Home District ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು- ಶಿವಸೇನೆ ಸಂಸದ ಸಂಜಯ್ ರಾವತ್

ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು- ಶಿವಸೇನೆ ಸಂಸದ ಸಂಜಯ್ ರಾವತ್

81
0
SHARE

ಬೆಳಗಾವಿಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಶಿವಸೇನಾ ರಾಜ್ಯ ಸದಸ್ಯ ಸಂಜಯ್ ರಾವತ್ ಭಾಷಾ ವಿಷಬೀಜ ಬಿತ್ತಿ ಮರಾಠಿಗರನ್ನು ಪ್ರಚೋದಿಸಿದ್ದಾರೆ.ಮರಾಠಿಗರಿಗಾಗಿ ಶಿವಸೇನೆ ಜನ್ಮತಾಳಿದೆ. ಗಡಿ ವಿಚಾರಕ್ಕಾಗಿ ಶಿವಸೇನೆ ಮುಂಬೈ ರಸ್ತೆ ಮೇಲೆ ರಕ್ತ ಹರಿಸಿದೆ. ಯಾಕೆಂದ್ರೆ ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಹೋರಾಟ ಜೀವಂತವಿದೆ. ಬೆಳಗಾವಿ ಮರಾಠಿಗರ ಮೇಲೆ ದೌರ್ಜನ್ಯವಾದ್ರೆ, ಬೆಳಗಾವಿಯಲ್ಲಿ ಒಂದೇ ಒಂದು ಮರಾಠಿಗರ ವಾಹನ ಪುಡಿಪುಯಾದ್ರೆ. ನಾವು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿಯಲ್ಲಿ 100 ಬಸಗಳನ್ನ ಪುಡಿಪುಡಿ ಮಾಡ್ತಿವಿ. ಇವಾಗ ನೀತಿಸಂಹಿತೆ ಉಲ್ಲಂಘನೆ ಯಾದ್ರೂ ಅದರ ಭಯ ನನಗಿಲ್ಲ. ಬಹಳಾದ್ರೆ ನನ್ನ ಮೇಲೆ ಒಂದು ಕೇಸ್ ಹಾಕ್ತಾರೆ ಅಷ್ಟೆ. ಬೆಳಗಾವಿ ಮರಾಠಿ ಭಾಷಿಕರಿಗಾಗಿ ಶಿವಸೇನೆ ಯಾವುದನ್ನು ಲೆಕ್ಕಿಸುವುದಿಲ್ಲ. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಬದ್ಧವಾಗಿದೆ ಎಂದಿದ್ದಾರೆ.

ಬೆಳಗಾವಿಗೆ ಶರದ್ ಪವಾರ್ ಬರ್ತಾಯಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮರಾಠಿಗರು ಒಂದಾಗಬೇಕು.ಬೆಳಗಾವಿ ಸೇರಿದಂತೆ ಗಡಿ ಪ್ರದೇಶದಲ್ಲಿ ಎಂಇಎಸ್ ಅಭ್ಯರ್ಥಿ ಕಣಕ್ಕಿಳಿಯಬೇಕಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಉಳಿದೆಡೆ ಶಿವಸೇನೆ ಸ್ಪರ್ದಿಸಲಿದೆ.ಆದ್ರೆ ಗಡಿಯಲ್ಲಿ ಶಿವಸೇನೆ ಎಂಇಎಸ್ ಅಭ್ಯರ್ಥಿಗಳಿಗೆ ಬೆಂಬಲಿಸಲಿದೆ ಎಂದು ಉದ್ದವ ಠಾಕ್ರೆ ನಿಮಗೆ ಹೇಳುವಂತೆ ನನಗೆ ಸೂಚಿಸಿದ್ದಾರೆ ಎಂದಿದ್ದಾರೆ. ಶಿವಸೇನೆ ಪಕ್ಷ ತೆಗೆದುಕೊಂಡ ನಿಲವು ಮಹಾರಾಷ್ಟ್ರದ ಎನ್.ಸಿ.ಪಿ, ಕಾಂಗ್ರೆಸ್, ಮತ್ತು ಬಿಜೆಪಿ ಪಕ್ಷ ತೆಗೆದುಕೊಳ್ಳಬೇಕು.ಮಹಾರಾಷ್ಟ್ರದ ಸಿಎಂ ಸೇರಿದಂತೆ ನಾಯಕರು ಎಂಇಎಸ್ ಅಭ್ಯರ್ಥಿಗಳು ಗೆದ್ದು ಬರುವಂತೆ ಚುನಾವಣಾ ಪ್ರಚಾರಕ್ಕೆ ಬರಬೇಕು ಎಂದು ಕರೆ ನೀಡಿದ್ದಾರೆ..

LEAVE A REPLY

Please enter your comment!
Please enter your name here