Home Cinema “ಕನ್ನಡ ದ್ರೋಹಿ” ಅಂದವ್ರಿಗೆ “ರಶ್ಮಿಕಾ” ಕೊಟ್ಟರು ಮಾತಲ್ಲೇ ಏಟು..!!? ಸಾನ್ವಿನೇ ನಾಯಕಿಯಾಗ್ಲಿ ಅಂತ ತಾರಕ್ ಹಿಡಿದಿದ್ದಾರಂತೆ...

“ಕನ್ನಡ ದ್ರೋಹಿ” ಅಂದವ್ರಿಗೆ “ರಶ್ಮಿಕಾ” ಕೊಟ್ಟರು ಮಾತಲ್ಲೇ ಏಟು..!!? ಸಾನ್ವಿನೇ ನಾಯಕಿಯಾಗ್ಲಿ ಅಂತ ತಾರಕ್ ಹಿಡಿದಿದ್ದಾರಂತೆ ಪಟ್ಟು..!!

2438
0
SHARE

ಕನ್ನಡ ನೆಲದಿಂದ ಬಹುತೇಕ ಕಾಲ್ಕಿತ್ತಂತಿರುವ, ರಶ್ಮಿಕಾ ಆರಾಧನೆ, ಭಜನೆ ಟಿಟೌನ್‌ನಲ್ಲಿ ಜೋರಾಗಿ ನಡಿತಿದೆ. ಹೌದು, ಗೀತಾ ಗೋವಿದಂ ಸಿನಿಮಾ ನೂರು ಕೋಟಿ ಕೊಳ್ಳೆ ಹೊಡೆದಿದ್ದೇ ತಡ, ಟಿಟೌನ್ ನಿರ್ಮಾಪಕರು.. ನಾ ಮುಂದು ತಾ ಮುಂದು ಅಂತ ರಶ್ಮಿಕಾ ಹಿಂದೆ ಮುಂದೆ ಸೂಟ್‌ಕೇಸ್ ಹಿಡಿದುಕೊಂಡು ಕಾಲ್ ಶೀಟ್‌ಗಾಗಿ ತಿರುಗುತ್ತಿದ್ದಾರೆ. ಇದು ನಮ್ಮ ಮಾತಲ್ಲ.. ಬದ್ಲಿಗೆ ಹೈದ್ರಾಬಾದ್‌ನಲ್ಲಿರುವ ರಾಮೋಜಿ ರಾವ್ ಫಿಲ್ಮ್ ಸಿಟಿ ಅಂಗಳದಿಂದ ತೂರಿ ಬಂದ ಸುದ್ದಿ.

ರಶ್ಮಿಕಾ.. ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ. ಇದಕ್ಕೆ, ಗೀತ ಗೋವಿಂದನ ಗ್ರ್ಯಾಂಡ್ ಸಕ್ಸಸು & ರಶ್ಮಿಕಾ ಆಕ್ಟಿಂಗ್ ಸ್ಕಿಲ್ಸು ಕಾರಣ ಅನ್ನೋದನ್ನ ಇಲ್ಲಿ ಪ್ರತೈಕವಾಗಿ ಇಲ್ಲಿ ಹೇಳಬೇಕಿಲ್ಲ. ನಿಮಗೆ ಗೊತ್ತಿರಲಿ ರಶ್ಮಿಕಾ.. ಇನ್ನೇನು ನಾಗಾರ್ಜುನ & ನಾನಿ ಮತ್ತೆ ತೆರೆ ಮೇಲೆ ದೇವದಾಸ್ ಸಿನಿಮಾ ಮೂಲಕ ಹಾಜರಾಗಲಿದ್ದಾರೆ. ಹೀಗಿರುವಾಗ್ಲೇ..ಕನ್ನಡದ ಸಾನ್ವಿಗೆ, ಜ್ಯೂ.ಎನ್.ಟಿ.ಆರ್ ಸಿನಿಮಾ ಅರಸಿಕೊಂಡು ಹೋಗಿದೆ.

ಸಾನ್ವಿನೇ ನಾಯಕಿಯಾಗ್ಲಿ ಅಂತ ತಾರಕ್ ಹಿಡಿದಿದ್ದಾರಂತೆ ಪಟ್ಟು..!:ಹೌದು. ತಾರಕ್ ಅಭಿನಯದ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿಯಾಗುವ ಲಕ್ಷಣಗಳು ದಟ್ಟವಾಗಿವೆ. ಆಲ್ ರೆಡಿ ಒಂದು ಹಂತದ ಮಾತುಕಥೆಯನ್ನೂ ಚಿತ್ರತಂಡದೊಂದಿಗೆ ಮಾಡಿ ಮುಗಿಸಿರುವ ರಶ್ಮಿಕಾ, ಇನ್ನೇನು ಗ್ರೀನ್ ಸಿಗ್ನಲ್ ನೀಡಬೇಕಿದೆಯಷ್ಟೇ.

ಜ್ಯೂ ಎನ್ ಟಿ ಆರ್ ಜೊತೆ ರಶ್ಮಿಕಾ.. ಹೀಗೊಂದು ಸುದ್ದಿ ಕೇಳಿನೇ ಥ್ರಿಲ್ ಆಗಿರುವ ತಾರಕ್ ಫ್ಯಾನ್ಸ್, ರಶ್ಮಿಕಾ.. ನೀನಾಗು ನಮ್ಮಕ್ಕ ಅನ್ನಲು ಶುರುವಿಟ್ಟುಕೊಂಡಿದ್ದಾರೆ. ತಾರಕ್ ಜೊತೆ ರಶ್ಮಿಕಾ ಕಾಣಿಸಿಕೊಳ್ಳಬೇಕೆಂದು ಪಟ್ಟು ಹಿಡಿದು ಕುಂತಿದ್ದಾರೆ. ಅಲ್ಲಿಗೆ ನೀವೆ ಲೆಕ್ಕ ಹಾಕಿ.. ರಶ್ಮಿಕಾ ಮಾಡಿರುವ ಮೋಡಿ ಎಂಥಹದ್ದು ಅನ್ನೋದು..

ಬರೀ, ಜ್ಯೂ ಎನ್ ಟಿ ಆರ್ ಸಿನಿಮಾಗಳಷ್ಟೇ ಅಲ್ಲ, ಟಿಟೌನ್ ಪ್ರಿನ್ಸ್ ಮಹೇಶ್ ಬಾಬು & ಅಲ್ಲು ಅರ್ಜುನ್ ಸಿನಿಮಾಗಳಿಗೂ ರಶ್ಮಿಕಾ ನಾಯಕಿಯಾಗುವ ಸಾಧ್ಯತೆಗಳಿವೆ. ಇನ್ನು ಇದೆಲ್ಲದ್ರ ನಡುವೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಮತ್ತೊಮ್ಮೆ ಒಂದಾಗಲಿದೆ. ಗೀತಾ ಗೋವಿಂದ ಚಿತ್ರದಲ್ಲಿ ರೋಮ್ಯಾಂಟಿಕ್ ಸಾಂಗ್ ಮೂಲಕ ಎಲ್ಲರನ್ನು ಕ್ಲೀನ್ ಬೋಲ್ಡ್ ಮಾಡಿದ್ರು. ಇದೀಗ ಮತ್ತೆ ಈ ಸೂಪರ್ ಹಿಟ್ ಜೋಡಿ ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಒಂದಾಗ್ತಿದ್ದಾರೆ.

ಈ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ಭರಪೂರ ಮನೋರಂಜನೆ ನೀಡುವ ತಯಾರಿಯಲ್ಲಿದ್ದಾರೆ.ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದು, ಶೂಟಿಂಗ್ ಕಂಪ್ಲೀಟ್ ಆಗಿದೆ. ವಿಭಿನ್ನ ಪಾತ್ರದಲ್ಲಿ ಮಿಂಚಿರುವ ರಶ್ಮಿಕಾ ಚಿತ್ರ ಬಿಡುಗಡೆಯನ್ನು ಎದುರು ನೋಡ್ತಿದ್ದಾರೆ.

‘ಕನ್ನಡ ದ್ರೋಹಿ’ ಅಂದವ್ರಿಗೆ ‘ರಶ್ಮಿಕಾ’ ಕೊಟ್ಟರು ಮಾತಲ್ಲೇ ಏಟು..!:ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸದ್ದು ಮಾಡದ ರಶ್ಮಿಕಾ. ಇತ್ತೀಚೆಗೆ ಟಾಲಿವುಡ್ ಶೋ ಒಂದರಲ್ಲಿ ಕರ್ನಾಟಕದ ಪರ ಬ್ಯಾಂಟಿಂಗ್ ಮಾಡಿದ್ದಾರೆ. ಕರ್ನಾಟಕ ನಮ್ದು, ಕೊಡಗು ನಮ್ಮೂರು ಅಂತ ಹೆಮ್ಮೆ ಹಿಂದ ಹೇಳಿಕೊಳ್ಳುವುದರ ಮೂಲಕ, ಕೊಡಕ ಎಂದವರಿಗೆ ಮಾತಲ್ಲೇ ಏಟು ಕೊಟ್ಟಿದ್ದಾರೆ.ಇತ್ತೀಚೆಗೆ ರಶ್ಮಿಕಾ ತೆಲುಗಿನ ಡಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಪಾಲ್ಗೊಂಡಿದ್ರು.

ಆಟ ಜ್ಯೂನಿಯರ್ಸ್ ಸೆಲೆಬ್ರಿಟಿ ಅತಿಥಿಯಾಗಿ ಭಾಗವಹಿಸಿದ್ರು. ಆ ಒಂದು ಶೋನಲ್ಲಿ ಮಹಾಲಕ್ಷ್ಮಿ ಎಂಬ ಪುಟಾಣಿ ಸ್ಪರ್ಧಿಯಾಗಿ ಡ್ಯಾನ್ಸ್ ಮಾಡಿದ್ಲು. ಈಕೆ ಕೂಡ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುಟಾಣಿ. ಉತ್ತಮ ಫರ್ಪಾಮೆನ್ಸ್ ಮೂಲಕ ತೀರ್ಪುಗಾರರ ಮೆಚ್ಚುಗೆಯನ್ನು ಮಹಾಲಕ್ಷ್ಮೀ ಪಡೆದುಕೊಂಡ್ರು.

ಮಹಾಲಕ್ಷ್ಮೀ ಕೂಡ ಕರ್ನಾಟಕದ ಹುಡುಗಿ ಅಂಥ ಗೊತ್ತಾದ ಕೂಡ ರಶ್ಮಿಕಾ ಮೊಗದಲ್ಲಿ ಮಂದಹಾಸ ಮೂಡಿದೆ. ಕರ್ನಾಟಕ ಅಂತ ಕೇಳಿದ ಕೂಡ್ಲೇ.. ಓ. ಸೂಪರ್, ಐ ಲವ್ ಯೂ ಎಂದು ಮಹಾಲಕ್ಷ್ಮೀಗೆ ಕುಂತಲ್ಲೇ ಅಗ್ ಕೂಡ ಮಾಡಿದ್ದಾರೆ ರಶ್ಮಿಕಾ. ಇಷ್ಟು ದಿನಗಳಾದ ಮೇಲೆ ಕೊನೆಗೂ ನಾನು ಕನ್ನಡದವಳು, ಕೊಡಗಿನ ಕುವರಿ ಅನ್ನೋದನ್ನು ರಶ್ಮಿಕಾ ಒತ್ತಿ ಹೇಳಿರೋದು ಕರ್ನಾಟಕದ ಕ್ರಷ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ..

ಅದೇನೇ ಇದ್ರು ಸದ್ಯ ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಲ್ಲಿ ಬಿಝೀಯಾಗಿರುವ ರ ಶ್ಮಿಕಾ ಕೇವಲ ತೆಲುಗುಗೆ ಸೀಮಿತವಾಗಿ ಬಿಟ್ರಾ ಎನ್ನುವ ಸಮಯದಲ್ಲಿ ಕೊಡು ನಮ್ಮೂರು ಕರ್ನಾಟಕ ನಮ್ದು ಎನ್ನುವ ಮೂಲಕ ಕನ್ನಡತಿ ಅನ್ನುವುದನ್ನು ನೆನಪಿಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here