Home Crime ಕಂದಮ್ಮಗಳೊಂದಿಗೆ ನೆಲದ ಮೇಲೆ ಮಲಗುವ ಬಾಣಂತಿಯರು..!? ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಕನಿಷ್ಠ ಸೌಲಭ್ಯ…

ಕಂದಮ್ಮಗಳೊಂದಿಗೆ ನೆಲದ ಮೇಲೆ ಮಲಗುವ ಬಾಣಂತಿಯರು..!? ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಕನಿಷ್ಠ ಸೌಲಭ್ಯ…

1869
0
SHARE

ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರ ಪಾಲಿಗೆ ದೇವಸ್ಥಾನ ಇದ್ದಂತೆ, ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳು ದೇವರೆ ಎಂದುಕೊಂಡು ಪಾಪ ಬಡಜನರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಬಂದ ಮೇಲೆ ಅವರಿಗೆ ಗೊತ್ತಾಗೊದು ನಾವು ಅಂದುಕೊಂಡಿದ್ದೆ ಬೇರೆ ಇಲ್ಲಿಗೆ ಬಂದ ಮೇಲೆ ಅನುಭವಿಸ್ತಾಯಿರೊದೆ ಬೇರೆ ಅಂತ.

ಜಿಲ್ಲಾಸ್ಪತ್ರೆಯ ಒಂದೇ ಕೊಠಡಿಯಲ್ಲಿ ಮಲಗಿರುವ ಮಹಿಳೆಯರು, ಆ ಮಹಿಳೆಯರ ಪಕ್ಕದಲ್ಲಿ ಮಲಗಿರೊ ಮುದ್ದಾದ ಆಗ ತಾನೇ ಭೂಮಿಗೆ ಕಾಲಿಟ್ಟ ಪುಟ್ಟ ಕಂದಮ್ಮಗಳು. ಈ ದೃಶ್ಯ ಕಂಡು ಬಂದದ್ದು ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ. ಸರ್ಕಾರಿ ಆಸ್ಪತ್ರೆ ಇರುವದು ಬಡವರಿಗಾಗಿಯೆ, ಅಲ್ಲಿ ನಮ್ಮ ಸೇವೆ ಮಾಡಿ ನಮ್ಮ ಕಂದಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಇಲ್ಲಿಗೆ ಅನೇಕ ಗರ್ಭಿಣಿಯರು ಹೆರಿಗೆಗೆಂದು ಬರುತ್ತಾರೆ.

ಆದರೆ ಇಲ್ಲಿಗೆ ಬಂದ ಆ ಗರ್ಬಿಣಿಯರಿಗೆ ಕನಿಷ್ಠ ಸೌಲಭ್ಯವನ್ನು ಸಹ ದೊರಕಿಸುವಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ಧಾರಿ ತೋರುತ್ತಿದ್ದಾರೆ‌. ಇನ್ನು ಬಾಣಂತಿಯರಿಗೆ ಮಲಗುವ ಬೆಡ್ ಸಹ ನೀಡದೆ ನೆಲದ ಮೇಲೆ ಮಲಗಲು ಇಲ್ಲಾ ಹೊರಗಡೆ ತಿರುಗಾಡಲು ಹೇಳುತ್ತಾರೆ.ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗಾಗಿ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡಿರುತ್ತದೆ. ಬಾಣಂತಿಯರಿಗೆ ಜಿಲ್ಲಾಸ್ಪತ್ರೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ.

ಇಲ್ಲಿನ ಹಿರಿಯ ವೈದ್ಯಾಧಿಕಾರಿಯಾದ ಗಿರಿಧರ್ ಕೂಕನೂರ ಅವರನ್ನು ಕೇಳಿದ್ರೆ ಇಲ್ಲಿ ಯಾವುದೇ ಸಮಸ್ಯೆಯಿಲ್ಲ ನಾವು ಯಾರನ್ನು ಈ ರೀತಿ ನಡೆಸಿಕೊಂಡಿಲ್ಲ ನಾವು ಎಲ್ಲರನ್ನು ಚೆನ್ನಾಗೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ನಮ್ಮಲ್ಲಿ 62 ಹಾಸಿಗೆಗಳಿದ್ದು ಅವು ಭರ್ತಿಯಾದ ಕಾರಣ ಕೆಳಗಡೆ ಜಾಗ ನೀಡಲಾಗಿದೆ, ಮೂರು ಜಿಲ್ಲೆಗಳಿಂದ ನಮ್ಮಲ್ಲಿ ಜನ ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನ ಜನ ಹೆರಿಗೆಗೆ ಬರುವುದರಿಂದ ಜಾಗದ ಕೊರತೆಯಿಂದ ಸಣ್ಣ ಸಮಸ್ಯೆಯಾಗಿದೆ.

ಅವರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹಾರಿಕೆಯ ಉತ್ತರ ನಿಡಿದ್ದಾರೆ.ಸರ್ಕಾರ ಆರೋಗ್ಯದ ವಿಚಾರವಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದೆ ಆದರೆ ಇಂತಹ ಘಟನೆಗಳಿಂದ ಬಡ ಜನರು ಮಾತ್ರ ಆಗಾಗ ಸಂಕಷ್ಟಕ್ಕೆ ಸಿಲುಕಿತ್ತಿರುವುದು ಮಾತ್ರ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಜನ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮೂರಿಯುವ ಪರಿಸ್ಥಿತಿ ಬಂದೊದಗಿದೆ.

LEAVE A REPLY

Please enter your comment!
Please enter your name here