Home District ಕಾಂಗ್ರೆಸ್ ಸೇರಲು ಹರತಾಳು ಹಾಲಪ್ಪ ಉತ್ಸುಕ…!ಅತಂತ್ರರಾಗಿದ್ದಾರೆ ಮಾಜಿ ಸಚಿವ ಹರತಾಳು ಹಾಲಪ್ಪ

ಕಾಂಗ್ರೆಸ್ ಸೇರಲು ಹರತಾಳು ಹಾಲಪ್ಪ ಉತ್ಸುಕ…!ಅತಂತ್ರರಾಗಿದ್ದಾರೆ ಮಾಜಿ ಸಚಿವ ಹರತಾಳು ಹಾಲಪ್ಪ

140
0
SHARE

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನಡುವೆ ನಡೆದ ಬಿಗ್ ಫೈಟ್ ನಲ್ಲಿ ಕೊನೆಗೂ ಬೇಳೂರು ಗೋಪಾಲಕೃಷ್ಣ ಯಶಸ್ವಿಯಾಗಿದ್ದಾರೆ. ಗೆಳೆಯನ ಪತ್ನಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಹಾಲಪ್ಪಗೆ ನ್ಯಾಯಾಲಯ ಕ್ಲೀನ್ ಚಿಟ್ ಕೊಟ್ಟಿದ್ರು, ಬಿಜೆಪಿ ಹೈಕಮಾಂಡ್ ಮಾತ್ರ ಹಾಲಪ್ಪಗೆ ಕ್ಲೀನ್ ಚಿಟ್ ಕೊಟ್ಟಿಲ್ಲ. ಹಾಗಾಗಿ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಟಿಕೆಟ್ ಗಾಗಿ ಕೊನೆಯವರೆಗೂ ಹಾಲಪ್ಪ ಇನ್ನಿಲ್ಲದ ಪ್ರಯತ್ನ ಮಾಡಿದ್ರು. ನಿನ್ನೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಳಿ ಬಂದು, ಟಿಕೆಟ್ ಗಾಗಿ ಲಾಭಿ ಮಾಡಿದ್ರು.

ಯಡಿಯೂರಪ್ಪ ಮನವೊಲಿಸುವ ಪ್ರಯತ್ನ ಮಾಡಿದ್ರು. ಆದರೆ ಬಿಜೆಪಿ ನಾಯಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಈ ಮೊದಲು ಹಾಲಪ್ಪ, ಸೊರಬದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದತೆ ಮಾಡಿಕೊಂಡಿದ್ರು. ಆದರೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದರಿಂದ, ಬಿಜೆಪಿ ವರಿಷ್ಠರು ಕುಮಾರ್ ಬಂಗಾರಪ್ಪಗೆ ಸೊರಬದ ಟಿಕೆಟ್ ಕೊಡೋದಕ್ಕೆ ಉತ್ಸುಕತೆ ತೋರಿಸಿದ್ದಾರೆ. ಹಾಗಾಗಿ ಹಾಲಪ್ಪ, ಪಕ್ಕದ ಸಾಗರ ಕ್ಷೇತ್ರಕ್ಕೆ ವಲಸೆ ಬರಲು ಮುಂದಾಗಿದ್ರು. ಅದಕ್ಕೆ ಬೇಳೂರು ಗೋಪಾಲಕೃಷ್ಣ ಅಡ್ಡಗಾಲು ಹಾಕಿದ್ರು. ಆರ್ ಎಸ್ ಎಸ್ ಪ್ರಮುಖರು, ಶಿವಮೊಗ್ಗದ ಜಿಲ್ಲಾ ಬಿಜೆಪಿ ಪ್ರಮುಖರು ಕೂಡ ಬೇಳೂರು ಗೋಪಾಲಕೃಷ್ಣ ಅವರನ್ನೇ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಹಾಲಪ್ಪ ನಿರಾಶರಾಗಿದ್ದು, ಬಿಜೆಪಿ ತೊರೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ ಸೇರಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಾಲಪ್ಪ ಕಾಂಗ್ರೆಸ್ ಸೇರಿದ್ರೂ, ಅವರಿಗೆ ಸಾಗರದ ಟಿಕೆಟ್ ಸಿಗೋದಿಲ್ಲ. ಸಾಗರದಲ್ಲಿ , ಸಚಿವ ಕಾಗೋಡು ತಿಮ್ಮಪ್ಪ ಅವರೇ ಕಾಂಗ್ರೆಸ್ ಅಭ್ಯರ್ಥಿ. ಹಾಗಾಗಿ ಸೊರಬದಿಂದಲೂ ಹಾಲಪ್ಪಗೆ ಕಾಂಗ್ರೆಸ್ ಟಿಕೆಟ್ ಸಿಗೋದಿಲ್ಲ.. ಹಾಗಾಗಿ ಹಾಲಪ್ಪ ಒಂದು ರೀತಿಯಲ್ಲಿ ಅತಂತ್ರರಾಗಿದ್ದಾರೆ.

 

LEAVE A REPLY

Please enter your comment!
Please enter your name here