Home Crime ಕಾಂಗ್ರೆಸ್ ಕಾರ್ಪೊರೇಟರ್ ವಿವಾಹಿತೆ ಮಹಿಳೆಗೆ ಕಿರುಕುಳ..? ಕೈ ಕುಯ್ದುಕೊಂಡು ಅಂಗಲಾಚಿದ್ದೇನು ಗೊತ್ತಾ ವಿವಾಹಿತೆ..?!

ಕಾಂಗ್ರೆಸ್ ಕಾರ್ಪೊರೇಟರ್ ವಿವಾಹಿತೆ ಮಹಿಳೆಗೆ ಕಿರುಕುಳ..? ಕೈ ಕುಯ್ದುಕೊಂಡು ಅಂಗಲಾಚಿದ್ದೇನು ಗೊತ್ತಾ ವಿವಾಹಿತೆ..?!

428
0
SHARE

ಆತ ಅಭಿವೃದ್ದಿ ಕೆಲ್ಸಗಳನ್ನ ಮಾಡ್ಬೇಕಿದ್ದ ಕಾರ್ಪೊರೇಟರ್… ಆದ್ರೆ ಜನಪರ ಕೆಲ್ಸ ಮಾಡ್ಬೆಕಿದ್ದವ್ನು ‌ತನ್ನ ಅಣ್ಣನ ಅಳಿಯನನ್ನೆ ಕಿಡ್ನಾಪ್ ಮಾಡಿಸಿದ ಆರೋಪವನ್ನ ಹೊತ್ತಿದ್ದಾನೆ…. ಆತನ ಕಿರುಕುಳಕ್ಕೀಗ ಮಹಿಳೆಯೊಬ್ಬಳು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಹೀಗೆ ತನ್ನ ಗಂಡನನ್ನ ನೆನೆದು ಕೈಯ್ಯನ್ನ ಕೂಯ್ದುಕೊಂಡು ನನಗೆ ನಿನ್ನ ಬಿಟ್ರೆ ಬೇರಾರು ಇಲ್ಲ. ನಾನ್ ನಿನ್ನ ತುಂಬಾ ಪ್ರೀತಿ ಮಾಡ್ತೀನಿ ಶಫೀ, ಎಲ್ಲಿದ್ಯಾ ಬೇಗ ಬಾ.. ಅಂತ ಆತ್ಮಹತ್ಯೆಗೆ ಯತ್ನಿಸಿ ರೋಧಿಸ್ತಿರೋ ಈ ಮಹಿಳೆ ಹೆಸ್ರು ಆಯೆಷ.

ತನ್ನ ಗಂಡ ಶಫಿಯನ್ನ ಬನಶಂಕರಿ ವಾರ್ಡ್ ನ ಕಾರ್ಪೊರೇಟರ್ ಅನ್ಸರ್ ಪಾಷ ಅಲಿಯಾಸ್ ಮಚ್ಚಿ ಅನ್ಸರ್ ಕಿಡ್ನಾಪ್ ಮಾಡಿದ್ದಾನೆ ಅಂತ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆ ಸಂಬಂಧ ಸೆಲ್ಫಿ ವಿಡಿಯೋ ಮಾಡಿರೋ ಆಯೆಷ, ವರದಕ್ಷಿಣೆ ಆಸೆಗಾಗಿ ತನ್ನ ಮಾವ ನಯಾಜ್ ಕಾರ್ಪೊರೇಟರ್ ಅನ್ಸರ್ ಜೊತೆ ಸೇರಿ ನನ್ನ ಗಂಡನನ್ನ ನನ್ನಿಂದ ದೂರ ಮಾಡಿದ್ದಾರೆ ಅಂತ ಆರೋಪಿಸಿದ್ದಾಳೆ. ಅಲ್ಲದೇ ವಿಡಿಯೋದಲ್ಲಿ ಆತ್ಮಹತ್ಯೆಗೆ ಯತ್ನಿಸೋ ವೇಳೆ ನನ್ನ ಗಂಡ ಶಫಿಯ ಮೇಲೆ ಹಲ್ಲೆ ನಡೆಸಬೇಡಿ ಎಂದಿರುವ ಮಹಿಳೆ..

ತನ್ನ ವಿಡಿಯೋದಲ್ಲಿ ಮಾಜಿ ಫಾತಕಿ ಹಾಗೂ ಕಾರ್ಪೊರೇಟರ್ ಅನ್ಸರ್ ಬಾಮೈದ ನಾಗಿರುವ ಬಚ್ಚನ್, ತನ್ನ ಮಾವ ನಯಾಜ್ ಪಾಷ, ಫಾತಿಮಾ, ಮೌಲ್ವಿ ಅಜಸ್, ಜಬೀಹುಲ್ಲ ಸೇರಿ ಐದು ಮಂದಿ ವಿರುದ್ದ ಆರೋಪ ಮಾಡಿದ್ದಾಳೆ.ಇನ್ನು ತನ್ನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಪೊರೇಟರ್ ಅನ್ಸರ್ ಪಾಷ ಆ ಹುಡುಗಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಮುಖವನ್ನೂ ನಾನು ನೋಡಿಲ್ಲ. ಆಕೆಯ ಗಂಡ ನನ್ನ ಅಣ್ಣನ ಅಳಿಯ.

ಒಂದೂವರೆ ತಿಂಗಳ ಮುಂಚೆ ಇಬ್ಬರ ಗಲಾಟೆ ವಿಚಾರ ನನ್ನ ಬಳಿ ಬಂತು ಆಗ ನಾನು ಕೌನ್ಸಿಲರ್, ಏರಿಯಾ ಕೆಲಸ ಮಾಡೋದು ಅಂತಾ ಹೇಳಿದೆ. ಇದೆಲ್ಲಾ ಒಂದೂವರೆ ತಿಂಗಳ ಹಿಂದೆ ನಡೆದ ಘಟನೆ. ಆದರೆ ಇದೀಗ ಈ ವಿಡಿಯೋ ವೈರಲ್ ಆಗಿದೆ. ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದು ಸಾಬೀತಾದ್ರೆ ಕತ್ತು ಕುಯ್ಕೊತಿನಿ.

ಪಾಲಿಕೆ ಆವರಣದಲ್ಲಿ ವಿಷ ಸೇವನೆ ಮಾಡುತ್ತೇನೆ. ಅಂತ ತನ್ನ ಮೇಲಿನ ಆರೋಪವನ್ನ ಹಲ್ಲಗೆಳೆದ್ರು.ಸದ್ಯ ಆತ್ಮಹತ್ಯೆಗೆ ಯತ್ನಿಸಿರೋ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಆದ್ರೆ ತನ್ನ ಗಂಡ ನಾಪತ್ತೆಯಾಗಿದೆ ಅಂತ ಆರೋಪಿಸಿ‌ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ರು ಕೂಡ ಇದುವರೆಗೂ ದೂರು ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ….

LEAVE A REPLY

Please enter your comment!
Please enter your name here