Home Crime “ಕನ್ನಡಿಗರಿಗೆ ಕರ್ನಾಟಕದಲ್ಲಿ ಬದುಕಲು ರಕ್ಷಣೆ ಇಲ್ಲ,ವಿನಾಯಕ ಗೆಳೆಯರ ಬಳಗ, ಕರವೇ ನನ್ನ ಸಾವಿಗೆ ನ್ಯಾಯ ಒದಗಿಸಿ”...

“ಕನ್ನಡಿಗರಿಗೆ ಕರ್ನಾಟಕದಲ್ಲಿ ಬದುಕಲು ರಕ್ಷಣೆ ಇಲ್ಲ,ವಿನಾಯಕ ಗೆಳೆಯರ ಬಳಗ, ಕರವೇ ನನ್ನ ಸಾವಿಗೆ ನ್ಯಾಯ ಒದಗಿಸಿ” ಎಂದೇಳಿ ಲೈವ್ ಸೂಸೈಡ್ ಮಾಡಿಕೊಂಡ ಯುವಕ..?!

1881
0
SHARE

ಆತ ಹಾಸನ ಮೂಲದವನಾಗಿದ್ದು, ತಮಿಳುನಾಡು ಮೂಲದ ಬಟ್ಟೆ ಅಂಗಡಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಆದ್ರೆ ಅವನ ಸಹೋದ್ಯೋಗಿಗಳ ಕಿರುಕುಳದಿಂದ ಬೇಸತ್ತು ತನ್ನ ನೋವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾನೆ.ಸಾಯುವ ಮುನ್ನ ತನ್ನದೇ ಮೊಬೈಲ್ ನಲ್ಲೇ ಸುಮಾರು 12 ನಿಮಿಷಗಳ ವೀಡಿಯೋ ಮಾಡಿರುವ ಸೇವಾರ್ಥ್, ನಾನು ಕನ್ನಡಿಗ ಎಂಬ ಕಾರಣಕ್ಕೆ ನಾಲ್ವರು ಸಹೋದ್ಯೋಗಿಗಳು ಇನ್ನಿಲ್ಲದ ಕಿರುಕುಳ ನೀಡಿದ್ರು. ಅವರಿಂದಲೇ ನಾನು ಸಾಯುತ್ತಿದ್ದೇನೆ.

ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾನೆ.ಕೈ ಮುಗಿದು ತನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಲೇ ಬೇಕು ಅಂತಾ ಒತ್ತಿ ಒತ್ತಿ ಹೇಳ್ತಿರೋ ಇವನು ಸೇವಾರ್ಥ್.. ಹಾಸನ ಹೊಳೆನರಸೀಪುರ ಮೂಲದ ಸೇವಾರ್ಥ್ ಕಳೆದ 7 ವರ್ಷಗಳಿಂದ ತಮಿಳುನಾಡು ಮೂಲದ ಪಿಎಸ್ಆರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಲಿ ಸಹಾಯಕ ಮ್ಯಾನೇಜರ್ ಆಗಿದ್ದ ಸೇವಾರ್ಥ್, ಹಾಸನ, ಮೈಸೂರು ಕಂಪನಿಗಳಲ್ಲಿ ಕೆಲಸ ಮಾಡಿದ್ದ.

ಅಷ್ಟೇ ಅಲ್ಲದೇ ಕೆಲ ದಿನಗಳ ಹಿಂದಷ್ಟೇ ಮಂಗಳೂರಿಗೆ ಎತ್ತಂಗಡಿ ಮಾಡಿದ್ರೂ ಅಲ್ಲಿಯೂ ತನ್ನ ಕರ್ತವ್ಯ ಸಲ್ಲಿಸಿ ಬಂದಿದ್ದರಂತೆ..ಕೆಲಸದಲ್ಲಿ ಎಷ್ಟೇ ನಿಯತ್ತಾಗಿ ದುಡಿದ್ರೂ ಸಹೋದ್ಯೋಗಿಗಳು ಅಂತಾ ಇರ್ತಾರಲ್ಲ ಅವರ ಕಿರುಕುಳಕ್ಕೆ ಮಾನಸಿಕವಾಗಿ ನೊಂದು ಹೋಗಿದ್ದ.. ಪಿಎಸ್ಆರ್ ಕಂಪನಿ ಮೈಸೂರು ಶಾಖೆಯ ಮ್ಯಾನೇಜರ್ ಹಾಲುದೊರೈ, ಸಹಾಯಕ ಮ್ಯಾನೇಜರ್ ಪ್ರದೀಪ್, ಹಾಸನ ಬ್ರಾಂಚ್ ಮ್ಯಾನೇಜರ್ ಪ್ರಕಾಶ್ ಮತ್ತು ಹೆಚ್‌ಆರ್ ಆಗಿರೋ ಸೀತಾರಾಮನ್ ತನಗೆ ಕೊಡಬಾರದ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಸಣ್ಣ ಪುಟ್ಟ ಕಾರಣಕ್ಕೂ ಕಿರುಕುಳ ನೀಡುತ್ತಿದ್ದರು. ನನ್ನ ಸಾವಿಗೆ ಈ ನಾಲ್ವರೇ ಕಾರಣ ಎಂದು ಸಾಯುವ ಮುನ್ನ 12 ನಿಮಿಷಗಳ ಸೆಲ್ಫಿ ವೀಡಿಯೋ ಮಾಡಿದ್ದಾನೆ.ಅಷ್ಟೇ ಅಲ್ಲ ತನ್ನ ಸಾವಿಗೆ ಕಾರಣವಾಗಿರೋ ಈ ನಾಲ್ವರಿಗೂ ತಕ್ಕ ಶಿಕ್ಷೆಯಾಗಬೇಕು ಅಂತಾ ಒತ್ತಾಯಿಸಿರೋ ಸೇವಾರ್ಥ್, ನನ್ನ ಪೋಷಕರು, ವಿನಾಯಕ ಗೆಳೆಯರ ಬಳಗದವರು ಹಾಗೂ ಕರವೇ ಕಾರ್ಯಕರ್ತರು ಹೋರಾಟ ಮಾಡಬೇಕು.

ಅಪ್ಪ-ಅಮ್ಮ ಕಂಪನಿಯವರು ಕೊಡುವ ಯಾವುದೇ ಹಣವನ್ನು ಪಡೆಯದೇ ನನಗೆ ಕಿರುಕುಳ ಕೊಟ್ಟವರಿಗೆ ತಕ್ಕ ಶಾಸ್ತಿ ಮಾಡಿಸಿ ಎಂದು ವೀಡಿಯೋದಲ್ಲಿ ಸೇವಾರ್ಥ್ ಮನವಿ ಮಾಡಿದ್ದಾನೆ. ವೀಡಿಯೋದಲ್ಲಿ ತನಗಾದ ನೋವು, ತೊಂದರೆಯನ್ನು ವಿವರಿಸಿದ ನಂತರ ತಾನು ವಾಸವಿದ್ದ ಹಾಸನದ ಬಸಟ್ಟಿಕೊಪ್ಪಲಿನ ಬಾಡಿಗೆ ಕೊಠಡಿಯಲ್ಲಿ ಕಳೆದ ರಾತ್ರಿ ನೇಣಿಗೆ ಶರಣಾಗಿದ್ದಾನೆ.ಇನ್ನು ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಮೃತನ ಸ್ನೇಹಿತರು ಹಾಗೂ ಸಂಬಂಧಿಕರು, ಯುವಕನ ಸಾವಿಗೆ ನ್ಯಾಯ ಕೊಡಿಸಿ ಎಂದು ಹಾಸನದ ಪಿಎಸ್ಆರ್ ಕಂಪನಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಇಂದು ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಪಿಎಸ್ಆರ್ ಅಂಗಡಿ ಮಳಿಗೆಯನ್ನು ಕೂಡಲೇ ಇಲ್ಲಿಂದ ಎತ್ತಂಗಡಿ ಮಾಡಬೇಕು.ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.ಮೃತ ಯುವಕನ ತಂದೆ ಮಲ್ಲೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಾಸನದ ಬಡಾವಣೆ ಠಾಣೆಯಲ್ಲಿ ಒಟ್ಟು ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ನಂತರವಷ್ಟೇ ಸೂಸೈಡ್ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಗೌಡ ತಿಳಿಸಿದ್ದಾರೆ.ಮೇಲ್ನೋಟಕ್ಕೆ ಸೇವಾರ್ಥ್, ದುಡುಕು ನಿರ್ಧಾರದಿಂದ ನೇಣಿಗೆ ಶರಣಾಗಿದ್ರೂ, ಮಾನಸಿಕ ಕಿರುಕುಳ ಕಾರಣ ಎನ್ನಲಾಗ್ತಿದೆ. ಆದ್ರೆ ಮಿಳುನಾಡಿನ ಕಂಪನಿಯಿಂದ ಕನ್ನಡಿಗರಿಗೆ ಕಿರುಕುಳವಾಗುತ್ತಿದೆ ಎಂದು ಮೃತ ಯುವಕ ಆರೋಪಿಸಿರುವುದರಿಂದ ಪೊಲೀಸ್ ತನಿಖೆ ನಂತರ ಅಂತೆ ಕಂತೆಗಳ ಸತ್ಯಾಸತ್ಯತೆ ತಿಳಿಯಲಿದೆ.

LEAVE A REPLY

Please enter your comment!
Please enter your name here