Home Cinema ಕಣ್ಣರಳಿಸಿ ನೋಡಿ “ಸುಮನ್ ರಂಗನಾಥ್” “ಕ್ಯಾಬರೆ”..!“ಕವಲುದಾರಿ”ಯಲ್ಲಿ ಕಣ್ಮನ ಸೆಳೆಯುತ್ತಾಳೆ “ನೀರೆ”..!

ಕಣ್ಣರಳಿಸಿ ನೋಡಿ “ಸುಮನ್ ರಂಗನಾಥ್” “ಕ್ಯಾಬರೆ”..!“ಕವಲುದಾರಿ”ಯಲ್ಲಿ ಕಣ್ಮನ ಸೆಳೆಯುತ್ತಾಳೆ “ನೀರೆ”..!

1639
0
SHARE

ಸುಮನ್ ರಂಗನಾಥ್… ಸ್ಯಾಂಡಲ್‌ವುಡ್‌ನ ಗ್ಲಾಮ್‌ಡಾಲ್. ಇತ್ತೀಚೆಗಷ್ಟೇ ಡಬಲ್ ಇಂಜಿನ್ ಮತ್ತು ನೀರ್‌ದೋಸೆ ಚಿತ್ರದಲ್ಲಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹಾಟ್‌ಬೀಟ್ ಹೆಚ್ಚಿಸಿದ್ದ ಪೋರಿ. ಇದೀಗ ಕವಲುದಾರಿಯಲ್ಲಿ ಕಮಾಲ್ ಮಾಡ್ತಿದ್ದಾರೆ. ಮಾಧುರ್ಯ ತುಂಬಿಂದ ಮಾಧುರಿಯಾಗಿ ಮೋಡಿ ಮಾಡ್ತಿದ್ದಾರೆ.

ಯಸ್.. ಸುಮನ್ ರಂಗನಾಥ್, ವಯಸ್ಸಿನ ಅಂತರವಿಲ್ಲದೆ ಪಾತ್ರಕ್ಕೆ ತಕ್ಕಂತೆ ಬೋಲ್ಡ್ ನಟನೆಯ ಮೂಲಕ ಅಭಿಮಾನಿಗಳ ದಿಲ್ ಕದಿಯುವ ಚೋರಿ. ಇತ್ತೀಚೆಗಷ್ಟೇ ಬಿಡುಗಡೆಯಾದ ಕವಲುದಾರಿ ನಯಾ ಹಾಡಿನ ಮೂಲಕ ಕಣ್ಣರಳಿಸಿ ನೋಡುವಂತೆ ಮಾಡ್ತಿದ್ದಾರೆ. ಅದು ಬಾಲಿವುಡ್‌ನ ಬಿಂದಾಸ್ ಲಡ್ಕೀ ಮಾಧುರಿ ದೀಕ್ಷಿತ್ ಸ್ಟೈಲ್‌ನಲ್ಲಿ, ರೆಟ್ರೋ ಲುಕ್‌ನಲ್ಲಿ ಕೆಣ್ಣಲ್ಲೇ ಕೆಣಕುತ್ತಿದ್ದಾರೆ. ಕಣ್ಣರಳಿಸಿ ಬಿಟ್ಟಕಣ್ಣು ಬಿಟ್ಟಂತೆ ನೋಡುವಂತೆ ಮಾಡ್ತಿದ್ದಾರೆ.

ಹೌದು.. ಪ್ರತಿ ರಿಲಿಕಲ್ ವಿಡಿಯೋವನ್ನು ಹೊಸತನದೊಂದಿಗೆ ಪರಿಚಯಿಸಿರುವ ಕವಲುದಾರಿ ಟೀಂ ಮತ್ತೊಂದು ವಿನೂತನವೆನ್ನಿಸುವ ಹಾಡಿನ ವಿಡಿಯೋ ರಿಲೀಸ್ ಮಾಡಿದೆ. ಅದು ಸೋಷಿಯಲ್ ಪ್ಲಾಟ್ ಫಾಂನಲ್ಲಿ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಮಾಧುರಿ ಎಂಬ ಪಾತ್ರದಲ್ಲಿ ಸುಮನ್ ನಟಿಸುತ್ತಿದ್ದಾರೆ. ಖಾಲಿ ಖಾಲಿ ಅನಿಸೋ ಕ್ಷಣಕೆ.. ಎಂದು ಶುರುವಾಗುವ ಈ ಗೀತೆಯಲ್ಲಿ ಸುಮನ್ ರಂಗನಾಥ್ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಗೀತೆಯಲ್ಲಿ ಕೆಲವೊಂದು ಸೀನ್‌ಗಳಲ್ಲಿ ಮಾತ್ರ ಸುಮನ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ. ಸುಮನ್ ನಯಾ ಲುಕ್ ಮೂಲಕ ಕಿಕ್ ಏರಿಸುವಂತೆ ಮಾಡಿದ್ದಾರೆ.ಇಷ್ಟೇಅಲ್ಲ, ಹಾಡಿನ ಜೊತೆಗೆ ಮೇಕಿಂಗ್ ವಿಡಿಯೋವನ್ನು ಸೇರಿಸಿರುವ ನಿರ್ದೇಶಕರು. ಚಿತ್ರದಲ್ಲಿ ಈಹಾಡು ಎಷ್ಟು ಇಂಪಾಟೆಂಟ್ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ರಾಕ್‌ಲೈನ್ ಸ್ಟುಡೀಯೋದಲ್ಲಿ ವರದರಾಜ್ ಕಾಮತ್ ಕಲರ್ ಫುಲ್ ಸೆಟ್, ಕಡುಗೆಂಪು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಸುಮನ್ ಮಾಧುರಿ ಸ್ಟೈಲ್‌ನಲ್ಲಿ ಮಿರಮಿರ ಮಿಂಚಿದ್ದು. ಮಸ್ತ್ ಹೆಜ್ಜೆ ಹಾಕಿದ್ದಾರೆ.

ವಿಶ್ವಕಿರಣ್ ನೃತ್ಯ ನಿರ್ದೇಶನದಲ್ಲಿ ಈ ಹಾಡನ್ನು ನಾಲ್ಕು ದಿನಗಳ ಚಿತ್ರೀಕರಿಸಲಾಗಿದೆ. ಕವಲುದಾರಿ ಸಸ್ಪೆನ್ಸ್ ಕಂ ಥ್ರಿಲ್ಲರ್ ಚಿತ್ರವಾಗಿದ್ದು ಹಾಗಾಗಿನೇ ಹಳೇ ಕಾಲದ ಥ್ರಿಲ್ಲರ್ ಚಿತ್ರದ ಶೈಲಿಯಲ್ಲಿ ಹಾಡು ಸೆರೆಹಿಡಿಯಲಾಗಿದೆ. ಅದಕ್ಕೆ ತಕ್ಕಂತೆ ರೆಟ್ರೋ ಫೀಲ್‌ಗೆ ಕರೆದುಕೊಂಡು ಹೋಗುವ ವಿಷ್ಯೂವಲ್ ಟ್ರೀಟ್ ಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ಹೆಗ್ಡೆ.ಇನ್ನು, ರೆಟ್ರೋ ಸಿನಿಮಾಗಳಲ್ಲಿ ಕ್ಯಾಬ್ರರೆ ಶೈಲಿಯನ್ನು ರಿಕ್ರಿಯೇಟ್ ಮಾಡಿರುವ ಚಿತ್ರತಂಡ. ಹಾಡಿಗೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸುಮನ್ ರಂಗನಾಥ್ ಬಿಂದಾಸಾಗಿ ಹೆಜ್ಜೆಹಾಕಿಸಿದ್ದಾರೆ.

ಅಲ್ಲದೆ ಇಂದೆಂದಿಗಿಂತಲ್ಲೂ ಗ್ಲಾಮರಸ್ಸಾಗಿ ಸುಮನ್ ಬಿಡುಗಡೆಯಾಗಿರುವ ಹಾಡಿನಲ್ಲಿ ಅಟ್ರ್ಯಾಕ್ಟ್ ಮಾಡ್ತಿದ್ದಾರೆ. ಕಾಲಿಗೆ ಗೆಜ್ಜೆ ಗಟ್ಟಿ ಹೆಜ್ಜೆ ಹಾಕುವುದಕ್ಕಿಂತ್ಲೂ ಭಾವನೆಗಳಿಗೆ ಹೆಚ್ಚು ಒತ್ತುಕೊಡಲಾಗಿದೆ.ಚಿತ್ರಕ್ಕೆ ಚರಣ್ ರಾಜ್ ಸಂಗೀತದಲ್ಲಿ ಹಾಡುಗಳು ಮೂಡಿಬಂದಿದೆ. ಧನಂಜಯ್ ರಂಜನ್ ಹಾಡಿಗೆ ಸಾಹಿತ್ಯವಿದೆ. ಈ ಹಿಂದೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ಧ್ವನಿ ನೀಡಿದ್ದ ಶರಣ್ಯ ಗೋಪಿನಾಥ್ ಈ ಹಾಡು ಹಾಡಿದ್ದು. ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದ್ದಾರೆ. ಪಿ.ಆರ್ ಕೆ ಆಡಿಯೋ ಸೋಷಿಯಲ್ ಪ್ಲಾಟ್ ಫಾಂನಲ್ಲಿ ಹಾಡು ಬಿಡುಗಡೆಯಾಗಿದ್ದು.

ಹಾಡು ಬಿಡುಗಡೆಯಾದ ಒಂದು ದಿನದಲ್ಲೇ ಲಕ್ಷ ಲಕ್ಷ ವ್ಯೂವ್ಸ್ ಸಂಖ್ಯೆಯನ್ನು ಪಡೆದುಕೊಂಡಿದೆ. ಅಲ್ಲದೆ ಸಿನಿಪ್ರೇಕ್ಷದವರ ದುಲ್ ಕದಿಯುತ್ತಾ ತನ್ನ ವೀಕ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.ಇನ್ನು ಈ ಚಿತ್ರದಲ್ಲಿ ಅನಂತ್‌ನಾಗ್ ನಿವೃತ್ತ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಗೆ ನಾಯಕಿಯಾಗಿ ರೋಷಿನಿ ಪ್ರಕಾಶ್ ಜೊಡಿಯಾಗಿ ನಟಿಸಿದ್ದಾರೆ. ಚಿತ್ರದ ಮೇಲೆ ಭರವಸೆಯನ್ನು ಹುಟ್ಟುಹಾಕುವಂತೆ ಮಾಡಿದ್ದಾರೆ.

ತುಣುಕುಗಳಲ್ಲಿ ಅಬ್ಬರಿಸಿರುವ ರಿಷಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡುವ ಸೂಚನೆ ನೀಡಿದ್ದಾರೆ.ಬಹುದೊಡ್ಡ ತಾರಾಬಳಗದ ಸಿನಿಮಾ ಇದು. ಅಭಿಮಾನಿಗಳ ಮನತಣಿಸೋಕೆ ಬರೀ ರಿಷಿಯಷ್ಟೇ ಅಲ್ಲದ. ಒಂದು ಕೊಲೆಯನ್ನು ಭೇದಿಸುವ ಕಥೆಯಲ್ಲಿ ರಿಷಿ, ಅನಂತ್‌ನಾಗ್ ಜೊತೆಗೆ ರೋಷಿಣಿ ಪ್ರಕಾಶ್, ಜೊತೆಗೆ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರ ಫೈನಲ್ ಕೆಲಸದಲ್ಲಿ ಬಿಝೀಯಾಗಿದ್ದು.

ಪುನೀತ್ ರಾಜ್‌ಕುಮಾರ್ ನಿರ್ಮಾಣದಲ್ಲಿ ಕವಲುದಾರಿ ಚಿತ್ರದ ಕೆಲಸಗಳೂ ಬಹುತೇಕ ಪೂರ್ಣಗೊಂಡಿದೆ. ಈಗಾಗಲ್ಲೇ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೂಡ ಸಿಕ್ಕಿದ್ದು. ಏ ೧೨ಕ್ಕೆ ಕವಲುದಾರಿ ರಾಜ್ಯಾದ್ಯಂತ ಬಿಡುಗಡೆ ಆಗಿಲಿದೆ. ಅದೇನೇ.. ಇದ್ರು ಪುನೀತ್ ಪವರ್.. ರಿಷಿಯ ಖದರು.. ಸುಮನ್ ರಂಗನಾಥ್ ಕ್ಯಾಬರ್ರೆ ಡ್ಯಾನ್ಸ್ ಮೂಲಕ ಸದ್ದು ಮಾಡ್ತಿರುವ ಕವಲುದಾರಿ ಅಸಲಿ ದರ್ಶನ ಏಪ್ರಿಲ್ ೧೨ರಂದು ಆಗಲಿದ್ದು. ಯಾವರೀತಿ ತೆರೆಮೇಲೆ ಮೋಡಿ ಮಾಡುತ್ತೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುವಂತೆ ಮಾಡ್ತಿದೆ..

LEAVE A REPLY

Please enter your comment!
Please enter your name here