Home District ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮೇಲುಗೈ ಸಾಧಿಸುತ್ತಾ ಇಲ್ಲಾ ಮೈತ್ರಿ ಪಕ್ಷಕ್ಕೆ ಠಕ್ಕರ್ ಕೊಟ್ಟು BJP ಅರುಳತ್ತಾ..?! ಪಂಚ...

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮೇಲುಗೈ ಸಾಧಿಸುತ್ತಾ ಇಲ್ಲಾ ಮೈತ್ರಿ ಪಕ್ಷಕ್ಕೆ ಠಕ್ಕರ್ ಕೊಟ್ಟು BJP ಅರುಳತ್ತಾ..?! ಪಂಚ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ…

593
0
SHARE

ಐದು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಚಾಣಕ್ಯ ರಾ ಸಂಸ್ಥೆ ಜೊತೆಗೂಡಿ ಪ್ರಜಾಟಿವಿ ನಡೆಸಿದ ಸಮೀಕ್ಷೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಯಾರಿಗೆ ಸೋಲು ಅನ್ನೋದನ್ನ ನಿಖರವಾಗಿ ಪತ್ತೆ ಹಚ್ಚುವ ಯತ್ನ ನಡೆಸಲಾಗಿದೆ.. ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮೇಲುಗೈ ಸಾಧಿಸುತ್ತಾ ಇಲ್ಲಾ ಮೈತ್ರಿ ಪಕ್ಷಕ್ಕೆ ಠಕ್ಕರ್ ಕೊಟ್ಟು ಬಿಜೆಪಿ ಅರುಳತ್ತಾ ಕಾದು ನೋಡಬೇಕು..ರಿಸಲ್ಟ್ ನಾಳೆ ಬೆಳಿಗ್ಗೆ 9ಗಂಟೆಗೆ ಸಿಗುವ ಸಾಧ್ಯತೆ ಇದೆ…

‘ಪ್ರಜಾ’ಭಿಮತ:ಬಳ್ಳಾರಿ ಲೋಕಸಭಾ ಕ್ಷೇತ್ರ:ಕಾಂಗ್ರೆಸ್+ಜೆಡಿಎಸ್ – ಶೇ. 44.ಬಿಜೆಪಿ- ಶೇ41.
ಹೇಳಲ್ಲ- ಶೇ.15.ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಗೆಲುವು ಸಾಧಿಸುತ್ತಾರೆ.
ಕನಿಷ್ಠ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆ ಗೆಲುವು.ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಮತದಾರರಿಗೆ ಒಲವಿಲ್ಲ.ಏಕಾಂಗಿಯಾಗಿ ಹೋರಾಟ ಮಾಡಿದ ಶ್ರೀರಾಮುಲುಗೆ ಮುಖಭಂಗ ಸಾಧ್ಯತೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ:ಕಾಂಗ್ರೆಸ್+ಜೆಡಿಎಸ್-ಶೇ.40.ಬಿಜೆಪಿ-ಶೇ.46.ಹೇಳಲ್ಲ- ಶೇ.14.ಶಿವಮೊಗ್ಗದಲ್ಲಿ ಮತ್ತೆ ಬಿಜೆಪಿ ಗೆಲುವು ಖಚಿತ..ಯಡಿಯೂರಪ್ಪ ತಮ್ಮ ಮಗನನ್ನ ಗೆಲ್ಲಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.ರಾಘವೇಂದ್ರ ಕನಿಷ್ಠ 50 ಸಾವಿರ ಮತಗಳಿಂದ ಗೆಲುವು ಸಾಧಿಸುತ್ತಾರೆ.ದೋಸ್ತಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪಗೆ ಸೋಲು!.

ಮಂಡ್ಯ ಲೋಕಸಭಾ ಕ್ಷೇತ್ರ:ಕಾಂಗ್ರೆಸ್+ಜೆಡಿಎಸ್- ಶೇ.68.ಬಿಜೆಪಿ- ಶೇ.22.ಹೇಳಲ್ಲ- ಶೇ.10.ದೋಸ್ತಿ ಅಭ್ಯರ್ಥಿ ಶಿವರಾಮೇಗೌಡ್ರಿಗೆ ಮಂಡ್ಯದಲ್ಲಿ ಸುಲಭ ಜಯ.ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯನವರಿಗೆ ಹೀನಾಯ ಸೋಲು.ಸಕ್ಕರೆ ನಾಡಿನಲ್ಲಿ ಬಿಜೆಪಿಗೆ ಮೊದಲಿನಿಂದಲೂ ನೆಲೆ ಇಲ್ಲ.

ರಾಮನಗರ ಅಸೆಂಬ್ಲಿ ಕ್ಷೇತ್ರ:ಕಾಂಗ್ರೆಸ್+ಜೆಡಿಎಸ್- ಶೇ.85.ಬಿಜೆಪಿ-ಶೇ.10.ಹೇಳಲ್ಲ- ಶೇ.5.
ರಾಮನಗರದಲ್ಲಿ ಅನಿತಾಕುಮಾರಸ್ವಾಮಿ ಅವರಿಗೆ ಪ್ರತಿಸ್ಪರ್ಧಿಯೇ ಇಲ್ಲ.ಅತ್ಯಂತ ದೊಡ್ಡ ಅಂತರದಲ್ಲಿ ಅನಿತಾಕುಮಾರಸ್ವಾಮಿ ಅವರಿಗೆ ಗೆಲುವು ಖಚಿತ.ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದು ಬಿಜೆಪಿಗೆ ಹಿನ್ನಡೆ.ಅಭ್ಯರ್ಥಿ ಕಣದಲ್ಲಿದ್ದರೂ ಅನಿತಾಕುಮಾರಸ್ವಾಮಿ ಅವರಿಗೆ ಜಯ ನಿಶ್ಚಯವಾಗಿತ್ತು.

ಜಮಖಂಡಿ ಅಸೆಂಬ್ಲಿ ಕ್ಷೇತ್ರ:ಕಾಂಗ್ರೆಸ್+ಜೆಡಿಎಸ್- ಶೇ.45.ಬಿಜೆಪಿ-ಶೇ.45.ಹೇಳಲ್ಲ- ಶೇ.10.
ಜಮಖಂಡಿಯಲ್ಲಿ ದೋಸ್ತಿಗಳು ಮತ್ತು ಬಿಜೆಪಿ ನಡುವೆ ಸಮಬಲ ಹೋರಾಟ.ಕಾಂಗ್ರೆಸ್ ನ ಆನಂದ್ ನ್ಯಾಮಗೌಡ ಮತ್ತು ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ನಡುವೆ ಬಿಗ್ ಫೈಟ್.ಫೋಟೋ ಫಿನಿಶ್ ರಿಸಲ್ಟ್ ಸಾಧ್ಯತೆ, ಯಾರೇ ಗೆದ್ದರೂ ಅಂತರ ತುಂಬಾ ಕಡಿಮೆ.ಅಂತಿಮವಾಗಿ ಆನಂದ್ ನ್ಯಾಮಗೌಡ ಅವರು ಗೆಲ್ಲುವ ಸಾಧ್ಯತೆ ಇದೆ.

 

LEAVE A REPLY

Please enter your comment!
Please enter your name here