Home District ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಕಟ್ಟಿ ಹಾಕಲು ಪ್ಲ್ಯಾನ್, ಲೋಕಸಭೆಯಲ್ಲಿ ಖರ್ಗೆ ಸೋಲಿಸಲು ಪಣ ತೊಟ್ಟ ಕಮಲ...

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಕಟ್ಟಿ ಹಾಕಲು ಪ್ಲ್ಯಾನ್, ಲೋಕಸಭೆಯಲ್ಲಿ ಖರ್ಗೆ ಸೋಲಿಸಲು ಪಣ ತೊಟ್ಟ ಕಮಲ ಪಡೆ..

1916
0
SHARE

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ರಂಗೇರಲಿದೆ. ಅದರಲ್ಲೂ ಕಲಬುರಗಿ ಲೋಕಸಭಾ ಕ್ಷೇತ್ರ ಈ ಬಾರಿ ಭಾರಿ ಸೆನ್ಸೆಷನ್ ಕ್ರಿಯೇಟ್ ಮಾಡುತ್ತೆ ಎಂದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೀತಿದೆ.

ಅಷ್ಟಕ್ಕೂ ಕಲಬುರಗಿ ಲೋಕಸಭಾ ಕ್ಷೇತ್ರದ ಮೇಲೆ ರಾಷ್ಟ್ರಮಟ್ಟದಲ್ಲಿ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ ಈ ಬಾರಿ ಸೋಲಿಲ್ಲದ ಸರ್ದಾರ ಖರ್ಗೆ ಗೆ ಸೋಲಿನ ರುಚಿ ತೋರಿಸಲು ಅಖಾಡ ಸಜ್ಜಾಗಿದೆ.ಕಲಬುರಗಿಯಲ್ಲಿ ಹೇಗಾದರೂ ಮಾಡಿ ಮಲ್ಲಿಕಾರ್ಜುನ ಖರ್ಗೆರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಪಣ ತೊಟ್ಟಿದೆ. ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ‌ ಇರಲಿ ಇಲ್ಲಿ ಮೋದಿ ವರ್ಸಸ್ ಖರ್ಗೆ ಅಖಾಡ ಏರ್ಪಡಲಿದೆ ಅಂತಾನೇ ಹೇಳಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಮಣಿಸಲು‌ ‘ಕೈ’ಗೆ ಆಪರೇಷನ್ ಮಾಡಿರುವ ಬಿಜೆಪಿ ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ್‌ ಜಾಧವ್‌ರನ್ನು ಸೆಳೆಯುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಡಾ.ಉಮೇಶ್ ಜಾಧವ್ ಸಹ ತಮ್ಮ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿ ಈಗಾಗಲೇ ಬಿಜೆಪಿ ಪಾಳಯದಲ್ಲಿ ಒಂದು ಹೆಜ್ಜೆ ಇಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತಮ್ಮ ಸಹೋದರ ಡಾ.ಉಮೇಶ್ ಜಾಧವ್ ಸ್ಪರ್ಧಿಸಿದರೆ ಗೆಲ್ಲೋದು ಖಚಿತ ಎಂಬ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ಜನ ಕೂಡಾ ಬಿಜೆಪಿ ಸೇರುವಂತೆ ಒತ್ತಡ ಹಾಕ್ತಿದ್ದಾರೆ… ಅಲ್ಲದೆ ಇದೇ ಮಾರ್ಚ್ 6 ರಂದು ಕಲಬುರ್ಗಿಯಲ್ಲಿ ಮೋದಿ ರ್ಯಾಲಿ ಇದ್ದು ಅವತ್ತು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗೋದು ಖಚಿತವಾಗಿದೆ.

ಕಳದ ಎರಡು ತಿಂಗಳಿಂದ ಶಾಸಕ ಉಮೇಶ್ ಜಾಧವ್ ಪಕ್ಷದ ಮುಖಂಡರು ಮತ್ತು ನಾಯಕ ಮೇಲೆ ಮುನಿಸಿಕೊಂಡು ಯಾರ ಕೈಗೆ ಸಿಗದೆ ಮುಂಬೈಗೆ ಶೀಪ್ಟ್ ಗಿದ್ರು ಅಲ್ಲದೆ ನಾನು ಪಕ್ಷ ಬೀಡ್ತೆನೆ ಅಂತ ಎಲ್ಲಿಯು ಹೇಳಿರಲಿಲ್ಲ ಆದ್ರೆ ನಮ್ಮ ಪಕ್ಷದವರೆ ನನ್ಗೆ ಪಕ್ಷದಿಂದ ಹೊರ ಹಾಕಲು ಮುಂದಾಗಿದ್ದಾರೆ ಇಂಥಹ ವಾತಾವರಣದಲ್ಲಿ ಪಕ್ಷದಲ್ಲಿ ಇರಲು ಹೇಗೆ ಸಾಧ್ಯ ಅಂತ ಈ ಹಿಂದೆ ಉಮೇಶ ಜಾಧವ್ ಹೇಳಿಕೆ ನೀಡಿದ್ರು. ಆದ್ರೆ ಬಾರಿ ಲೋಕ ಸಭೆ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುತ್ತೇವೆ ಪಕ್ಷಕ್ಕೆ ಯಾರನ್ನ ಕರೆತರ ಬೇಕು ಯಾರನ್ನ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಅನ್ನೋದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ್ ಶಾ ಮತ್ತು ನರೇಂದ್ರ ಮೋದಿ ಅವರು ನಿರ್ಧಾರ ಮಾಡ್ತಾರೆ.

ಆದ್ರೆ ಒಂದು ವಾರ ಕಾಯಿರಿ ಅಂತ ಪರೋಕ್ಷವಾಗಿ ಜಾಧವ್ ಅವರ ಸೇರ್ಪಡೆ ಖಚಿತ ಅನ್ನೋದು ಗೊತ್ತಾಗುತ್ತೆ.ಇನ್ನು ಮಾರ್ಚ್ 6 ರ ರಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದು ಅಂದೇ ಡಾ.ಉಮೇಶ್ ಜಾಧವ್‌ರನ್ನು‌ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

LEAVE A REPLY

Please enter your comment!
Please enter your name here