Home Cinema ಕನ್ನಡದ ಕೆಂಡಸಂಪಿಗೆ ಮೇಲೆ ಹಿಂದಿ ಮಂದಿಯ ಕಣ್ಣು..! ಟಗರು ಪುಟ್ಟಿ ಬಗ್ಗೆ ಹರಿದಾಡ್ತಿರುವ ನಯಾ...

ಕನ್ನಡದ ಕೆಂಡಸಂಪಿಗೆ ಮೇಲೆ ಹಿಂದಿ ಮಂದಿಯ ಕಣ್ಣು..! ಟಗರು ಪುಟ್ಟಿ ಬಗ್ಗೆ ಹರಿದಾಡ್ತಿರುವ ನಯಾ ಸುದ್ದಿ, ಗೊತ್ತೇನು..!

1874
0
SHARE

ಟಗರು ಪೋರಿಗೆ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಕೆಂಡಸಂಪಿಗೆ ಚಿತ್ರದ ನಂತ್ರ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಚಿತ್ರಗಳಗೆ ಬಣ್ಣ ಹಚ್ಚುತ್ತಿದ್ದಾರೆ, ಸದ್ಯ ಟಗರು ಚಿತ್ರದ ಖುಷಿಯಲ್ಲಿರುವ ಕೆಂಟಸಂಪಿಗೆಯ ಅಭಿಮಾನಿಗಳಿಗೆ ಮತ್ತಷ್ಟು ಖುಚಿಯಾಗೋ ಸುದ್ದಿ ಕೊಟ್ಟಿದ್ದಾಳೆ.. ಮಾನ್ವಿತಾ ಕಾಮತ್.. ಕೆಂಡಸಂಪಿಗೆಯ ಕುಮಾರಿ. ಅಭಿನಯದಿಂದ & ಅಫ್‌ಕೋರ್ಸ್ ಅಂದ ಚೆಂದದಿಂದ ಚಮ್ಕಾಯ್ಸಿ ಚಿಂದಿ ಉಡಾಯ್ಸುವ ಮಾನ್ವಿತಾ, ಇದೀಗ.. ಜೀವನದ ಬಹುದೊಡ್ಡ ಲಾಂಗ್ ಜಂಪ್ ಮಾಡಲು ಸಿದ್ಧವಾಗಿದ್ದಾರೆ.

ಯಸ್, ಮಾನ್ವಿತಾ ಮೇನಿಯಾ ಬಿಟೌನ್‌ನಲ್ಲಿ ಸದ್ಯದಲ್ಲೇ ಶುರುವಾಗಲಿದೆ.ಹೌದು, ಕಿವಿಗೊಟ್ಟು ಕೇಳಿ.. ಮಾನ್ವಿತಾ ಅದ್ಯಾವಾಗ, ಟಗರು ಸಿನಿಮಾದ ಪುಟ್ಟಿಯಾಗಿ ಕಾಣಿಸಿಕೊಂಡ್ರೋ, ಆಗ ಅದೃಷ್ಟದ ಬಾಗಿಲೇ ಓಪನ್ ಆಗಿತ್ತು. ಮಾನ್ವಿತಾ ಅದ್ಯಾವಾಗ ಮೇ ಮೆಂಟಲ್ ಹೋ ಜಾವಾ ಎಂದು ಕುಣಿದ್ರೋ, ಆಗ ಅದೆಷ್ಟೋ ಪಡ್ಡೆಗಳ ಹೃದಯಕ್ಕೆ ಹುಚ್ಚೇ ಹಿಡಿದಿತ್ತು. ಇಷ್ಟೇ ಯಾಕೆ ರಾ ಫಿಲ್ಮ್ ಮೇಕರ್ ರಾಮ್ ಗೋಪಾಲ್ ವರ್ಮಾನೂ ಮಾನ್ವಿತಾ ಮಂತ್ರವನ್ನ ಜಪಿಸಿದ್ದರು. ಅಡ್ವಾನ್ಸ್ ಕೊಟ್ಟು.. ಮುಂದೊಂದು ದಿನ ಸಿನಿಮಾ ಮಾಡುವ ಭರವಸೆಯನ್ನೂ ನೀಡಿದ್ದರು.

ಇದೆಲ್ಲ ನಡೆಯುವ ಹೊತ್ತಿನಲ್ಲೇ, ಮಾನ್ವಿತಾ ಕನ್ನಡ ಚಿತ್ರರಂಗದಲ್ಲೂ ಬ್ಯುಸಿಯಾಗ ತೊಡಗಿದ್ರು. ನಾಗ್ತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೆಸರಿಡದ ಸಿನಿಮಾದಲ್ಲೂ ಬಣ್ಣ ಹಚ್ಚಿದ್ರು. ಅನಿಲ್ ಕುಮಾರ್ ನಿರ್ದೇಶನದ.. ದೊಡ್ಮನೆ ಕುಡಿ ಧೀರೇನ್ ರಾಮ್ ಕುಮಾರ್ ಅಭಿನಯದ ದಾರಿ ತಪ್ಪಿದ ಮಗನ ನಾಯಕಿಯಾಗಿಯೂ ಆಯ್ಕೆ ಆದರು. ಇಷ್ಟೇ ಅಲ್ಲ ಸೈಕಲ್ ಗ್ಯಾಪಿನಲ್ಲಿ.. ಮಾನ್ವಿತಾ ಕಾಮತ್ ಮರಾಠಿ ಸಿನಿಮಾರಂಗಕ್ಕೂ ಬಲಗಾಲಿಟ್ಟು ಪ್ರವೇಶ ಮಾಡಿದ್ರು ಹೀಗೆ ಒಂದಷ್ಟು ಅವಕಾಶಗಳ ಬಾಗಿಲು ಓಪನ್ ಆದ ಪರಿಣಾಮ, ಮಾನ್ವಿತಾ ಬದುಕು ಮುಂಬೈ, ಬೆಂಗಳೂರು ನಡುವೆ ಗಿರಕಿ ಹೊಡೆಯತೊಡಗಿತು.

ಆದ್ರೀಗ ಇದೇ ಬದುಕು ಮತ್ತೊಂದು ಮಗ್ಗಲಿನತ್ತ ತಿರುಗುವ ಲಕ್ಷಣಗಳೂ ದಟ್ಟವಾಗಿವೆ. ಕಾರಣ, ಮುಂಬೈ ಟು ಬೆಂಗಳೂರು.. ಓಡಾಟದ ಫಲವೆನ್ನುವಂತೆ ಮಾನ್ವಿತಾ ಕಾಮತ್ ಮೇಲೆ ಹಿಂದಿ ಸಿನಿಮಾರಂಗದವ್ರ ಕಣ್ಣು ಬಿದ್ದಿದೆ.ಹೌದು, ಮಾನ್ವಿತಾ ಮೇಲೀಗ ಮುಂಬೈ ಮಂದಿ ನಿಗಾ ಇಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ಮಾಯಾನಗರಿ ಮುಂಬೈನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಿಗೆ ಮಾನ್ವಿತಾ ಆಡಿಷನ್ ನೀಡಿದ್ದಾರೆ. ಇನ್ನೂ.. ಬಂದ ಅವಕಾಶಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮನಸನ್ನ ಖುದ್ದು ಮಾನ್ವಿತಾ ಮಾಡಿದ್ದಾರೆ.

ಇದೇ ಕಾರಣಕ್ಕೆ ಮಾನ್ವಿತಾ ಮುಂಬೈನಲ್ಲೇ ಠಿಕಾಣಿ ಹೂಡಿದ್ದಾರೆ. ಇಷ್ಟೇ ಅಲ್ಲ ಸಖತ್ ಗ್ಲ್ಯಾಮರಸ್ ಫೋಟೊಶೂಟ್‌ನ್ನೂ ಮಾಡಿಸಿದ್ದಾರೆ ಮಾನ್ವಿತಾ.ಯಸ್, ಬಿಟೌನ್‌ನ ಖ್ಯಾತ ಫೋಟೊಗ್ರಾಫರ್ ಮೊಹಿತ್ ಹೊಲಾನಿ, ಕ್ಯಾಮರಾ ಕಣ್ಣಿನಲ್ಲಿ.. ಮಾನ್ವಿತಾ ಮೈಮಾಟ ಬಂಧಿಯಾಗಿದೆ. ಹೀಗೆ ಬಂಧಿಯಾದ ಇದೇ ಫೋಟೊಗಳೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪಡ್ಡೆಗಳ ಕಣ್ಣನ್ನೂ ಕುಕ್ಕುತ್ತಿವೆ.

ಹೃದಯದ ನರಳಾಟಕ್ಕೂ ಕಾರಣವಾಗಿವೆ.ಅಂದ ಹಾಗೇ, ಇಲ್ಲಿ ಇನ್ನೊಂದು ಸಂಗತಿ ಇದೆ. ಅದುವೇ ಮಾನ್ವಿತಾ ಹಿಂದಿಯಲ್ಲಿ ನೆಲೆ ಕಂಡುಕೊಳ್ಳೋದು, ಅವಕಾಶ ಗಿಟ್ಟಿಸಿಕೊಳ್ಳೋದು ಕಷ್ಟವೇನಲ್ಲ ಅನ್ನೋದು. ಹೌದು, ನಿಮಗೆ ಗೊತ್ತಿರಲಿ ಮಾನ್ವಿತಾ ಆಗ್ಲೇ ಮರಾಠಿ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡಿದ್ದಾರೆ.

ಸಾಲದಕ್ಕೆ ಮಾನ್ವಿತಾ ಟ್ಯಾಲೆಂಟಡ್ ನಟಿನೂ ಹೌದು. ಹಾಗಾಗಿ, ಮಾನ್ವಿತಾ ಸೆಳೆತದಿಂದ ಹಿಂದಿ ಸಿನಿರಂಗ ಪಾರಾಗಲು ಸಾಧ್ಯವಿಲ್ಲ ಅನ್ನುವ ಲೆಕ್ಕಾಚಾರದ ಮಾತುಗಳೂ, ಮುಂಬೈನ ಬೀದಿಗಳಿಂದ ಹಿಡ್ದು ಮಾನ್ವಿತಾ ಮನೆಯಂಗಳದವರೆಗೂ ಕೇಳಿ ಬರ‍್ತಿವೆ.ಸದ್ಯ ಮಾನ್ವಿತಾ, ಹಿಂದಿ ಸಿನಿಮಾರಂಗದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸ್ಬೇಕೆನ್ನುವ ನಿಟ್ಟಿನಲ್ಲಿ ಮುಂದುವರೆದಿದ್ದಾರೆ. ಇಷ್ಟರಲ್ಲೇ ಮಾನ್ವಿತಾ.. ಬ್ರೇಕಿಂಗ್ ನ್ಯೂಸ್ ಒಂದ್ರ ಜೊತೆಗೆ ಬೆಂಗಳೂರಿನ ವಿಮಾನ ನಿಲ್ಧಾಣಕ್ಕೆ ಕಾಲಿಟ್ಟರೂ ಅಚ್ಚರಿ ಇಲ್ಲ. ಬಟ್, ಆ ಘಳಿಗೆಗೆ ಸ್ವಲ್ಪ ದಿನ ಕಾಯಬೇಕಷ್ಟೇ.

LEAVE A REPLY

Please enter your comment!
Please enter your name here