Home Cinema “ಕನ್ನಡಕ ಹುಡುಕಿಕೊಡಿ” ಅಂತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್, ಏಕಪ್ಪಾ..?

“ಕನ್ನಡಕ ಹುಡುಕಿಕೊಡಿ” ಅಂತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್, ಏಕಪ್ಪಾ..?

495
0
SHARE

ಗಣೇಶ್, ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಗಣಪ, ಇದೀಗ ಕನ್ನಡಕ ಹುಡುಕಿಕೊಡಿ ಅಂತಿದ್ದಾರೆ.

ಹೌದು, ಗಣೇಶ್ ಅಭಿನಯದ ವೇರ್ ಇಸ್ ಮೈ ಕನ್ನಡಕ ಚಿತ್ರದ ಮುಹೂರ್ತ ಸದ್ದಿಲ್ಲದೇ ಇತ್ತೀಚಿಗೆ ನೇರವೇರಿದೆ.ಯಸ್. ವೇರ್ ಇಸ್ ಮೈ ಕನ್ನಡಕ. ಗಣಿಯ ನಯಾ ವೆಂಚರ್. ರಾಜ್ ಹಾಗೂ ದಾಮಿನಿ ಚಿತ್ರದ ನಿರ್ದೇಶಕರು. ಹಿಂದಿ ರಂಗದ ಕುರುಕ್ಷೇತ್ರದಲ್ಲಿ ಆಗ್ಲೇ ಹೆಸರು ಮಾಡಿರುವ ಜೋಡಿ, ಇದೇ ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದೆ.

ವೇರ್ ಇಸ್ ಮೈ ಕನ್ನಡಕ ಹೆಸರೇ ಹೇಳುವಂತೆ ಕಾಮಿಡಿ ಸಿನಿಮಾ. ಹಾಗಂಥ ಆಕ್ಷನ್ ಫ್ಲೇವರ್ ಇರಲ್ವಾ ಅನ್ನುವಂಗಿಲ್ಲ. ಕಾರಣ, ಹಾಸ್ಯದ ಜೊತೆ ಜೊತೆಯಲ್ಲಿ ಸಾಹಸವನ್ನೂ ಹದವಾಗಿ ಬೆರೆಸಿದೆ ರಾಜ್ ಹಾಗೂ ದಾಮಿನಿ ಜೋಡಿ.ಇನ್ನೂ ವೇರ್ ಇಸ್ ಮೈ ಕನ್ನಡಕ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಅದು ಅರ್ಬಾಜ್ ಖಾನ್.

ಹೌದು,ಸಲ್ಮಾನ್ ಸಹೋದರ ಅರ್ಬಾಜ್ ಖಾನ್, ವೇರ್ ಇಸ್ ಮೈ ಕನ್ನಡಕ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಪತ್ರಲೇಖ ಚಿತ್ರದ ನಾಯಕಿ. ಸಿಟಿಲೈಟ್ಸ್ ಚಿತ್ರದ ಮೂಲಕ ಸ್ಟಾರ್ ನಟಿಯಾಗಿದ್ದ ಪತ್ರಲೇಖಗೂ ಕನ್ನಡದಲ್ಲಿದು ಮೊದಲ ಚುಂಬನ.

ಈ ಅರ್ಥದಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರರಂಗದ ಸಮಾಗಮಕ್ಕೆ ಇದೇ ವೇರ್ ಇಸ್ ಮೈ ಕನ್ನಡಕ ಸಾಕ್ಷಿಯಾಗುತ್ತಿದೆ ಅನ್ನಲು ಅಡ್ಡಿ ಇಲ್ಲ.ಇನ್ನೂ ವೇರ್ ಇಸ್ ಮೈ ಕನ್ನಡಕ ಚಿತ್ರದ ಬಹುತೇಕ ಚಿತ್ರೀಕರಣ, ಲಂಡನ್‌ನಲ್ಲಿ ನಡೆಯಲಿದೆ. ಇನ್ನುಳಿದಂತೆ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here