Home District ಕಾಂಗ್ರೆಸ್ ಮೇಲೆ ಸಿದ್ದರಾಮಯ್ಯ ಹಿಡಿತ ತಪ್ಪಿಸಲು ಷಡ್ಯಂತ್ರ..?! ಕಾಂಗ್ರೆಸ್‌ನಲ್ಲಿ ಮತ್ತೊಂದು ಬಣ ಸಂಘರ್ಷಕ್ಕೆ ಸಿದ್ಧತೆ?

ಕಾಂಗ್ರೆಸ್ ಮೇಲೆ ಸಿದ್ದರಾಮಯ್ಯ ಹಿಡಿತ ತಪ್ಪಿಸಲು ಷಡ್ಯಂತ್ರ..?! ಕಾಂಗ್ರೆಸ್‌ನಲ್ಲಿ ಮತ್ತೊಂದು ಬಣ ಸಂಘರ್ಷಕ್ಕೆ ಸಿದ್ಧತೆ?

170
0
SHARE

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿದ ಬೆನ್ನಲ್ಲೇ ಆ ಸ್ಥಾನದಿಂದ ಅವರನ್ನು ಕೆಳಗಿಳಿಸುವ ತಂತ್ರ ನಡೆಯುತ್ತಿದೆ ಅಂತಾ ಹೇಳಲಾಗ್ತಿದೆ.. ಕಾಂಗ್ರೆಸ್‌ನ ಕೆಲ ನಾಯಕರ ಈ ಒತ್ತಡಕ್ಕೆ ಹೈಕಮಾಂಡ್ ಗಮನ ಹರಿಸಿದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದ್ದು, ದೊಡ್ಡದೊಂದು ಬಣ ಸಂಘರ್ಷ ಆರಂಭವಾಗುವ ಎಲ್ಲಾ ಸಾಧ್ಯತೆ ಇದೆ.

ಸಿದ್ದರಾಮಯ್ಯ ಪ್ರಸ್ತುತ ಮೈತ್ರಿಕೂಟದ ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಮೂಡಿಸುವ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ.. ಜತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ.. ಇದರ ಜತೆಗೆ ಈಗ ದೆಹಲಿ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ನೇಮಕಗೊಂಡಿದ್ದಾರೆ..

ಸಿದ್ದರಾಮಯ್ಯ ಅವರ ಬಳಿ ಮೂರು ಪ್ರಮುಖ ಉದ್ದೆಗಳಿರೋದ್ರಿಂದ ಈ ಪೈಕಿ ಒಂದನ್ನು ಹಿಂಪಡೆಯಲು ತಂತ್ರ ನಡೆಯುತ್ತಿದೆ..CWCಯಲ್ಲಿ ಅವಕಾಶ ಕಲ್ಪಿಸಿ CLP ಲೀಡರ್ ಸ್ಥಾನದಿಂದ ಕೆಳಗಿಳಿಸುವ ಚಿಂತನೆ. ಸದ್ಯ ಮೂರು ಮಹತ್ವದ ಸ್ಥಾನದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ.ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ…

ಸಿಎಲ್ ಪಿ ನಾಯಕನ ಪಟ್ಟ, ಜೊತೆಗೆ ಎಐಸಿಸಿ ವರ್ಕಿಂಗ್ ಕಮಿಟಿ ಮೆಂಬರ್ ಆಗಿರುವ ಸಿದ್ದು.ಹೀಗಾಗಿ ಒಂದು ಸ್ಥಾನದಿಂದ ಮುಕ್ತಗೊಳಿಸುವ ಬಗ್ಗೆ ನಡೆದಿರುವ ಚರ್ಚೆ. ಮಾಹಿತಿ ತಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಗರಂ. ಶಾಸಕಾಂಗ ನಾಯಕನ ಸ್ಥಾನ ಬಿಟ್ಟುಕೊಡಲು ಒಪ್ಪದ ಸಿದ್ದರಾಮಯ್ಯ. ಶಾಸಕರ ಜೊತೆಗಿನ ಸಂಪರ್ಕ ಕಡಿದುಹೋಗುವ ಬಗ್ಗೆ ಸಿದ್ದರಾಮಯ್ಯಗೆ ಆತಂಕ . ಹೀಗಾಗಿ ಸಿದ್ದರಾಮಯ್ಯ ಮನವೊಲಿಸಲು ಈಗ ಕೈ ನಾಯಕರ ಕಸರತ್ತು…

LEAVE A REPLY

Please enter your comment!
Please enter your name here