Home District ಕರ್ನಾಟಕದಲ್ಲಿ ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ! ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ದೋಸ್ತಿ ಸರ್ಕಾರ ಮುಳುಗಿದೆ!...

ಕರ್ನಾಟಕದಲ್ಲಿ ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ! ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ದೋಸ್ತಿ ಸರ್ಕಾರ ಮುಳುಗಿದೆ! ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದ PM ನಮೋ!

2615
0
SHARE

ಕಾಂಗ್ರೆಸ್ ಭದ್ರಕೋಟೆಯಲ್ಲಿ ಪ್ರಧಾನಿ ನರೇಂದ್ರ‌ ಮೋದಿ ನೇತೃತ್ವದಲ್ಲಿ ಬಿಜೆಪಿ‌ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆರನ್ನು‌ ಹೇಗಾದರೂ‌ ಮಾಡಿ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್‌ರನ್ನು ಪಕ್ಷಕ್ಕೆ ಕರೆ ತಂದಿತ್ತು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಮಹಾಮೈತ್ರಿಕೂಟದ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಪ್ರಧಾನಿ ಭಾಷಣ ಆಲಿಸಿದ ಡಾ.ಜಾಧವ್ ಬೆಂಬಲಿಗರು ಉಮೇಶ್ ಜಾಧವ್ ಹೆಸರನ್ನು ಭಾಷಣದಲ್ಲಿ ಪ್ರಸ್ತಾಪಿಸದಕ್ಕೆ ಕೊಂಚ ಅಸಮಾಧಾನಗೊಂಡರು.ಕಾಶ್ಮೀರ ಗಡಿಯಲ್ಲಿನ ಗುಂಡಿನ ಕದನದ ಬಳಿಕ ರಾಜಕಾರಣ ಮತ್ತೆ ಲೋಕಸಭೆ ಚುನಾವಣೆಯತ್ತ ಹೊರಳಿದೆ. ಸರ್ಜಿಕಲ್ ದಾಳಿ ಬಳಿಕ ಮತ್ತಷ್ಟು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ನ ಭದ್ರಕೋಟೆ ಕಲಬುರಗಿಯಲ್ಲಿ ರಣಕಹಳೆ ಮೊಳಗಿಸಿದ್ದಾರೆ…

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಡ್ಡಾದಲ್ಲಿ ಮೋದಿ ತೊಡೆ ತಟ್ಟಿದ್ದಾರೆ… ಖರ್ಗೆ ವಿರುದ್ಧದ ಅಲೆಯ ಲಾಭ ಪಡೆಯಲು ಇಂದು ಕಲಬುರಗಿಗೆ ಮೋದಿ ಪ್ರವೇಶವಾಗಿದೆ. ಕಲಬುರಗಿಯ ಎನ್‌.ವಿ.ಮೈದಾನದಲ್ಲಿ ಕರ್ನಾಟಕ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೋಸ್ತಿ ಸರ್ಕಾರ ರೈತರ ವಿರೋಧಿ ಎಂದು ಟೀಕಿಸಿದರು. ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಬೇಕಿತ್ತು.

ಆದರೆ ಕೇಂದ್ರಕ್ಕೆ ಕರ್ನಾಟಕದ ರೈತರ ಪಟ್ಟಿ ಇನ್ನೂ ಸಿಕ್ಕಿಲ್ಲ. ಇದಕ್ಕೆಲ್ಲಾ ಕಾರಣ ರಾಜ್ಯದಲ್ಲಿರುವ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂದು ಮೋದಿ ವಾಗ್ದಾಳಿ ನಡೆಸಿದ್ರು.ಸಾಲ ಮನ್ನ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ದೋಸ್ತಿ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕಿದೆ. ಜನತೆ ಕಣ್ಣಿಗೆ ಮಣ್ಣೆರಚಿದೆ ಎಂದು ಮೋದಿ ಟೀಕಿಸಿದ್ರು.. ಕರ್ನಾಟಕ ಸರ್ಕಾರ ಸುಳ್ಳು ಹೇಳಿದೆಯೋ ಇಲ್ಲವೋ? ನೆರದ ಜನರನ್ನೇ ಕೇಳಿದ ಪ್ರಧಾನಿ ಮೋದಿ, ಕೊಟ್ಟ ಮಾತನ್ನೇ ಈಡೇರಿಸದ ಸರ್ಕಾರ ಇನ್ನೇನು ಅಭಿವೃದ್ಧಿ ಮಾಡುತ್ತದೆ ಎಂದು ವ್ಯಂಗ್ಯವಾಡಿದ್ರು…

ದೋಸ್ತಿ ಸರ್ಕಾರ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ರು.ನಮ್ಮ ಸರ್ಕಾರದ ಪಾರದರ್ಶಕತೆಯಿಂದ ಭ್ರಷ್ಟಾಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದೇ ವಿಪಕ್ಷಗಳ ಆಕ್ರೋಶಕ್ಕೆ ಕಾರಣ. ಕಳ್ಳರ ಅಂಗಡಿ ಬಂದ್ ಆಗಿದೆ. ಅವರು ನನ್ನನ್ನು ವಿರೋಧಿಸಲು ಇರುವುದೂ ಇದೇ ಕಾರಣಕ್ಕೆ, ನನಗೆ ದೇಶದ ಜನತೆಯ ಬೆಂಬಲವಿದೆ. ನಾನು ಯಾರಿಗೂ ಹೆದರಬೇಕಿಲ್ಲ ಎಂದು ಮೋದಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭದ್ರಕೋಟೆಯಲ್ಲಿ ಮೋದಿ ಮಾಡಿದ ಭಾಷಣ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.. ಕಲಬುರಗಿಯಲ್ಲಿ ನಿಂತು ಖರ್ಗೆ ವಿರುದ್ಧ ಮಾತಿನ ಅಸ್ತ್ರ ಪ್ರಯೋಗ ಮಾಡ್ತಾರೆ ಅಂದುಕೊಂಡಿದ್ದವರಿಗೆ ಮೋದಿ ನಿರಾಸೆ ಮೂಡಿಸಿದ್ದಾರೆ… ಸುಮಾರು 40 ನಿಮಿಷಗಳ ಭಾಷಣದಲ್ಲಿ ಎಲ್ಲೂ ಖರ್ಗೆ ವಿರುದ್ಧ ಟೀಕೆ ಮಾಡದೆ ಅಚ್ಚರಿ ಮೂಡಿಸಿದ್ದಾರೆ.. ಪರೋಕ್ಷವಾಗಿಯೂ ಖರ್ಗೆ ವಿರುದ್ಧ ವಾಗ್ದಾಳಿ ಮಾಡದ ಮೋದಿ, ಕೇವಲ ದೋಸ್ತಿ ಸರ್ಕಾರ ಮತ್ತು ಹಿಂದಿನ ಯುಪಿಎ ಸರ್ಕಾರವನ್ನ ಮಾತ್ರ ಕಟುವಾಗಿ ಟೀಕಿಸಿದ್ರು…

LEAVE A REPLY

Please enter your comment!
Please enter your name here