Home District ಕರ್ನಾಟಕದ ಸಿಎಂರನ್ನು ಕ್ಲರ್ಕ್​ನಂತೆ ನಡೆಸಿಕೊಳ್ತಿದ್ದಾರೆ..! ರಾಜ್ಯ ರಾಜಕಾರಣದಲ್ಲಿ ಧೂಳೆಬ್ಬಿಸಿದ ಮೋದಿ ಹೇಳಿಕೆ..! ನಮೋನಾಥನ ವಿರುದ್ಧ ತಿರುಗಿ...

ಕರ್ನಾಟಕದ ಸಿಎಂರನ್ನು ಕ್ಲರ್ಕ್​ನಂತೆ ನಡೆಸಿಕೊಳ್ತಿದ್ದಾರೆ..! ರಾಜ್ಯ ರಾಜಕಾರಣದಲ್ಲಿ ಧೂಳೆಬ್ಬಿಸಿದ ಮೋದಿ ಹೇಳಿಕೆ..! ನಮೋನಾಥನ ವಿರುದ್ಧ ತಿರುಗಿ ಬಿದ್ದ ಹೆಚ್ಡಿಕೆ, ಕೈ ನಾಯಕರು..!

519
0
SHARE

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಸೇರಿ ಮೈತ್ರಿ ಸರ್ಕಾರ ರಚಿಸಿವೆ. ಘಟಬಂಧನದ ಮೂಲಕ ಕರ್ನಾಟಕದಲ್ಲಿ ಮೊದಲ ಸರ್ಕಾರ ರಚಿತವಾಗಿದೆ. ಆದರೆ ಸಿಎಂರನ್ನು ಕ್ಲರ್ಕ್​ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ನೀಡಿದ ಕ್ಲರ್ಕ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ.. ದೆಹಲಿಯಲ್ಲಿ ಮೋದಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರು ತಿರುಗಿ ಬಿದ್ದಿದ್ದಾರೆ.. ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟರ್ ಮೂಲಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ..

ತಾವು ಎಂದೂ ಕಾಂಗ್ರೆಸ್ ನ ಕ್ಲರ್ಕ ರೀತಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೆ ನೀಡೇ ಇಲ್ಲ. ನರೇಂದ್ರ ಮೋದಿಯವರು ಸುಳ್ಳು ಮಾಹಿತಿಯನ್ನು ಆಧರಿಸಿ ಆರೋಪಿಸುತ್ತಿದ್ದಾರೆ. ಅದರಲ್ಲೂ ರೈತರ ಸಾಲ ಮನ್ನಾ ಮಾಡಿದ ಬಳಿಕ ಪ್ರಧಾನಿಯವರು ಎರಡನೆ ಬಾರಿಗೆ ಈ ರೀತಿ ಸುಳ್ಳು ಮಾಹಿತಿ ಆಧರಿಸಿದ ಆರೋಪ ಮಾಡುತ್ತಿದ್ದಾರೆ.

ಈ ರೀತಿಯ ಹೇಳಿಕೆಗಳಿಗೆಲ್ಲಾ ತಮ್ಮ ಮೈತ್ರಿ ಸರ್ಕಾರ ಹೆದರುವುದೂ ಇಲ್ಲ, ಅಭಿವೃದ್ಧಿ ಪಥದಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಹೆಚ್ಡಿಕೆ ಟ್ವಿಟ್ ಮಾಡಿದ್ದಾರೆ. ಮತ್ತೊಂದೆಡೆ ಸಚಿವ ರೇವಣ್ಣ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಕ್ಲರ್ಕ್ ವಿಚಾರ ಸಿಎಂಗೆ ಮತ್ತು ಮೋದಿಗೆ ಗೊತ್ತಿರೋ ವಿಷಯ ಎಂದಿದ್ದಾರೆ..

LEAVE A REPLY

Please enter your comment!
Please enter your name here