Home District ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ತಾಯಿಗೆ ಕುಬ್ಜೆಯಿಂದ ಪವಿತ್ರ ತೀರ್ಥ ಸ್ನಾನ!

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ತಾಯಿಗೆ ಕುಬ್ಜೆಯಿಂದ ಪವಿತ್ರ ತೀರ್ಥ ಸ್ನಾನ!

510
0
SHARE

ಕುಂದಾಪುರ: ಕಳೆದ ಎರಡು ದಿನದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಆ.4 ಮಂಗಳವಾರ ಕುಬ್ಜಾ ನದಿ ಕಮಲಶಿಲೆಯ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನಕ್ಕೆ ಬಂದ ಕುಬ್ಜಾ ನದಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ ತೀರ್ಥ ಸ್ನಾನ ಮಾಡಿಸಿದೆ. ಕುಬ್ಜಾ ನದಿ ದೇವಿ ಪಾದ ತೊಳೆದಿದ್ದರಿಂದ ದೇವಸ್ಥಾನದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತೀ ವರ್ಷ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದೇವಿ ಪಾದ ತೊಳೆಯುತ್ತಾಳೆ ಎನ್ನೋದು ಭಕ್ತರ ನಂಬಿಕೆ ಜೊತೆ ವಾಡಿಕೆಯೂ ಇದೆ.

ಈ ಬಾರಿ ಭಕ್ತರು ಕಮ್ಮಿ..ಇಷ್ಟು ಬಾರಿ ಕಮಲಶಿಲೆಗೆ ಕುಬ್ಜಾ ನದಿ ನೀರು ನುಗ್ಗಿ ದೇವಿಗೆ ಸ್ನಾನ ಮಾಡಿಸುವುದು ಭಕ್ತರ ಪಾಲಿನ ಸುದಿನವಾಗಿತ್ತು. ಊರ-ಪರವೂರ ಭಕ್ತಾಧಿಗಳು ಈ ದಿನಕ್ಕಾಗಿ ಕಾದು ಆ ಸಮಯಕ್ಕೆ ಸ್ಥಳಕ್ಕೆ ಬಂದು ತಾವು ಕೂಡ ಪವಿತ್ರ ಸ್ನಾನ ಮಾಡಿ ಸಂತ್ರಪ್ತರಾಗುತ್ತಿದ್ದರು. ಆದರೆ ಈ ಬಾರಿ ಕೊರೋನಾ ಭಯದ ನಡುವೆ ಭಕ್ತಾದಿಗಳ ಆಗಮನ ಇರಲಿಲ್ಲ. ಇಂದು ಮಂಗಳವಾರ ಸಂಜೆ ದೇವಸ್ಥಾನ ಪ್ರವೇಶಿಸಿದ ಕುಬ್ಜೆಯ ಪವಿತ್ರ ಸ್ನಾನಕ್ಕೆ ಈ ಬಾರಿ ಬೆರಳೆಣಿಕೆ ಸ್ಥಳೀಯ ಭಕ್ತರು ಮಾತ್ರ ಆಗಮಿಸಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವರ ದರ್ಶನ ಭಕ್ತರು ಪಡೆದರು. ದೇವಳದ ಮೊಕ್ತೇಸರರು, ಅರ್ಚಕ ವರ್ಗದವರು ಮತ್ತು ಸಿಬ್ಬಂದಿಗಳು ಮಾತ್ರ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here