ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹತ್ವದ ವಿಚಾರದ ಬಗ್ಗೆ ಚರ್ಚೆಯನ್ನ ನಡೆಸುತ್ತೇನೆ ಅಂತಾ ಅಭಿಮಾನಿಗಳಲ್ಲಿ ಕುತೂಹಲವನ್ನ ಮೂಡಿಸಿದ್ದರು. ಮಧ್ಯಾಹ್ನ 1.30ಕ್ಕೆ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಕೊಹ್ಲಿ ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಬಹುದು ಅಂತಾ ಅಭಿಮಾನಿಗಳು ನಿರೀಕ್ಷೆಯನ್ನ ಇಟ್ಟಿದ್ದರು ಆದ್ರೆ ಕೊಹ್ಲಿ ಓಳ್ ಬಿಟ್ಟರು…
ವಿರಾಟ್ ಕೊಹ್ಲಿ ಇಂಗ್ಲೆಂಡ್ನಲ್ಲಿ ಕೌಂಟಿ ಆಡುವ ಕುರಿತು, ಜತೆಗೆ ಐರ್ಲೆಂಡ್ ಟಿ20 ಸರಣಿಯಲ್ಲಿ ಇವರ ಹೆಸರು ಕಾಣಿಸಿಕೊಂಡಿರುವ ಗೊಂದಲಕ್ಕೂ ತೆರೆ ಎಳೆಯುವ ಬಗ್ಗೆ ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಹೀನಾಯ ಪ್ರದರ್ಶನ ನೀಡಿ, ಈಗಾಗಲೇ ಪ್ಲೇ-ಆಫ್ನಿಂದ ಹೊರಬಿದ್ದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಹ್ಲಿ ಮಾತನಾಡಬಹುದು ಅಂತಾ ಭಾವಿಸಲಾಗಿತ್ತು…
ಆದ್ರೆ ಕೊಹ್ಲಿ ಇದ್ಯಾವುದೇ ವಿಚಾರವನ್ನ ಮಾತನಾಡದೇ ಕೇವಲ ಫಿಟ್ನೆಸ್ ಹಾಗೂ ಮಕ್ಕಳು ಯಾವ ರೀತಿಯಲ್ಲಿ ಗಲ್ಲಿಯಲ್ಲಿ ಆಡ್ತಾರೆ ಅವರು ಯಾವೆಲ್ಲ ರೀತಿಯ ಭಾವನೆಗಳನ್ನ ಹೊಂದಿರ್ತಾರೆ ಅಂತಾ ಮಾತನಾಡಿದ್ರು. ಅಲ್ಲದೆ ಪ್ರತಿ ತಿಂಗಳ 18 ನ್ನ ಪ್ಲೇ ಡೇ ಅಂತಾ ಆಚರಿಸುತ್ತೇವೆ ನನ್ನ ಜೊತೆ ನೀವು ಆಡಬಹುದು ಅಂತಾ ಹೇಳಿದ್ರು…
ಈ ಹಿಂದೆಯೂ ಒಮ್ಮೆ ಕೊಹ್ಲಿ ಇದೇ ರೀತಿಯಲ್ಲಿ ಭಾರೀ ನಿರೀಕ್ಷೆಯನ್ನ ಹುಟ್ಟಿಸಿ ಅಭಿಮಾನಿಗಳಿಗೆ ಮಹತ್ವದ ವಿಚಾರವನ್ನ ಹೇಳದೆ ನಿರಾಸೆಯನ್ನ ಮೂಡಿಸಿದ್ದರು…