Home Crime ಕನ್ನಡಿಗರನ್ನು ನಿರ್ಲಕ್ಷಿಸಿ ತೆಲುಗರ ಮುಂದೆ ಓಪನ್ ಆದ ರಶ್ಮಿಕಾ ಮಂದಣ್ಣ..!? ನಮ್ಮವರ ಮುಂದೆ ಮಾತಾಡೋವಾಗ ಬಾಯಲ್...

ಕನ್ನಡಿಗರನ್ನು ನಿರ್ಲಕ್ಷಿಸಿ ತೆಲುಗರ ಮುಂದೆ ಓಪನ್ ಆದ ರಶ್ಮಿಕಾ ಮಂದಣ್ಣ..!? ನಮ್ಮವರ ಮುಂದೆ ಮಾತಾಡೋವಾಗ ಬಾಯಲ್ ಬಬಲ್ ಗಮ್ ಇತ್ತೇನಮ್ಮ..?!

3931
0
SHARE

ಕಿರಿಕ್ ಪಾರ್ಟಿ ಅನ್ನೋ ಕನ್ನಡ ಸಿನಿಮಾ ತನ್ನ ಕ್ವಾಲಿಟಿಯಿಂದ ಎಷ್ಟು ಹೆಸರು ಮಾಡಿತೋ ಅದಕ್ಕಿಂತ ರಕ್ಷಿತದ್ ಮತ್ತು ರಶ್ಮಿಕಾ ಅವರ ನಡುವಿನ ಸರಸ ಮತ್ತು ವಿರಸದ ಕಾರಣಕ್ಕೇ ಹೆಚ್ಚು ಸದ್ದು ಮಾಡಿತು. ಇನ್ನೂ ಮಾಡುತ್ತಿದೆ ಕೂಡ. ಕರ್ಣ ಮತ್ತು ಸಾನ್ವಿ ಎಂಬ ಕ್ಯೂಟ್ ಕಪಲ್ ಗಳ ಜೋಡಿಯ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಹಣ ದೋಚಿತ್ತು. ಅದರ ಜೊತೆಗೆ ಚಿತ್ರದ ನಾಯಕ ನಾಯಕಿ ಇಬ್ಬರೂ ಒಬ್ಬರು ಇನ್ನೊಬ್ಬರ ಹೃದಯ ದೋಚಿದ್ದರು. ಆದರೆ ಅದೇ ಚಿತ್ರ ಮುಂದೆ ಜನ ಅವರಿಬ್ಬರ ಬಗ್ಗೆ ತೋಚಿದ್ದನ್ನು ಮಾತನಾಡುವಂತೆ ಮಾಡಿತ್ತು.ವಿಶೇಷ ಅಂದ್ರೆ ರಕ್ಷಿತ್ ರಶ್ಮಿಕಾ ಬ್ರೇಕಪ್ ಬಗ್ಗೆ ರಶ್ಮಿಕಾ ತಾಯಿ ಮಾತನಾಡಿದರೂ ರಶ್ಮಿಕಾ ಏನನ್ನೂ ಸ್ಪಷ್ಟವಾಗಿ ಹೇಳಿರಲಿಲ್ಲ. ತಮ್ಮನ್ನು ಪ್ರಶ್ನೆ ಮಾಡಿದ ಅಭಿಮಾನಿಗಳಿಗೂ, ಮತ್ತು ಮೀಡಿಯಾದವರಿಗೂ ಅದು ನನ್ನ ಪರ್ಸನಲ್ ವಿಷಯ, ಬೇರೆಯವರು ಅದರಲ್ಲಿ ತಲೆ ಹಾಕೋದು ಬೇಡ ಅಂತ ಗರಂ ಆಗಿ ಮಾತನಾಡಿದ್ದರು.

ಆದರೆ ಅದೇ ರಶ್ಮಿಕಾ ಮಂದಣ್ಣ ಈಗ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿ ತೆಲುಗು ಮೀಡಿಯಾಗಳ ಮುಂದೆ ಹೌದು ನಾನು ರಕ್ಷಿತ್ ಬ್ರೇಕಪ್ ಮಾಡಿಕೊಂಡಿದ್ದೇವೆ. ನಮ್ಗೂ ಅವರಿಗೂ ಆಗಿಬರ್ಲಿಲ್ಲ ಅಂತ ಬಾಯಿಬಿಟ್ಟಿದ್ದಾಳೆ.ಇಂಟರೆಸ್ಟಿಂಗ್ ಅಂದ್ರೆ ಇದೇ ರಶ್ಮಿಕಾ ಮಂದಣ್ಣ, ತಮ್ಮ ಮತ್ತು ರಕ್ಷಿತ್ ಶೆಟ್ಟಿ ಅವರ ನಡುವೆ ಬ್ರೇಕಪ್ ಆದಾಗ ಮಾಧ್ಯಮಗಳಲ್ಲಿ ಬರ್ತಾ ಇದ್ದ ಸುದ್ದಿ ನೋಡಿ, ಅಯ್ಯೋ ನಮ್ಮ ಪರ್ಸನಲ್ ವಿಷಯವನ್ನೇ ಇಟ್ಟುಕೊಂಡು ಚ್ಯುಯಿಂಗ್ ಗಮ್ ಥರಾ ಜಗೀತಾ ಇದಾರೆ ಅಂತ ಆಡಿಕೊಂಡಿದ್ದರು. ಆದರೆ ಕನ್ನಡ ಮಾಧ್ಯಮಗಳ ಮುಂದೆ ಮಾತ್ರ ಬ್ರೇಕಪ್ ವಿಷಯದ ಬಗ್ಗೆ ಯಾವ ಸ್ಪಷ್ಟನೆಯನ್ನೂ ಕೊಟ್ಟಿರಲಿಲ್ಲ. ಈಗ ಮಾತ್ರ ಅಚ್ಚ ತೆಲುಗಿನಲ್ಲಿ ನಾನು ರಕ್ಷಿತ್ ಬ್ರೇಕಪ್ ಆಗಿದೀವಿ ಅಂತ ಅದರ ಬಗೆಗಿನ ವಿವರಗಳನ್ನು ಕೊಟ್ಟಿದ್ದಾರೆ ರಶ್ಮಿಕಾ. ಹಾಗಾಗಿ ಈಗ ಕನ್ನಡ ಮಾಧ್ಯಮಗಳು ನಿನ್ನನ್ನ ಇದೇ ಪ್ರಶ್ನೆ ಕೇಳಿದಾಗ, ನೀನೇನು ಬಾಯಲ್ಲಿ ಬಬಲ್ ಗಮ್ ಇಟ್ಟುಕೊಂಡಿದ್ದೇನಮ್ಮಾ ಅಂತ ಎಲ್ಲರೂ ಕೇಳ್ತಾ ಇದಾರೆ.

ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ತಡ ಅಲ್ಲಿನ ಜನ, ಅಯ್ಯೋ ಇರಮ್ಮಾ, ನೆಲದ ಮೇಲೆ ಕಾಲಿಡಬೇಡ ಅಂತ ರೆಡ್ ಕಾರ್ಪೆಟ್ ಹಾಸಿ ಆಕೆಯನ್ನು ಸ್ವಾಗತಿಸಿದರು. ಆಕೆ ಅಭಿನಯದ ಚಲೋ, ಗೀತಗೋವಿಂದಂ ಎಂಬ ಎರಡು ಚಿತ್ರಗಳಿಂದ ಆಕೆಗೆ ಸಾಕಷ್ಟು ಹೆಸರು ಬಂತು. ನಂತರ ನಾಗಾರ್ಜುನ ಅಭಿನಯದ ದೇವದಾಸ್ ಚಿತ್ರ ಸಿಕ್ಕ ಮೇಲಂತೂ ರಶ್ಮಿಕಾ ಅವರ ಕೆರಿಯರ್ ಗ್ರಾಫ್ ಏರಿತು. ಅದರ ಎಫೆಕ್ಟ್ ಕೂಡ ಆಕೆಯ ತಲೆಗೆ ಏರಿತು. ಅದರ ಜೊತೆಗೆ ಇನ್ನೊಂದೆರಡು ಸಿನಿಮಾಗಳ ಆಫರ್ ಗಳು ಬಂದವು.ಇಷ್ಟೆಲ್ಲಾ ಆದ ಮೇಲೆ, ಕನ್ನಡದ ಪ್ರಿಯಕರನನ್ನು, ಕನ್ನಡ ಚಿತ್ರಗಳನ್ನು ಅಂದಾಜು ಮಾಡುವ ರಶ್ಮಿಕಾ ಅವರ ರೀತಿ ಬದಲಾಯಿತು. ಯಾವಾಗ ತೆಲುಗು ಚಿತ್ರರಂಗದಲ್ಲಿ ಅಳತೆ ಮೀರಿ ಸಂಭಾವನೆ ಸಿಗೋಕೆ ಶುರುವಾಯ್ತೋ, ಆಗ ರಶ್ಮಿಕಾ ಅವರ ಕಣ್ಣಿನ ಅಳತೆ ಗೋಲು ಬದಲಾಯ್ತು.

ಹಾಗಾಗಿ ಕನ್ನಡ ಚಿತ್ರರಂಗ, ಕನ್ನಡ ಜನತೆ, ಕನ್ನಡದ ಫಿಯಾನ್ಸಿಯನ್ನು ಆಕೆ ನೋಡುವ ಅಳತೆ ಮತ್ತು ಆಕೆಯ ಕೆರಿಯರ್ ಗೋಲು ಎರಡೂ ಬದಲಾಯ್ತು. ಹಾಗಾಗಿ ಮನಸ್ಸಲ್ಲೇ ತಮ್ಮ ಮುಂದಿರುವ ಭವ್ಯ ಕೆರಿಯರ್ ಅನ್ನು ಗೇಜ್ ಮಾಡಿದ ರಶ್ಮಿಕಾ ರಕ್ಷಿತ್ ಅವರೊಂದಿಗಿನ ಎಂಗೇಜ್ ಮೆಂಟ್ ಅನ್ನು ಹಿಂದೆ ಮುಂದೆ ನೋಡದೆ ಬ್ಯಾನ್ ಮಾಡಿಬಿಟ್ಟರು.ಆದರೆ ಇದುವರೆಗೆ ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿರದ ರಶ್ಮಿಕಾ, ಈಗ  ಲವ್- ಎಂಗೇಜ್ ಮೆಂಟ್- ಬ್ರೇಕಪ್ ಬಗ್ಗೆ ತೆಲುಗು ಮಾಧ್ಯಮ ಒಂದಕ್ಕೆ ನೀಡಿದ ಸಂದ ರ್ಶನದಲ್ಲಿ ಮಾತನಾಡಿದ್ದಾರೆ. ಬ್ರೇಕಪ್ ಆಗಿರುವುದು ನಿಜ ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ.ತಮ್ಮ ಬ್ರೇಕಪ್ ಗೆ ಬಗ್ಗೆ ರಶ್ಮಿಕಾ ಹೇಳಿರೋದಿಷ್ಟು. ಕಿರಿಕ್ ಪಾರ್ಟಿ ಶೂಟಿಂಗ್ ಟೈಮಲ್ಲಿ ರಕ್ಷಿತ್ ಪರಿಚಯವಾಯ್ತು, ಆನಂತರ ಪರಿಚಯ ಸ್ನೇಹವಾಯ್ತು..

ರಕ್ಷಿತ್ ನೊಂದಿಗಿನ ಪ್ರೀತಿ ವಿಷ್ಯವನ್ನು ಮೊದಲು ಅಮ್ಮನಿಗೆ ಹೇಳಿದೆ, ನನ್ನ ತಾಯಿ ಕೂಡ ನನ್ನ ಪ್ರೀತಿ ವಿಷ್ಯಕ್ಕೆ ಓಕೆ ಹೇಳಿದ್ರು. ನಿನ್ನ ಇಷ್ಟದಂತೇ ಇರು, ನಾವು ಅಡ್ಡ ಬರುವುದಿಲ್ಲವೆಂದು ಹೇಳಿದ್ರು. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಆದರೆ, ಇಬ್ಬರ ಮಧ್ಯೆ ಕೆಲವು ಭಿನ್ನಾಭಿಪ್ರಾಯ- ಲೋಪದೋಷಗಳು ಕಾಣಿಸಿದವು, ಹೀಗಾಗಿ ಮದುವೆಗೆ ಮುಂಚೇನೇ ಬಂಧನವನ್ನು ಮುರಿದುಕೊಂಡರೆ ಇಬ್ಬರ ನಡುವಿನ ಮನಸ್ಸಿನ ಗುದ್ದಾಟ ಕಡಿಮೆಗೊಳ್ಳುತ್ತದೆ ಎಂದು ನಿರ್ಧರಿಸಿದ್ವಿ. ಇಲ್ಲದೇ ಹೋದರೆ ಮುಂದೆ ಈ ಮಿಸ್ ಅಂಡರ್ ಸ್ಟ್ಯಾಂಡಿಂಗ್ಸ್ ಮತ್ತಷ್ಟು ಜಾಸ್ತಿ ಆಗುವ ಲಕ್ಷಣಗಳಿರುವ ಕಾರಣ, ಇಬ್ಬರು ಪರಸ್ಪರ ಕೂತು ನಿರ್ಣಯ ತೆಗೆದುಕೊಂಡು ಬ್ರೇಕಪ್ ಮಾಡಿಕೊಂಡ್ವಿ.

ಹೀಗಂತ ಕಿರಿಕ್ ಬ್ಯೂಟಿ ರಶ್ಮಿಕಾ ತೆಲುಗು ವೆಬ್ ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ  ತಿಳಿಸಿದ್ದಾರೆ. ಅಲ್ಲದೆ ಸದ್ಯಕ್ಕೆ ನಾನು ಸಿನಿಮಾನಷ್ಟೇ ಪ್ರೀತಿಸುತ್ತಿದ್ದೇನೆ ಎಂಬ ಮಾತನ್ನು ಕೂಡ ಸ್ಪಷ್ಟಪಡಿಸಿದ್ದಾರೆ ರಶ್ಮಿಕಾ.ಆದರೆ, ರಕ್ಷಿತ್ & ರಶ್ಮಿಕಾ ಮನಸು ದೂರವಾಗಲು ಗೀತ ಗೋವಿದಂನ ಸೈಡ್ ಎಫೆಕ್ಟ್ & ರಿಸಲ್ಟ್ ಎರಡು ಪ್ರಮುಖ ಕಾರಣವಾಗಿರಬಹುದು ಅಂತ ಹೇಳಲಾಗ್ತಿದೆ. ಹೌದು, ಅಸಲಿಗೆ ರಶ್ಮಿಕಾ.. ತೆಲುಗು ಸಿನಿರಂಗಕ್ಕೆ ಹೋದಾಗಲೇ, ಅನೇಕರು.. ರಶ್ಮಿಕಾ ಮತ್ತು ರಕ್ಷಿತ್ ಇಬ್ಬರೂ ಮದುವೆಯಾಗ್ತಾರಾ ಅನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಇದೇ ಅನುಮಾನಕ್ಕೆ ಗೀತ ಗೋವಿಂದಂ ಸಿನಿಮಾ ಮತ್ತೊಂದಷ್ಟು ಜೀವ ತುಂಬಿತ್ತು. ಅದು ನಿಜ ಎನ್ನುವಂತೆ, ಈಗ ಇನ್ನೂ ಈಗ ತಾನೇ ಹುಟ್ಚಿದ ಸಂಬಂಧವೊಂದು ಸತ್ತು ಹೋಗಿದೆ. ಸಿನಿಮಾ ಸೆಟ್ ನಲ್ಲಿ ಜನ್ಮ ತಾಳಿದ ಸಂಬಂಧ, ಮದುವೆ ಸೆಟ್ ಆಗಿ, ತಾಳಿ ಕಟ್ಟುವವರೆಗೂ ಬಾರದೆ, ಮುರಿದು ಹೋಗಿದೆ.

ಇದಕ್ಕೆಲ್ಲಾ ಇದೇ ಕಾರಣ ಎಂದು ಪಿನ್ ಪಾಯಿಂಟ್ ಮಾಡಿ ಹೇಳೋದು ಕಷ್ಟವಾದರೂ, ಮೇಲ್ನೋಟಕ್ಕೆ ಗೋಚರವಾಗುವ ಕೆಲವು ಸಂಗತಿಗಳಿವೆ. ಆದರೆ ಇವನ್ನು ಕೇವಲ male ನೋಟ ಅಂದರೆ ಗಂಡಸರ ನೋಟ ಎಂದುಕೊಂಡು ಅಲ್ಲಗಳೆಯುವಂತಿಲ್ಲ. ಈ ಅಭಿಪ್ರಾಯಗಳ ಪ್ರಕಾರ ರಶ್ಮಿಕಾ ಅವರಿಗೆ ತೆಲುಗು ಚಿತ್ರರಂಗದಲ್ಲಿ, ಹೆಚ್ಚು ಹಣ ಸಿಗುತ್ತಿದೆ, ಇನ್ನು ತೆಲುಗು ಚಿತ್ರರಂಗ ಹಣಕಾಸಿನ ವಿಚಾರದಲ್ಲಿ ಕನ್ನಡ ಚಿತ್ರರಂಗಕ್ಕಿಂತ ಒಂದು ಲೆವೆಲ್ ಎತ್ತರದಲ್ಲಿದೆ, ಅಲ್ಲಿ ರಕ್ಷಿತ್ ಶೆಟ್ಟಿಗಿಂತ ಹೆಚ್ಚು ದೊಡ್ಡ ಸೆಲೆಬ್ರಿಟಿಗಳಿದ್ದಾರೆ ಎನ್ನುವ ವಿಷಯಗಳೆಲ್ಲವೂ ಸೇರಿ ರಶ್ಮಿಕಾ ತಮ್ಮ ಮನಸ್ಸು ಬದಲಾಯಿಸಿದ್ದಾರೆ ಅನ್ನೋದು ಹಲವರ ಅಭಿಮತ.

ಒಟ್ಟಿನಲ್ಲಿ ಕನ್ನಡದ ಹುಡುಗನನ್ನು ಬಿಟ್ಟು ಹೋಗಿ, ಕನ್ನಡ ಮಾಧ್ಯಮಗಳನ್ನು ನೆಗ್ಲೆಕ್ಟ್ ಮಾಡಿ, ಸೈನ್ ಮಾಡಿದ ಕನ್ನಡ ಸಿನಿಮಾಗಳಿಗೆ ರಿಸೈನ್ ಮಾಡಿ ಹೋಗಿರುವ ರಶ್ಮಿಕಾ ಈಗ ತೆಲುಗು ಚಿತ್ರರಂಗದಲ್ಲಿ ತಮ್ಮ ಬ್ರೇಕ್ ಅಪ್ ಬಗ್ಗೆ ಬಾಯಿ ಬಿಡುತ್ತಿದ್ದಾರೆ. ಅದನ್ನು ನೋಡಿದ ಕನ್ನಡಗರು, ಅಯ್ಯೋ, ಈ ಹುಡುಗಿ ಇಷ್ಟು ಬೇಗ ಇಷ್ಟೊಂದು ಬೆಳೆದುಬಿಟ್ಟಳಾ, ಅಥವಾ ತಾನೇ ಹಾಗಂದುಕೊಂಡಿದ್ದಾಳಾ ಅಂತ ಬಾಯಿ ಬಾಯಿ ಬಿಡುತ್ತಿದ್ದಾರೆ.ಅದೇನೇ ಇರಲಿ, ಕನ್ನಡತನವನ್ನು ಧಿಕ್ಕರಿಸಿ ತೆಲುಗಿಗೆ ಹೋಗಿರುವ ರಶ್ಮಿಕಾ ಅವರಿಗೆ, ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ ಇನ್ನೇನು ಬಿಡುವುದು ಬಾಕಿ ಇದೆ, ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ ಹೊಂಟೋಗು ಕೊನೆ ಬಸ್ಸು ಟೈಮಾಗಿದೆ ಅನ್ನೋ ಹಾಡಿನಂತೆ ಹಳೆಯ ಪ್ರೇಮಿಯ ಪಾದವೇ ಗತಿ ಅನ್ನೋ ಪರಿಸ್ಥಿತಿ ಬಾರದೇ ಇರಲಿ. ದೇವರೋ ಅಥವಾ ದೇವರಕೊಂಡನೋ ಆಕೆಯನ್ನು ಕಾಪಾಡಲಿ ಅನ್ನೋದು ಸಮಸ್ತ ಕನ್ನಡಿಗರ ಹಾರೈಕೆ.

LEAVE A REPLY

Please enter your comment!
Please enter your name here