Home Crime ಕಾಮದಾಟವಾಡುತ್ತಲೇ ಕುಯ್ದಿದ್ದೇಕೆ ಗೊತ್ತಾ ಹೆಂಡ್ತಿಯ ಮೂಗು-ತುಟಿಯನ್ನ ಪಾಪಿ ಗಂಡ..! ಕಾಮದ ಉನ್ಮಾದದ ತುತ್ತತುದಿಯಲ್ಲಿರುವಾಗ ಹೆಂಡತಿ, ಕಿವಿಯಲ್ಲಿ...

ಕಾಮದಾಟವಾಡುತ್ತಲೇ ಕುಯ್ದಿದ್ದೇಕೆ ಗೊತ್ತಾ ಹೆಂಡ್ತಿಯ ಮೂಗು-ತುಟಿಯನ್ನ ಪಾಪಿ ಗಂಡ..! ಕಾಮದ ಉನ್ಮಾದದ ತುತ್ತತುದಿಯಲ್ಲಿರುವಾಗ ಹೆಂಡತಿ, ಕಿವಿಯಲ್ಲಿ ಪಿಸುಗುಟ್ಟಿದ್ದದ್ದೇನು..?

5063
0
SHARE

ಮೊನ್ನೆ ಸರಿಸುಮಾರು ಮಧ್ಯ ರಾತ್ರಿ ಕಾವವಾಡ ಪೊಲೀಸ್ ಠಾಣೆಗೆ ಒಬ್ಬ ವ್ಯಕ್ತಿ ಓಡೋಡಿ ಬಂದಿದ್ದ. ಹಾಗೆ ಪೊಲೀಸ್ ಠಾಣೆಗೆ ಬಂದವನ ಕೈ ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ಹಾಕಿದ್ದ ಬಟ್ಟೆಯೆಲ್ಲಾ ರಕ್ತಮಯವಾಗಿತ್ತು. ಹೀಗಾಗಿ ಇವನು ಸ್ಟೇಷನ್ ಒಳಗೆ ಹೋಗ್ತಿದ್ದ ಹಾಗೆ ಪೊಲೀಸ್ರು ಆತಂಕಗೊಂಡಿದ್ರು. ಇವನಿಗೆ ಯಾರಾದ್ರು ಚುಚ್ಚಿದ್ದಾರ ಅಂತ ಗಾಬರಿಯಾಗಿದ್ರು. ಆದ್ರೆ ಹಾಗೇನು ಆಗಿರಲಿಲ್ಲ. ಹಾಗೆ ಸ್ಟೇಷನ್ ಗೆ ಬಂದವು ಪೊಲೀಸ್ರ ಹತ್ತಿರ ನೀರು ಕೇಳಿದ್ದ.

ಯಾಕಂದ್ರೆ ಆ ಗಾಬರಿಯಲ್ಲಿ ಅವನು ಅಷ್ಟೊಂದು ಬಾಯಾರಿಬಿಟ್ಟಿದ್ದ. ಬಾಯಿಂದ ಉಸಿರೊಂದು ಮಾತ್ರವೇ ಆಡ್ತಿತ್ತು. ಅದನ್ನ ಬಿಟ್ರೆ ಆತನ ಗಂಟಲಲ್ಲಿ ಉಗುಳು ಕೂಡಾ ಇಳಿಯುತ್ತಿರಲಿಲ್ಲ. ಅವನಿಗೆ ತಾನು ಸ್ಟೇಷನ್ ಗೆ ಬಂದಿದ್ದೀನಿ ಅನ್ನೋದು ಗೊತ್ತಿತ್ತು. ಆದ್ರೆ ಅಲ್ಲಿ ಅವನಿಗೆ ಪೊಲೀಸ್ರ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಏನನ್ನೋ ಹೇಳೋದಕ್ಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಅದನ್ನ ಹೇಳೋದಕ್ಕೆ ಮಾತ್ರ ಅವನಿಗೆ ಸಾಧ್ಯವಾಗ್ತಿರಲಿಲ್ಲ. ಅವನನ್ನ ನೋಡಿ ಪೊಲೀಸ್ರು 10 ನಿಮಿಷ ಕೂತ್ಕೋ ಸುಧಾರಿಸಿಕೊಂಡ ಮೇಲೆ ಹೇಳು ಅಂತ ಹೇಳಿದ್ರು.

ನಂತ್ರ ಪೊಲೀಸ್ರೆ ಅವನ ಊರು ಯಾವುದು ಅಂತ ಕೇಳಿದ್ರು. ಆಗ ಆತ ಇಲ್ಲೇ ಪಕ್ಕದಲ್ಲಿರೋ ಬಸವನಗರ ನಗರ ಅಂತ ಹೇಳಿದ್ದ. ಆ ಏರಿಯಾ ಇರೋದು ಇದೇ ಕಾಗವಾಡದಲ್ಲಿ. ಆಗ ಪೊಲೀಸ್ರು ನಡಿ ಅಲ್ಲಿಗೆ ಹೋಗೋಣ ಅಂತ ಹೇಳಿದ್ರು. ಆದ್ರೆ ಅವನು ಅವತ್ತು ಅಲ್ಲಿಂದ ವಾಪಸ್ ಮನೆಗೆ ಬರೋದಕ್ಕೆ ಒಪ್ಪಲೇ ಇಲ್ಲ. ಪೊಲೀಸ್ರು ಕೂಡಾ ಅವನು ಬೇಡ ಅಂತ ಅಂದ ಮೇಲೆ ಸುಮ್ಮನಾಗಿದ್ದ. ಅಲ್ಲದೆ ಅಷ್ಟೊತ್ತಿಗೆ ಅವನ ಹೆಂಡತಿಯನ್ನ ಆಸ್ಪತ್ರೆಗೆ ದಾಖಲಿಸಿದ್ರು. ಹೀಗಾಗಿ ಪೊಲೀಸ್ರು ಎಲ್ಲರನ್ನ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸೋದಕ್ಕೆ ಶುರುಮಾಡಿದ್ರು.

ಅವತ್ತು ಮೂಗು ಕೊಯ್ದು ಪೊಲೀಸ್ರಿಗೆ ಸೆರೆಂಡರ್ ಆಗಿದ್ದ ಸುರೇಶನ ಕಥೆಯನ್ನ ಹೇಳ್ತೀವಿ ಕೇಳಿ. ಸುರೇಶನಿಗೆ ಸುಮಾರು ವರ್ಷದ ಹಿಂದೆಯೇ ಮದುವೆಯಾಗಿತ್ತು. ಆತನಿಗೆ ನಾಲ್ಕು ಜನ ಮಕ್ಕಳು ಇದ್ದಾರೆ. ಸುರೇಶನ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಅಂದಿನಿಂದ ಆತ ತನ್ನ ಮಕ್ಕಳನ್ನ ತಾನೇ ಸಾಕಿಕೊಂಡಿದ್ದ. ಆದ್ರೆ ಅವನಿಗೆ ಹೊರಗಡೆಯು ಕೆಲಸ ಮಾಡಿ ಇತ್ತ ಮಕ್ಕಳನ್ನು ನೋಡಿಕೊಳ್ಳೋದು ಬಹಳ ಕಷ್ಟವಾಗಿತ್ತು. ಹೀಗಾಗಿ ಮತ್ತೊಂದು ಮದುವೆ ಮಾಡಿಕೊಳ್ಳೋಣ ಅಂತ ಯೋಚನೆ ಮಾಡಿದ್ದ. ಆದ್ರೆ ಇವನ ಮೊದಲ ಪತ್ನಿ ಅನಾರೋಗ್ಯದಿಂದ ಸತ್ಲ ಅಥವಾ ಇವನೇ ಏನಾದ್ರು ಮಾಡಿದ್ನ ಅನ್ನೋದು ಗೊತ್ತಿಲ್ಲ.

ಆದ್ರೆ ಮೊದಲ ಪತ್ನಿ ಅರ್ಧದಲ್ಲೇ ಸತ್ತು ಹೋಗಿದ್ಲು. ಅಲ್ಲಿಂದ ಇವನು ಏಕಾಂಗಿಯಾಗಿದ್ದ.ಅವನಿಗೆ ಅತ್ತ ಹೆಂಡತಿಯನ್ನ ಬಿಡೋದಕ್ಕೂ ಆಗ್ತಿರಲಿಲ್ಲ. ಇತ್ತ ಮಕ್ಕಳಿಂದ ದೂರವಿರೋದಕ್ಕೂ ಆಗ್ತಿರಲಿಲ್ಲ. ಹೀಗಾಗಿ ಅವನು ಏನು ಮಾಡೋದು ಅಂತ ತೋಚದೆ ಒದ್ದಾಡ್ತಿದ್ದ. ಅಲ್ಲಿ ಮನೆಯಲ್ಲಿರೋ ಮಕ್ಕಳು ಅಪ್ಪ ಅಮ್ಮ ಇಬ್ಬರು ಇಲ್ಲದೆ ತೊಂದರೆ ಅನುಭವಿಸ್ತಿದ್ದಾರೆ. ಇವಳನ್ನ ಹೇಗೆ ಒಪ್ಪಿಸೋದು ಅನ್ನೋದೆ ಇವನಿಗೆ ತಲೆ ನೋವಾಗಿತ್ತು. ಹೀಗೆ ಕಳೆದ ವಾರ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಾರೆ. ಹೀಗೆ ಊಟ ಮಾಡಿದ ಮೇಲೆ ಎಲ್ಲರು ತಮ್ಮ ಪಾಡಿಗೆ ತಾವು ಹೋಗಿ ರೂಂನಲ್ಲಿ ಮಲಗಿಕೊಂಡಿದ್ರು.

ಹಾಗೆ ಸುನಿತಾ ಮತ್ತು ಸುರೇಶ್ ಕೂಡಾ ಹೋಗಿ ಮಲಗಿಕೊಂಡಿದ್ರು. ಹಾಗೆ ಅವತ್ತು ಇಬ್ಬರು ದೈಹಿಕವಾಗಿ ಸೇರಿದ್ರು. ಈ ವೇಳೆ ಇಬ್ಬರು ಕಾಮದ ಉನ್ಮಾದದ ತುತ್ತತುದಿಯಲ್ಲಿರುವಾಗ ಹೆಂಡತಿ ಕಿವಿಯಲ್ಲಿ ಪಿಸುಗುಟ್ಟಿದ್ದಳು. ನಮ್ಮ ಮಕ್ಕಳನ್ನ ಇಲ್ಲಿಗೆ ಕರ್ಕೊಂಡು ಬರೋಣ ಅಂತ. ಅದೇ ಉನ್ಮಾದ ಸ್ಥಿತಿಯಲ್ಲಿದ್ರು ಆಕೆ ಮನಸ್ಸಿನ ನಿಯಂತ್ರಣ ತಪ್ಪದೆ ಬೇಡ ಅಂತ ನಿರಾಕರಿಸಿಬಿಟ್ಟಿದ್ಲು. ಅಲ್ಲಿಗೆ ಸುರೇಶನ ಕಾಮವೆಲ್ಲ ಅಲ್ಲಿಗೆ ಇಳಿದು ಹೋಗಿತ್ತು.

ಇನ್ನು ಇವಳನ್ನ ಒಪ್ಪಿಸೋದಕ್ಕೆ ಸಾಧ್ಯವೇ ಇಲ್ಲ ಅಂತ ಅನಿಸಿದಾಗ ಆತ ಒಂದು ನಿರ್ಧಾರಕ್ಕೆ ಬಂದಿದ್ದ. ಅದೇನಪ್ಪ ಅಂದ್ರೆ ಆಕೆಗೆ ಬುದ್ಧಿ ಕಲಿಸಬೇಕು ಅಂತ. ಅದ್ಯಾವಾಗ ಆಕೆ ಬೇಡ ಅಂತ ಹೇಳಿದ್ಲೋ ಆಗ ಅಡಿಗೆ ಮನೆಯಿಂದ ಚಾಕುವನ್ನ ತಂದು ಆಕೆಯ ಮೂಗನ್ನ ಕತ್ತರಿಸಿ ಹಾಕಿದ್ದ. ಅಲ್ಲದೆ ತುಟಿಯನ್ನು ಕತ್ತರಿಸಿದ್ದ. ಏಕಾಏಕಿ ನಡೆದ ದಾಳಿಯಿಂದಾಗಿ ಆಕೆ ದಂಗಾಗಿ ಹೋಗಿದ್ರು. ಆ ನೋವಿಗೆ ಆಕೆ ಜೋರಾಗಿ ಕಿರುಚಾಡೋದಕ್ಕೆ ಶುರುಮಾಡಿದ್ಲು. ಏನಾಯ್ತು ಅಂತ ಮನೆಯವರು ಬಂದು ನೋಡುವ ಹೊತ್ತಿಗೆ ಆಗಬಾರದ ಅನಾಹುತ ನಡೆದು ಹೋಗಿತ್ತು. ಅಷ್ಟೇ ಅಲ್ಲ ಆತನ ಅಲ್ಲಿಂದ ಹೆದರಿಕೆಯಲ್ಲೇ ಓಡಿ ಹೋಗಿದ್ದ. ಜೊತೆಗೆ ಆಕೆಯ ಮೂಗನ್ನ ಎತ್ಕೊಂಡು ಹೋಗಿದ್ದ.

ಆಕೆಯ ಅಪ್ಪ ಅಮ್ಮ ರೂಂ ಒಳಗೆ ಹೋಗಿ ಲೈಟ್ ಹಾಕಿ ನೋಡಿದ್ರೆ ಮಗಳ ಮೂಗು ಕಟ್ ಆಗಿದೆ. ಆಕೆಯನ ಆಸ್ಪತ್ರೆಗೆ ಕರ್ಕೊಂಡು ಹೋಗೋದಕ್ಕೆ ಅಂತ ಎತ್ಕೊಂಡು ಹೋಗುವಾಗ ಅವರಿಗೆ ಒಂದು ಯೋಚನೆ ಬಂದಿತ್ತು. ಆತ ಕಟ್ ಮಾಡಿರೋ ಮೂಗನ್ನ ಎಲ್ಲಿ ಹಾಕಿದ್ದಾನೆ ಅಂತ. ಯಾಕಂದ್ರೆ ಆ ಭಾಗ ಸಿಕ್ಕಿದ್ರೆ ಮತ್ತೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಬಹುದಿತ್ತು. ಹೀಗಾಗಿ ಮನೆಯಲ್ಲಿ ಆ ಮೂಗಿಗಾಗಿ ಹುಡುಕಾಟ ನಡೆಸಿದ್ರು. ಆದ್ರೆ ಎಲ್ಲೂ ಅದು ಸಿಗಲೇ ಇಲ್ಲ. ಇನ್ನು ಜಾಸ್ತಿ ಹೊತ್ತು ಅಲ್ಲಿ ಹುಡುಕೋದಕ್ಕೂ ಆಗಲಿಲ್ಲ  ಯಾಕೆ ಅಂದ್ರೆ ಆಕೆ ನರಳಾಟ ಜಾಸ್ತಿಯಾಗಿತ್ತು. ಹೀಗಾಗಿ ಆಕೆಯನ್ನ ಆಸ್ಪತ್ರೆ ಕರ್ಕೊಂಡು ಹೋಗಿದ್ರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ತ ಇದ್ದ ಹಾಗೆ ಮತ್ತೆ ಮೂಗಿಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ಮೂಗು ಮಾತ್ರ ಸಿಗಲೇ ಇಲ್ಲ. ಯಾಕಂದ್ರೆ ಆತ ಹೋಗವಾಗ ಅದು ಯಾರಿಗೂ ಸಿಗಬಾರದು ಅನ್ನೋ ಕಾರಣಕ್ಕೆ ಬೇಲಿಯೊಂದರ ಬುಡಲ್ಲಿ ಎಸೆದು ಹೋಗಿದ್ದ. ಕೊನೆಗೆ ಪೊಲೀಸರು ಬಂದು ಹುಡುಕಿದಾಗ ಆ ಮೂಗು ಸಿಕ್ಕಿತ್ತು, ಆದ್ರೆ ಪ್ರಯೋಜನವಿರಲಿಲ್ಲ.ಯಾಕಂದ್ರೆ ಅಷ್ಟೊತ್ತಿಗಾಗ್ಲೇ ಟೈ ಮೀರಿ ಹೋಗಿತ್ತು.

ಅವತ್ತು ಮಕ್ಕಳನ್ನ ನೋಡಿಕೊಳ್ಳೋದು ನನಗೆ ಆಗೋದಿಲ್ಲ ಅಂತ ಹೇಳಿದ್ದಕ್ಕೆ ಆತ ಪತ್ನಿಯ ಮೂಗನ್ನ ಕತ್ತರಿಸಿ ಹಾಕಿದ್ದ. ಮಕ್ಕಳನ್ನ ನೋಡಿಕೊಳ್ಳಲು ಆಗದ ಮೇಲೆ ನಿನ್ನ ಜೊತೆ ಸಂಸಾರವನ್ನ ನಡೆಸೋದಕ್ಕೆ ಆಗೋದಿಲ್ಲ ಅಂತ ಆತ ಗಲಾಟೆ ಮಾಡಿದ್ದ. ಅಲ್ಲದೆ ಇನ್ನು ಮುಂದೆ ನೀನು ಚೆನ್ನಾಗಿರಬಾರದು ಅಂತ ಆತ ಆಕೆಯ ಮೂಗು ಮತ್ತು ತುಟಿಯನ್ನ ಕೊಯ್ದು ಹಾಕಿದ್ದ.ಆಸ್ಪತ್ರೆಯಲ್ಲಿ ಸುನಿತಾಗೆ ಚಿಕಿತ್ಸೆ ಕೊಡಿಸಲಾಗ್ತಿದೆ.

ಆಕೆಗಾಗಿ ಪೋಷಕರು ಲಕ್ಷ ಲಕ್ಷ ಸುರಿಯುತ್ತಿದ್ದಾರೆ. ಆದ್ರೆ ಆಕೆ ಗುಣಮುಖವಾಗ್ತಿಲ್ಲ. ಪಾಪ ಎಲ್ಲಾದ್ರು ನನಗೆ ನೆಮ್ಮದಿ ಸಿಗುತ್ತಾ ಅಂತ ಲೈಫ್ ನಲ್ಲಿ ಹುಡುಕಾಟ ಶುರುಮಾಡಿದ್ದವಳಿಗೆ ಮತ್ತದೆ ನರಕ ಪರ್ಮನೆಂಟ್ ಆಗಿದೆ. ಇತ್ತ ಪೊಲೀಸ್ರು ಆತನನ್ನ ಒದ್ದು ಒಳಗೆ ಹಾಕಿದ್ದಾರೆ. ಇಲ್ಲಿ ಯಾರದ್ದು ತಪ್ಪು ಅನ್ನೋದಕ್ಕಿಂತ ತಪ್ಪನ್ನ ಸರಿ ಮಾಡಿಕೊಳ್ಳಲು ಎಲ್ಲರೂ ಸೋತಿದ್ದು ಮಾತ್ರ ಎದ್ದು ಕಾಣ್ತಿದೆ.

LEAVE A REPLY

Please enter your comment!
Please enter your name here