Home Cinema ಕಲರ್ ಕಳಚಿಬಿದ್ದಾಗ ಜೈಲು ಸೇರಿದ್ಲು ಕನ್ನಡ ಸಿನಿಮಾ ನಟಿ..! ಬಾಲಿವುಡ್ ಕನಸು ಕಂಡವಳಿಗೆ ಆಶ್ರಯ...

ಕಲರ್ ಕಳಚಿಬಿದ್ದಾಗ ಜೈಲು ಸೇರಿದ್ಲು ಕನ್ನಡ ಸಿನಿಮಾ ನಟಿ..! ಬಾಲಿವುಡ್ ಕನಸು ಕಂಡವಳಿಗೆ ಆಶ್ರಯ ನೀಡಿದ್ದು ಕತ್ತಲ ಕೋಣೆ..! ಕೋಟಿ ಕೋಟಿ ಯಾಮಾರಿಸಿ “ಜೂಟ್ “ ಹೇಳಿದ್ಲು ಮಾಜಿ ನಟಿ..!

527
0
SHARE

ನೀವೆಲ್ಲಾ ಮರಿಯಾ ಸೂಸೈರಾಜ್ ಅನ್ನೋ ಹೆಸರನ್ನ ಕೇಳಿರ್ತೀರಾ ಅಲ್ವಾ. ನಿಮಗೆ ಈ ಹೆಸರು ಮರೆತು ಹೋಗಿರಬಹುದು. ಅಥವಾ ಎಲ್ಲೋ ಕೇಳಿದ ಹಾಗೆ ಇರಬಹುದು. ಒಂದು ಹತ್ತೆನ್ನರಡು ವರ್ಷದ ಹಿಂದೆ ಈ ಹೆಸರು ಕನ್ನಡ ಚಿತ್ರರಂಗದಲ್ಲಿ ಕೇಳಿ ಬರ್ತಿತ್ತು. ಜೂಟ್, ಏಕದಂತ, ಎಕ್ಸ್ ಕ್ಯೂಸ್ ಮಿ ಸಿನಿಮಾಗಳಲ್ಲಿ ಈ ನಟಿಯನ್ನ ನೀವು ನೋಡಿರ್ತೀರಾ.

ಸ್ಯಾಂಡಲ್ ವುಡ್ ನಲ್ಲಿ ದಿನಕ್ಕೆ 10 ಜನ ಹೀರೋಯಿನ್ ಗಳು ಬಂದು ಹೋಗೋದ್ರಿಂದ ಇವಳ ನೇಮ್ ಅಂಡ್ ಫೇಸ್ ಎರಡು ನಿಮಗೆ ಮರೆತು ಹೋಗಿರಬಹುದು. ಆದ್ರು ನಿಮಗೆ ಇವಳ ಪರಿಚಯ ಮತ್ತೆ ಮಾಡಿ ಕೊಡ್ತೀವಿ. ಇವಳು ನಟಿಯಾಗಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ಆಕೆ ಒಂದು ಕೊಲೆ ಮಾಡಿದ್ಲು ನೋಡಿ. ಆ ಕೊಲೆ ಇಡೀ ದೇಶವನ್ನ ಬೆಚ್ಚಿ ಬೀಳಿಸಿತ್ತು. ಅಲ್ಲದೆ ಇಡೀ ಸಿನಿಮಾರಂಗವೇ ಆ ಕೊಲೆಯನ್ನ ನೋಡಿ ಹೆದರಿತ್ತು.ಸಿನಿಮಾ ಕೈ ಕೊಟ್ರೆ ಅಡ್ಡ ದಾರಿಯನ್ನ ಹಿಡಿತಾರೆ. ಹಣ ಮತ್ತು ಶೋಕಿಗಾಗಿ ಏನು ಬೇಕಾದ್ರು ಮಾಡೋದಕ್ಕೆ ಮರ್ಯಾದೆ ಬಿಟ್ಟು ನಿಂತು ಬಿಡ್ತಾರೆ. ಈಗ ಇಲ್ಲಿ ಮರಿಯಾ ವಿಚಾರದಲ್ಲೂ ಆಗಿದ್ದು ಇದೆ.

11 ವರ್ಷಗಳ ಹಿಂದೆ ಮರಿಯಾ ಅನ್ನೋ ಅಪ್ಪಟ ಕನ್ನಡದ ಪ್ರತಿಭೆ ಕೊಲೆಯ ಪ್ರಕರಣವೊಂದರಲ್ಲಿ ಸಿಲುಕಿಕೊಂಡು ಈ ಹುಡುಗಿ ಇಂತವಳ ಅಂತ ಹುಬ್ಬೇರಿಸುವಂತೆ ಮಾಡಿತ್ತು. ಅಲ್ಲದೆ ನಟಿಮಣಿಯರ ಖಾಸಗಿ ಬದುಕು ಹೇಗಿರುತ್ತೆ ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಮರಿಯಾಳ ಮರ್ಡರ್ ಕೇಸ್ ರಾಷ್ಟ್ರವ್ಯಾಪಿ ಅಂತಹದ್ದೊಂದು ಡಿಬೇಟ್ ಅನ್ನ ಮಾಡಿಸಿತ್ತು. ಅದೆಷ್ಟು ಸುಸಂಸ್ಕೃತ ಮನೆಯ ಹೆಣ್ಣು ಮಕ್ಕಳು ಸಿನಿಮಾ ಅಂದ್ರೆ ದೂರ ಸರಿಯೋದಕ್ಕೆ ಶುರುಮಾಡಿದ್ರು. ಮರಿಯಾ 2008ರಲ್ಲಿ ನೀರಜ್ ಗ್ರೋವರ್ ಅನ್ನೋ ತನ್ನ ಗೆಳೆಯನ ಕೊಲೆಯನ್ನ ತನ್ನ ಪ್ರಿಯತಮ ಜೇರೊಮ್ ಮ್ಯಾಥ್ಯು ಜೊತೆ ಸೇರಿ ಆಕೆ ನೀರಜ್ ಗ್ರೋವರ್ ಅನ್ನ ಕೊಲೆ ಮಾಡಿದ್ಲು. ಕೊಲೆ ಮತ್ತು ಸಾಕ್ಷಿ ನಾಶದ ಆಪಾದನೆಯ ಮೇಲೆ ನಾಲ್ಕು ವರ್ಷ ತನ್ನ ಬಣ್ಣದ ಬದುಕಿನಿಂದ ಕತ್ತಲೆ ಲೋಕಕ್ಕೆ ಹೋಗಿದ್ಲು.ಶನಿ ಹೆಗಲೇರಿ ಕೂರೋದು ಅಂದ್ರೆ ಇದೇ ಇರಬೇಕು. ಮರಿಯಾಗೆ ಅದ್ಯಾಕೋ ಬೇಡ ಅಂದ್ರು ಸಮಸ್ಯೆಗಳು ಬರ್ತಾನೆ ಇದೆ.

ಅಲ್ಲದೆ ತಾನೊಬ್ಬಳು ಸ್ಟಾರ್ ಅದರ ಸ್ಟೇಟಸ್ ಗೆ ತಕ್ಕಂತೆ ಬದುಕಬೇಕು ಅಂತ ಅಂದುಕೊಂಡಿದ್ದಕ್ಕೆ ಆಕೆಗೆ ಸಮಸ್ಯೆ ಮೇಲೆ ಸಮಸ್ಯೆ ಬರೋದಕ್ಕೆ ಶುರುವಾಗಿದೆ. ಯಾಕಂದ್ರೆ ಜೈಲಿಂದ ಬಂದ ಮೇಲೆ ಆಕೆ ಒಂದು ಬ್ಯುಸಿನೆಸ್ ಅನ್ನ ಸ್ಟಾರ್ಟ್ ಮಾಡಿದ್ಲು. ಅದು ಅಹ್ಮದಬಾದ್ ನಲ್ಲಿ  ಒಂದು ಟೂರ್ಸ್ ಅಂಡ್ ಟ್ರಾವೆಲ್ಸ್ ಅನ್ನ ಓಪನ್ ಮಾಡಿದ್ಲು. ಜೈಲಿನಲ್ಲಿ ತನಗೆ ಜೊತೆಯಾದ ಪರೋಮಿತ ಚಕ್ರವರ್ತಿ ಅನ್ನೋಳ ಜೊತೆ ಸೇರಿ ಈ ಬ್ಯುಸಿನೆಸ್ ಅನ್ನ ಶುರುಮಾಡಿದ್ಲು. ಬ್ಯುಸಿನೆಸ್ ಏನೋ ಚೆನ್ನಾಗಿಯೇ ನಡಿತಾ ಇತ್ತು. ಆದ್ರೆ ಹಾಗೆ ನಿಯತ್ತಾಗಿ ಅದನ್ನ ಮುಂದುವೆರೆಸಿಕೊಂಡು ಹೋಗಿದ್ರೆ ಆಕೆ ಲೈಫ್ ಇವತ್ತಲ್ಲ ನಾಳೆ ಸರಿಯಾದ ಟ್ರ್ಯಾಕ್ ಗೆ ಬರ್ತಾ ಇತ್ತು. ಆದ್ರೆ ಆಕೆ ಹಾಗೆ ಮಾಡಲಿಲ್ಲ. ಅವಳಿಗೆ ಸ್ವಲ್ಪ ಬೇಗ ಹಣ ಮಾಡಬೇಕು ಮತ್ತೆ ತಾನು ದೊಡ್ಡದಾಗಿ ಬೆಳೆಯಬೇಕು ಅಂತ ಪ್ಲಾನ್ ಮಾಡಿದ್ಲು.

ಒಂದು ಕಾಲಕ್ಕೆ ಮರಿಯಾ ಕನ್ನಡದಲ್ಲಿ ಸಾಕಷ್ಟು ಬ್ಯುಸಿಯ ನಟಿಯಾಗಿದ್ಲು. ಮಾಡಿದ ಸಿನಿಮಾಗಳು ದೊಡ್ಡ ಸದ್ದು ಮಾಡದೇ ಇದ್ರು. ಆಕೆಗೆ ಅವಕಾಶಗಳಿಗೇನು ಕಡಿಮೆಯಿರಲಿಲ್ಲ, ನಂತ್ರ ಆಕೆಗೆ ಅದ್ಯಾಕೋ ನಾನು ಬಾಲಿವುಡ್ ಗೆ ಹೋಗಬೇಕು ಅಂತ ಅನಿಸಿತ್ತು. ಯಾಕಂದ್ರೆ ಅಲ್ಲಿ ಅವಕಾಶ ಸಿಕ್ಕಿದ್ರೆ ನನ್ನ ಬದುಕಿನ ದಿಕ್ಕು ಬದಲಾಗಿ ಹೋಗುತ್ತೆ ಅಂತ ಅಂದುಕೊಂಡಿದ್ಲು. ಹೀಗಾಗಿ ಆಕೆ ಬಾಲಿವುಡ್ ಗೆ ಹಾರಿದ್ಲು. ಅಲ್ಲಿ ಸಣ್ಣ ಪುಟ್ಟ ಮಾಡೆಲಿಂಗ್ ಮಾಡ್ಕೊಂಡಿದ್ಲು. ಆಗ ಈಕೆಗೆ ನೀರಜ್ ಗ್ರೋವರ್ ಅನ್ನೋ ಟಿವಿ ನಿರ್ಮಾಪಕನೊಬ್ಬ ಪರಿಯಚವಾಗಿತ್ತು. ಆತ ಈಕೆಯನ್ನ ಕರೆಸಿ ಎರಡು ಮೂರು ಸ್ಕ್ರೀನ್ ಟೆಸ್ಟ್ ಮಾಡಿಸಿದ್ದ. ಅಡಿಷನ್ ನಲ್ಲಿ ಆತನ ನಿರೀಕ್ಷೆಯಂತೆ ಆಕೆ ಪರ್ ಫಾರ್ಮ್ ಮಾಡಿದ್ಲು.

ಇನ್ನು ನನಗೆ ಇಲ್ಲಿ ಅವಕಾಶ ಸಿಗುತ್ತೆ ಅಂತಾನೆ ಅವಳು ಅಂದುಕೊಂಡಿದ್ಲು. ಅಲ್ಲದೆ ಅಷ್ಟು ಹೊತ್ತಿಗಾಗ್ಲೇ ಆಕೆ ಮತ್ತು ನೀರಜ್ ತುಂಬಾ ಕ್ಲೋಸ್ ಆಗಿದ್ರು. ಅದ್ಯಾವ ಮಟ್ಟಿಗೆ ಅಂದ್ರೆ ಒಂದೇ ಫ್ಲಾಟ್ ನಲ್ಲಿ ಇಬ್ಬರು ಒಟ್ಟಿಗೆ ಇರುವ ಮಟ್ಟಿಗೆ ಅವ್ರು ಕ್ಲೋಸ್ ಆಗಿದ್ರು.ಆದ್ರೆ ಆಕೆಗೆ ನೇವಿ ಆಫೀಸರ್ ಆಗಿದ್ದ ಮ್ಯಾಥ್ಯುನ ಜೊತೆ ಅಪೇರ್ ಇತ್ತು. ಇಬ್ಬರು ಮದುವೆಯಾಗಿ ಸೆಟ್ಲ್ ಆಗಬೇಕು ಅಂತ ಅಂದುಕೊಂಡಿದ್ರು. ಆದ್ರೆ ಇತ್ತ ಅವಕಾಶಕ್ಕಾಗಿ ಆಕೆ ನೀರಜ್ ಜೊತೆ ಕ್ಲೋಸ್ ಆಗಿ ಮೂವ್ ಆಗಿದ್ಲು. ಆದ್ರೆ ಆತ ಮಾತ್ರ ಇವಳು ಎಷ್ಟೇ ಕ್ಲೋಸ್ ಆದ್ರು ಇವಳಿಗೆ ಅವಕಾಶವನ್ನೇ ನೀಡಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ  ಶುರುವಾಗಿತ್ತು. ಒಂದು ದಿನ ಇವರಿಬ್ಬರು ಒಟ್ಟಿಗೆ ಇದ್ದಾಗ ಮ್ಯಾಥ್ಯು ಕೂಡಾ ಬಂದಿದ್ದ. ಆಗ ಮೂವರ ನಡುವೆ ಗಲಾಟೆ ನಡೆದಿದೆ. ಗಲಾಟೆ ಜಾಸ್ತಿಯಾದ ನಂತ್ರ ನೀರಜ್ ನನ್ನ ಮರಿಯಾ ಮತ್ತು ಮ್ಯಾಥ್ಯು ಸೇರಿ ಕೊಲೆ ಮಾಡಿಬಿಟ್ಟಿದ್ರು. ಕೆಲವೇ ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಗಿತ್ತು.

ನಂತ್ರ ಇಬ್ಬರು ಸೇರಿ ಆತನ ಶವವನ್ನ ಕತ್ತರಿಸಿ ಮೂವರು ಭಾಗ ಮಾಡಿದ್ರು. ನಂತ್ರ ಅದನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಾರ್ ನಲ್ಲಿ ತಗೊಂಡು ಹೋಗಿದ್ರು. ನಿರ್ಜನ ಪ್ರದೇಶವೊಂದರಲ್ಲಿ ಆ ಬಾಡಿಯನ್ನ ಸುಟ್ಟು ಹಾಕಿ ಕೈ ತೊಳೆದುಕೊಂಡಿದ್ರು.ಆದ್ರೆ ಇತ್ತ ನೀರಜ್ ಮನೆಯವರು ಮಗ ಕಾಣೆಯಾಗಿದ್ದಾನೆ ಅಂತ ಪೊಲೀಸ್ರಿಗೆ ದೂರು ನೀಡಿದ್ರು. ಅಲ್ಲದೆ ಇವನ ಜೊತೆ ಮರಿಯಾ ಕ್ಲೋಸ್ ಆಗಿದ್ಲು ಅನ್ನೋದನ್ನ ಕೂಡಾ ಪೊಲೀಸ್ರಿಗೆ ಮಾಹಿತಿ ನೀಡಿದ್ರು. ಆಗ ಪೊಲೀಸ್ರು ಮಿಸ್ಸಿಂಗ್ ಕೇಸ್ ಅನ್ನ ರಿಜಿಸ್ಟರ್ ಮಾಡಿಕೊಂಡು ತನಿಖೆ ಶುರುಮಾಡಿದ್ರು. ಆಗ ಪೊಲೀಸ್ರು ಮರಿಯಾಳನ್ನ ವಿಚಾರಣೆ ನಡೆಸಿದಾಗ ಆಕೆ ನನಗೇನು ಗೊತ್ತೇ ಇಲ್ಲ ಅಂತ ಅಂದಿದ್ಲು. ಅಲ್ಲದೆ ಅವನು ನಾನು ಜಸ್ಟ್ ಫ್ರೆಂಡ್ಸ್ ಅಂತ ಹೇಳಿದ್ಲು. ಆದ್ರೆ ಪೊಲೀಸ್ರು ಮ್ಯಾಥ್ಯು ಮತ್ತು ಮರಿಯಾಳನ್ನ ಸಪ್ರೇಟ್ ಆಗಿ ವಿಚಾರಣೆ ನಡೆಸಿದಾಗ ಇಬ್ಬರ ಹೇಳಿಕೆಯಲ್ಲೂ ಗೊಂದಲಗಳಿತ್ತು.

ಆಗ ಪೊಲೀಸ್ರಿಗೆ ಇವರೇ ಕೊಲೆ ಮಾಡಿದ್ದು ಅನ್ನೋದು ಪಕ್ಕಾ ಆಗಿತ್ತು. ನಂತ್ರ ಇಬ್ಬರಿಗೂ ಲೈಟ್ ಆಗಿ ಲಾಠಿ ರುಚಿ ತೋರಿಸಿದಾಗ ಮರ್ಡರ್ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ನಂತ್ರ ಪೊಲೀಸ್ರು ಕೊಲೆ ಮತ್ತು ಸಾಕ್ಷಿನಾಶ ಪ್ರಕರಣದಲ್ಲಿ ಇಬ್ಬರನ್ನ ಜೈಲಿಗೆ ಕಳುಹಿಸಿದ್ರು. ನಾಲ್ಕು ವರ್ಷಗಳ ಕಾಲ ಇಬ್ಬರು ಜೈಲಲ್ಲಿ ತಾವು ಮಾಡಿದ ತಪ್ಪಿಗೆ ಪಶ್ಚತ್ತಾಪ ಪಟ್ಟಿದ್ರು. ನಂತ್ರ ಕೇಸ್ ಗೆ ಬೇಕಾದ ಸರಿಯಾದ ದಾಖಲೆಗಳು ಇಲ್ಲದ ಕಾರಣ ಇಬ್ಬರು ಖುಲಾಸೆಯಾಗಿದ್ರು. ನಂತ್ರ ಮರಿಯಾ ಆಗ್ಲಿ ಮ್ಯಾಥ್ಯು ಆಗ್ಲಿ ಯಾರಿಗೂ ಕಾಣಿಸಿಕೊಳ್ಳಲೇ ಇಲ್ಲ. ಟೈಂ ಕೂಡಾ ಸರಿದು ಹೋಗಿತ್ತು. ಹೀಗಿಬ್ಬರು ವ್ಯಕ್ತಿಗಳು ಇದ್ರು ಅನ್ನೋದನ್ನ ಎಲ್ಲರೂ ಮರೆತಿದ್ರು.

ಇಂಡಸ್ಟ್ರಿಯಲ್ಲೂ ಹೊಸ ನೀರಿನ ಹರಿವಾಗಿತ್ತು. ಹೀಗಾಗಿ ಮರಿಯಾ ಅನ್ನೋ ನಟಿ ಜನಮಾನಸದಿಂದ ಮರೆತು ಹೋಗಿದ್ಲು.  ಅವಳು ಮತ್ತೆ ತಪ್ಪು ಮಾಡದೇ ಇದ್ದಿದ್ರೆ ಖಂಡಿತಾ ಜನ ಇವಳನ್ನ ಮರೆತು ಹೋಗ್ತಿದ್ರು ಅನ್ಸುತ್ತೆ. ಅಲ್ಲದೆ ಆಕೆಗೆ ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧೆಗೂ ಕೂಡಾ ಆಹ್ವಾನ ನೀಡಿದ್ರು. ತನ್ನ ಕೆರಿಯರ್ ಗೆ ಆಗಿದ್ದ ಡ್ಯಾಮೇಜ್ ಅನ್ನ ಸರಿಮಾಡಿಕೊಳ್ಳೋದಕ್ಕೆ ಆಕೆಗೆ ಸಾಕಷ್ಟು ಅವಕಾಶ ಇತ್ತು. ಇನ್ನು ಎಲ್ಲವು ಸರಿಯಾಯ್ತು ಅನ್ನೋ ಹೊತ್ತಿಗೆ ಆಕೆ ಮತ್ತೆ ಜೈಲು ಸೇರಿದ್ದಾಳೆ.ಇಲ್ಲಿ ಒಳ್ಳೆಯದನ್ನ ಮಾಡಿದ್ರೆ ಜನ ನೆನಪು ಇಟ್ಟುಕೊಳ್ಳಿದಿಲ್ಲ.

ಕೆಟ್ಟದ್ದನ್ನ ಮಾಡಿದ್ರೆ ಯಾವತ್ತು ಮರಿಯೋದಿಲ್ಲ. ಹೀಗಾಗಿ ಮರಿಯಾ ಮತ್ತೆ ತನ್ನ ಕೆರಿಯರ್ ಅನ್ನ ಎಂದಿಗೂ ಸರಿ ಮಾಡಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಅಲ್ಲದೆ ಆಕೆಯನ್ನ ಇನ್ನುಯಾರು ನಂಬೋದು ಇಲ್ಲ. ಆಕೆ ಎಷ್ಟೇ ಪ್ರಯತ್ನಪಟ್ರು ಜನರ ವಿಶ್ವಾಸಗಳಿಸೋದು ಕಷ್ಟವಾಗುತ್ತೆ. ಅಲ್ಲದೆ ಆಕೆಯ ಪರ್ಸನಲ್ ಲೈಫ್ ಇನ್ನಷ್ಟು ಕುಲಗೆಟ್ಟು ಹೋಗುತ್ತೆ. ನಮ್ಮ ಜನ ಏನಿದ್ರು ಗೆದ್ದವರ ಬಾಲ ಹಿಡಿದು ಹೋಗೋರು. ಸೋತವರನ್ನ ಎಂದಿಗೂ ಕೈ ಹಿಡಿಯೋದಿಲ್ಲ ಅಲ್ವಾ.

LEAVE A REPLY

Please enter your comment!
Please enter your name here