿ ಮೂಲಕ ಎಸ್ಕೇಪ್ ಆಗಿ ಚನ್ನಪಟ್ಟಣ ಪುರ ಪೊಲೀಸ್ ಠಾಣೆಗೆ ಬಂದಿದ್ದ.

ಟಾಯ್ಲೆಟ್‌ಗೆ ಹೋದ ಸೋಮಶೇಖರ್ ತಪ್ಪಿಸಿಕೊಂಡಿದ್ದರಿಂದ ಆರೋಪಿಗಳು ರೂಮ್ ಖಾಲಿ ಮಾಡಿ ಇಂಡಿಕಾ ಕಾರ್‌ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.ಇನ್ನೂ ಕಿರಾತಕರು ಬೆಳಗಿನ ಜಾವ ಸೋಮಶೇಖರ್ ಮೊಬೈಲ್‌ನಿಂದ ಆತನ ಪತ್ನಿಗೆ ವಿಡಿಯೋ ಕಾಲ್ ಸಹ ಮಾಡಿಸಿದ್ರು.

ಕಿರಾತಕರಿಂದ ತಪ್ಪಿಸಿಕೊಂಡು ಬಂದು ಯಾವಾಗ ಕ್ಯಾಬ್ ಚಾಲಕ ಈ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡಿದ್ನೋ ಚನ್ನಪಟ್ಟಣ ಪುರ ಠಾಣೆ ಪೊಲೀಸರು ಕ್ಯಾಬ್ ಚಾಲಕನಿಂದ ಸಾಕಷ್ಟು ಮಾಹಿತಿ ಪಡೆದು, ಲಾಡ್ಜ್ ಕೂಡ ಕೂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸಂಬಂಧ ಪ್ರಕರಣವನ್ನ ಬೆಂಗಳೂರು ಆಡಗೋಡು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here