Home District ‘ಕರ್ನಾಟಕದಲ್ಲಿ ಹೆಮ್ಮೆ… ಕಾಂಗ್ರೆಸ್ ಮತ್ತೊಮ್ಮೆ’ ಹೆಸರಿನ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ..ವಿಷನ್ 2025 ಶೀರ್ಷಿಕೆಯಡಿ ಪ್ರಣಾಳಿಕೆಯಲ್ಲಿ...

‘ಕರ್ನಾಟಕದಲ್ಲಿ ಹೆಮ್ಮೆ… ಕಾಂಗ್ರೆಸ್ ಮತ್ತೊಮ್ಮೆ’ ಹೆಸರಿನ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ..ವಿಷನ್ 2025 ಶೀರ್ಷಿಕೆಯಡಿ ಪ್ರಣಾಳಿಕೆಯಲ್ಲಿ ಹಲವು ಹೊಸ ಭರವಸೆಗಳು, ಕಲ್ಪನೆಗಳು…

119
0
SHARE

ಮೇ.12ರ ವಿಧಾನಸಭೆ ಚುನಾವಣೆ ಹಿನ್ನೆಲೆ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ‘ಕರ್ನಾಟಕದಲ್ಲಿ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ’ ಹೆಸರಿನ ಪ್ರಣಾಳಿಕೆಯನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ರು. ಮೊದಲ ಬಾರಿಗೆ ಬೆಂಗಳೂರು ಬದಲು ಮಂಗಳೂರಿನ ಟಿಎಂಎಂಪೈ ಕನ್ವೆನ್ಶನ್ ಸೆಂಟರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದಾರಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪಮೊಯ್ಲಿ, ಹಿರಿಯ ಮುಖಂಡ ಜನಾರ್ದನ ಪೂಜಾರಿ, ಸೇರಿದಂತೆ ಹಲವರು ಭಾಗಿಯಾಗಿದ್ರು…

ವಿಷನ್ 2025 ಶೀರ್ಷಿಕೆಯಡಿ ಪ್ರಣಾಳಿಕೆ ಸಿದ್ದವಾಗಿದೆ. ಇನ್ನು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು ಏನೆಂದ್ರೆ, ರೈತರ ಆದಾಯವನ್ನು ದ್ವಿಗುಣಗೊಳಿಸಲು ಒತ್ತು. ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ. ಸಮಗ್ರ ಕರ್ನಾಟಕ ಅಭ್ಯುದಯ, ಹಾಗೂ ರಾಜ್ಯದ ಉದ್ದಗಲಲ್ಲೂ ರಸ್ತೆ ಅಭಿವೃದ್ಧಿ ಮಾಡಲು ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ…

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಲವು ಹೊಸ ಭರವಸೆಗಳು, ಕಲ್ಪನೆಗಳು – ಕೃಷಿ ಕಾರಿಡಾರ್ ಸ್ಥಾಪನೆ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ – ಪ್ಯಾಕೇಂಜಿಗ್ ಘಟಕಗಳು, ಸಂಸ್ಕರಣಾ ಘಟಕಗಳು, ಶೈತ್ಯಾಗಾರ ವ್ಯವಸ್ಥೆ – ತೋಟಗಾರಿಕೆ,ಪಶುಸಂಗೋಪನೆಗೆ 24 ಗಂಟೆ ವಿದ್ಯುತ್ ಪೂರೈಕೆ – ರಾಯಚೂರಿನಲ್ಲಿ ಸೋನಾ ಮಸೂರಿ ಸಂಶೋಧನಾ ಕೇಂದ್ರ – ಹೂವು-ಹಣ್ಣು ರಫ್ತಿಗೆ ಬೆಂಗಳೂರು-ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಗೊ ಟರ್ಮಿನಲ್ – ಶೇ.100ರಷ್ಟು ಕೀಟನಾಶಕ ರಹಿತ ಕರ್ನಾಟಕದ ಭರವಸೆ…

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಲವು ಹೊಸ ಭರವಸೆಗಳು, ಕಲ್ಪನೆಗಳು – ಕೃಷಿ ಕಾರಿಡಾರ್ ಸ್ಥಾಪನೆ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ – ಪ್ಯಾಕೇಂಜಿಗ್ ಘಟಕಗಳು, ಸಂಸ್ಕರಣಾ ಘಟಕಗಳು, ಶೈತ್ಯಾಗಾರ ವ್ಯವಸ್ಥೆ – ತೋಟಗಾರಿಕೆ,ಪಶುಸಂಗೋಪನೆಗೆ 24 ಗಂಟೆ ವಿದ್ಯುತ್ ಪೂರೈಕೆ – ರಾಯಚೂರಿನಲ್ಲಿ ಸೋನಾ ಮಸೂರಿ ಸಂಶೋಧನಾ ಕೇಂದ್ರ – ಹೂವು-ಹಣ್ಣು ರಫ್ತಿಗೆ ಬೆಂಗಳೂರು-ಮಂಗಳೂರು
ವಿಮಾನ ನಿಲ್ದಾಣದಲ್ಲಿ ಕಾರ್ಗೊ ಟರ್ಮಿನಲ್ – ಶೇ.100ರಷ್ಟು ಕೀಟನಾಶಕ ರಹಿತ ಕರ್ನಾಟಕದ
ಭರವಸೆ…

ವಿಶ್ವ ದರ್ಜೆಯ ವಿವಿ ಮಟ್ಟಕ್ಕೆ ಕರ್ನಾಟಕದ 5 ವಿವಿಗಳನ್ನು ಕೊಂಡೊಯ್ಯುವುದು – ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ ಭರವಸೆ – ಬೆಂಗಳೂರಿನಲ್ಲಿ ಪೇಟೆಂಟ್ ಕಚೇರಿಯನ್ನು ಸ್ಥಾಪಿಸುವುದು – ಶಿಡ್ಲಘಟ್ಟ-ಚಿಕ್ಕಬಳ್ಳಾಪುರದಲ್ಲಿ ಹಾರ್ಡ್‌ವೇರ್ ಪಾರ್ಕ್ ನಿರ್ಮಾಣದ ಭರವಸೆ – ದೇವನಹಳ್ಳಿ ಬಳಿ ಮತ್ತೊಂದು ಐಟಿ ಪಾರ್ಕ್ ಸ್ಥಾಪನೆ ಭರವಸೆ…

LEAVE A REPLY

Please enter your comment!
Please enter your name here