Home Crime ಕಣ್ಣು ಕುಕ್ಕುವ ಚಂದುಳ್ಳಿ ಚೆಲುವೆನಾ ಜಿಮ್‌ನಲ್ಲೇ ಪಟಾಯ್ಸಿ “ನೀನೇ ನನ್ನ ಪ್ರಾಣ” ಅಂದು ಡಿಲ್ಲಿಯಿಂದ ಬೆಂಗಳೂರಿಗೆ...

ಕಣ್ಣು ಕುಕ್ಕುವ ಚಂದುಳ್ಳಿ ಚೆಲುವೆನಾ ಜಿಮ್‌ನಲ್ಲೇ ಪಟಾಯ್ಸಿ “ನೀನೇ ನನ್ನ ಪ್ರಾಣ” ಅಂದು ಡಿಲ್ಲಿಯಿಂದ ಬೆಂಗಳೂರಿಗೆ ಬಂದು ಬರ್ಬರವಾಗಿ ಫಿನಿಶ್ ಮಾಡಿದ್ಯಾಕೆ ಈ ಮಜ್ನು..!?

3564
0
SHARE

ತಾಜ್ ಮಹಲ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ಹೆಸರು, ನೆಚ್ಚಿನ ತಾಣ ತಾಜ್ ಮಹಲ್. ಕೇವಲ ಭಾರತದವರಿಗೇ ಅಲ್ಲಾ ಪ್ರಪಂಚದಾದ್ಯಂತ ಇರೋ ಜನರಿಗೂ ನಮ್ಮ ದೇಶದ ಪ್ರೇಮಸೌಧ ತಾಜ್ ಮಹಲ್ ಫೇವರೇಟ್ ಸ್ಪಾಟ್. ಯಾಕಂದ್ರೆ.. ಪ್ರೇಮಿಗಳಿಲ್ಲದ ದೇಶವೇ ಇಲ್ಲ ನೋಡಿ. ಪ್ರೀತಿಗೆ ಪ್ರತಿರೂಪ ಸಂಕೇತ ಅಮೃತ ಶಿಲೆಯ ಈ ಸುಂದರ ತಾಜ್ ಮಹಲ್. ಅದೇ ಕಾರಣಕ್ಕೆ, ಪ್ರವಾಸಿಗರೂ ಸೇರಿ ಪ್ರೀತಿಯಲ್ಲಿ ಮುಳುಗಿರೋ ಪ್ರೇಮಿಗಳಿಗೆ ತಾಜ್ ಮಹಲ್ ಅಂದ್ರೆ ಅದೇನೋ ಒಂತರಾ ಖುಷಿ. ಮನಸ್ಸಿಗೆ ಆಹ್ಲಾದ. ಮೊಘಲ್ ದೊರೆ ಶಹಜಹಾನ್ ತನ್ನ ಪ್ರೀತಿಯ ಸ್ಪೂರ್ತಿಯಾಗಿದ್ದ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿಸಿದ್ದು ಈ ಅದ್ಭುತ ಕಟ್ಟಡವನ್ನ.

ತಾಜ್ ಮಹಲ್ ಇರೋವರೆಗೂ ಯಾವ ರೀತಿ ಶಹಜಹಾನ್ ಮುಮ್ತಾಜ್ ಹೆಸರು ಅಮರವಾಗಿರುತ್ತೋ ಅದೇ ರೀತಿ ಈ ಭೂಮಿ ಮೇಲೆ ಪ್ರೀತಿ ಅನ್ನೋದು ಇರೋವರೆಗೂ ತಾಜ್ ಮಹಲ್ ಹೆಸರು ಶಾಶ್ವತವಾಗಿರುತ್ತೆ ಅನ್ನೋದ್ರಲ್ಲಿ ನೋ ಡೌಟ್. ಸೋ.. ಇಂತಹ ಸುಂದರ ಹಾಗೂ ಅದ್ಭುತ ಪ್ರೇಮಸೌಧದ ಸಾಕ್ಷಿಯಾಗಿ ಹುಟ್ಟಿಕೊಂಡ ಪ್ರೇಮ್ ಕಹಾನಿಯೊಂದು ದುರಂತದಲ್ಲಿ ಅಂತ್ಯಕಂಡ ಕಥೆಯನ್ನ ಇದೀಗ ನಾವು ನಿಮ್ಮುಂದೆ ಇಡ್ತಿದ್ದೇವೆ. ಆ ಸ್ಟೋರಿ ಶುರುವಾಗೋದು ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಸ್ಟೇಷನ್ನಿಂದ.ಅವೊತ್ತು ಆಗಸ್ಟ್ 20 ನೇ ತಾರೀಖು. ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಸ್ಥಳೀಯ ನಿವಾಸಿಯೊಬ್ಬರು ಕರೆ ಮಾಡಿದ್ದರು. ಆ ಕರೆ ಬಂದಿದ್ದು ವೈಟ್ ಫೀಲ್ಡ್ ಸ್ಟೇಷನ್ನಿಂದ ಕೂಗಳತೆ ದೂರದಲ್ಲಿರೋ ಸ್ಥಳದಿಂದ.

ಹಗದೂರು ಇಮ್ಮಡಿಯಲ್ಲಿ ನಡುವಿನ ನಾಗೊಂಡಹಳ್ಳಿ ಕೈತೋಟ ಅನ್ನೋ ಜಾಗದಲ್ಲಿರೋ ಒಂದು ಬಿಲ್ಡಿಂಗಿಂದ. ಆ ಬಿಲ್ಡಿಗಿನ 308 ನಂಬರಿನ ರೂಮೊಂದಲ್ಲಿ ಕೆಟ್ಟ ವಾಸನೆ ಬರ್ತಿತ್ತು. ಇದಿರಂದ ಅನುಮಾನಗೊಂಡ ಆ ಕಟ್ಟಡದ ಓನರ್ ರೂಮಿನ ಬಾಗಿಲಿ ತೆರೆದು ನೋಡಿದಾಗ ಅಲ್ಲಿ ಕಂಡಿದ್ದು ಹಾಸಿಗೆ ಮೇಲೆ ಬಿದ್ದಿದ್ದ ಹುಡುಗಿಯೊಬ್ಬಳ ಹೆಣ.ಹೌದು ಆ ಮನೆಯಲ್ಲಿ ಸತ್ತು ಬಿದ್ದಿದ್ದು ಬಾಡಿಗೆ ಇದ್ದ ಹುಡುಗಿಯೇ ಆಗಿದ್ದಳು. ಕೂಡಲೇ ವೈಟ್ ಫೀಲ್ಡ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಮನೆ ಮಾಲಿಕ, ದೂರು ಸಹ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಅದೊಂದು ಕೊಲೆ ಅಂತ ಕ್ಲಿಯರ್ ಕಟ್ಟಾಗಿ ಕಂಡಿತ್ತು. ಅಷ್ಟೇ ಅಲ್ಲ ಮೂರು ದಿನಗಳ ಹಿಂದೆಯೇ ಆ ಮರ್ಡರ್ ನಡೆದಿರೋದಾಗಿ ಅಂದಾಜಿಸಿದ್ದರು.  ಅಂದ ಹಾಗೆ ಅಲ್ಲಿ ಕೊಲೆಯಾಗಿದ್ದು ಈ ಮುದ್ದು ಮುಖದ ಬೆಡಗಿ ವಿಜಯಲಕ್ಷ್ಮಿ.ಮೂಲತಃ ದೆಹಲಿಯ ಹುಡುಗಿ ಈ ವಿಜಯ ಲಕ್ಷ್ಮಿ.

ಕೇವಲ ಹದಿನೈದು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ವೈಟ್ ಫೀಲ್ಡ್ ನ ಐಟಿಪಿಲ್ ನಲ್ಲಿರೋ ಎಂ ಯು ಸಿಗ್ಮಾ ಅನ್ನೋ ಸಾಫ್ಟ್ ವೇರ್ ಕಂಪಿನಿಯಲ್ಲಿ ಡ್ಯೂಟಿಗೆ ಜಾಯ್ನ್ ಆಗಿದ್ದಳು. ವೈಟ್ ಫೀಲ್ಡಲ್ಲೇ ಬಾಡಿಗೆ ಮನೆಯೊಂದನ್ನ ಮಾಡ್ಕೊಂಡು ಒಂಟಿಯಾಗಿದ್ದಳು. ಆದ್ರೆ ದೆಹಲಿಯಿಂದ ಬೆಂಗಳೂರಿಗೆ ಬಂದು ಹದಿನೈದು ದಿನಗಳಲ್ಲೇ ತನ್ನದೇ ಮನೆಯಲ್ಲಿ ಕೊಲೆಯಾಗಿ ಹೋಗಿದ್ದಳು. ಸ್ಥಳಕ್ಕೆ ಹೋಗಿ ಮಾಹಿತಿ ಕಲೆ ಹಾಕಿ ಇನ್ವೆಸ್ಟಿಗೇಶನ್ ಶುರು ಮಾಡಿದ್ದ ಪೊಲೀಸರಿಗೆ ಅದಾಗಲೇ ಒಬ್ಬನ ಮೇಲೆ ಬಲವಾದ ಅನುಮಾನ ಬಂದಿತ್ತು.ಈ ಸುಂದರಿಯನ್ನ ಕೊಂದಿದ್ದಾನೆ ಅಂತ ಹೇಳಲಾಗ್ತಿರೋ ವ್ಯಕ್ತಿಯೊಬ್ಬನ ಬಗ್ಗೆ ಪೊಲೀಸರಿಗೆ ಸಂಶಯ ಇತ್ತು. ಇನ್ ಫ್ಯಾಕ್ಟ್ ಆ ಶಂಕಿತ ವ್ಯಕ್ತಿಯೇ ಈ ಟೆಕ್ಕಿ ವಿಜಯ್ ಲಕ್ಷ್ಮಿಯನ್ನ ದಾರುಣವಾಗಿ ಕೊಂದು ಹೆಣವಿಟ್ಟು ಹೋಗಿದ್ದವನು. ಆ ಆರೋಪಿ ಇವನೇ ನೋಡಿ. ಹೆಸರೂ ಹರೀಶ್ ಕುಮಾರ್.ಹರೀಶ್ ಕುಮಾರ್, ಈ ಆಸಾಮಿಯೇ ಟೆಕ್ಕಿ ವಿಜಯಲಕ್ಷ್ಮಿಯನ್ನ ಕೊಂದು ಹೋಗಿದ್ದವನು.

ದೆಹಲಿ ಮೂಲದ ಈ ಆರೋಪಿಯನ್ನ ವೈಟ್ ಫೀಲ್ಡ್ ಪೊಲೀಸರು ದೆಹಲಿಯಲ್ಲಿಯೇ ಅರೆಸ್ಟ್ ಮಾಡಿ ಬೆಂಗಳೂರಿಗೆ ಎಳ್ಕೊಂಡು ಬಂದಿದ್ದಾರೆ. ಅಷ್ಟಕ್ಕೂ ಈ ಹರೀಶ್ ಕುಮಾರ್ ಯಾರು , ಯಾಕಾಗಿ ಆ ಹುಡುಗಿಯನ್ನ ಕೊಲೆ ಮಾಡಿದ, ಆ ಕೊಲೆಗೆ ಕಾರಣವೇನು ಅಂತ ವಿಚಾರಿಸಿದಾಗ ಈ ಹ್ಯಾಂಡ್ ಸಮ್ ಆರೋಪಿ ಹರೀಶ್ ಹೇಳಿದ್ದು.. ವಿಜಯಲಕ್ಷ್ಮಿ ಹಾಗೂ ತನ್ನ ಲವ್ ಸ್ಟೋರಿಯನ್ನ. ಅಥಾರ್ತ್.. ಈ ಆರೋಪಿ ಹರೀಶ್ ಕುಮಾರ್ ವಿಜಯಲಕ್ಷ್ಮಿಯ ಲವರ್ ಬಾಯ್.ಈಗಾಗಲೇ ಹೇಳಿದ ಹಾಗೆ, ಈ ಜೋಡಿ ದೆಹಲಿಯದ್ದು. ಈ ಹರೀಶ್ ಕುಮಾರ್ ಡೆಲ್ಲಿ ಸಿಟಿಯಲ್ಲಿನ ಜಿಮ್ ಒಂದರಲ್ಲಿ ಜಿಮ್ ಟ್ರೈನರ್ ಆಗಿದ್ದ. ಸ್ಲಿಮ್ ಆಗ್ಬೇಕು ಅಂತ ಆ ಜಿಮ್ಮಿಗೆ ಹೋಗ್ತಾ ಇದ್ದವಳು ಈ ಬ್ಯೂಟಿ ವಿಜಯಲಕ್ಷ್ಮಿ. ಹೀಗೆ ಜಿಮ್ಮಲ್ಲಿ ಟ್ರೈನಿಂಗ್ ಕೊಡ್ತಾ ಕೊಡ್ತಾ ಈ ಹುಡುಗಿಯ ಮೇಲೆ ಕಣ್ಣಾಕಿದ್ದ ಜಿಮ್ ಟ್ರೈನರ್ ಹರೀಶ್. ತನ್ನ ಕಟ್ಟು ಮಸ್ತಿನ ಬಾಡಿ ತೋರಿಸ್ತಾ ಈ ಹಕ್ಕಿ ಹಾಳು ಹಾಕ್ತಿದ್ದ.

ಅವಳೂ ಕೂಡ ನಸು ನಕ್ಕುತ್ತಿದ್ದಳು. ಸೋ.. ಆಪಲ್ ತರ ಇರೋ ಈ ಹುಡುಗಿ ಬುಟ್ಟಿಗೆ ಬೀಳುತ್ತೆ ಅನ್ನೋ ಕಾನ್ಫಿಡೆಂಟಿದ್ದ ಒನ್ ಫೈನ್ ಡೇ ವಿಜಯಲಕ್ಷ್ಮಿಗೆ ಲವ್ ಪ್ರಪೋಸ್ ಮಾಡೇಬಿಟ್ಟಿದ್ದ. ಆ ಕಡೆಯಿಂದ  ಸುಂದರಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಳು. ಅಲ್ಲಿಂದ ಶುರುವಾಗಿತ್ತು ಇವರಿಬ್ಬರ ಲವ್ ಸ್ಟೋರಿ. ದೆಹಲಿಯ ಹಾಟ್ ಸ್ಪಾಟ್, ರೊಮ್ಯಾಂಟಿಕ್ ಸ್ಪಾಟ್ ಗಳೆಲ್ಲಾ ಮೀಟ್ ಆಗ್ತಾ ರೊಮ್ಯಾನ್ಸ್ ಮಾಡ್ತಿತ್ತು ಈ ಪ್ರಣಯ ಪಕ್ಷಿಗಳು. ಎಲ್ಲಾ ಪ್ರೇಮಿಗಳ ಹಾಗೇ ತಾಜ್ ಮಹಲ್ ಇವರಿಗೂ ಫೇವರೇಟ್ ಅಂಡ್ ಲವ್ಲೀ ಸ್ಪಾಟ್ ಆಗಿತ್ತು. ಸೋ ತಾಜ್ ಮಹಲಿಗೂ ಕರೆದೋಗಿದ್ದ ಹರೀಶ್.. ತಾಜ್ ಮಹಲ್ ಸಾಕ್ಷಿಯಾಗಿ ನಿನ್ನನ್ನ ಡೀಪಾಗಿ ಲವ್ ಮಾಡ್ತೇನೆ.

ಸಾಯೋವರೆಗೂ ನನ್ನ ಜೀನೆ ಅಂದಿದ್ದ. ಹೀಗೆ ದೆಹಲಿಯಲ್ಲಿ ನಡೀತಿದ್ದ ಇವರ ಲವ್ ಸ್ಟೋರಿ ಶಿಫ್ಟ್ ಆಗಿದ್ದು ಸಿಲಿಕಾನ್ ಸಿಟಿ ಬೆಂಗಳೂರಿಗೆ. ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಅಂತ ಲವರ್ ನನ್ನ ಬಿಟ್ಟು ಇಲ್ಲಿಗೆ ಬಂದಿದ್ದಳು. ಆದ್ರೆ, ಬೆಂಗಳೂರಿಗೆ ಬಂದು ಕೆಲವೇ ದಿನಗಳಲ್ಲಿ, ಇಲ್ಲಿಗೆ ಬಂದ ಹರೀಶ್… ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದವಳನ್ನ ಕೊಂದು ಮುಗಿಸೇಬಿಟ್ಟಿದ್ದ.ಹಾಗಾದ್ರೆ, ಯಾಕಾಗಿ ಇವನು ತನ್ನ ಹುಡುಗಿಯನ್ನ ಮರ್ಡರ್ ಮಾಡಿದ ಅಂತ ನೋಡಿದಾಗ..

ಅಲ್ಲಿ ಗೊತ್ತಾಗಿದ್ದು ಮತ್ತೊಂದು ಕಥೆ. ಹರೀಶ್ ನನ್ನ ಲವ್ ಮಾಡ್ತಿದ್ದ ವಿಜಯಲಕ್ಷ್ಮಿ ಒಂದೆರಡು ತಿಂಗಳಿಂದ ತುಂಬಾನೆ ಅವಾಯ್ಡ್ ಮಾಡ್ತಿದ್ದಳಂತೆ. ಮದ್ವೆ ಆಗೋಣ ಅಂತಿದ್ದವಳು ಅದ್ಯಾಕೋ ಕೈಕೊಡೋ ಲಕ್ಷಣ ಕಾಣ್ತಿತಂತೆ. ಬೆಂಗಳೂರಿಗೆ ಬಂದ್ಮೇಲಂತೂ ಅವನನ್ನ ಮರೆತೇ ಹೋಗಿದ್ದಳಂತೆ.ಹೀಗಾಗಿ ಅದೇನ್ ಕಥೆ ಅಂತ ಬೆಂಗಳೂರಿಗೆ ಹುಡುಕಿಕೊಂಡ ಬಂದ ಹರೀಶ್ ಗೆ ನಿರಾಸೆಯೇ ಆಗಿತ್ತು. ಲವ್ ಮಾಡಿ ಕೈಕೊಟ್ಟ ಹುಡುಗಿ ಬದುಕಿರಲೇ ಬಾರದು ಅಂತ ಈ ಭಗ್ನ ಪ್ರೇಮಿ ಮಾಡಿದ್ದೇ ಟೆಕ್ಕಿ ಮರ್ಡರ್.

LEAVE A REPLY

Please enter your comment!
Please enter your name here