Home District ಕಾವೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮ ಲೀನ..!! ಅಸ್ತಿ ವಿಸರ್ಜನಾ ಕ್ರಿಯೆ ನೆರವೇರಿಸಿದ BSY…

ಕಾವೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮ ಲೀನ..!! ಅಸ್ತಿ ವಿಸರ್ಜನಾ ಕ್ರಿಯೆ ನೆರವೇರಿಸಿದ BSY…

643
0
SHARE

ಅಜಾತಶತ್ರು ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣ ದ ಪಶ್ಚಿಮವಾಹಿನಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಡಿಸಿಎಂ ಆರ್.ಅಶೋಕ್ ಅಸ್ತಿ ವಿಸರ್ಜನಾ ಕ್ರಿಯೆಯಲ್ಲಿ ಪಾಲ್ಗೊಂಡು ಶಾಸ್ತ್ರೋಕ್ತವಾಗಿ ಅಸ್ತಿ ವಿಸರ್ಜಿಸಿದ್ರು.

ನಿನ್ನೆ ದೆಹಲಿಯಿಂದ ತರಲಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮದ ಮೊದಲ ಕರಂಡಿಕೆಯನ್ನು ಇಂದು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯ್ತು. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕ್ರಿಯಾಕರ್ಮಗಳನ್ನು ನೆರವೇರಿಸಿದ್ರು.

ಇದಕ್ಕೂ ಮೊದಲು ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿ ಮುಂಭಾಗದಲ್ಲಿ ಇರಿಸಲಾಗಿದ್ದ ಚಿತಾಭಸ್ಮ ಕರಂಡಕವನ್ನು ಯಡಿಯೂರಪ್ಪ, ಅನಂತಕುಮಾರ್,ಆರ್.ಅಶೋಕ್ ತೆಗೆದುಕೊಂಡು ಹೊರಟರು. ಅಲಂಕೃತ ವಾಹನದಲ್ಲಿ ಬೆಂಗಳೂರಿನಿಂದ ಶ್ರೀರಂಗಪಟ್ಟಣ ದವರಗೆ ಚಿತಾಭಸ್ಮ ಕರಂಡಕದ ಮೆರವಣಿಗೆ ಮಾಡಲಾಯ್ತು.

ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಚಿತಾಭಸ್ಮ ಕರಂಡಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವಾರ್ಪಣೆ ಮಾಡಿದ್ರು.ಇನ್ನೂ ಏಳು ಕರಂಡಕಗಳಲ್ಲಿ ಇರಿಸಲಾಗಿರುವ ಚಿತಾಭಸ್ಮವನ್ನು ಶನಿವಾರ ರಾಜ್ಯದ ಏಳು ನದಿಗಳಲ್ಲಿ ವಿಸರ್ಜಿಸಲಾಗುತ್ತದೆ.

ಕೃಷ್ಣಾ, ಮಲಪ್ರಭಾ, ತುಂಗಾ, ತುಂಗಭದ್ರಾ, ಶರಾವತಿ, ನೇತ್ರಾವತಿ ಹಾಗೂ ಕಾರಂಜಾದಲ್ಲಿ ಆಯಾ ಪ್ರದೇಶ ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಚಿತಾಭಸ್ಮ ವಿಸರ್ಜನೆ ನೆರವೇರಿಸಲಿದ್ದಾರೆ.

LEAVE A REPLY

Please enter your comment!
Please enter your name here