Home Crime ಕಾಸಿಗಾಗಿ ಕಂಡವರಿಗೆ ಸೆರಗು ಹಾಸು ಅಂತಾನೆ ಪತಿ..! ಕಿರಾತಕ ಗಂಡನ ಕಾಟಕ್ಕೆ ಬದುಕೋದೆ ಕಷ್ಟ ಅಂತಿದ್ದಾಳೆ...

ಕಾಸಿಗಾಗಿ ಕಂಡವರಿಗೆ ಸೆರಗು ಹಾಸು ಅಂತಾನೆ ಪತಿ..! ಕಿರಾತಕ ಗಂಡನ ಕಾಟಕ್ಕೆ ಬದುಕೋದೆ ಕಷ್ಟ ಅಂತಿದ್ದಾಳೆ ಸತಿ..!

1647
0
SHARE

ಮದುವೆಯಾಗೋವಾಗ ತಾಳಿ ಕಟ್ಟೋನು ನನ್ನನ್ನ ರಾಣಿಯ ಹಾಗೆ ನೋಡಿಕೊಳ್ತಾನೆ ಅನ್ನೋ ಖುಷಿಯಲ್ಲಿ ಆಕೆ ತಲೆ ಬಗ್ಗಿಸಿ ಮಾಂಗಲ್ಯ ಕಟ್ಟಿಸಿಕೊಂಡಿದ್ಲು. ಆದ್ರೆ ಜೀವನ ಪೂರ್ತಿ ನಿನಗೆ ಆಶ್ರಯ ಕೊಡ್ತೀನಿ ಅಂದವನು ಪತ್ನಿಗೆ ಕಂಡವರ ಬಳಿ ಸೆರಗು ಹಾಸು ಅಂದಿದ್ದ.

ಹಣಕ್ಕಾಗಿ ಎಷ್ಟು ಬೇಕಾದ್ರು ಮದುವೆಯಾಗು ಯಾರನ್ನಾದ್ರು ಯಾಮಾರಿಸು ಅಂತ ಅರ್ಧಾಂಗಿಗೆ ದಾರಿ ತಪ್ಪಿಸಲು ಹೊರಟಿದ್ದ. ಪತಿಯನ್ನ ರಾಕ್ಷಸನಿಂದ ನಿತ್ಯ ನರಕಯಾತನೆ ಅನುಭವಿಸ್ತಿರೋ ಅಬಲೆಯ ಕಥೆಯಿದು.ವಿಶ್ವ ಮಹಿಳಾ ದಿನವನ್ನ ಆಚರಿಸಿ ಇನ್ನು ಎರಡು ವಾರ ಕಳೆದಿಲ್ಲ. ಮಹಿಳಾ ಸಬಲೀಕರಣ ಅನ್ನೋ ಹೆಸರಲ್ಲಿ ಮಾಡಿದ ಭಾಷಣಗಳು ಇನ್ನು ಮರೆತಿಲ್ಲ. ಅಷ್ಟರಲ್ಲೇ ಮಹಿಳೆಯೊಬ್ಬಳು ಬೀದಿಯಲ್ಲಿ ನಿಂತು ಜೀವ ರಕ್ಷಣೆ ಕೊಡಿ ಅಂತ ಅಂಗಲಾಚುತ್ತಿದ್ದಾಳೆ.

ಈಕೆ ಹಾಸನ ಮೂಲದ ಮಂಜುಳಾ ಅಂತ. ಕೆಲವು ವರ್ಷಗಳ ಹಿಂದೆ ಚರಣ್ ರಾಜ್ ಅನ್ನೋನ ಜೊತೆ ಮದುವೆಯಾಗಿದ್ಲು. ಆದ್ರೆ ಮದುವೆಯಾದ ತಿಂಗಳಿಗೆ ಗಂಡನ ಅಸಲಿ ವ್ಯಕ್ತಿತ್ವ ಆಕೆಗೆ ಗೊತ್ತಾಗಿತ್ತು. ಪತಿ ಮತ್ತು ನಾದಿನಿ ಪವಿತ್ರಾ ಇಬ್ಬರು ಬದುಕೋದಕ್ಕೆ ಜನರನ್ನ ರಾಬರಿ ಮಾಡ್ತಾರೆ ಅನ್ನೋದು ಗೊತ್ತಾಗಿತ್ತು. ಅಲ್ಲದೆ ತನ್ನನ್ನ ಕೂಡಾ ಅದೇ ಕೆಲಸ ಮಾಡು ಅಂತ ಒತ್ತಾಯಿಸ್ತಿದ್ದಾರೆ ಅಂತ ಮಂಜುಳಾ ದೂರುತ್ತಿದ್ದಾರೆ.

ಚರಣ್ ರಾಜ್ ಮತ್ತು ಪವಿತ್ರಾ ಐಟಿ ಅಧಿಕಾರಿಗಳ ಸೋಗಿನಲ್ಲಿ ಹೋಗಿ ಕಡೂರು ಮತ್ತು ಸಿದ್ದಾಪುರದಲ್ಲಿ ಡಾಕ್ಟರ್ ಮನೆ ರೇಡ್ ಮಾಡಿ ಹಣ ದೋಚ್ಕೊಂಡು ಬಂದಿದ್ರು. ನಂತ್ರ ಇಬ್ಬರು ಜೈಲಿಗೆ ಕೂಡಾ ಹೋಗಿ ಬಂದಿದ್ರು. ಇದ್ಯಾಕೋ ವರ್ಕ್ ಔಟ್ ಆಗೋದಿಲ್ಲ ಅಂತ ಅನಿಸಿದ ಮೇಲೆ ಇಬ್ಬರು ಮಂಜುಳಾರನ್ನ ಕಾಡೋದಕ್ಕೆ ಶುರುಮಾಡಿದ್ರು. ನೀನು ಶ್ರೀಮಂತರನ್ನ ಯಾಮಾರಿಸಿ ಮದುವೆಯಾಗು.

ನಂತ್ರ ಅವ್ರಿಂದ ಹಣ ವಸೂಲಿ ಮಾಡ್ಕೊಂಡು ಬಂದುಬಿಡು ಅಂತ ಆಕೆಯನ್ನ ಒತ್ತಾಯಿಸಿದ್ದಾರೆ. ಆಕೆ ಒಪ್ಪದೇ ಇದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇವರಿಬ್ಬರ ಕಾಟ ತಾಳಲಾರದೆ ಆಕೆ ತನ್ನ ಮಗುವಿನ ಜೊತೆ ಬೇರೆ ಹೋಗಿ ವಾಸವಾಗಿದ್ರು.ಮಂಜುಳಾ ಪ್ರತ್ಯೇಕವಾಗಿ ವಾಸವಾಗಿದ್ರು ಚರಣ್ ರಾಜ್ ಮತ್ತು ಪವಿತ್ರಾ ಆಕೆಯನ್ನ ಕೊಲ್ಲುವ ಬೆದರಿಕೆ ಹಾಕ್ತಿದ್ದಾರೆ.

ಹೀಗಾಗಿ ಜೀವ ಭಯದಿಂದ ಮಂಜುಳಾ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಡಿಸಿಪಿಯಿಂದ ಹಿಡಿದು ಡಿಜಿವರೆಗೂ ನನಗೆ ರಕ್ಷಣೆ ಕೊಡಿ ಅಂತ ಮನವಿ ಮಾಡಿದ್ದಾರೆ. ಆದ್ರೆ ಯಾವ ಅಧಿಕಾರಿಗೂ ಸಾಮಾನ್ಯ ಹೆಣ್ಣುಮಗಳ ಕಣ್ಣೀರು ಕಾಣ್ತಿಲ್ಲ. ಬರಿಗೈಯಲ್ಲಿ ಬರೋ ಹೆಣ್ಣಿಗೆ ರಕ್ಷಣೆ ಕೊಡೋದಾದ್ರು ಹೇಗೆ ಅಂತ ಅಧಿಕಾರಿಗಳು ಸುಮ್ಮನಾಗಿದ್ದಾರೆ.

LEAVE A REPLY

Please enter your comment!
Please enter your name here