Home District “ಕಾಂಗ್ರೆಸ್ ರಣತಂತ್ರ ನಡೆಯೊಲ್ಲ, ಯಾರೂ ನಮ್ಮನ್ನ ಸೋಲಿಸೋಕಾಗಲ್ಲ” ಶ್ರೀರಾಮುಲು ವೀರಾವೇಷ…

“ಕಾಂಗ್ರೆಸ್ ರಣತಂತ್ರ ನಡೆಯೊಲ್ಲ, ಯಾರೂ ನಮ್ಮನ್ನ ಸೋಲಿಸೋಕಾಗಲ್ಲ” ಶ್ರೀರಾಮುಲು ವೀರಾವೇಷ…

411
0
SHARE

ಬಳ್ಳಾರಿ ಲೋಕಸಭೆ ಉಪಚುನಾವಣೆ ವಿಚಾರಕ್ಕೆ ಶಾಸಕ ಶ್ರೀರಾಮುಲು ಪ್ರತಿಕ್ರಿಸಿದ್ದಾರೆ. ಯುದ್ದದಲ್ಲಿ ಪಾಂಡವರೇ ಗೆಲ್ತಾರೆ.ನಾವು ಪಾಂಡವರು..ಬಳ್ಳಾರಿಗೆ ಕಾಂಗ್ರೆಸ್‌‍ನ ಸಚಿವರು, ಶಾಸಕರು ಯಾರೇ ಬಂದ್ರೂ ಸಹ ಲೋಕಸಭೆ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಚುನಾವಣಗೆ ತಯಾರಿ ಮಾಡಿಕೊಳ್ಳುವುದು ನಮಗೆ ಚೆನ್ನಾಗಿ ಗೊತ್ತಿದೆ.

ನಮ್ಮ ಕಾರ್ಯಕರ್ತರೆ ನಮಗೆ ಶಕ್ತಿ.. ಬಳ್ಳಾರಿ ಲೋಕಸಭೆ ಉಪಚುನಾವಣೆಗೆ 5 ಮಂದಿ ರೇಸ್‌ನಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಗೆ ಪಟ್ಟಿ ಕೊಡಲಾಗಿದೆ. ಆದಷ್ಟು ಬೇಗನೆ ಅಭ್ಯರ್ಥಿ ಫೈನಲ್ ಆಗಲಿದೆ ಎಂದಿದ್ದಾರೆ.

ಇನ್ನೂ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮಾಜಿ ಸಂಸದೆ ಜೆ.ಶಾಂತ ಸ್ಪರ್ಧೆ ಮಾಡುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ. ಬಿಜೆಪಿಯಿಂದ ಟಿಕೇಟ್ ನೀಡಿದ್ರೆ, ಬಳ್ಳಾರಿ ಮಗಳಾಗಿ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ.

ಯಾರೇ ಸ್ಪರ್ಧಿಸಿದ್ರು ಸೈನಿಕರಂತೆ ಹೋರಾಡಿ ಗೆಲ್ಲಿಸಿಕೊಂಡು ಬರ್ತಿವಿ..ಅಂತ ಹೇಳಿದ್ದಾರೆ.ಇನ್ನು ಶಾಸಕ ಶ್ರೀರಾಮುಲು ಸೂಚಿಸಿದ ಅಭ್ಯರ್ಥಿಯೇ ಬಳ್ಳಾರಿ ಲೋಕಸಭೆ ಉಪಚುನಾಣೆಗೆ ಅಭ್ಯರ್ಥಿ ಅಂತಿಮವಾಗಲಿದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ಹೇಳಿದ್ದಾರೆ. ಕಾಂಗ್ರೆಸ್ ನವರ ರಣತಂತ್ರಗಳು ಬಳ್ಳಾರಿಯಲ್ಲಿ ನಡೆಯುವುದಿಲ್ಲ

ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಸ್ಪರ್ಧಿಸಿದ್ರೆ ಒಂಭತ್ತು ಕ್ಷೇತ್ರಗಳಲ್ಲಿ ನಮ್ಮ ಗೆಲುವು ಆಗುತ್ತಿತ್ತು.ಈಗ ಶ್ರೀರಾಮುಲು ಬಳ್ಳಾರಿಯಲ್ಲಿ ಇರುತ್ತಾರೆ. ಭಾರಿ ಬಹುಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಸೋಮಶೇಖರ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here