ದೆವ್ವ ಭೂತ ಬಿಡಿಸ್ತೀನಿ ಅಂತ ಮಾಡಬಾರದನ್ನ ಮಾಡಿ ಜನರಿಂದ ಸುಲಿಗೆ ಮಾಡ್ತಿದ್ದ ಕಳ್ಳ ಸ್ವಾಮಿಗೆ ಗ್ರಾಮಸ್ತರು ಬಿಸಿ ಬಿಸಿ ಕಜ್ಜಾಯ ಕೊಟ್ಟಿದ್ದಾರೆ. ಈತನ ಆಟಾಟೋಪಗಳಿಂದ ರೊಚ್ಚಿಗೆದ್ದಿದ್ದ ಜನ ಇಂದು ಮಠ ಮಠ ಮಧ್ಯಾಹ್ನ ಹಿಗ್ಗಾ ಮುಗ್ಗ ಥಳಿಸಿ ಕಳ್ಳ ಸ್ವಾಮಿಜೀಗೆ ಭೂತ ಬಿಡಿಸಿದ್ದಾರೆ. ಅದೇನ್ ಕಥೆ..
ಎ.. ನನ್ನ ಕೈ ಬಿಡು.. ನನ್ನ ಜುಟ್ಟು ಬಿಡೋ ಅಂತಾ ಗೋಳಾಡ್ತಿರುವ ಕಳ್ಳ ಸ್ವಾಮಿ… ಅಯ್ಯೊ ಬದ್ಮಾಷ್ ಅಂತಾ ಮುಖಕ್ಕೆ ರಪ್ ರಪ್ ಅಂತಾ ಹೊಡೆಯುತ್ತಿರೊ ಗ್ರಾಮಸ್ಥರು. ಈ ದೃಶ್ಯಗಳು ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ.ಹೀಗೆ ಜನರಿಂದ ಹಿಗ್ಗಾಮುಗ್ಗ ಒದೆ ತಿಂತಿರುವ ಈತನ ಹೆಸರು ಪ್ರಹ್ಲಾದ್ ಜೋಶಿ ಅಂತಾ.
ಕಂಚಿನೆಗಳೂರು ಗ್ರಾಮದಲ್ಲಿ ಈತನ ಆಟೋಟೋಪ ಮಿತಿ ಮೀರಿತ್ತು. ಗ್ರಾಮಸ್ಥರನ್ನು ಹೆದರಿಸಿ ಬೆದರಿಸಿ ಅವರಿಂದ ವಸೂಲಿ ಮಾಡುತ್ತಿದ್ದ. ಮುಗ್ದ ಜನರಿಗೆ ಭೂತ ಬಿಡಿಸುವುದಾಗಿ ಮರಳು ಮಾಡಿ ಹಿಂಸಿಸುತ್ತಿದ್ದ. ಹೀಗಾಗಿ ಇವನ ಆಟಾಟೋಪಗಳಿಂದ ರೊಚ್ಚಿಗೆದ್ದ ಕಂಚಿನೆಗಳೂರು ಗ್ರಾಮಸ್ಥರು ಇಂದು ಕಳ್ಳ ಸ್ವಾಮೀಜಿಗೇ ಭೂತ ಬಿಡಿಸಿದ್ದಾರೆ.
ಬರೀ ಇದಿಷ್ಟೇ ಅಲ್ಲದೆ ಈತ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಈ ಎಲ್ಲಾ ವಿಷಯ ತಿಳಿದ ಆಡೂರು ಠಾಣೆಯ ಪೋಲಿಸರು ಗ್ರಾಮಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ಜನರು ಬಂದು ಬಂದು ಇತನ ಮಾಡಿದ ಘನಂದಾರಿ ಕೆಲಸಗಳನ್ನು ಹೇಳಿದ್ದಾರೆ. ಬೀದಿ ಬೀದಿಯಲ್ಲಿ ಈತನನ್ನು ಮೆರವಣಿಗೆ ಮಾಡಿದ್ದಾರೆ.
ಅಮಾಯಕರ ನಂಬಿಕೆಗಳ ಜೊತೆ ಆಟವಾಡುತ್ತಿದ್ದ ಕಳ್ಳ ಸ್ವಾಮೀಜಿಗೆ ಸ್ಥಳೀಯರು ತಕ್ಕ ಪಾಠ ಕಲಿಸಿದ್ದಾರೆ. ಭೂತ ಬಿಡಿಸುತ್ತೇನೆಂದು ಮುಗ್ಧ ಜನಗಳನ್ನು ವಂಚಿಸುತ್ತಿದ್ದ ಸ್ವಾಮೀಜಿಗೆ ಗ್ರಾಮಸ್ಥರು ಭೂತ ಬಿಡಿಸಿ ತಕ್ಕ ಶಾಸ್ತಿ ಮಾಡಿದ್ದಾರೆ.