Home Cinema ಕನ್ನಡ ಚಿತ್ರರಂಗದ ಬೆನ್ನಿಗೆ Book My Show ಹಾಕ್ತಿದೆಯಾ ಚೂರಿ..? ಛೇ.ಛೇ.! ರೇಟಿಂಗ್ ದಂಧೆಗೆ ಕನ್ನಡ...

ಕನ್ನಡ ಚಿತ್ರರಂಗದ ಬೆನ್ನಿಗೆ Book My Show ಹಾಕ್ತಿದೆಯಾ ಚೂರಿ..? ಛೇ.ಛೇ.! ರೇಟಿಂಗ್ ದಂಧೆಗೆ ಕನ್ನಡ ಚಿತ್ರ ನಿರ್ಮಾಪಕರಿಗೆ ಕಣ್ಣುರಿ..!

420
0
SHARE

ಚಿತ್ರಗಳಿಗೆ ಮತ್ತು ಚಿತ್ರದ ನಿರ್ಮಾಪಕರಿಗೆ, ಅನೂಕುಲವಾಗಬೇಕಿದ್ದ.. ಬುಕ್ ಮೈ ಶೋ, ಕನ್ನಡ ಚಿತ್ರರಂಗಕ್ಕೆ ಮಾರಕವಾಗ್ತಿದೆ. ಇದು.. ನಮ್ಮ ಮಾತಲ್ಲ ಬದಲಿಗೆ, ಕನ್ನಡ ಚಿತ್ರರಂಗದ ಅನೇಕ ನಿರ್ಮಾಪಕರ ಒಕ್ಕೂರಿಲಿನ ಅಭಿಪ್ರಾಯ.

ಹೌದು, ಬುಕ್ ಮೈ ಶೋ, ಕನ್ನಡ ಚಿತ್ರರಂಗಕ್ಕೆ ಮಾರಕವಾಗ್ತಿದೆ. ಬುಕ್ ಮೈ ಶೋದಲ್ಲಿನ ರೇಟಿಂಗ್ ದಂಧೆ, ಅನೇಕ ನಿರ್ಮಾಪಕರ ಕಣ್ಣುರಿಯನ್ನೂ ಹೆಚ್ಚಿಸಿದೆ. ಯಸ್, ನಿಮಗೆ ಗೊತ್ತಿರಲಿ ಕಾಲ ಇದೀಗ ಮೊದಲಿನಂತಿಲ್ಲ. ಸಿನಿಮಾ ಬಿಡುಗಡೆಯಾದ ತಕ್ಷಣವೇ ಚಿತ್ರಮಂದಿರಕ್ಕೆ ಹೋಗುವ ಪುರಸೊತ್ತು ಇದೀಗ ಯಾರಿಗೂ ಇಲ್ಲ. ಚಿತ್ರದ ಬಿಡುಗಡೆ ಬಳಿಕ ಚಿತ್ರದ ವಿಮರ್ಷೆಗಳನ್ನ ಓದಿ, ಸೊಶಿಯಲ್ ಮೀಡಿಯಾದಲ್ಲಿ ಚಿತ್ರದ ಬಗೆಗಿನ ಮಾತುಗಳತ್ತ ಕಣ್ಣಾಯ್ಸಿ, ನಂತ್ರ ಚಿತ್ರಮಂದಿರದತ್ತ ಹೋಗುವ ಕಾಲ ಇದು. ಇಂಥ ಕಾಲ ಘಟ್ಟದಲ್ಲಿ ಬುಕ್ ಮೈ ಶೋದಲ್ಲಿ ಕೊಡಲಾಗುವ ರೇಟಿಂಗ್‌ಗಳನ್ನ ನೋಡಿಕೊಂಡು ಚಿತ್ರಮಂದಿರಕ್ಕೆ ಹೋಗುವವರೂ ಇದ್ದಾರೆ.

ಇದುವೇ, ಇದೀಗ ಬುಕ್ ಮೈ ಶೋ ಪಾಲಿಗೆ ಪ್ರಮುಖವಾದ ಬ್ರಹ್ಮಾಸ್ತ್ರವಾಗಿದೆಯಾ ಅನ್ನುವ ಅನುಮಾನ ಅನೇಕರನ್ನ ಕಾಡ್ತಿದೆ. ಇಷ್ಟೇ ಅಲ್ಲ ಇದೇ ಇದೀಗ ನಿರ್ಮಾಪಕರ ತಲೆನೋವಿಗೂ ಕಾರಣವಾಗಿದೆ.ಅಸಲಿಗೆ ದೇಶದ ನಂಬರ್ ಒನ್ ಆನ್‌ಲೈನ್ ಟಿಕೆಟ್ ಬುಕಿಂಗ್ ಜಾಲತಾಣದಲ್ಲಿ. ಸಿನಿಮಾಗಳಿಗೆ ರೇಟಿಂಗ್ ಕೂಡಾ ಕೊಡಲಾಗುತ್ತೆ. ಆ ರೇಟಿಂಗ್ ಹಿಂದೆ ದೊಡ್ಡ ಡೀಲಿಂಗ್ ನಡೆಯುತ್ತೆ. ಅಪ್ಪಿ..ತಪ್ಪಿ.. ಡೀಲಿಂಗ್‌ಗೆ ಒಪ್ಪಿಕೊಳ್ಳದೇ ಇದ್ದಲ್ಲಿ, ಆ ಸಿನಿಮಾ ಎಷ್ಟೇ ಚೆನ್ನಾಗಿದ್ದರೂ..ತೇಜೋವಧೆ ಮಾಡುವ ಕೆಲ್ಸ ಬುಕ್ ಮೈ ಶೋ ತಂಡದಿಂದಾಗುತ್ತೆ. ಹೌದು, ಬುಕ್ ಮೈ ಶೋದಲ್ಲಿನ ರೇಟಿಂಗ್‌ನಲ್ಲಿ ಏರಿಳಿತಕ್ಕೆ ಪ್ರಮುಖ ಕಾರಣ ದುಡ್ಡು ಅನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರ‍್ತಾನೇ ಇದೆ.

ದುಡ್ಡು ಕೊಟ್ಟರೆ ಎಂಥ ಕೆಟ್ಟ ಚಿತ್ರವಾದ್ರೂ ಇಲ್ಲಿ ಯಥೇಚ್ಚವಾಗಿ ರೇಟಿಂಗ್ ನೀಡಲಾಗುತ್ತೆ. ಸಿನಿಮಾ ಚೆನ್ನಾಗಿದೆ ಅನ್ನುವ ರಿವ್ಯೂವ್‌ಗಳನ್ನೂ ಹಾಕಲಾಗುತ್ತೆ. ಆದ್ರೆ, ಅದೇ ದುಡ್ಡು ಕೊಡ್ದೇ ಇದ್ದಲ್ಲಿ ಎಲ್ಲ ಉಲ್ಟಾಪಲ್ಟಾ. ಹೌದು, ದುಡ್ಡು ಕೊಡ್ದೇ ಇದ್ದಲ್ಲಿ ಎಂಥ ಒಳ್ಳೇ ಸಿನಿಮಾವಾದ್ರೂ ಸರಿ, ಸಿನಿಮಾ ಚೆನ್ನಾಗಿಲ್ಲ ಅನ್ನುವ ಅರ್ಥದಲ್ಲಿ ವಿಮರ್ಷೆಗಳನ್ನ ಹಾಕಲಾಗುತ್ತೆ. ಇನ್ನೂ ರೇಟಿಂಗ್ ಕೇಳೋ ಹಂಗೆ ಇಲ್ಲ. ಇಂಥ ಘನಘೋರ ಆರೋಪವನ್ನೊತ್ತೇ ಇವತ್ತಿಗೂ ಚಾಲ್ತಿಯಲ್ಲಿರುವ ಇದೇ ಬುಕ್ ಮೈ ಶೋದಿಂದ, ಇದೀಗ ರಾಜಣ್ಣನ ಮಗ.. ಫೇಸ್ ಟು ಫೇಸ್.. ಸೇರಿ ಒಂದಿಷ್ಟು ಚಿತ್ರತಂಡಗಳೂ ಕಂಗಾಲಾಗಿ ಹೋಗಿವೆ. ನ್ಯಾಯ ಕೊಡಿಸಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲನ್ನೂ ಹತ್ತಿವೆ.

ಯಸ್..ರಾಜಣ್ಣನ ಮಗ, ಕಳೆದ ವಾರ ಬಿಡುಗಡೆಗೊಂಡಿದ್ದ ಸಿನಿಮಾ. ಪ್ರೇಕ್ಷಕರ ಹಾಗೂ ವಿಮರ್ಷಕರ ಪ್ರೀತಿ ರಾಜಣ್ಣನ ಮಗನಿಗೆ ಸಿಕ್ಕಿದೆ. ಇದ್ರಿಂದ.. ರಾಜಣ್ಣ ಮುಖದಲ್ಲೊಂದು ಮಂದಹಾಸ ಮೂಡಬೇಕೆನ್ನೋ ಅಷ್ಟರಲ್ಲಿ, ಬುಕ್ ಮೈ ಶೋ.. ಇದೇ ರಾಜಣ್ಣನ ಮಗನ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಹೌದು, ಅಸಲಿಗೆ.. ಬುಕ್ ಮೈ ಶೋದ ಹೆಸರು ಹೇಳಿಕೊಂಡು ರಿಯಾಜ್ ಪಾಶಾ ಹಾಗೂ ಸ್ನೇಹಾ ಮ್ಯಾಥ್ಯೂ ಅನ್ನುವ ಇಬ್ಬರು ವ್ಯಕ್ತಿಗಳೂ, ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾರೆ. ದುಡ್ಡು ಕೊಡಿ ರೇಟಿಂಗ್ ಹೆಚ್ಚು ಮಾಡಿ ಕೊಡ್ತೀವಿ ಅಂದಿದ್ದಾರೆ. ಇದಕ್ಕೆ, ರಾಜಣ್ಣನ ಮಗ ತಂಡ ಒಪ್ಪಿಕೊಂಡಿಲ್ಲ. ಅದ್ಯಾವಾಗ.. ರಾಜಣ್ಣನ ಮಗ ತಂಡ ಒಪ್ಪಿಕೊಳ್ಳಲಿಲ್ಲ ಆಗ ಇಬ್ಬರೂ ಚಿತ್ರದ ರೇಟಿಂಗ್ ಇಳಿಸಿದ್ದಾರೆ. ಇದು, ಚಿತ್ರದ ಮೇಲೆ ಇನ್ನಿಲ್ಲದ ಪರಿಣಾಮ ಬೀರಿದೆ.

ಬರೀ ರಾಜಣ್ಣನ ಮಗನಿಗಷ್ಟೇ ಇಂಥ ಅನುಭವ ಆಗಿಲ್ಲ. ಕಳೆದ ವಾರ ರಾಜಣ್ಣನ ಮಗನ ಜೊತೆ ಬಂದ ಫೇಸ್ ಟು ಫೇಸ್ ಚಿತ್ರಕ್ಕೂ ಇಂಥಹದ್ದೇ ಅನುಭವವಾಗಿದೆ. ಫೇಸ್ ಟು ಫೇಸ್ ಚಿತ್ರದ ವಿಚಾರದಲ್ಲೂ ಇದೇ ಆಗಿದೆ. ರೇಟಿಂಗ್‌ನ ಇಳಿಸಲಾಗಿದೆ.ಇನ್ನೂ ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಇದೆ. ಹೌದು, ದುಡ್ಡಿಗಾಗಿ ಡಿಮ್ಯಾಂಡ್ ಮಾಡುವ ರಿಯಾಜ್ ಪಾಶಾ ಹಾಗೂ ಸ್ನೇಹಾ ಮ್ಯಾಥ್ಯೂ ಎದುರುಗಡೆ ಕುಂತೂ ವ್ಯವಹಾರ ಮಾಡುವವರಲ್ಲ. ಇವ್ರದ್ದೇನಿದ್ರೂ ವ್ಯವಹಾರ ಬರೀ ವಾಟ್ಸಾಫ್‌ನಲ್ಲಷ್ಟೇ. ಇದು, ಇನ್ನಿಲ್ಲದ ಅನುಮಾನಕ್ಕೂ ಕಾರಣವಾಗುತ್ತೆ ಅನ್ನೋದು ಇದೀಗ ದೂರು ದಾಖಲಿಸಿರುವ ನಿರ್ಮಾಪಕರ ಮಾತು.ಸದ್ಯ, ಬುಕ್ ಮೈ ಶೋದವ್ರ ದೋಖಾ ಮಾಡುವ ಕಥೆಯ ದೂರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ.

ದೂರು ದಾಖಲಿಸಿಕೊಂಡ ಫಿಲ್ಮ್ ಚೇಂಬರ್‌ನ ಕಾರ್ಯದರ್ಶಿ ಭಾ.ಮಾ.ಹರೀಶ್, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.ಫಿಲ್ಮ್ ಚೇಂಬರ್‌ನ ಕಾರ್ಯದರ್ಶಿ ಭಾ,ಮಾ,.ಹರೀಶ್, ನ್ಯಾಯ ಸಲ್ಲಿಸುವ ಮಾತುಗಳನ್ನಾಡಿದ್ರೂ.. ರಾಜಣ್ಣನ ಮಗ ಹಾಗೂ ಫೇಸ್ ಟು ಫೇಸ್ ಚಿತ್ರಗಳಿಗಾದ ನಷ್ಟ ಭರಿಸೋದ್ಯಾರು ಅನ್ನುವ ಪ್ರಶ್ನೆನೂ ಮೂಡುತ್ತೆ. ಇನ್ನೂ ಬುಕ್ ಮೈ ಶೋದಿಂದ ಅನ್ಯಾಯಕ್ಕೊಳಗಾಗುತ್ತಿರುವವ್ರಲ್ಲಿ ರಾಜಣ್ಣನ ಮಗ, ಫೇಸ್ ಟು ಫೇಸ್ ಅಷ್ಟೇ ಅಲ್ಲ.

ಹಿಂದೆಯೂ ಇಂಥ ಘಟನೆಗಳೂ ನಡೆದಿವೆ. ಮುಗುಳು ನಗೆ, ನಾತಿಚರಾಮಿ, ಗೋಸಿ ಗ್ಯಾಂಗ್, ಗಿಣಿ ಹೇಳಿದ ಕಥೆ, ಅನೇಕ ಚಿತ್ರಗಳೂ ಬುಕ್ ಮೈ ಶೋ ರೇಟಿಂಗ್ ದಂಧೆಗೆ ನರಳಿ ಹೋಗಿವೆ. ಆಗೆಲ್ಲಾ, ಪರ್ಯಾಯ ಆಪ್‌ನ ವ್ಯವಸ್ಥೆ ಮಾಡುವ ಯೋಜನೆ ಬಗ್ಗೆ ಚರ್ಚೆಯಾಯ್ತೇ ಹೊರ‍್ತು, ಅದು ಕಾರ್ಯರೂಪಕ್ಕೆ ಬರಲಿಲ್ಲ.ಅದೇನೆ ಇದ್ರೂ ಅಡ್ಡದಾರಿಯ ವ್ಯವಹಾರಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ಫಿಲ್ಮ್ ಚೇಂಬರ್ ಮೇಲಿದೆ. ನಿರ್ಮಾಪಕರ ಹಿತ ಕಾಯಬೇಕಾದ ಸಂಸ್ಥೆ, ಈ ನಕಲಿ ರೇಟಿಂಗ್ ಸೃಷ್ಟಿಕರ್ತರಿಗೆ ಕಡಿವಾಣ ಹಾಕಬೇಕಿದೆ. ಹೀಗಾದಾಗಲೇ ಪ್ರೇಕ್ಷಕರು ಮತ್ತು ನಿರ್ಮಾಪಕರನ್ನು ಏಕಕಾಲದಲ್ಲಿ ರಕ್ಷಿಸಲು ಸಾಧ್ಯ.

LEAVE A REPLY

Please enter your comment!
Please enter your name here