Home Crime ಕಾಮಕ್ಕೆ ಕಣ್ಣಿಲ್ಲ… ವಯಸ್ಸಿಗೂ ಇಲ್ಲಾ ಅಂತಾ ಪ್ರೂ ಮಾಡಿದ ಅಜ್ಜಿ..! ಕಣ್ಣಾರೆ ಕಂಡಿದ್ದ ಪತಿರಾಯ ಪತ್ನಿಯ...

ಕಾಮಕ್ಕೆ ಕಣ್ಣಿಲ್ಲ… ವಯಸ್ಸಿಗೂ ಇಲ್ಲಾ ಅಂತಾ ಪ್ರೂ ಮಾಡಿದ ಅಜ್ಜಿ..! ಕಣ್ಣಾರೆ ಕಂಡಿದ್ದ ಪತಿರಾಯ ಪತ್ನಿಯ ಚಕ್ಕಂದ..! ಗಂಡನ ಜೊತೆ 40 ವರ್ಷ ಸಂಸಾರ.. ಇವನ ಜೊತೆ 20 ವರ್ಷ ಸಂಬಂಧ..!

6663
0
SHARE

ಊರು ಹೋಗು ಕಾಡು ಬಾ ಅನ್ನೋ ಬದುಕಿನ ಸಂಧ್ಯಾ ಕಾಲದಲ್ಲಿರೋವ್ರು. ಮಕ್ಕಳು ಮೊಮ್ಮಕ್ಕಳಿರೋ ಈ ದಂಪತಿಯ ಹೆಸರು ಪಾಪಣ್ಣ ಹಾಗೂ ವೆಂಕಟಮ್ಮ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿ ಅನ್ನೋ ಊರಿನ ನಿವಾಸಿಗಳು. ಮಕ್ಕಳಿಗೆಲ್ಲ ಮದುವೆ ಮಾಡಿ, ಮೊಮ್ಮಕ್ಕಳೊಂದಿಗೆ ಹಾಯಾಗಿ ಕಾಲ ಕಳೀಬೇಕಿದ್ದ ಪಾಪಣ್ಣ ಹಾಗೂ ವೆಂಕಟಮ್ಮ, ಮೈಯಲ್ಲಿ ಶಕ್ತಿ ಇರೋವರೆಗೂ ದುಡಿದೇ ಬದುಕೋಣ ಅಂತ ಇರೋ ಒಂದಷ್ಟು ಜಮೀನಿನಲ್ಲಿ ಒಕ್ಕಲುತನ ಮಾಡ್ಕೊಂಡಿದ್ದವರು.  ಹೀಗೆ ಬದುಕಿನ ಕೊನೆ ಘಟ್ಟದಲ್ಲಿರೋ ಕಾಲ ಕಳಿತಿದ್ದ ಈ ಗಂಡ ಹೆಂಡ್ತಿ ಕಥೆಯಲ್ಲಿ ಅದೊಂದು ಘಟನೆ ನಡದೇ ಹೋಗಿತ್ತು.

ಅದೇನೆಂದ್ರೆ, ಬಿದರಗುಪ್ಪೆಯಲ್ಲಿರೋ ತನ್ನ ಮಗಳ ಮನೆಗೆ ಹೋಗಿ ಬರ್ತೇನೆ ಅಂತೇಳಿ ಹೋಗಿದ್ದ ಈ ವೆಂಕಟಮ್ಮ ನಿಗೂಢವಾಗಿ ನಾಪತ್ತೆಯಾಗಿಬಿಟ್ಟಿದ್ದಳು.ಕಳೆದ ವರ್ಷದ ಡಿಸೆಂಬರ್ 15 ನೇ ತಾರೀಕು  ಮಧ್ಯಾಹ್ನದ ಹೊತ್ತಿಗೆ ನಾಗನಾಯಕನಹಳ್ಳಿಯಿಂದ ಮಗಳ ಮನೆಗೆ ಹೋಗಿದ್ದ ವೆಂಕಟಮ್ಮ ನಾಪತ್ತೆಯಾಗಿಬಿಟ್ಟಿದ್ಳು. ಅತ್ತ ಮಗಳ ಮನೆಗೂ ಹೋಗಿರಲಿಲ್ಲ, ಇತ್ತ ಊರಿಗೂ ಹೊಗಿರಲಿಲ್ಲ. ಸಂಬಂಧರ ಮನೆ ಕಡೆಯೂ ತಲೆ ಹಾಕಿರಲಿಲ್ಲ. ಹೀಗಾಗಿ ಎಲ್ಲಾ ಕಡೆ ವಿಚಾರಿಸಿದ ಗಂಡ ಪಾಪಣ್ಣ ಹಾಗೂ ಮಕ್ಕಳು ಕಡೆಗೆ ಪೊಲೀಸ್ರ ಮೊರೆ ಹೋಗಿದ್ದರು. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು.

ಒಂದೂ ಎರಡು ಮೂರು ಹೀಗೆ ಎಂಟು ದಿನಗಳೇ ಕಳೆದೋಗಿದ್ರೂ ನಾಪತ್ತೆಯಾಗಿದ್ದ ವೆಂಕಟಮ್ಮ ಪತ್ತೆನೇ ಆಗಿರಲಿಲ್ಲ. ಆಯಮ್ಮ ಎಲ್ಲೋದ್ಳೂ , ಏನಾದ್ಳೂ ಅಂತ ಯಾರಿಗೂ ಗೊತ್ತೇ ಆಗಿರಲಿಲ್ಲ. ಎಲ್ಲವೂ ನಿಗೂಢ. ಪರಿಸ್ಥಿತಿ ಹೀಗಿರಬೇಕಾದ್ರೆ, ಅದೇ ಡಿಸೆಂಬರ್ 27 ನೇ ತಾರೀಕು ನಡೀಬಾರದ ಒಂದು ಘಟನೆ ನಡೆದೋಗಿತ್ತು . ಅವತ್ತು ಮಟಮಟ ಮಧ್ಯಾಹ್ನದ ಸಮಯ. ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿಯ ಅಪಾರ್ಟ್ಮೆಂಟ್ ಒಂದರ ಹತ್ತಿರದಲ್ಲಿ ಜನವೋ ಜನ. ಪೊಲೀಸ್ರು ಕೂಡ ಅಲ್ಲಿಗೆ ದೌಡಾಯಿಸಿ ಬಂದಿದ್ರು. ಎಲ್ಲರ ಚಿತ್ತ ಅದೊಂದು ಪೊದೆಯ ಕಡೆನೇ ನೆಟ್ಟಿತ್ತು. ಯಾಕಂದ್ರೆ, ಆ ಪೊದೆಯೊಳಗೆ ಪತ್ತೆಯಾಗಿತ್ತು ಹೆಂಗಸೊಬ್ಬಳ ಕೊಳೆತ ಹೆಣ.

ಯಸ್.. ಮರಸೂರು ಗೇಟ್ ಬಳಿಯಲ್ಲಿ ಹೆಂಗಸೊಬ್ಬಳ ಹೆಣ ಪತ್ತೆಯಾಗಿತ್ತು. ನೀಲಿ ಬಣ್ಣದ ಸೀರೆಯುಟ್ಟಿದ್ದ ಶವವಾಗಿದ್ದ ಆ ಹೆಂಗಸಿನ ಮುಖ ಗುರುತು ಸಿಗದಷ್ಟು ಹಾಳಾಗಿತ್ತು. ದೇಹವೆಲ್ಲ ಕೊಳೆತಿದ್ದರಿಂದ ದುರ್ವಾಸನೆ ಘಾಟು ಮೂಗಿಗೆ ಬಡಿತಿತ್ತು. ಯಾರೋ ಹಸು ಕುರಿಗಾಯಿಗಳು ಆ ಕಡೆ ಬಂದಾಗ ಆ ಪೊದೆಯಲ್ಲಿ ಹೆಣವೊಂದು ಬಿಟ್ಟಿದ್ದನ್ನು ಕಂಡು ಊರವ್ರಿಗೆ ಸುದ್ದಿ ಮುಟ್ಟಿಸಿದ್ದರು. ವಿಷಯ ತಿಳಿದ ಸೂರ್ಯ ಸಿಟಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ರು. ಆಗ ಅನುಮಾನ ಬಂದು ಮತ್ತಷ್ಟು ಮಾಹಿತಿ ಪಡೆದಾಗ.. ಪೊದೆಯಲ್ಲಿ ಹೆಣವಾಗಿದ್ದ ಹೆಂಗಸು ಮತ್ತಾರೂ ಅಲ್ಲ.. ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಗನಾಯಕನಹಳ್ಳಿಯ ವೆಂಕಟಮ್ಮಳದೇ ಅಂತ ಪಕ್ಕಾ ಆಗಿತ್ತು.

ಹೌದು.. ನಾಪತ್ತೆಯಾಗಿದ್ದ ವೆಂಕಟಮ್ಮಶವವಾಗಿ ಪತ್ತೆಯಾಗಿದ್ದಳು. ಅದೊಂದು ಬರ್ಬರ ಕೊಲೆ ಆಗಿತ್ತು. ಯಾಕಂದ್ರೆ, ಅವಳ ತಲೆ ಮೇಲೆ ಎಸೆದಿದ್ದ ಸೈಜು ಗಲ್ಲು ಅಲ್ಲೇ ಇತ್ತು. ಕೈ ಕಾಲುಗಳಿಗೆ ಬಿಗಿದಿದ್ದ ಹಗ್ಗವೇ ಹೇಳ್ತಿತ್ತು ಅದೊಂದು ಕೊಲೆ ಅಂತ. ಸೋ.. ಮರ್ಡರ್ ಕೇಸ್ ದಾಖಲಿಸಿಕೊಂಡ ಪೊಲೀಸರು ಮರ್ಡರ್ ಸೀಕ್ರೆಟ್ ಏನೂ ಅಂತ ಕೆದಕೋದಕ್ಕೆ ಶುರು ಮಾಡಿದ್ರು.ಮಗಳ ಮನೆಗೆ ಹೋಗಿ ತುಂಬಾ ದಿನ ಆಯ್ತು ಹೋಗಿ ನೋಡ್ಕೊಂಡು ಬರ್ತೀನ್ರೀ ಅಂತ ಗಂಡ ಪಾಪಣ್ಣನಿಗೆ ಹೇಳಿ ಮನೆಬಿಟ್ಟಿದ್ದಳು ವೆಂಕಟಮ್ಮ. ಆದ್ರೆ ಅದೇ ಆಕೆಯ ಕೊನೆ ದಿನವಾಗಿತ್ತು. ಊರಿಗೆ ಹೋಗಿ ಬರ್ತೇನೆ ಅಂತೇಳಿ ಹೋಗಿದ್ದ ವೆಂಕಟಮ್ಮ, ನಿಗೂಢವಾಗಿ ನಾಪತ್ತೆಯಾಗಿಬಿಟ್ಟದಳು.

ಎಂಟು ದಿನಗಳ ನಂತರ ಆಕೆಯ ಹೆಣ ಮರಸೂರು ಗೇಟಿನ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಆ ನಿಗೂಢ ಸಾವು ಕೊಲೆಯೇ ಆಗಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರಿಗೆ ಹತ್ತಾರು ಅನುಮಾಗಳು ಕಾಡೋಕೆ ಶುರು ಮಾಡಿದ್ವು.ಹೌದು ಕಣ್ರೀ.. ವೆಂಕಟಮ್ಮನ ಮರ್ಡರ್ ಕೇಸಲ್ಲಿ ಮೊದಲು ಸಂಶಯ ಬಂದಿದ್ದೇ ಆಕೆಯ ಗಂಡ ಪಾಪಣ್ಣನ ಮೇಲೆ. ಪೊಲೀಸ್ರು ಮೊದಲಿಗೆ ಆತನ ಮೇಲೆ ಅನುಮಾನಪಡಲಿಲ್ಲ. ಪಾಪ ಈ ವಯಸ್ಸಲ್ಲಿ ಅವನಿಗೆ ಹೀಗೆ ಆಗಬಾರದಿತ್ತು ಅಂತ ಕನಿಕರ ಪಟ್ಟು ಕಳುಹಿಸಿದ್ರು. ಅಲ್ಲದೆ ಹೆಂಡತಿ ಸತ್ತ ದುಃಖದಲ್ಲಿದ್ದಾನೆ. ಈಗ ಅವನಿಗೆ ನಾವು ತೊಂದರೆ ಕೊಡೋದು ಸರಿಯಲ್ಲ ಅಂತ ವಾಪಸ್ ಕಳಿಸಿದ್ರು.

ಆದ್ರೆ ಆ ಊರಲ್ಲಿ ಒಂದಷ್ಟು ಜನ ಗುಸುಗುಸು ಅಂತ ಮಾತನಾಡ್ತಿದ್ರು. ಅದು ಪೊಲೀಸ್ರು ಕಿವಿಗು ಬಿದ್ದಿತ್ತು. ಅಲ್ಲಿವರೆಗೂ ಒಂದೇ ಆಂಗಲ್ ನಲ್ಲಿ ಯೋಚಿಸ್ತಿದ್ದ ಪೊಲೀಸ್ರಿಗೆ ಈಗ ಮತ್ತೆ ಇದೇ ಪಾಪಣ್ಣನ ಮೇಲೆ ಅನುಮಾನ ಬಂದಿತ್ತು. ಹೀಗಾಗಿ ಪೊಲೀಸ್ರು ಅಯ್ಯೋ ನಾವೆಲ್ಲೋ ಈ ಕೇಸ್ ಅನ್ನ ಕರುಣೆಯ ಕಣ್ಣಲ್ಲಿ ನೋಡಿ ಯಾಮಾರಿ ಬಿಟ್ವಾ ಅಂತ ಅವರಿಗೆ ಅನಿಸಿತ್ತು. ಹೀಗಾಗಿ ಮತ್ತೆ ಅವರು ಕೇಸ್ ಅನ್ನ ಮತ್ತೆ ಹೊಸದಾಗಿ ಇನ್ವೆಸ್ಟಿಗೇಷನ್ ಶುರುಮಾಡಿದ್ರು.ಸೋ..ಮತ್ತೆ ಇದೇ ಪಾಪಣ್ಣನನ್ನ ಸ್ಟೇಷನ್ನಿಗೆ ಕರೆಸಿ, ಒಂದಷ್ಟು ಪ್ರಶ್ನೆಗಳನ್ನ ಪಾಪಣ್ಣನ ಕಡೆ ಎಸೆದ್ರು ನೋಡ್ರಿ..

ನಂಗೇನು ಗೊತ್ತಿಲ್ಲ ಸಾರ್ ಅಂತ ಹೇಳ್ತಿದ್ದ ಪಾಪಣ್ಣ ಅದೊಂದು ವಿಷಯದ ಬಗ್ಗೆ ಬಾಯಿಬಿಟ್ಟಿದ್ದ. ಫಸ್ಟ್ ಏನು ಗೊತ್ತಿಲ್ಲ ಅಂತಿದ್ದ ಪಾಪಣ್ಣ ಬಾಯಲ್ಲಿ ಈಗ ಏನೇನೋ ಸತ್ಯಗಳು ಹೊರ ಬರೋದಕ್ಕೆ ಶುರುವಾಗಿತ್ತು. ಹೀಗೆ ಪೊಲೀಸ್ರು ಪ್ರಶ್ನೆಗಳನ್ನ ಕೇಳ್ತಿದ್ರೆ ಆತ ಹೌದು ಸಾರ್.  ನನಗೂ ನನ್ನ ಹೆಂಡ್ತಿಗೂ ಸುಮಾರು ವರ್ಷಗಳಿಂದ ಜಗಳ ಮಾಮೂಲಾಗೇ ನಡೆದಿತ್ತು. ನಮ್ದು ತೀರಾ ಹೇಳಿಕೊಳ್ಳುವಂತಹ ನೆಮ್ಮದಿಯ ಸಂಸಾರವಾಗಿರಲಿಲ್ಲ. ನಾವಿಬ್ರು ಅಷ್ಟಕಷ್ಟೇ ಇದ್ವಿ ಅಂತ ಹೇಳಿದ್ದ. ಅಲ್ಲದೆ  ಅವತ್ತಿನ ದಿನ ಊರಿಗೆ ಹೋಗ್ತೀನಿ ಅಂತೇಳಿ ಹೋಗಿದ್ದ ನನ್ನೆಂಡ್ತಿ,  ಬಸ್ ಹತ್ತೋಕು ಮೊದಲು, ಪಕ್ಕದೂರಿನ ಊರಾಚೆಗೆ ಕಡೆ ಹೋಗಿದ್ಲು.

ನಾನು ಹಸು ಮೇಯಿಸೋಕೆ ಅಂತ ಆ ಕಡೆ ಹೋದಾಗ,  ಅಲ್ಲಿ ನನ್ನೆಂಡ್ತಿ ಕಂಡಿದ್ಲು. ಅವಳನ್ನ ನೋಡಿ ನನಗೆ ಆಶ್ಚರ್ಯವಾಗಿತ್ತು. ಊರಿಗೆ ಹೋಗೋದು ಬಿಟ್ಟು ಇಲ್ಲೇನು ಮಾಡ್ತೀಯ ಅಂತ ಅವಳಿಗೆ ಗದರಿಸಿದ್ದೆ. ಅವಳು ಇಲ್ಲಾ ಈಗ ಹೋಗ್ತಾ ಇದ್ದೀನಿ ಅಂತ ಹೇಳಿದ್ಲು. ನಾನು ಅಲ್ಲೇ ಅವಳಿಗೆ ಒಂದಿಷ್ಟು ಬೈದು ಕಳಿಸಿದೆ ನಂಗೆ ಅಷ್ಟೇ ಸಾರ್ ಗೊತ್ತಿರೋದು. ಮುಂದೇನಾಯ್ತೋ ನನಗೆ ಗೊತ್ತಿಲ್ಲ. ಆ ತಿರುಪತಿ ತಿಮ್ಮಪ್ಪನ ಆಣೆ , ನಾನು ನನ್ನ ಹೆಂಡ್ತಿಯನ್ನ ಕೊಂದಿಲ್ಲ , ಅಂತಾ ಪಾಪದ ಕೆಲಸ ನಾನ್ಯಾಕೆ ಮಾಡ್ತೀನಿ ಅಂತ ಪೊಲೀಸ್ರ ಎದುರು ಕಣ್ಣೀರಿಟ್ಟಿದ್ದ.  ಬಟ್, ಈ ಮುದುಕ ಪಾಪಣ್ಣ ದೊಡ್ಡ ಕಲಾಕಾರ ಕಣ್ರೀ. ಯಾಕೆ ಗೊತ್ತಾ.  ವೆಂಕಟಮ್ಮಳನ್ನು ಕೊಂದು, ಕೈಕಾಲು ಕಟ್ಟಿ ಪೊದೆಯಲ್ಲಿ ಬಿಸಾಡಿದ್ದು ಅಂದ ಕಾಲತ್ತಿಲ್ ಫೈಲ್ವಾನ್ ಪಾಪಣ್ಣನೇ.

ಸರಿ ಸುಮಾರು 40 ವರ್ಷ ಸಂಸಾರ ಮಾಡಿದ್ದ ಹೆಂಡ್ತಿಯನ್ನ ತನ್ನ ಕೈಯ್ಯಾರೆ ಕೊಂದು, ಏನೂ ಗೊತ್ತಿಲ್ಲದವನಂತೆ ಡ್ರಾಮಾ ಆಡಿದ್ದ ಪಾಪಣ್ಣ ಇದೀಗ ಅಂದರ್ ಆಗಿದ್ದಾನೆ. ಕೊಲೆ ಮಾಡಿ, ನನ್ನೆಂಡ್ತಿ ಊರಿಗೆ ಹೋದವಳು ಕಾಣ್ತಾ ಇಲ್ಲ ಅಂತ ಹುಡುಕಾಡೋ ನಾಟಕವಾಡಿ ವೆಂಕ್ಟೀ ವೆಂಕ್ಟೀ ಎಲ್ಲೋದೆ, ಏನಾದೆ ಅಂತ ವಿರಹ ವೇದನೆಯಿಂದ ಪರಿತಪಿಸಿ ಹೋಗಿರೋ ಹಾಗೆ ಡ್ರಾಮಾ ಮಾಡಿದ್ದ ಈ ಪಾಕಡ ಪಾಪಣ್ಣ.ಈ ಮುದುಕ ಗಂಡ ಹೆಂಡ್ತಿಯ ಕಥೆ, ವೆಂಕಟಮ್ಮನ ಕೊಲೆ ಕಥೆಗೆ ಕಾರಣ ಹೇಳೋಕು ಮುನ್ನ, ಈ ಇಬ್ಬರ ಬಗ್ಗೆ ಸ್ವಾರಸ್ಯಕರ ಹಾಗೂ ರಸವತ್ತಾದ ಕಥೆಯೊಂದನ್ನ ಹೇಳ್ತೀನಿ ಕೇಳಿಸ್ಕೊಳ್ಳಿ. ಪಾಪಣ್ಣ ಹಾಗೂ ವೆಂಕಟಮ್ಮಳ ಸಂಸಾರಕ್ಕೆ 40 ವರ್ಷ ಆಗಿರಬಹುದು.

ಮಕ್ಕಳು ಮರಿ ಆಗೋವರೆಗೂ ಇವರಿಬ್ಬರೂ ಮೇಡ್ ಫಾರ್ ಈಚ್ ಅದರ್. ಆದ್ರೆ ಅದಾದ್ಮೇಲೆ ನೋಡಿ ಬಯಲಾಗಿದ್ದು ಇವರಿಬ್ಬರ ಅಸಲಿ ಬಂಡವಾಳ. ವಯಸ್ಸು ಇಳಿತಿದ್ರೂ, ಗಂಡ ಮಕ್ಕಳು ಮೊಮ್ಮಕ್ಕಳು ಇದ್ರೂ ವೆಂಕಟಮ್ಮ ಮತ್ತೊಬ್ಬ ಗಂಡಸಿನ ಸಖ್ಯ ಬೆಳೆಸಿದ್ದಳಂತೆ. ಅದ್ಯಾವನೋ ಶೂರ ಕೆಂಚಪ್ಪ ಅನ್ನೋವನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳಂತೆ. ಅವರಿಬ್ಬರ ಕುಚ್ ಕುಚ್ ಸಂಬಂಧಕ್ಕೆ ಏನಿಲ್ಲವೆಂದರೂ 15 ರಿಂದ 20 ವರ್ಷ ಆಯಸ್ಸಿರಬಹುದು. ಇದು ಗಂಡ ಪಾಪಣ್ಣನಿಗೆ ಗೊತ್ತಾಗಿಂದ ಪ್ರತಿದಿನವೂ ಗಂಡ ಹೆಂಡ್ತಿ ನಡುವೆ ಯುದ್ದವೇ ನಡಿತಾ ಇತ್ತು. ಹೆಂಡ್ತಿ ಇನ್ಯಾವನ ಜೊತೆಯೋ ಮಲಗಿ ಬರ್ತಾಳೆ ಅಂದ್ರೆ ಅದ್ಯಾವ ಗಂಡ ಸಹಿಸ್ತಾನೆ ಅಲ್ವಾ. ಅದೇ ಕೆಲಸವನ್ನ ಈ ಪಾಪಣ್ಣನು ಮಾಡಿದ್ದ. ಅದಕ್ಕೆ ಇಬ್ಬರಿಗೂ ಆಗಾಗ ಗಲಾಟೆ ನಡಿತಾ ಇತ್ತು.ಇಂತಾ ವಯಸ್ಸಲ್ಲಿ ಅಂತಾ ಸಂಬಂಧ ಬೇಕಾ ..

ಈ ಹೆಂಗಸಿಗೇನು ಮಾನ ಮರ್ಯಾದೆ ಇಲ್ವಾ, ಇವಳೆಂತಾ ಮಾನಗೆಟ್ಟ ಹೆಣ್ಣು ಅಂತ ಈ ಸ್ಟೋರಿ ನೋಡ್ತಿರೋ ನಿಮಗೂ ಅನಿಸ್ತಿದೆ ಅಲ್ವಾ. ಅನಿಸ್ಲೇಬೇಕು ಬಿಡಿ  ಈ ಹೆಂಗಸಿಗೆ ಉಗಿದು ಉಪ್ಪಾಕೋದಕ್ಕೋ ಮುನ್ನ ಮತ್ತೊಂದು ವಿಚಾರವನ್ನೂ ಹೇಳಿಬಿಡ್ತೇನೆ. ಈ ಪಾಪಣ್ಣ ಇದ್ದಾನೆ ನೋಡ್ರಿ ಈ ಆಸಾಮಿ ಏನೂ ಕಮ್ಮಿಯವನಲ್ಲ ಕಣ್ರಿ. ಮೈಯಲ್ಲಿ ಶಕ್ತಿ, ಬಿಸಿ ರಕ್ತ ವಯಸ್ಸಿದ್ದಾಗಲೂ ಕಲಾಕಾರ, ಮಹಾ ರಸಿಕನಂತೆ ಮುಪ್ಪಾಗಿ ಮೀಸೆ ಗಡ್ಡ ಬೆಳ್ಳಗಾಗಿದ್ರೂ ಈ ವಯಸ್ಸಲ್ಲೂ ಸ್ತ್ರೀ ಲೋಲ, ಸುಖಲೋಲ. ಲಾಲಸ ಪ್ರಿಯ. ಈ ಪಾಪಣ್ಣ ಕೂಡ ಅದ್ಯಾರೋ ಹೆಂಗಸಿನ ಸಹವಾಸನ್ನ ಇನ್ನೂ ಮೇಂಟೈನ್ ಮಾಡ್ತಿದ್ದನಂತೆ.

ಮೊದ್ಲು ಯಾರು ಹಾದಿ ತಪ್ಪಿದ್ರೋ ಯಾರಿಗೆ ಯಾರು ದೋಖಾ ಮಾಡಿದ್ರೋ ದೇವ್ರಾಣೆ ನಮಗಂತೂ ಗೊತ್ತಿಲ್ಲ ವೀಕ್ಷಕರೇ. ಆದ್ರೆ, ಊರವರು ಹೇಳೋ ಪ್ರಕಾರ ಗಂಡ ಹೆಂಡ್ತಿನೂ ನೆಟ್ಟಗಿರಲಿಲ್ಲ,ಅವರ ನಡುವೆ ಸಂಬಂಧವೂ ನೆಟ್ಟರಿಲಿಲ್ಲವಂತೆ. ನಿಜ ಹೇಳಬೇಕಂದ್ರೆ ಅವರವರ ಸುಖವನ್ನ ಅವರು ಹುಡ್ಕೊಂಡಿದ್ರು. 40 ವರ್ಷದ ಸಂಸಾರದಲ್ಲಿ ಇಬ್ಬರ ನಡುವೆ ಸ್ಪರ್ಶ ಸುಖ ಕಳೆದು ಹೋಗಿತ್ತು. ಹೀಗಾಗಿ ಇನ್ನು ಮೈಮುಟ್ಟಿದ್ರೆ ಮೈ ಎಲ್ಲಾ ಬೆಚ್ಚಗಾಗೋರ ಹತ್ತಿರ ಇಬ್ಬರು ಹೋಗ್ತಿದ್ರು.ಆದ್ರೆ ಒಂದು ಮಾತಿದೆ ಅಲ್ವಾ, ಊರು ಸುತ್ತೋ ಗಂಡು ಏನ್ ಮಾಡಿದ್ರೂ ಪರವಾಗಿಲ್ಲ, ಮನೆಯಲ್ಲಿರೋ ಹೆಣ್ಣು ಮತ್ತೊಂದು ಹಾದಿ ತುಳಿಬಾರ್ದು ಅಂತ. ಅದೇ ತರ ಹೆಂಡ್ತಿಯ ಕಳ್ಳಾಟವನ್ನ ನೋಡಿ ರೋಸಿ ಹೋಗಿದ್ದ ಪಾಪಣ್ಣ. ಆದ್ರೆ ಹೆಂಡ್ತಿಗೆ ಒಂದು ಗತಿ ಕಾಣಿಸೋಕೆ ಈ ಪಾಪಣ್ಣನಿಗೆ ಮೈಯಲ್ಲಿ ಬಿಸಿ ರಕ್ತ ಹರಿಯೋವಾಗ ಆಗಲಿಲ್ಲ, ಎಲ್ಲಾ ಮುಗಿದೋದ್ಮೇಲೆ ರೊಚ್ಚಿಗೆದ್ದು ಏಕ್ ದಮ್ ಕೊಲೆನೆ ಮಾಡಿಬಿಟ್ಟಿದ್ದಾನೆ.

ಅವತ್ತು, ಮಗಳ ಊರಿಗೆ ಹೋಗ್ತೇನೆ ಅಂತೇಳಿ ಹೋಗಿದ್ದ ವೆಂಕಟಮ್ಮ, ಬಸ್ ಹತ್ತದೆ ಪಕ್ಕದೂರಿನ ಊರಾಚೆ ಇರೋ ಪೊದೆ ಸೇರಿದ್ದಳಂತೆ. ಅಲ್ಲಿ ತನ್ನ ಬಾಯ್ ಫ್ರೆಂಡ್ ಕೆಂಚಪ್ಪನ ಜೊತೆ ಸರಸಕ್ಕೆ ಇಳಿದುಬಿಟ್ಟಿದ್ದಳಂತೆ. ಹಸು ಮೇಯಿಸಿಕೊಂಡು ಹೋಗಿದ್ದ ಪಾಪಣ್ಣ ಕಣ್ಣಿಗೆ ಪರಪುರುಷನೊಂದಿಗೆ ಹೆಂಡ್ತಿಯ ಚಕ್ಕಂದದಾಟ ಕಂಡಿತ್ತು. ಕಟಕಟ ಅಂರ ಹಲ್ಲು ಕಡೀತಾ ಇದ್ದ ಪಾಪಣ್ಣನನ್ನ ಕಂಡು ಕೆಂಚಪ್ಪ ಪೊದೆಯಿಂದ ಎದ್ದು ಎದ್ನೋ ಬಿದ್ನೋ ಅಂತ ಓಡೋಗಿದ್ದ. ರೆಡ್ ಹ್ಯಾಂಡಾಗಿ ಸಿಕ್ಕ ವೆಂಕಟಮ್ಮಳ ತಲೆ ಮೇಲೆ ಕಲ್ಲೆತ್ತಿ ಹಾಕಿ ಕೊಂದು, ಕೈ ಕಾಲು ಕಟ್ಟಿ ಹೆಣ ಬೀಳಿಸಿ ಹೋಗಿದ್ದ. ಅಷ್ಟು ಮಾತ್ರವಲ್ಲಾ.. ಏಳು ದಿನಗಳ ಕಾಲ ಪ್ರತಿದಿನವೂ ಆ ಜಾಗಕ್ಕೆ ಹೋಗಿ ಹೆಣದ ಸ್ಥಿತಿಗತಿ ನೋಡ್ಕೊಂಡು ಬರ್ತಿದ್ದನಂತೆ ಈ ರೊಚ್ಚಿಗೆದ್ದಿದ್ದ ರಸಿಕ ಪಾಪಣ್ಣ. ಹೆಂಡ್ತಿಯನ್ನ ಕೊಂದವನು ಇದೀಗ ಪರಪ್ಪನ ಅಗ್ರಹಾರ ಸೇರ್ಕೊಂಡಿದ್ದಾನೆ.

LEAVE A REPLY

Please enter your comment!
Please enter your name here