Home District ಕಾಂಗ್ರೆಸ್ ಹಿಂದುತ್ವದ ವಿರುದ್ಧ; ರಾಹುಲ್ ನಕಲಿ ಹಿಂದೂ; ನಮಗೆ ಓಟ್ ಹಾಕಿ.!? 2019ರ ಮಹಾಯುದ್ಧಕ್ಕೆ ಬದಲಾಗಿ...

ಕಾಂಗ್ರೆಸ್ ಹಿಂದುತ್ವದ ವಿರುದ್ಧ; ರಾಹುಲ್ ನಕಲಿ ಹಿಂದೂ; ನಮಗೆ ಓಟ್ ಹಾಕಿ.!? 2019ರ ಮಹಾಯುದ್ಧಕ್ಕೆ ಬದಲಾಗಿ ಹೋಯ್ತು ಬಿಜೆಪಿಯ ಅಜೆಂಡಾ.!? “ಹಿಂದೂ ಕಾ ಸಾಥ್ ಹಿಂದೂ ಕಾ ವಿಕಾಸ್”.!?

383
0
SHARE

ಇನ್ನು 2018 ಮುಗಿದು 2019ಕ್ಕೆ ಕಾಲಿಡಲು ಜಗವೆಲ್ಲಾ ಸಿದ್ಧವಾಗಿದೆ, ಈ 2019ರ ವರ್ಷ ಭಾರತದ ಪಾಲಿಗೆ ಅತಿ ಮಹತ್ವದ ವರ್ಷ ಏಕೆಂದ್ರೆ ಇದೇ 2019ಕ್ಕೆ ರಾಷ್ಟ್ರಕ್ಕೆ ಮಹಾ ಚುನಾವಣೆ ಎದುರಾಗಲಿದೆ, ಮೋದಿ ಸರ್ಕಾರದ 5 ವರ್ಷ ಅವಧಿ ಮುಗಿದು, ಮುಂದಿನ ಐದು ವರ್ಷಕ್ಕೆ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ, ಕೇಸರಿ ಪಡೆ ಮುಂದೆಯು ನಮ್ಮದೆ ಸರ್ಕಾರ ಅಂತಾ ಬೀಗುತ್ತಿದೆ, ಕಾಂಗ್ರೆಸ್ ನಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತಾ ಗಟ್ಟಿದ್ವನಿಯಲ್ಲಿ ಹೇಳುತ್ತಿದೆ, ಈ ಇಬ್ಬರು ಮಾತ್ರವಲ್ಲ ಅಖಾಡದಲ್ಲಿ ಸಣ್ಣ ಪುಟ್ಟ ಪಕ್ಷಗಳು ಸೇರಿಕೊಂಡು ತಮ್ಮಲ್ಲೇ ಮೈತ್ರಿಕೂಟವನ್ನ ರಚನೆ ಮಾಡಿ ನಾವು ಅಖಾಡದಲ್ಲಿ ಇದ್ದೇವೆ ಅಂತಾ ಸಾರಿ ಸಾರಿ ಹೇಳುತ್ತಿವೆ…

ಒಟ್ಟಿನಲ್ಲಿ 2019ರ ಲೋಕ ಸಭಾ ರಣರಂಗ ಜಿದ್ದಾ ಜಿದ್ದಿನಿಂದ ಕೂಡಿರಲಿದೆ. ಇಲ್ಲಿ ಗೆಲ್ಲೋದು ಯಾರು ಸೋಲೋದು ಯಾರು ಅನ್ನೋದಕ್ಕೆ ಕಾಲ ಉತ್ತರಿಸಲಿದೆ, ಆದ್ರೆ ವಿಚಾರ ಅದಲ್ಲ, ಕೇಸರಿ ಪಕ್ಷ ಒಂದು ಧರ್ಮವನ್ನ ದ್ರುವಿಕರಣ ಮಾಡಿ, ಇನ್ನೊಂದು ಕೋಮಿನೊಂದಿಗೆ ಎತ್ತಿಕಟ್ಟಿ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ ಅನ್ನೋದು, ಅದೇ ವಿಚಾರ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಅಷ್ಟಕ್ಕು ಏನಿದು ಕೋಮು ಆಧಾರಿತ ಚುನಾವಣೆ, ನಿಜಕ್ಕೂ ಬಿಜೆಪಿ ಹಿಂದು ಧರ್ಮವನ್ನ ಬೇರೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ಯಾ…ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಏರಿದಾಗ ಆ ಒಂದು  ಮಾತು ನಿಮಗೆ ನೆನಪಿದೆಯಾ…

ನೆನಪಿಲ್ಲ ಅಂದ್ರೆ ಹೇಳಿ ಬಿಡ್ತಿವಿ ಕೇಳಿ ಆ ಮಾತು ಬೇರೆ ಯಾವುದು ಅಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಅಂದ್ರೆ ಎಲ್ಲರ ಜೊತೆಯಲ್ಲಿ ಎಲ್ಲರ ಅಭಿವೃದ್ದಿ ಅಂತಾ, ಆದ್ರೆ ಈ ಈ ಎಲೆಕ್ಷನ್ ನಲ್ಲಿ ಆಗ್ತಾ ಇರೋದೆ ಬೇರೆ, ಸಾಬ್ ಕಾ ಸಾಥ್ ಹೋಗಿ, ಆ ಜಾಗಕ್ಕೆ ಹಿಂದೂ ಕಾ ಸಾಥ್ ಹಿಂದೂ ಕಾ ವಿಕಾಸ್ ಅನ್ನೋ ಅನ್ವರ್ಥ ಕೇಳಿ ಬರುತ್ತಿದೆ. ಆಂದು ಎಲ್ಲರಿಗೂ ಅಪ್ಯಾಯಮಾನವಾಗಿ ಕಂಡು ಬರುತ್ತಿದ್ದ ಮೋದಿ ಇಂದು ಹಿಂದುಯೇತರ ಪಾಲಿಗೆ ವಿಲನ್ ರೀತಿ ಕಂಡು ಬರುತ್ತಿದ್ದಾರೆ, ಅಂದು ಮೋದಿಯನ್ನ ಕಂಠಪಟ್ಟೆ ದ್ವೇಷಿಸುತ್ತಿದ್ದ ಮೋದಿ ವಿರೋಧಿಗಳು ಇಂದು ಮೋದಿಯನ್ನ ಕಂಡ್ರೆ ಕೆಂಡ ತುಳಿದ ಹಾಗೆ ಆಡುತ್ತಿದ್ದಾರೆ, ಅದಕ್ಕೆ ಕಾರಣ ಮೋದಿ ಅಂದ್ರೆನೇ ತಪ್ಪಾಗಲಿಕ್ಕಿಲ್ಲ,ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ ಶ್ರೀಮಾನ್ ನಾಮ್ ದಾರ್ ಹೇಳಿದ್ರು ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಅಂತ…

ನಾನು ಅದೇ ಕಾಂಗ್ರೆಸ್ ಅಧ್ಯಕ್ಷರಿಗೆ ಕೇಳುತ್ತಿದ್ದೇನೆ. ನಿಮ್ಮ ಕಾಂಗ್ರೆಸ್ ಪಾರ್ಟಿ ಮುಸ್ಲಿಂರ ಪಾರ್ಟಿ ಇದು ನಿಮಗೆ ಸರಿ, ನಿಮ್ಮ ಇಷ್ಟ. ಆದ್ರೆ ಒಂದು ವಿಷ್ಯ ಹೇಳಿ ಈ ಪಾರ್ಟಿ ಮುಸಲ್ಮಾನ ಪುರುಷರ ಪಕ್ಷವೇ, ಇಲ್ಲ ಮುಸ್ಲಿಂ ಮಹಿಳೆಯರ ಪಕ್ಷವೇ.ಈ ಬಾರಿಯ ಎಲೆಕ್ಷನ್ ಗೆ ಮುಖ್ಯ ವಸ್ತುವಾಗುತ್ತಿರೋದು ಧರ್ಮದ ಧ್ರುವಿಕರಣ ಅಂದ್ರೆ ತಪ್ಪಾಗಲಿಕ್ಕಿಲ್ಲ, ಆ ನಿಟ್ಟಿನಲ್ಲೇ ಸರ್ವ ಪಕ್ಷಗಳು ತಯಾರಿ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ತಮ್ಮದು ಮುಸ್ಲಿಂ ಪಕ್ಷ ಅಂತಾ ಹೇಳಿಕೆಯನ್ನ ನೀಡಿದ್ದಾರೆಂದು ವೈರಲ್ ಆಗಿದೆ. ಮತ್ತೊಂದು ಕಡೆ ಮೋದಿ ಹಿಂದೂ ಹೃದಯ ಸಾಮ್ರಾಟ ಅಂತಾ ಬಿಂಬಿತವಾಗುತ್ತಿದ್ದಾರೆ.

ಅಲ್ಲದೆ ಬಿಜೆಪಿಯ ಕಾರ್ಯಕರ್ತರು ಮೋದಿ ಸೋತರೇ ಹಿಂದೂ ಸೋತಂತೆ ಅನ್ನೋ ಸ್ಲೋಗನ್ ಹರಿಯ ಬಿಟ್ಟಿದ್ದಾರೆ, ಇನ್ನುಳಿದಂತೆ ಪ್ರಾದೇಶಿಕ ಪಕ್ಷಗಳು ದಲಿತರ ಪಕ್ಷ ಅಂತಾ ಹೇಳಿಕೊಂಡು ಎಲೆಕ್ಷನ್ ಎದುರಿಸಲು ಸಿದ್ಧವಾಗಿದೆ. ಆ ಕಾರಣಕ್ಕೆ ನಾವು ಹೇಳಿದ್ದು ಈ ಬಾರಿ ಎಲೆಕ್ಷನ್ ಧರ್ಮಾಧಾರಿತವಾಗುತ್ತೆ ಅಂತಾ.ಸಧ್ಯ ಬಿಜೆಪಿಯ ಅಂದಿನ ಅಜೆಂಡಾ ಮತ್ತೆ ಮುನ್ನೆಲೆಗೆ ಬಂದಿದೆ, ಮೊದಲೆಲ್ಲಾ ಕೇಸರಿ ಪಡೆ ಬಾಬ್ರಿ ಮಸೀದಿ, ರಾಮಮಂದಿರ ವಿಚಾರವಾಗಿ ಚುನಾವಣೆ ಎದುರಿಸುತ್ತಿತ್ತು, ಫಸ್ಟ್ ಟೈಮ್ ತಮ್ಮ ನಿಲುವನ್ನ ಬದಲಿಸಿ ಯುಪಿಎ ಸರ್ಕಾರದ ದುರಾಡಳಿತ, ಬೆಲೆ ಏರಿಕೆ, ವಿಕಾಸದ ಮಂತ್ರ ಜಪಿಸಿತ್ತು,

ಆ ಕಾರಣಕ್ಕೋ ಏನೋ ದೇಶವಾಸಿಗಳಿಗೆ ಮೋದಿ ಮತ್ತು ಬಿಜೆಪಿ ಹೊಸದಾಗಿ ಕಂಡಿತ್ತು ಆದ್ರೀಗ ಸಂಪೂರ್ಣ ಬದಲಾಗಿದೆ. ನಿಜವಾಗಿ ತನ್ನ ಅಜೆಂಡಾವನ್ನ ಬದಲಾಯಿಸುತ್ತಾ, ಹಿಂದುತ್ವವನ್ನ ಹೇರುತ್ತಾ ಬರುತ್ತಿದೆ ಅನ್ನೋದು ಪ್ರಜ್ಞಾವಂತರ ಅಭಿಪ್ರಾಯ.ಒಟ್ಟಾರೆಯಾಗಿ ಮೋದಿ ಸರ್ಕಾರ ಅಭಿವೃದ್ದಿ ವಿಚಾರ ನೋಟ್ ಬ್ಯಾನ್ ವಿಚಾರದ ಕ್ರೆಡಿಟ್ ಬಿಟ್ಟಿದ್ದಾರೆ….  ಕಾಂಗ್ರೆಸ್ ಪಕ್ಷ ಹಿಂದುಗಳ ವಿರುದ್ದ ನಮಗೆ ಓಟ್ ಹಾಕಿ, ರಾಹುಲ್ ಗಾಂಧಿ ನಕಲಿ ಹಿಂದೂ ನಮಗೆ ಮತಹಾಕಿ, ಎಲೆಕ್ಷನ್ ನಿಮ್ಮಿತ್ತ ರಾಹುಲ್ ಮುಸ್ಲಿಂರನ್ನ ಭೇಟಿಯಾಗುತ್ತಿದ್ದಾರೆ ನಮಗೆ ಓಟ್ ಹಾಕಿ…

ಹಿಂದೂಗಳು ಅಪಾಯದಲ್ಲಿ ಇದ್ದಾರೆ ನಮಗೆ ಓಟ್ ಹಾಕಿ, ಮುಸ್ಲಿಂಮರು ಶರಿಯಾ ನ್ಯಾಯಲಯ ಸ್ಥಾಪಿಸುತ್ತಿದ್ದಾರೆ ನಮಗೆ ಓಟ್ ಹಾಕಿ, ಕಾಂಗ್ರೆಸ್ ನವರು ಕೋಮು ಗಲಾಟೆ ಮಾಡುತ್ತಾರೆ ನಮಗೆ ಮತ ಹಾಕಿ ಅಂತಾ ಜನರ ಮುಂದೆ ಮತ ಕೇಳುತ್ತಾ ನಿಂತಿದ್ದಾರೆ. ನಿಜಕ್ಕೂ ಬಿಜೆಪಿ ಅಭಿವೃದ್ದಿ ಮಾಡಿದ್ದೇ ಆಗಿದ್ದಲ್ಲಿ ಅದನ್ನ ಜನರ ಮುಂದೆ ಇಟ್ಟು ಅಭಿವೃದ್ದಿ ವಿಚಾರವಾಗಿ ನಾವೇ ಬೆಸ್ಟ್ ಅಂತಾ ಪ್ರೂವ್ ಮಾಡಿಕೊಂಡು ಮತ ಕೇಳಬಹುದು. ಆದ್ರೆ ತನ್ನ ಹಿಂದಿನ ಚಾಳಿಯನ್ನ ಮತ್ತೆ ಮುಂದುವರೆಸಿದೆ, ಬಿಜೆಪಿಯ ಈ ಆಟ ಮುಂದಿನ ಎಲೆಕ್ಷನ್ ನಲ್ಲಿ ಯಾವ ರೀತಿ ಫಲ ಕೊಡುತ್ತೋ ಕಾದು ನೋಡಬೇಕು ಅಷ್ಟೆ….

LEAVE A REPLY

Please enter your comment!
Please enter your name here