Home Latest ಕರುಣಾಕರರೆಡ್ಡಿ-ಶ್ರೀರಾಮುಲು ನಡುವೆ ಬಿಗ್ ಫೈಟ್..!? ಪರಮಾಪ್ತನಿಗೆ ಟಿಕೆಟ್ ಕೊಡಿಸಲು ಶ್ರೀರಾಮುಲು ಲಾಬಿ..

ಕರುಣಾಕರರೆಡ್ಡಿ-ಶ್ರೀರಾಮುಲು ನಡುವೆ ಬಿಗ್ ಫೈಟ್..!? ಪರಮಾಪ್ತನಿಗೆ ಟಿಕೆಟ್ ಕೊಡಿಸಲು ಶ್ರೀರಾಮುಲು ಲಾಬಿ..

1466
0
SHARE

ಈ ಬಾರಿ ದಾವಣಗೆರೆಯ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗಿಂತ ಮಾಜಿ ಸಚಿವರಿಬ್ಬರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಒಂದು ಕಾಲದಲ್ಲಿ ಎರಡು ದೇಹ, ಒಂದೇ ಆತ್ಮದಂತಿದ್ದ ಮಾಜಿ ಸಚಿವ ಕರುಣಾಕರ್ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು, ಇದೀಗ ಪ್ರತಿಷ್ಠೆಯನ್ನ ಪಣಕ್ಕಿಟ್ಟಿದ್ದಾರೆ.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಕರುಣಾಕರ ರೆಡ್ಡಿ ಹಾಗೂ ಎನ್. ಕೊಟ್ರೇಶ್ ಈ ಪ್ರತಿಷ್ಠೆಗೆ ಕಾರಣ. ವಿಷಯ ಏನು ಅಂದ್ರೆ, ಇಲ್ಲಿ ಎನ್.ಕೊಟ್ರೇಶ್ ಶ್ರೀರಾಮುಲು ಪರಮಾಪ್ತ, ಕರುಣಾಕರರೆಡ್ಡಿ ವಿರೋಧಿ. ಹೀಗಾಗಿ, ಶ್ರೀರಾಮಲು ಕೊಟ್ರೇಶ್ ಪರ ಟಿಕೆಟ್ ಗಿಟ್ಟಿಸಲು ಲಾಬಿ ನಡೆಸುತ್ತಿದ್ದು, ಕರುಣಾಕರ ರೆಡ್ಡಿಗೆ ಟಿಕೆಟ್ ನೀಡದಂತೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ಹರಪನಹಳ್ಳಿ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಗಾಗಿ ಕರುಣಾಕರ ರೆಡ್ಡಿ ಹಾಗೂ ಎನ್ ಕೊಟ್ರೇಶ್ ತೀವ್ರ ಪೈಪೋಟಿ ನಡೆಸಿದ್ದು, ಇಬ್ಬರಿಗೂ ಇನ್ನು ಟಿಕೆಟ್ ಖಚಿತವಾಗಿಲ್ಲ. ಹೀಗಾಗಿ, ಕೊಟ್ರೇಶ್ ಗೆ ಟಿಕೆಟ್ ನೀಡಬೇಕು ಎಂದು ಶ್ರೀರಾಮುಲು ಯಡಿಯೂರಪ್ಪ ಸೇರಿದಂತೆ ಹೈಕಮಾಂಡ್ ಮನವೊಲಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿಯೇ ಶ್ರೀರಾಮುಲು ಕರುಣಾಕರರೆಡ್ಡಿಯನ್ನು ಸೋಲಿಸುವುದಾಗಿ ಪಣ ತೊಟ್ಟಿದ್ದರು. ಅದು ಈಗಲೂ ಮುಂದುವರಿದಿದ್ದು, ಹರಪನಹಳ್ಳಿಯಲ್ಲಿ ನಡೆದಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲೂ ಇದು ಜಗಜ್ಜಾಹಿರಾಗಿದೆ. ಅಕ್ಕಪಕ್ಕ ನಿಂತಿದ್ದರೂ ಇಬ್ಬರೂ ತುಟಿಪಿಟಿಕ್ಕನ್ನಲ್ಲಿಲ್ಲ. ಕಾರ್ಯಕ್ರಮ ಉದ್ಘಾಟನೆ ವೇಳೆ ಕರುಣಾಕರ ರೆಡ್ಡಿ ಮುಂದೆ ಬಂದು ನಿಂತರೆ, ಹಿಂದೆ ನಿಂತಿದ್ದ ಕೊಟ್ರೇಶ್ ನನ್ನ ಸ್ವತಃ ಶ್ರೀರಾಮುಲು ಹಾಗೂ ಯಡಿಯೂರಪ್ಪ ಕೈ ಹಿಡಿದು ದೀಪ ಬೆಳಗಲು ಅನುವು ಮಾಡಿಕೊಟ್ಟರು.

ಈ ಮೂಲಕ ಶ್ರೀರಾಮುಲು ತನ್ನ ಆಪ್ತನಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರಬೇಕೆನ್ನುವ ತವಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್. ಕೊಟ್ರೇಶ್ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದು, ಅದಕ್ಕಾಗಿ ಪ್ರತ್ಯೇಕ ಜನಸಂಪರ್ಕ ಕಚೇರಿ ಹಾಗೂ ಮನೆಯನ್ನು ಕೂಡ ಮಾಡಿಕೊಂಡಿದ್ದಾರೆ. ಅಲ್ಲದೇ, ಈಗಾಗಲೇ ಮುಖಂಡರನ್ನು ಭೇಟಿ ಮಾಡುತ್ತಿದ್ದು, ಪ್ರಚಾರವನ್ನು ಶುರು ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ, ಪರಮಾಪ್ತನಿಗೆ ಟಿಕೆಟ್ ಕೊಡಿಸಲು ಶ್ರೀರಾಮುಲು ಬಾರೀ ಕಸರತ್ತು ನಡೆಸಿದ್ದು, ಇತ್ತ ಕರುಣಾಕರ ರೆಡ್ಡಿ ಕೂಡ ಟಿಕೆಟ್ ಗಾಗಿ ಸರ್ಕಸ್ ಮಾಡುತ್ತಿದ್ದಾರೆ. ಆದರೆ, ಕೊನೆಗೆ ಹೈಕಮಾಂಡ್ ಯಾರಿಗೆ ಅಸ್ತು ಎನ್ನುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.
ಬಸಲಿಂಗಪ್ಪ ನವಣಿ, ಪ್ರಜಾ ಟಿವಿ, ದಾವಣಗೆರೆ.

LEAVE A REPLY

Please enter your comment!
Please enter your name here