Home District ಕಾಂಗ್ರೆಸ್ ಸೇರ‍್ತಾರಾ ಮುತ್ತಪ್ಪ ರೈ..? ಈ ಬಗ್ಗೆ ಸ್ವತಃ ಮುತ್ತಪ್ಪ ರೈ ಹೇಳಿದ್ದೇನು ಗೊತ್ತಾ..?!

ಕಾಂಗ್ರೆಸ್ ಸೇರ‍್ತಾರಾ ಮುತ್ತಪ್ಪ ರೈ..? ಈ ಬಗ್ಗೆ ಸ್ವತಃ ಮುತ್ತಪ್ಪ ರೈ ಹೇಳಿದ್ದೇನು ಗೊತ್ತಾ..?!

762
0
SHARE

ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋ ವದಂತಿ ಹಬ್ಬಿತ್ತು. ಆದ್ರೆ ಸ್ವತಃ ಮುತ್ತಪ್ಪ ರೈ ಅವರೇ ಪ್ರತಿಕ್ರಿಯೆ ನೀಡಿದ್ದು, ನಾನು ಕಾಂಗ್ರೆಸ್ ಪಕ್ಷ ಸೇರಲ್ಲ, ರಾಜಕೀಯರಂಗ ಪ್ರವೇಶ ಮಾಡಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಪಕ್ಕದಲ್ಲೇ ಇದ್ದ ಕಾಂಗ್ರೆಸ್ ಕಚೇರಿಗೆ ಹೋಗಿದ್ದೆ, ಅದನ್ನೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಎಂದು ಕಲ್ಪಿಸಲಾಗಿದೆ ಅಷ್ಟೇ. ರಾಜಕೀಯ ಕ್ಷೇತ್ರದಲ್ಲಿ ಜನರಿಗೆ ನ್ಯಾಯ ಕಲ್ಪಿಸಲು ಸಾಧ್ಯವಿಲ್ಲ ಹಾಗಾಗಿ ರಾಜಕೀಯ ಪ್ರವೇಶ ಮಾಡಲ್ಲ ಎಂದಿದ್ದಾರೆ.

ಮೋದಿ ನನ್ನ ನೆಚ್ಚಿನ ಪ್ರಧಾನಿ ಅವರೇ ಮತ್ತೆ ಪ್ರಧಾನಿ ಆಗಬೇಕು ಎಂಬುದು ನನ್ನ ಅಭಿಪ್ರಾಯ. ಜನ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು ಎಂದ್ರು. ಇದೇ ವೇಳೆ ಮೇಕೆ ದಾಟು ಯೋಜನೆಗೆ ತಮಿಳುನಾಡು ಖ್ಯಾತೆ ತೆಗೆಯೋ ವಿಚಾರದ ಬಗ್ಗೆ ಧ್ವನಿ ಎತ್ತಿದ ಮುತ್ತಪ್ಪ ರೈ, ತಮಿಳುನಾಡು ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸಿದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here