Home Crime ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಫ್ಯಾಮಿಲಿ ಅಂದರ್….! ಜಾತ್ರೆಗೆ ಬರುವ ಮಹಿಳೆಯರೇ ಇವರ ಟಾರ್ಗೆಟ್…!

ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಫ್ಯಾಮಿಲಿ ಅಂದರ್….! ಜಾತ್ರೆಗೆ ಬರುವ ಮಹಿಳೆಯರೇ ಇವರ ಟಾರ್ಗೆಟ್…!

1706
0
SHARE

ಡಿಸೆಂಬರ್ 23, 2018. ಚಿಕ್ಕಬಳ್ಳಾಫುರ ನಗರ ಹೊರಹೊಲಯದ ವೀರಾಂಜನೇಯ ಸ್ವಾಮಿ ಜಾತ್ರೆ. ಜಾತ್ರೆಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮಿ ಬಾಗವಹಿಸಿ ಕಡಲೆ ಕಾಯಿ ಪರಿಷೆ ಪ್ರಯುಕ್ತ ಭಕ್ತರಿಗೆ ಕಡಲೆಕಾಯಿ ಹಂಚುತ್ತಿದ್ರು.

ಸ್ವಾಮಿಜೀ ಕಡೆಯಿಂದ ಕಡಲೆಕಾಯಿ ಪಡೆಯಲು ಸಾವಿರಾರು ಮಹಿಳಾ ಭಕ್ತರು ನಾ ಮುಂದು ತಾ ಮುಂದು ಅಂತ ಕಡಲೆಕಾಯಿ ಪಡೆಯುತ್ತಿದ್ರು. ಇದನ್ನೆ ನೆಪ ಮಾಡಿಕೊಂಡ ಖತರ್ನಾಕ್ ಕಳ್ಳಿಯರು ರತ್ನಮ್ಮ, ಸರಸ್ವತಮ್ಮ,ಮುನಿರತ್ನಮ್ಮ, ಮಂಜುಳಮ್ಮ ಜಯಮ್ಮ ಸೇರಿದಂತೆ ಕೆಲವು ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ರು. ಮಹಿಳೆಯರು ದೂರು ಪಡೆದು ತನಿಖೆ ಆರಂಭಿಸಿದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಪೊಲೀಸರು.

ಶ್ರೀಮಂತರ ವೇಷದಲ್ಲಿ ಸರಗಳ್ಳತನ ಮಾಡುತ್ತಿದ್ದ ನಟೋರಿಯಸ್ ಪ್ಯಾಮಿಲಿಯನ್ನು ಬಂಧಿಸಿ, ಹನ್ನೆರಡು ಲಕ್ಷ ಐವತ್ತು ಸಾವಿರ ರೂಪಾಯಿ ಮೌಲ್ಯದ 410 ಗ್ರಾಮ್ ಚಿನ್ನಾಭರಣಗಳು, ಹಾಗೂ ಒಂದು ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ.ಮೂಲತಃ ಎಚ್.ಡಿ.ಕೋಟೆ ನೀವಾಸಿಯಾಗಿರೋ ಶ್ರೀಕಾಂತ್ ಮತ್ತವನ ಪತ್ನಿ ಗಾಯಾತ್ರಿಯನ್ನು ಬಂಧಿಸಿ ತನಿಖೆ ತೀವ್ರಗೋಳಿಸಿದ್ದು… ಶ್ರೀಕಾಂತ್ ಗೆ ಲಕ್ಷ್ಮಿ ಹಾಗೂ ಗಾಯಾತ್ರಿ ಅನ್ನೊ ಇಬ್ಬರು ಕಿಲಾಡಿ ಹೆಂಡರಿದ್ದು, ಕಳ್ಳತನಕ್ಕೆ ಅವರಿಬ್ಬರು ಸಾಲದು ಎಂಬಂತೆ ತನ್ನ ತಂಗಿ ಶಿವಮ್ಮ ಹಾಗೂ ಸಂಬಂಧಿ ಬೋಜನ್ನು ಬಿಡಲಾಗಿದೆ.

ಡಿಸೆಂಬರ್ 23, 2018 ನಡೆದ ವೀರಾಂಜನೇಯಸ್ವಾಮಿ ಜಾತ್ರೆಯಲ್ಲಿ ಎಲ್ಲರು ಇನ್ನೋವಾ ಕಾರಿನಲ್ಲಿ ಆಗಮಿಸಿ, ಮಹಿಳೆಯರ ಚಿನ್ನದ ಸರಗಳನ್ನು ಕಳ್ಳತನ ಮಾಡಲಾಗಿತ್ತು. ನಂತರ ದೊಡ್ಡಬಳ್ಳಾಪುರ, ತುಮಕೂರು, ಪಾವಗಡ, ಶಿರಾ, ಚಿಕ್ಕಬಳ್ಳಾಪುರದ ಚಿತ್ರಾವತಿ ಜಾತ್ರೆ ಸೇರಿದಂತೆ ಎಲ್ಲಿ ಜಾತ್ರೆ ನಡೆಯುತ್ತೆ ಅಲ್ಲಿ ಹೋಗಿ… ಮಹಿಳೆಯರ ಸರವನ್ನು ಕಳ್ಳತನ ಮಾಡ್ತಿದ್ರು, ವೀರಾಂಜನೇಯಸ್ವಾಮಿ ಜಾತ್ರೆಯಲ್ಲಿ ಕಳ್ಳತನ ಮಾಡಿದ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು.

ಪೊಲೀಸರು ವಿಡಿಯೊ ಹಾಗೂ ಪೋಟೊಗಳನ್ನು ವಾಟ್ಸಪ್ ಮೂಲಕ ಹರಿಬಿಟ್ಟು ಗುರುತು ಹಿಡಿಯಲು ಮನವಿ ಮಾಡಿದ್ರು. ವಾಟ್ಸಪ್ ನಲ್ಲಿ ಗಾಯಾತ್ರಿಯ ಪೋಟೊ ನೋಡಿದ ಪಾವಗಡ ಪೊಲೀಸರು… ಖತರ್ನಾಕ್ ಕಳ್ಳಿ ಗಾಯತ್ರಿಯನ್ನು ಹಿಡದು ಚಿಕ್ಕಬಳ್ಳಾಪುರ ಪೊಲೀಸರ ವಶಕ್ಕೆ ನೀಡಿದ್ದಾರೆ.ಜಾತ್ರೆಗೆ ಬರೊ ಮಹಿಳೆಯ ಚಿನ್ನದ ಸರಗಳ ಮೇಲೆ ಕಣ್ಣು ಹಾಕಿ ಜಾತ್ರೆಗೆ ಹೋಗೊ ಈ ಗ್ಯಾಂಗ್, ಕಳ್ಳತನ ಮಾಡೋದನ್ನೆ ಕಾಯಕ ಮಾಡಿಕೊಂಡಿದೆ, ಇತ್ತಿಚಿಗೆ ಬೆಂಗಳೂರಿನ ವೀರಸಂದ್ರದಲ್ಲಿ ಮನೆ ಮಾಡಿಕೊಂಡಿದ್ದು.

ಅಲ್ಲಿಂದ ಬೆಂಗಳೂರು ಸುತ್ತಮುತ್ತ ನಡೆಯೊ ಜಾತ್ರೆಗೆ ಹೋಗಿ ಮಹಿಳೆಯ ಸಾಮೂಹಿಕ ಸರಕಳ್ಳತನ ಮಾಡ್ತಿದ್ರು. ಇವರ ಕೈಚಳಕಕ್ಕೆ ಸ್ವತಃ ಪೊಲೀಸರೆ ಸುಸ್ತಾಗಿ ಕೊನೆಗೂ ಆರೋಪಿಗಳಲ್ಲಿ ಗಂಡ ಹೆಂಡತಿಯನ್ನು ಬಂಧಿಸಿದ್ರೆ… ಕೆಲವರು ನಾಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here