Home District ಕಾಂಗ್ರೆಸ್ ಶಾಸಕಾಂಗ ಸಭೆಗೆ HDK..! ಸ್ವತಃ ಬಹಿರಂಗ ಪಡಿಸಿದ CM..! ಡಿಸೆಂಬರ್ 10ರೊಳಗೆ ಸಚಿವ ಸಂಪುಟ...

ಕಾಂಗ್ರೆಸ್ ಶಾಸಕಾಂಗ ಸಭೆಗೆ HDK..! ಸ್ವತಃ ಬಹಿರಂಗ ಪಡಿಸಿದ CM..! ಡಿಸೆಂಬರ್ 10ರೊಳಗೆ ಸಚಿವ ಸಂಪುಟ ವಿಸ್ತರಣೆ ಆಗಬೇಕು-B.C.ಪಾಟೀಲ್ ಗಡುವು

244
0
SHARE

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಡಿಸೆಂಬರ್ 8ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸ್ವತಃ ಕುಮಾರಸ್ವಾಮಿ ಅವರೇ ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಾನೇ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್‌ರಲ್ಲಿ ಮನವಿ ಮಾಡಿದ್ದೆ.ಈ ಸಭೆಯಲ್ಲಿ ಶಾಸಕರು ಯಾವುದೇ ಗೊಂದಲ ಇದ್ದರು ಚರ್ಚಿಸಿ ಬಗೆಹರಿಸಿಕೊಳ್ಳಬಹುದು ಮತ್ತು ಸಮಸ್ಯೆ ಬಗೆಹರಿಸಲು ಅವಕಾಶ ಸಿಕ್ಕಂತೆ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಡಿಸೆಂಬರ್ 10ರೊಳಗೆ ಸಚಿವ ಸಂಪುಟ ವಿಸ್ತರಣೆ ಆಗಬೇಕು ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಗಡುವು ನೀಡಿದ್ದಾರೆ. ಇದು ಸಂಪುಟ ವಿಸ್ತರಣೆ ಮಾಡಿ ಅಂತ ನಮ್ಮ ನಾಯಕರಿಗೆ ಒತ್ತಾಯಿಸಿದ್ದೇವೆ. ಈ ಬಗ್ಗೆ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ.ನನಗೆ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಡಿಸೆಂಬರ್ 5 ರ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆ ಮಾಡಬಹುದು.ಸಿಎಂ ಅವರನ್ನು ಕ್ಷೇತ್ರದ ಸಮಸ್ಯೆ ಬಗ್ಗೆ ಮಾತಾಡಲು ಬಂದಿದ್ದೆ. ಸಿಎಂ ಜೊತೆ ನಾನು ಸಂಪುಟ ವಿಸ್ತರಣೆ ಬಗ್ಗೆ ಮಾತಾಡಿಲ್ಲ.ಡಿಸೆಂಬರ್ 8 ರಂದು ಶಾಸಕರ ಸಭೆ ನಡೆಯುತ್ತಿದೆ.

ಇಂತಹ ಸಭೆ ನಡೆಯುತ್ತಿರುವುದು ಒಳ್ಳೆಯದೇ.ಸಿಎಂ ಆ ಸಭೆಯಲ್ಲಿ ನಮ್ಮ ಜೊತೆ ಮಾತಾಡಲು ಬಂದ್ರೆ ಒಳ್ಳೆಯದು. ಶಾಸಕರು ತಮ್ಮ ಮನಸಲ್ಲಿ ಇರೋದನ್ನು ಸಿಎಂ ಜೊತೆಯೂ ಹಂಚಿಕೊಳ್ಳಬಹುದು ಎಂದು ಕೌರವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here