Home District ಕಾಂಗ್ರೆಸ್ ಪಾಳಯಕ್ಕೆ ಮತ್ತೆ ಹೈ ಟೆನ್ಷನ್..!? “ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷದ ಸ್ಥಾನ ತಿರಸ್ಕಾರ ಅಂದಿದ್ಯಾರು.?

ಕಾಂಗ್ರೆಸ್ ಪಾಳಯಕ್ಕೆ ಮತ್ತೆ ಹೈ ಟೆನ್ಷನ್..!? “ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷದ ಸ್ಥಾನ ತಿರಸ್ಕಾರ ಅಂದಿದ್ಯಾರು.?

560
0
SHARE

ಕಾಂಗ್ರೆಸ್‌ಗೆ ಹೊಸ ತಲೆ ನೋವು ಶುರುವಾಗಿದೆ. ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಭುಗಿಲೆದ್ದಿದೆ.ಪಕ್ಷದ ಸ್ಥಾನಗಳಿಂದ ದೂರ ಉಳಿಯುವಂತೆ ರೆಡ್ಡಿ ಸಮುದಾಯದ ಶಾಸಕರಿಗೆ ಮುಖಂಡರು ಒತ್ತಡ ಹೇರುತ್ತಿದ್ದಾರೆ.

ಪಕ್ಷದ ಚಟುವಟಿಕೆಯಿಂದ ದೂರ ಉಳಿಯಲು ಹಿರಿಯ ಶಾಸಕರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಸಚಿವ ಸ್ಥಾನ ಬಿಟ್ಟು ಬೇರೆ ಯಾವ ಸ್ಥಾನಗಳನ್ನು ಒಪ್ಪಿಕೊಳ್ಳಬೇಡಿ ಎಂದು ರಾಮಲಿಂಗಾರೆಡ್ಡಿ ಬೆಂಬಲಿಗರು ಎಚ್.ಕೆ ಪಾಟೀಲ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನ ಒಪ್ಪಿಕೊಳ್ಳಬೇಡಿ ಎಂದು ರೆಡ್ಡಿ ಸಮುದಾಯದ ಮುಖಂಡರು ಎಚ್.ಕೆ ಪಾಟೀಲ್ ಗೆ ಒತ್ತಾಯ ಹೇರುತ್ತಿದ್ದಾರೆ.ರೆಡ್ಡಿ ಸಮೂದಾಯಕ್ಕೆ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿ. ಒಂದು ವೇಳೆ, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಪಡೆದರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ ಎಂದು ಎಚ್.ಕೆ ಪಾಟೀಲ್ ಜೊತೆ ರೆಡ್ಡಿ ಸಮೂದಾಯದ ಮುಖಂಡರು ಚರ್ಚಿಸಿದ್ದಾರೆ.

ರಾಮಲಿಂಗಾರೆಡ್ಡಿ ಅವರಿಗೂ ಸಚಿವ ಸ್ಥಾನ ಕೊಟ್ಟಿಲ್ಲ.ಎಚ್.ಕೆ ಪಾಟೀಲರಿಗೂ ಸಚಿವ ಸ್ಥಾನ ತಪ್ಪಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ತಗೊಂಡು ಏನು ಪ್ರಯೋಜನ ಎಂದು ಮುಖಂಡರು ಹೆಚ್.ಕೆ.ಪಾಟೀಲ್ ಅವ್ರನ್ನ ಪ್ರಶ್ನಿಸಿದ್ದಾರೆ.ಈ ಬಗ್ಗೆ ಆಲೋಚಿಸಿ ನಿರ್ಧಾರ ತಗೆದುಕೊಳ್ಳೋದಾಗಿ ಮುಖಂಡರಿಗೆ ಎಚ್.ಕೆ ಪಾಟೀಲ್ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here