Home Crime ಕರುಣಾನಿಧಿ ಅಗಲಿಕೆ ಬೆನ್ನಲ್ಲೇ ತಮಿಳುನಾಡಲ್ಲಿ ಹಿಂಸಾಚಾರ ತಾಂಡವ..!! 80ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ದಾಖಲು..!?

ಕರುಣಾನಿಧಿ ಅಗಲಿಕೆ ಬೆನ್ನಲ್ಲೇ ತಮಿಳುನಾಡಲ್ಲಿ ಹಿಂಸಾಚಾರ ತಾಂಡವ..!! 80ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ದಾಖಲು..!?

648
0
SHARE

ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ವಿಧಿವಶ ಬೆನ್ನಲ್ಲೇ 80ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ.ಕಲ್ಲು ತೂರಾಟ ಸೇರಿದಂತೆ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತಮಿಳನಾಡಿನಾದ್ಯಂತ ನಡೆದ ಹಿಂಸಾಚಾರ ಪ್ರಕರಣಗಳು 80ಕ್ಕೂ ಹೆಚ್ಚು ದಾಖಲಾಗಿವೆ. ಇನ್ನು ಚೆನ್ನೈನ ಪೆರಿಯಾರ್ ಪುತ್ಥಳಿ ಬಳಿ ಕಾಲ್ತುಳಿತ ಉಂಟಾಗಿದ್ದು, ಐವರಿಗೆ ಗಾಯಗಳಾಗಿದ್ದು, ಇದರಲ್ಲಿ ಇಬ್ಬರ ಸ್ಥತಿ ಗಂಭೀರವಾಗಿದೆ.

ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನರಾದ ಸುದ್ದಿ ಮಂಗಳವಾರ ಬಹಿರಂಗವಾದ ಬಳಿಕ ರಾಜ್ಯದಲ್ಲಿ ಕಲ್ಲು ತೂರಾಟ, ರಾಜ್ಯ ಸರಕಾರಿ ಬಸ್‌ಗಳ ಕಿಟಕಿ ಗಾಜು ಪುಡಿ ಪುಡಿ ಮಾಡಿರುವುದು ಹಾಗೂ ವಾಹನ ಮೇಲೆ ದಾಳಿ ಸಹಿತ ಸುಮಾರು 80 ಹಿಂಸಾ ಘಟನೆಗಳು ನಡೆದ ಬಗ್ಗೆ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ.

ಮರಿನಾ ಬೀಚ್ ಬಳಿಯಲ್ಲಿರುವ ಪೆರಿಯಾರ್ ಪ್ರತಿಮೆ ಸಮೀಪ ನಡೆದ ಕಾಲ್ತುಳಿತ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಇನ್ನು, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ತಂಡೋಪಾದಿಯಲ್ಲಿ ಬರ್ತಿದ್ದಾರೆ.

ಚೆನ್ನೈ ರಾಜಾಜಿ ಹಾಲ್‌ ಬಳಿ ಅಭಿಮಾನಿಗಳು ಸಾಗರೋಪಾದಿಯಲ್ಲಿ ಸೇರಿದ್ದು, ಅಂತಿಮ ದರ್ಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸಾವಿರಾರು ಪೊಲೀಸರನ್ನ ನಿಯೋಜಿಸಲಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ನಿಧನದಿಂದ ಕರ್ನಾಟಕ ತಮಿಳುನಾಡು ಗಡಿ ಭಾಗದ ತಾಳವಾಡಿಯಲ್ಲಿ ಸಾರ್ವಜನಿಕರು ಸ್ವಯಂ ಘೋಷಿತ ಬಂದ್ ಆಚರಿಸಿದರು.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿರವರ ನಿಧನದಿಂದಾಗಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿದ್ದು, ಸ್ವಯಂಘೋಷಿತ ಬಂದ್ ವಾತಾವರಣ ಕಂಡುಬಂದಿದೆ. ತಾಳವಾಡಿ ಬಸ್ ನಿಲ್ದಾಣದಲ್ಲಿ ಬಸ್‍ಗಳಿಲ್ಲದೆ ಬಿಕೋ ಎನ್ನುತ್ತಿತ್ತು,

ಬಸ್ ನಿಲ್ದಾಣದ ಬಳಿ ಎಂ.ಕರುಣಾನಿಧಿಯವರ ಭಾವಚಿತ್ರ ಇಟ್ಟು ಮೌನಾಚರಣೆ ನಡೆಸಿದ ಸಾರ್ವಜನಿಕರು,ಅಗಲಿದ ನಾಯಕನನ್ನ ನೆನೆದು ದುಃಖತಪ್ತರಾದರು. ತಾಳವಾಡಿ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಕರ್ನಾಟಕ ತಮಿಳುನಾಡು ನಡುವೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಗಡಿ ತನಕ ಮಾತ್ರ ಬಸ್ ಸಂಚಾರ ಇತ್ತು.

LEAVE A REPLY

Please enter your comment!
Please enter your name here