Home District ಕಾಂಗ್ರೆಸ್‌ಗೇ ಟಾಂಗ್ ಕೊಟ್ಟ ಸಚಿವೆ ಜಯಮಾಲಾ..!? “ಬದುಕಿರುವವರೆಗೂ ರೇವಣ್ಣ ಶಾಸಕರಾಗಿಗ್ತಾರೆ ಎಂದು ಕೊಂಡಾಡಿದ ಸಚಿವೆ”

ಕಾಂಗ್ರೆಸ್‌ಗೇ ಟಾಂಗ್ ಕೊಟ್ಟ ಸಚಿವೆ ಜಯಮಾಲಾ..!? “ಬದುಕಿರುವವರೆಗೂ ರೇವಣ್ಣ ಶಾಸಕರಾಗಿಗ್ತಾರೆ ಎಂದು ಕೊಂಡಾಡಿದ ಸಚಿವೆ”

374
0
SHARE

ಬದುಕಿರೋವರೆಗೂ ಹೆಚ್.ಡಿ.ರೇವಣ್ಣ ಶಾಸಕರಾಗಿರುತ್ತಾರೆ. ಲೋಕೋಪಯೋಗಿ ಸಚಿವರನ್ನ ಕೊಂಡಾಡಿದ ಜಯಮಾಲಾ. ಕಾಂಗ್ರೆಸ್ ನಾಯಕರಿಗೆ ಸಚಿವೆ ಟಾಂಗ್.ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಸಚಿವ ಜಯಮಾಲಾ ಹೊಗಳಿ ಹಾಸನ ಕಾಂಗ್ರೆಸ್ ನಾಯಕರನ್ನು ಇರಿಸುಮುರಿಸು ಉಂಟು ಮಾಡಿದ್ದಾರೆ.

ಹಾಸನ ಜಿಲ್ಲೆಯ ಶ್ರವಣಬೆಳೊಗಳದಲ್ಲಿ ನಡೆದ ಚಾರೂಕೀರ್ತಿ ಭಟ್ಟಾರಕ‌ ಶ್ರೀಗೆ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಮಾಲಾ, ಬದುಕಿರೋವರೆಗೂ ಹೆಷ್.ಡಿ.ರೇವಣ್ಣ ಶಾಸಕಾಗಿರ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ರೇವಣ್ಣ ಅವ್ರು ಜನರಿಗೆ ಏನು ಬೇಕೋ ಅದನ್ನು ಅರ್ಥಮಾಡಿಕೊಂಡು ತಮ್ಮದೇ ‌ಸಾಮ್ರಾಜ್ಯ ಕಟ್ಟಿದ್ದಾರೆ ಹಾಸನವನ್ನ ನೋಡಿದ್ರೆ, ಇಲ್ಲಿನ ಶುಚಿತ್ವ ನೋಡಿದ್ರೆ ಅವರ‌‌ ಕೆಲಸ ಅರ್ಥವಾಗುತ್ತೆ.ಸರ್ಕಾರ ಯಾವುದೇ ಇರಲಿ ತನ್ನವರಿಗಾಗಿ ಅವರು ಬೇಕಾದ ಕೆಲಸವನ್ನು ಮಾಡ್ತಾರೆ.

ಜನರನ್ನು ಅರ್ಥಮಾಡಿ ಕೊಂಡು ಅವರಿಗೆ ಬೇಕಾದುದನ್ನು ರೇವಣ್ಣ ಕೊಡುತ್ತಾರೆ.ಅದರಲ್ಲೂ ಮಹಿಳೆ, ಮಕ್ಕಳ‌ ಬಗ್ಗೆ ಅವರಿಗೆ ವಿಶೇಷ ಅನುಭೂತಿ‌ ಇದೆ ಎಂದು ಹೊಗಳುವ ಮೂಲಕ ಸ್ವಪಕ್ಷೀಯರಿಗೆ ಟಾಂಗ್ ಕೊಟ್ಟಿದ್ದಾರೆ.

ರೇವಣ್ಣ ಎಲ್ಲಾ ಇಲಾಖೆಯಲ್ಲಿ ಮೂಗು ತೂರಿಸುತ್ತಾರೆಂಬ ಕಾಂಗ್ರೆಸ್ ಶಾಸಕ‌ರು, ಸಚಿವರ‌ ಆರೋಪವಾಗಿದೆ. ಇದೇ ಸಂದರ್ಭದಲ್ಲಿ ರೇವಣ್ಣ ಅವ್ರನ್ನ ಕೊಂಡಾಡಿದ ಜಯಮಾಲಾ ಈಗ ಹಾಸನ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

LEAVE A REPLY

Please enter your comment!
Please enter your name here