Home Cinema ಕಾಣೆಯಾದ ಹುಡುಗನಿಗಾಗಿ ಮಾಡಿದ್ದೇನು ಸುದೀಪ..? ಈ ’ಮಿಸ್ಸಿಂಗ್ ಬಾಯ್’ ನಿಮಗೆ ದರ್ಶನ ಕೊಡೊದಲ್ಲದೇ ಹಲವು ಸರ್‌ಪ್ರೈಸ್‌…!!!

ಕಾಣೆಯಾದ ಹುಡುಗನಿಗಾಗಿ ಮಾಡಿದ್ದೇನು ಸುದೀಪ..? ಈ ’ಮಿಸ್ಸಿಂಗ್ ಬಾಯ್’ ನಿಮಗೆ ದರ್ಶನ ಕೊಡೊದಲ್ಲದೇ ಹಲವು ಸರ್‌ಪ್ರೈಸ್‌…!!!

2334
0
SHARE

’ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಯಾಕೋ ಕಳೆದುಹೋಗಿದಾರೆ. ಕೆಲವು ದಿನಗಳಿಂದ ಕಾಣೆಯಾಗಿರುವ ಈ ’ಮಿಸ್ಸಿಂಗ್ ಬಾಯ್’ನ ನೀವು ನೋಡಬೇಕಾದ್ರೆ ಮಾರ್ಚ್ ೨೨ರವರೆಗೂ ಕಾಯಲೇಬೇಕು.

ಈ ’ಮಿಸ್ಸಿಂಗ್ ಬಾಯ್’ ನಿಮಗೆ ದರ್ಶನ ಕೊಡೊದಲ್ಲದೇ ಹಲವು ಸರ್‌ಪ್ರೈಸ್‌ಗಳನ್ನ ತರಲಿದ್ದಾನೆ. ಫಸ್ಟ್‌ರ‍್ಯಾಂಕ್ ರಾಜುವಿನ ಈ ವಿಚಿತ್ರವಾದ ಹೊಸ ಅವತಾರ ನೋಡೊಕೆ ಗಾಂಧಿನಗರ ಕೂಡ ಸಿಕ್ಕಾಪಟ್ಟೆ ವೈಟ್ ಮಾಡ್ತಿದೆ. ಈಗ ರಿಲೀಸ್ ಆಗಿರುವ ’ಮಿಸ್ಸಿಂಗ್ ಬಾಯ್’ ಸಿನಿಮಾದ ಟ್ರೈಲರ್ ಪ್ರೇಕ್ಷಕನ ಮನಸ್ಸಿನಲ್ಲಿ ಸಾಕಷ್ಟು ಕ್ಯುರ‍್ಯಸಿಟಿ ಮೂಡಿಸಿ ತನ್ನೆಡೆಗೆ ಸೆಳೆಯುತ್ತಿದೆ. ’ಈಟ್ ಹ್ಯಾಸ್ ಸಮ್‌ಥಿಂಗ್ ಟು ಸೇ’.’ಮಿಸ್ಸಿಂಗ್ ಬಾಯ್’ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಇಬ್ಬರು ಘಟನುಘಟಿಗಳ ಸರ್ಪೋಟ್ ಸಿಕ್ಕಿರೋದು ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ.

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಟ್ರೈಲರ್‌ಗೆ ತಮ್ಮ ವಾಯ್ಸ್ ನೀಡಿ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಮಿಸ್ಸಿಂಗ್ ಬಾಯ್ ಟ್ರೈಲರ್ ಲಾಂಚ್ ಮಾಡಿ ನನ್ನ ಬೆಂಬಲ ಯಾವಾಗಲೂ ನಿಮ್ಮ ಜೊತೆ ಇರುತ್ತೆ ಅಂತ ಮಿಸ್ಸಿಂಗ್ ಬಾಯ್ ಚಿತ್ರತಂಡಕ್ಕೆ ಥಮ್ಸ್‌ಅಪ್ ಮಾಡಿದಾರೆ. ’ಇಂತಹ ಸ್ಟೋರಿಗಳ ಅವಶ್ಯಕತೆ ನಮ್ಮ ಕನ್ನಡಚಿತ್ರರಂಗಕ್ಕಿದೆ. ಟ್ರೈಲರ್ ನೋಡಿದ್ರೆ ಇಂಟ್ರೆಸ್ಟ್ ಹುಟ್ಟಿಕೊಳ್ಳುತ್ತೆ. ಈ ರೀತಿಯ ಸಸ್ಪೆನ್ಸ್ ಕಥೇಗಳನ್ನ ನಾನು ಇಷ್ಟಪಡ್ತೀನಿ’ ಎಂದು ಚಿತ್ರತಂಡದ ಪ್ರಯತ್ನವನ್ನ ಹಾಡಿಹೊಗಳಿದ್ರು ಈ ಅಭಿನಯ ಚಕ್ರವರ್ತಿ.

ಗುರುನಂದನ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಜೈ ಜಗದೀಶ್ ಕೂಡ ಸಿನಿಮಾದ ಸ್ಟೋರಿಲೈನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ರು. ’ಸ್ಟೋರಿ ಹೇಳಿದ್ರೆ ಮಜಾ ಹೊರಟುಹೋಗುತ್ತೆ. ಮಿಸ್ಸಿಂಗ್ ಬಾಯ್ ಎಲ್ಲರ ಕಣ್ಣಲ್ಲು ನೀರು ತರಿಸುತ್ತೆ ಎನ್ನುವ ವಿಶ್ವಾಸವಿದೆ. ಯಾಕಂದ್ರೆ ಇದೊಂದು ಹೃದಯಸ್ಪರ್ಶಿ ಕಥೆ. ಎಲ್ಲರ ಹಾರ್ಟ್‌ಗಳಿಗೂ ಟಚ್ ಆಗುವ ಸಬ್ಜೆಕ್ಟ್. ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನವಾದ ಕಥೆಗಳನ್ನ ಪ್ರೊತ್ಸಾಹಿಸುವ ಪ್ರೇಕ್ಷಕರಿಗೆ ಮಿಸ್ಸಿಂಗ್ ಬಾಯ್ ಖಂಡಿತ ಇಷ್ಟವಾಗುತ್ತೆ’ ಎನ್ನುವ ನಂಬಿಕೆ ನಟ ಜೈ ಜಗದೀಶ್‌ರದ್ದು.

ಇನ್ನು ಮಿಸ್ಸಿಂಗ್ ಬಾಯ್ ಚಿತ್ರದ ನಾಯಕಿ ಅರ್ಚನಾ ಜಯಕೃಷ್ಣನ್ ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿದ ಫುಲ್ ಜೋಷ್‌ನಲ್ಲಿದ್ರು. ಈ ಚಿತ್ರದಲ್ಲಿ ಒಂದು ತಿರುವು ನೀಡುವ ಅರ್ಚನಾ ಪತ್ರಿಕೋದ್ಯಮಿಯ ಕ್ಯಾರೆಕ್ಟರ್‌ನಲ್ಲಿ ಮಿಂಚಲಿದ್ದಾರೆ. ಮಲೆಯಳಂ ಚಿತ್ರರಂಗದಲ್ಲಿ ಈಗಾಗಲೇ ಹೆಸರುಗಳಿಸಿರುವ ಅರ್ಚನಾಗೆ ಕನ್ನಡದಲ್ಲೂ ಗುರುತಿಸಿಕೊಳ್ಳುವ ಆಸೆಯಂತೆ. ಅವಕಾಶ ಸಿಕ್ಕರೆ ಕನ್ನಡದಲ್ಲೂ ಮುಂದುವರೆಯುವ ಪ್ಲಾನ್ ಅರ್ಚನಾರದ್ದು. ತಮ್ಮ ಪಾತ್ರಕೋಸ್ಕರ ಸಿಕ್ಕಾಪಟ್ಟೆ ಹೊಂವರ್ಕ್ ಮಾಡಿದ್ದಾರಂತೆ.

ಟ್ರೈಲರ್‌ನ ಪ್ರತಿ ಆಂಗಲ್‌ನಲ್ಲೂ ಕುತೂಹಲ ಕಾಪಾಡಿಕೊಳ್ಳುವ ಮೂಲಕ ನಿರ್ದೆಶಕ ರಘುರಾಮ್ ಪ್ರೇಕ್ಷಕನಲ್ಲಿ ನಿರೀಕ್ಷೆ ಮೂಡಿಸುತ್ತಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಿಸ್ಸಿಂಗ್ ಬಾಯ್ ಸಿನಿಮಾದ ಮೈನ್ ಅಟ್ರಾಕ್ಷನ್ ಎನ್ನಬಹುದು. ಒಂದು ಸದಭಿರುಚಿಯ ಸ್ಟೋರಿಗೆ ಬಂಡವಾಳ ಹೂಡಿದ ತೃಪ್ತಿ ಕೊಲ್ಲಾ ಪ್ರವೀಣ್ ಹಾಗೂ ಮಹೇಶ್‌ಗಿದೆ. ಈಗಾಗಲೇ ಮಿಸ್ಸಿಂಗ್ ಬಾಯ್ ಯೂಟ್ಯೂಬ್‌ನಲ್ಲಿ ಟಾಪ್ ಟ್ರೇಡಿಂಗ್ ಆರನೇ ಸ್ಥಾನದಲ್ಲಿದೆ.

ತಮ್ಮ ಪ್ರೀತಿಯ ಮಗನನ್ನ ಕಳೆದುಕೊಂಡ ತಂದೆತಾಯಿಯ ಹೃದಯ ಯಾವ ರೀತಿ ನೋವು ಅನುಭವಿಸುತ್ತೆ ಎನ್ನುವ ಸೆಂಟಿಮೆಂಟಲ್ ಕಥಾಹಂದರ ಟ್ರೈಲರ್‌ನಲ್ಲೇ ಕಾಣಿಸುತ್ತಿದೆ. ತಾಯಿ ಮತ್ತು ತಾಯ್ನಾಡಿಗೆ ಎನ್ನುವ ಕ್ಯಾಚಿ ಟ್ಯಾಗ್‌ಲೈನ್ ಹೊಂದಿರೋ ಮಿಸ್ಸಿಂಗ್ ಬಾಯ್ ಮಾರ್ಚ್ ೨೨ ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡ್ತಿದಾನೆ. ಸ್ಯಾಂಡಲ್‌ವುಡ್‌ನಲ್ಲಿ ಕ್ರಿಯೆಟಿವ್ ಕಥೆಗಳನ್ನ ಕೈ ಬಿಡದ ಪ್ರೇಕ್ಷಕ ಮಹಾಪ್ರಭು, ಹಲವು ಕೌತುಕಗಳ ಜೊತೆ ಎಂಟ್ರಿಕೊಡ್ತಿರೋ ಮಿಸ್ಸಿಂಗ್ ಬಾಯ್‌ಗೆ ಜೈ ಅಂತನಾ ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here