Home Cinema ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಟ್ ಕ್ರಿಯೆಟ್ ಮಾಡಿದ ಆ ಒಂದು ಪೋಸ್ಟರ್..?! ದಚ್ಚು ಫ್ಯಾನ್ಸ್ ಫುಲ್...

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಟ್ ಕ್ರಿಯೆಟ್ ಮಾಡಿದ ಆ ಒಂದು ಪೋಸ್ಟರ್..?! ದಚ್ಚು ಫ್ಯಾನ್ಸ್ ಫುಲ್ ಖುಷ್..!

586
0
SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್… ಅಭಿಮಾನಿಗಳ ಅಭಿಮಾನಿ. ಸದ್ಯ ನಯಾ ಯಜಮಾನನಾಗಿ ಮಿಂಚುಹರಿಸುಲು ಸಜ್ಜಾಗಿರುವ ದಾಸ, ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಗಿಫ್ಟ್‌ವೊಂದನ್ನು ನೀಡಿದ್ದಾರೆ. ತಮ್ಮ ಅಭಿನಯದ ಡಿ-೫೩ ನೇ ಚಿತ್ರದ ಪೋಸ್ಟ್‌ರನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಡಬ್ಬಲ್ ಖುಷಿ- ಡಬ್ಬಲ್ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ದರ್ಶನ್ ನಯಾ ‘ಅವತಾರ’ಕ್ಕೆ ಡಿ ಭಕ್ತರು ಹೊಡೆದ್ರು ಚಪ್ಪಾಳೆ..:ಯಸ್.. ದರ್ಶನ್ ಕಾರು ಅಪಘಾತದಿಂದ ಸದ್ಯ ಕಂಪ್ಲೀಟ್ ಗುಣ ಮುಖರಾಗ್ತಿದ್ದಾರೆ. ಚಿತ್ರೀಕರಣಕ್ಕೆ ಹೊರಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ದರ್ಶನ್ ಡಿ- ೫೩ ಸಿನಿಮಾ ತಂಡ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಮಾಡಿದೆ. ಬಲಗೈಯಲ್ಲಿ ಮಗು ಹಿಡಿದಿರುವ ಪೋಸ್ಟರ್‌ರನ್ನು ದರ್ಶನ್ ಟ್ವೀಟ್ ಮಾಡುವ ಮೂಲಕ ದೀಪಾವಳಿ ಪ್ರಯುಕ್ತ, ಡಿ-ಭಕ್ತಗಣಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ.

(‘ನನ್ನ ’ಡಿ-೫೩’ನೇ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಕಥೆಯ ಎಳೆ ಏನಿರಬಹುದೆಂಬ ಸಣ್ಣ ಸುಳಿವನ್ನು ನಿರ್ದೇಶಕ ತರುಣ್ ಸುಧೀರ್ ಈ ಪೋಸ್ಟರ್ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸಹ ಸದ್ಯದಲ್ಲೇ ಅಧಿಕೃತವಾಗಿ ಹೇಳಲಿದ್ದೇವೆ. )ಈಗಂಥ ದರ್ಶನ್ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡುವುದರ ಜೊತೆಗೆ ಚಿತ್ರದ ಬಗ್ಗೆ ಕೆಲವು ವಿಷಯವನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಹೌದು.. ಡಿ- ಫ್ಯಾನ್ಸ್ ಸಾಕಷ್ಟು ದಿನಗಳಿಂದ ಕಾದು ಕುಳಿತಿದ್ದ ಚಿತ್ರದ ಫಸ್ಟ್‌ಲುಕ್ ತುಂಬಾ ಕುತೂಹಲ ಕೆರಳಿಸಿದ್ದು. ಪೋಸ್ಟರ್‌ನಲ್ಲೇ ‘ಈ ಕೈಗೆ ಶಬರಿ ಮುಂದೆ ಸೋಲೋದು ಗೋತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು.. ಎನ್ನುವ ಮೂಲಕ ಪಂಚ್ ಕೊಟ್ಟಿರುವ ಚಿತ್ರತಂಡ. ಅಪಘಾತದಲ್ಲಿ ದರ್ಶನ್ ಕೈಗೆಪೆಟ್ಟಾದ ಕೈ ಸ್ಕೆಚ್ ಬಳಸಿಕೊಂಡಿರುವುದು. ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ರಾವಣನ ಕಥೆ ಅನಾವರಣ ಮಾಡ್ತಿದ್ದಾರಾ ಎನ್ನುವ ಅಭಿಮಾನಿಗಳ ನಿರೀಕ್ಷೆಯನ್ನು ಫಸ್ಟ್ ಲುಕ್‌ನ ಮೂಲಕವೇ ಹೆಚ್ಚಾಗುವಂತೆ ಮಾಡಿದೆ.

ಅಲ್ಲದೆ ಚಿತ್ರದ ನಿರ್ದೇಶಕ ತರುಣ್ ಸುಧೀರ್, ಆಫ್ಟರ್ ಚೌಕಾ ಹೊಸ ಯತ್ನಕ್ಕೆ ಕೈಹಾಕಿರುವ ತರುಣ್ ಪೋಸ್ಟರ್‌ನಲ್ಲೇ ಅಭಿಮಾನಿಗಳಿಗೆ ಟೈಟಲ್ ಮತ್ತು ಕಥೆ ಎರಡನ್ನು ಊಹಿಸುವ ಸವಾಲನ್ನು ನೀಡಿದ್ದಾರೆ.ಇನ್ನು ದಚ್ಚು ಪೋಸ್ಟರ್ ರಿಲೀಸ್ ಆಗ್ತಿದ್ದಂತೆ ಡಿ-ಫ್ಯಾನ್ಸ್ ಬಳಗದಲ್ಲಿ ನಿಜವಾದ ದೀಪಾವಳಿ ಸಂಭ್ರಮ ಮನೆಮಾಡಿದೆ. ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ದೊಡ್ಡ ಮಟ್ಟದ ಸಂಚಲವನ್ನೇ ಎಬ್ಬಿಸಿದ್ದು, ಹೊಸದೊಂದು ಟ್ರೆಂಡ್‌ಗೆ ಕಾರಣವಾಗಿದೆ.

ಇದರ ನಡುವೆ ದರ್ಶನ್ ಪೋಸ್ಟರ್‌ನ ರೀತಿಯೇ ಅಭಿಮಾನಿಗಳು ಮಕ್ಕಳ ಕೈಹಿಡಿದಿರುವ ಪೋಟೋಗಳನ್ನು ತಮ್ಮ ಪೇಜ್‌ನಲ್ಲಿ ಪೋಸ್ಟ್ ಮಾಡುವುದರ ಮೂಲಕ ಡಿ-೫೩ ಚಿತ್ರಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.ದಾಸನ ಅಭಿಮಾನಿಗಳು ಪೋಸ್ಟರ್‌ಗೆ ತೋರಿಸ್ತಿರುವ ಕ್ರೇಝ್ ಇದೇ ಮೊದಲೇನಲ್ಲ. ಯಾವ ಸಿನಿಮಾದ ಪೋಸ್ಟರ್ ರಿಲೀಸ್ ಆದ್ರೂ, ಅಭಿಮಾನಿಗಳು ಇಂಥದೊಂದು ಟ್ರೆಂಡ್ ಸೃಷ್ಠಿಸುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ಯಜಮಾನ ಚಿತ್ರದ ಪೋಸ್ಟರ್‌ಗೂ ಇಂಥದ್ದೇ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಈ ಭಾರಿ ಪೋಸ್ಟರ್ ಜೊತೆಗೆ ಡೈಲಾಗ್‌ಗೆ ಇರುವುದು ಅಭಿಮಾನಿಗಳ ಮೆಚ್ಚುಗೆಯನ್ನು ದುಪ್ಪಟ್ಟಾಗಿಸಿದೆ. ತಮ್ಮ ಖಾತೆಗಳಲ್ಲಿ ಫೋಟೋ ಪೋಸ್ಟ್ ಮಾಡುವುದು, ಮತ್ತು ವಾಹನಗಳಲ್ಲಿ ಪೋಟೋವನ್ನು ಅಂಟಿಸಿಕೊಳ್ಳುವುದರ ಮೂಲಕ ಅಭಿಮಾನವನ್ನು ಮೆರೆಯುತ್ತಿದ್ದಾರೆ.

ಪೋಸ್ಟರ್ ಎಂದ ಕೂಡಲೇ ಅಭಿಮಾನಿಗಳು ಡಿ-ಬಾಸ್ ಮಾಸ್ ಲುಕ್‌ನಲ್ಲಿ ಮಿಂಚ ಬಹುದೆಂದು ಅಂದಾಜಿಸಿದ್ರು. ಆದ್ರೆ ಪೋಸ್ಟರ್ ನೋಡಿ ತಲೆ ಕೆಡಿಸಿಕೊಂಡಿರುವ ಫ್ಯಾನ್ಸ್ ಚಿತ್ರದಲ್ಲಿ ಪೋಸ್ಟರ್‌ನಲ್ಲೇ ಕಮಾಲ್ ಮಾಡ್ತಿರುವ ಪರಿಕಂಡು ಶಿಳ್ಳೆ ಚಪ್ಪಾಳ್ಳೆ ಹೋಡಿತ್ತಿದ್ದು, ಟೈಟಲ್ ಬಿಡುಗಡೆಯ ದಿನವನ್ನು ಎದುರು ನೋಡ್ತಿದ್ದಾರೆ.

LEAVE A REPLY

Please enter your comment!
Please enter your name here