Home District ಕಾಂಗ್ರೆಸ್ ನೀಡಿದ್ದ ಪಟ್ಟಿಗೆ ಸಿಎಂ ಸಹಿ ಹಾಕದಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ..! “ಏಕೆ ಸಹಿ ಮಾಡಿಲ್ಲಾ...

ಕಾಂಗ್ರೆಸ್ ನೀಡಿದ್ದ ಪಟ್ಟಿಗೆ ಸಿಎಂ ಸಹಿ ಹಾಕದಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ..! “ಏಕೆ ಸಹಿ ಮಾಡಿಲ್ಲಾ ಎಂದು ಕೇಳುತ್ತೇನೆ”…

379
0
SHARE

ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ನೀಡಿದ್ದ ಪಟ್ಟಿಗೆ ಸಿಎಂ ಸಹಿ ಹಾಕದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.

ಏಕೆ ಸಹಿ ಮಾಡಿಲ್ಲಾ ಎಂದು ಕೇಳುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.ಇನ್ನು, ಸಚಿವ ಪುಟ್ಟರಂಗ ಶೆಟ್ಟಿ ಏಕೆ ರಾಜಿನಾಮೆ ನೀಡಬೇಕು…?. ಅದರ ಬಗ್ಗೆ ಎಸಿಬಿ ತನಿಖೆ ನಡಿತಾ ಇದೆ, ಅದು ಇನ್ನೂ ಸಾಬೀತು ಆಗಿಲ್ಲ. ಅವರ ಬಳಿ ಏನಾದರೂ ಹಣ ಸಿಕ್ಕಿದೆಯಾ…? ಎಂದು ಪ್ರಶ್ನಿಸಿದ್ದಾರೆ.

ಇನ್ನು, ಹಣ ಪತ್ತೆ ಪ್ರಕರಣ ಸಂಬಂಧಎಸಿಬಿ ತನಿಖೆ ಬಗ್ಗೆ ಬಿಜೆಪಿಯರಿಗೆ ಭರವಸೆ ಇಲ್ಲಾ ಎನ್ನುತ್ತಿದ್ದಾರೆ. ಅವರ ಮೇಲೆ ಅವರಿಗೆ ‌ಭರವಸೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿದ್ದಾರೆ. ಕಾಂಗ್ರೆಸ್‌ ನೀಡಿದ ಪಟ್ಟಿಗೆ ಸಹಿ ಹಾಕುವಂತೆ ಸಿಎಂಗೆ ಮನವಿ ಮಾಡ್ತೇನೆ.

ಸಿಎಂ ಯಾವ ಕಾರಣಕ್ಕೆ ಕೈ ಬಿಟ್ಟಿದ್ದಾರೆ ಅಂತ ಗೊತ್ತಿಲ್ಲ. ಕಾಂಗ್ರೆಸ್ ಕೊಟ್ಟ ಪಟ್ಟಿಯನ್ನು ಸಿಎಂ ಪ್ರಶ್ನೆ ಮಾಡಿಲ್ಲ. ಜೊತೆಗೆ ಸಿಎಂ, ಪಟ್ಟಿಯನ್ನು ರಿಜೆಕ್ಟ್ ಕೂಡಾ ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here