Home Cinema ಕಾಸ್ಟಿಂಗ್ ಕೌಚ್ ಗೆ ಬಲಿಪಶುವಾಗಿ ತ್ರಿಶಾ,ನಯನತಾರಾ,ಕಾಜಲ್,ಸಮಂತಾ ಅವಕಾಶ ಪಡೆಯೋಕೆ ಮಾಡಿಕೊಂಡಿದ್ದರಂತೆ ಅಡ್ಜಸ್ಟ್ಮೆಂಟ್ !? “ದೊಡ್ಡದಿದೆಯಂತೆ ಲಿಸ್ಟ್”

ಕಾಸ್ಟಿಂಗ್ ಕೌಚ್ ಗೆ ಬಲಿಪಶುವಾಗಿ ತ್ರಿಶಾ,ನಯನತಾರಾ,ಕಾಜಲ್,ಸಮಂತಾ ಅವಕಾಶ ಪಡೆಯೋಕೆ ಮಾಡಿಕೊಂಡಿದ್ದರಂತೆ ಅಡ್ಜಸ್ಟ್ಮೆಂಟ್ !? “ದೊಡ್ಡದಿದೆಯಂತೆ ಲಿಸ್ಟ್”

4464
0
SHARE

ಶ್ರೀ ರೆಡ್ಡಿ.. ಈ ಹೆಸರು ಕೇಳಿದ್ರೇನೆ ಚಿತ್ರರಂಗದವರು ಬೆಚ್ಚಿ ಬೀಳ್ತಾರೆ. ಕೆಲ ತಿಂಗಳ ಹಿಂದೆ ಕಾಸ್ಟಿಂಗ್ ಕೌಚ್ ವಿರುದ್ದ ಪ್ರತಿಭಟನೆ ಅಂತ ಹೇಳಿಕೊಂಡು ಸಾರ್ವಜನಿಕವಾಗಿ ಬೆತ್ತಲಾಗಿದ್ಳು ಶ್ರೀ ರೆಡ್ಡಿ. ಆ ಬಳಿಕ ಸಿನಿರಂಗದ ಕಾಮುರನ್ನೆಲ್ಲಾ ಬೆತ್ತಲೆ ಮಾಡ್ತಿನಿ ಅಂತ ಹೇಳ್ತಾ ಬೆನ್ನು ಬಿದ್ದಿದಾಳೆ. ಇಷ್ಟು ದಿನ ಸ್ಟಾರ್ ನಟ, ನಿರ್ದೇಶಕರ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡ್ತಿದ್ದಾಕೆ, ಈ ಸಾರಿ ಟಾಪ್ ನಟಿಯರ ಬಗ್ಗೆಯೊಂದು ಶಾಕಿಂಗ್ ನ್ಯೂಸ್ ಕೊಟ್ಟಿದಾಳೆ.

ಶ್ರೀ ರೆಡ್ಡಿ ಈ ಬಾರಿ ಶಾಕಿಂಗ್ ನ್ಯೂಸ್ ಕೊಟ್ಟಿರೋದು ಟಾಪ್ ನಟಿಯರ ಬಗ್ಗೆ.  ತಮ್ಮ ಫೇಸ್ ಬುಕ್ ನಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ ತೆಲುಗು ಚಿತ್ರರಂಗದ ಖ್ಯಾತ ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾಳೆ.  ಟಾಪ್ ನಟಿಯರ ಹೆಸರನ್ನ ಹಾಕಿ ಕೆಲ ಅಕ್ಷರಗಳನ್ನ ಬಿಟ್ಟು, ಬಿಟ್ಟ ಸ್ಥಳ ತುಂಬಿಸಿಕೊಳ್ಳಿ ಅಂತ ಸವಾಲ್ ಹಾಕಿದಾಳೆ.

ಶ್ರೀ ರೆಡ್ಡಿ ಪೋಸ್ಟ್ -‘ಕೆಲವರು ನನ್ನ ಲಿಸ್ಟ್ ತುಂಬಾ ದೊಡ್ಡದಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ನನ್ನ ಲಿಸ್ಟ್ ತುಂಬಾ ಚಿಕ್ಕದಿದೆ. ಒಂದು ವೇಳೆ ತ್ರಿ…, ನಯ..ತಾ…, ಕಾ…..ಲ ಹಾಗೂ ಸ…ತಾ, ತಾವು ಎದುರಿಸಿದ ಕಾಸ್ಟಿಂಗ್ ಕೌಚ್​ ಬಗ್ಗೆ ಮಾತನಾಡಿದ್ರೆ, ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುವ ಸುದ್ದಿಯನ್ನು ಕೇಳಬೇಕಾಗುತ್ತೆ’…

ಶ್ರೀ ರೆಡ್ಡಿ ಹಾಕಿರೋ ಈ ಪೋಸ್ಟ್  ಸದ್ಯ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಇಲ್ಲಿ ಸೂಚ್ಯವಾಗಿ ಶ್ರೀ ರೆಡ್ಡಿ ಯಾರ ಹೆಸರು ಹಾಕಿದಾಳೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ ಅಲ್ವಾ. ಎಲ್ಲರಿಗೂ ಇದ್ಯಾರ ಹೆಸರು ಅಂಬೊದು ಅರ್ಥವಾಗಿ ಹೋಗಿದೆ. ಮೊದಲನೇಯದ್ದಾಗಿ ತ್ರಿ ಅಂದ್ರೆ ತ್ರಿಷಾ.ಕಳೆದು ಎರಡು ದಶಕಗಳಿಂದಲೂ ಸೌತ್ ಸಿನಿರಂಗದಲ್ಲಿ ಸಕ್ರೀಯವಾಗಿರೋ ನಟಿ ತ್ರಿಷಾ.

ತಮಿಳು-ತೆಲಗುನಲ್ಲಿ ಒಂದಿಡಿ ದಶಕ ಬಹುಬೇಡಿಕೆಯ ತಾರೆಯಾಗಿ ಮೆರೆದವರು. ಎಲ್ಲಾ ಸ್ಟಾರ್ ನಟರ ಜೊತೆಗೂ ನಟಿಸಿದಾಕೆ. ಕನ್ನಡ-ಮಲೆಯಾಳಂನಲ್ಲೂ ಬಣ್ಣ ಹಚ್ಚಿದ್ದಾರೆ ತ್ರಿಷಾ.ಇಂಥಾ ತ್ರಿಷಾ ಕೂಡ ಪ್ರಾರಂಭಿಕ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಗೆ ಬಲಿಯಾಗಿದ್ದರಾ..ಹೌದು ಅಂತಾಳೆ ಶ್ರೀ ರೆಡ್ಡಿ. ತ್ರಿಷಾ ಬದುಕಿನಲ್ಲಿ ಹಲವು ಅಪೇರ್ ಗಳು ನಡೆದಿವೆ. 2015ರಲ್ಲಿ ಉದ್ಯಮಿಯೊಬ್ಬರ ಜೊತೆಗೆ ಎಂಗೇಜ್ ಆಗಿದ್ದ ತ್ರಿಷಾ ನಂತರ ಆ ಸಂಬಂಧವನ್ನ ಮುರಿದುಕೊಂಡಿದ್ದೂ ಆಗಿದೆ.

ಆದ್ರೆ ಈ ಕಾಸ್ಟಿಂಗ್ ಕೌಚ್ ವಿಷ್ಯ ಮಾತ್ರ ಹೊಚ್ಚ ಹೊಸಾದು.ಇನ್ನೂ ಶ್ರೀ ರೆಡ್ಡಿ ಉಲ್ಲೇಖಿಸಿರೋ ಇನ್ನೊಂದು ಹೆಸರು ನಯ—ತಾ.. ಅಂತ ಹೀಗಂದ್ರೆ ನಯನತಾರಾ ಅನ್ನೋದು ತಿಳಿಯದೇ ಇರದು. ನಯನತಾರಾ ಕೂಡ ಸೌತ್ ಸಿನಿರಂಗದ ಖ್ಯಾತ ನಟಿ. ನಯನತಾರಾ ಕಳೆದ ಒಂದೂವರೆ ದಶಕದಿಂದ ಸಿನಿರಂಗದಲ್ಲಿ ಸಕ್ರೀಯವಾಗಿದಾರೆ…

ಒಂದೊಮ್ಮೆ ಕಾಲಿವುಡ್, ಟಾಲಿವುಡ್ ನ ನಂಬರ್ ನಂ.1 ನಟಿಯಾಗಿದ್ದವರು ನಯನತಾರಾ. ಎಲ್ಲಾ ಟಾಪ್ ಸ್ಟಾರ್ ಗಳ ಜೊತೆಗೂ ನಟಿಸಿದವರು. ಕನ್ನಡ-ಮಲೆಯಾಳಂ ನಲ್ಲೂ ನಯನತಾರಾ ನಟಿಸಿದಾರೆ.ಇಂಥಾ ನಯನತಾರಾ ಲೈಫ್ ನಲ್ಲಿ ನಡೆದ ಲವ್ – ಬ್ರೇಕಪ್ ಕಥೆಗಳು ಸಾಕಷ್ಟು. ಅವೆಲ್ಲದರ ಬಗ್ಗೆಯೂ ಜನರಿಗೆ ಗೊತ್ತಿರೋದೇ. ಆದ್ರೆ ಚಿತ್ರರಂಗದಲ್ಲಿ ಕೆಲ ಕಾಮುಕರಿಂದ ನಯನತಾರಾ ನೋವು ಅನುಭವಿಸಿದ್ದಾರೆ ಅಂತ ಶ್ರೀ ರೆಡ್ಡಿ ಹೇಳ್ತಾ ಇರೋದು ಹೊಸ ಸಂಗತಿ.

ಇನ್ನೂ ಮತ್ತೊಂದು ಹೆಸರು ಕಾ—ಲ ಅಂತ ಹೀಗಂದ್ರೆ ಕಾಜಲ್ ಅಗರವಾಲ್ ಅಂತ. ಮಗಧೀರನ ಬೆಡಗಿಯ ಹೆಸರನ್ನೂ  ಶ್ರೀ ರೆಡ್ಡಿ ಎಳೆದು ತಂದಿದಾಳೆ…2004ರಲ್ಲಿ ಬಾಲಿವುಡ್ ನಲ್ಲಿ  ಬಣ್ಣ ಹಚ್ಚಿದ ಕಾಜಲ್, ಕ್ಲಿಕ್ ಆಗಿದ್ದು ಮಾತ್ರ ಟಾಲಿವುಡ್-ಕಾಲಿವುಡ್ ನಲ್ಲಿ.ಕಳೆದೊಂದು ದಶಕದಿಂದ ಕಾಜಲ್ ಬಹುಬೇಡಿಕೆಯ ಸೌತ್ ನಟಿಯಾಗಿ ಗುರುತಿಸಿಕೊಂಡಿದಾರೆ. ಬಾಲಿವುಡ್ ಮಲ್ಲೂ ಹಲವು ದೊಡ್ಡ ತಾರೆಯರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದಾರೆ.

ಇಂಥಾ ಕಾಜಲ್ ಗೂ ಅಂಥಾ ಎಕ್ಸಪೀರಿಯನ್ಸ್ ಆಗಿತ್ತು ಅಂತಿದಾಳೆ ಶ್ರೀ ರೆಡ್ಡಿ.ಇನ್ನೂ ಶ್ರೀ ರೆಡ್ಡಿ ಪಟ್ಟಿಯಲ್ಲಿರೋ ಕೊನೆ ಹೆಸರು ಸ—ತಾ.. ಹೀಗಂದ್ರೆ ಸಮಂತಾ ಅನ್ನೋದು ತಿಳಿಯದೇ ಇರದು. ಸಮಂತಾ ಕೂಡ ಸೌತ್ ಸಿನಿರಂಗದ ಟಾಪ್ ನಟಿ. ಕಳೆದ ಎಂಟು ವರ್ಷಗಳಿಂದ ಸ್ಯಾಮ್ ಸಿನಿ ಇಂಡಸ್ಟ್ರಿಯಲ್ಲಿದಾಳೆ. ಕಳೆದ ವರ್ಷವಷ್ಟೇ ನಟ ನಾಗ ಚೈತನ್ಯ ಜೊತೆ ಮದುವೆಯಾಗಿ ಅಕ್ಕಿನೇನಿ ಫ್ಯಾಮಿಲಿ ಸೊಸೆಯಾಗಿದಾಳೆ.ಶ್ರೀ ರೆಡ್ಡಿ ಅಂದಕೂಡಲೇ ಮೊದಲು ನೆನಪಿಗೆ ಬರೋದು, ಈಕೆ ಮಾಡಿದ ಬೆತ್ತಲೆ ಪ್ರತಿಭಟನೆ…

ಕಳೆದ ಏಪ್ರಿಲ್ ತಿಂಗಳಲ್ಲಿ ಟಾಲಿವುಡ್ ನಲ್ಲಿ ನಡೀತಾ ಇರೋ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಶ್ರೀ ರೆಡ್ಡಿ, ಈ ಬಗ್ಗೆ ತೆಲುಗು ಫಿಲಂ ಚೇಂಬರ್ ಕ್ರಮ ಕೈಗೊಳ್ಳಬೇಕು ಮತ್ತು ತೆಲುಗು ಚಿತ್ರಕಲಾವಿದರ ಸಂಘದಲ್ಲಿ ಯುವನಟಿಯರಿಗೆ ಆಗ್ತಿರೋ ಅನ್ಯಾಯ ಸರಿಪಡಿಸಬೇಕು ಅಂತ ಬೇಡಿಕೆ ಇಟ್ಟಿದ್ಳು. ಟಾಲಿವುಡ್ ಎಂಬ ಸಮುದ್ರದಲ್ಲಿ ಶ್ರೀ ನಟಿ ಎಂಬ ಯುವನಟಿಯ ಕೂಗು ಸದ್ದು ಮಾಡಲೇ ಇಲ್ಲ. ಯಾರೊಬ್ರು ಈಕೆಯ ಹೇಳಿಕೆ ಕಡೆ ಗಮನ ಕೊಡಲೇ ಇಲ್ಲ.

ಗಮನ ಕೊಟ್ಟರೂ ಮುಗುಳ್ನಕ್ಕೂ, ಇವಳದ್ದು ಇದ್ದಿದ್ದೇ ಅಂತ ಸುಮ್ಮನಾಗಿ ಬಿಟ್ಟಿದ್ರು. ಒಂದು ಹಂತದಲ್ಲಿ ಶ್ರೀ ರೆಡ್ಡಿ ಫಿಲಂ ಚೇಂಬರ್ ಈ ಬಗ್ಗೆ ಪ್ರತಿಕ್ರಿಯಿಸದೇ ಹೋದ್ರೆ ತಾನು ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡ್ತೆನೆ ಅಂತಲೂ ಹೇಳಿದ್ಳು…ಆಗಲೂ ಯಾರು ತಲೆಕೆಡಿಕೊಳಡಿರಲಿಲ್ಲ. ಫೈನಲಿ ಶ್ರೀ ರೆಡ್ಡಿ ತಾನು ಹೇಳಿದಂತೆಯೇ ಮಾಡಿಬಿಟ್ಟ್ಟಿದ್ಳು.ಕಳೆದ ಏಪ್ರಿಲ್ 7ನೇ ತಾರೀಖು, ಆಂಧ್ರ ಫಿಲಂ ಚೇಂಬರ್ ಎದುರು ಬಂದ ಈಕೆ ತಾನು ಹೇಳಿದಂತೆಯೇ ಬೆತ್ತಲೆ ಪ್ರತಿಭಟನೆ ಮಾಡಿದ್ಳು.  ಶ್ರೀ ರೆಡ್ಡಿಯ  ಪ್ರತಿಭಟನೆ ನೋಡಿ ತೆಲುಗು ಚಿತ್ರರಂಗವೇ ಬೆಚ್ಚಿಬಿದ್ದಿತ್ತು.

ಜಸ್ಟ್ ತೆಲುಗು ಚಿತ್ರರಂಗವಲ್ಲ ಏನಿದು ಘಟನೆ ಅಂತ ಇಡೀ ದೇಶವೇ ಒಮ್ಮೆ ತೆಲುಗು ಸಿನಿರಂಗದತ್ತ ನೋಡುವಂತೆ ಆಗಿತ್ತು.ಈ ಪ್ರತಿಭಟನೆ ಬಳಿಕ ಶ್ರೀ ರೆಡ್ಡಿ ಬಂಧನವಾಗಿತ್ತು. ಜೈಲಿಗೋಗಿ ಬಂದಾಕೆ ಇನ್ನುಮುಂದೆ ತಾನು ಬೆತ್ತಲಾಗಲ್ಲ. ಚಿತ್ರರಂಗವನ್ನ ಬೆತ್ತಲು ಮಾಡ್ತಿನಿ ಅಂತ ಪಣ ತೊಟ್ಳು. ಅದಾಗಲೇ ಗಾಯಕ ಶ್ರೀರಾಮ್ ಕಳುಹಿಸಿದ ಅಶ್ಲೀಲ ಮೆಸೆಜ್  ಗಳನ್ನ ಬಯಲು ಮಾಡಿದ್ಳು…

ನಂತರ ಹೆಸರಾಂತ ನಟ ರಾಣಾ ದಗ್ಗಬಾಟಿಯ ಸಹೋದರ ಅಭಿರಾಮ್ ದಗ್ಗುಬಾಟಿಯ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿರೋ ಫೊಟೋಗಳನ್ನ ಬಹಿರಂಗ ಪಡಿಸಿದ್ಳು.ಈ ಪೋಟೋಗಳನ್ನ ನೋಡಿ, ತೆಲುಗು ಚಿತ್ರರಂಗ ಬೆಚ್ಚಿಬಿದ್ದಿದ್ದು ಸುಳ್ಳಲ್ಲ. ಅಭಿರಾಮ್ ತನ್ನನ್ನ ಬಳಸಿಕೊಂಡು ತನಗೆ ಮೋಸ ಮಾಡಿದ ಅಂತ ಶ್ರೀ ರೆಡ್ಡಿ ಹೇಳಿಕೊಂಡಿದ್ಳು. ಇನ್ನೂ ಹಲವು ಹೆಸರಾಂತ ನಟ-ನಿರ್ಮಾಪಕರು ತನ್ನ ಜೊತೆಗೆ ಅಸಭ್ಯವಾಗಿ ತೆಗಸಿಕೊಂಡಿರೋ ಫೊಟೊಗಳಿವೆ ಅಂತ ಬಾಂಬ್ ಕೂಡ ಹಾಕಿದ್ಳು.

ಇನ್ನು ಈ ನಡುವೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗಿನ ಕಿರಿಕ್ ನಿಂದಾನೂ ಶ್ರೀ ರೆಡ್ಡಿ ಸುದ್ದಿ ಮಾಡಿದ್ಳು., ಶ್ರೀ ರೆಡ್ಡಿಯ ಈ ರಂಪಾಟದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟರ್ ಆಗಿದ್ದೊಂದು ಇನ್ ಟ್ರೆಸ್ಟಿಂಗ್ ಕಥೆ…ಅಸಲಿಗೆ ಶ್ರೀ ರೆಡ್ಡಿ ಈ ರೀತಿ ದಿನಕ್ಕೊಬ್ಬರ ಜೊತೆಗಿರೋ ಫೊಟೋ ಲೀಕ್ ಮಾಡ್ತಾ ತನಗೆ ಅನ್ಯಾಯವಾಗ್ತಿದೆ ಅಂತ ಬಟ್ಟೆ ಬಿಚ್ಚಿಕೊಂಡು ಓಡಾಡ್ತಿರೋವಾಗ, ತೆಲುಗು ಮಾಧ್ಯಮಗಳು ಈ ಬಗ್ಗೆ ಅಲ್ಲಿನ ನಟರ ಪ್ರತಿಕ್ರಿಯೆ ಕೇಳ್ತಾ ಇದ್ವು. ಹಾಗೇನೆ ನಟ-ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಗೂ ಶ್ರೀ ರೆಡ್ಡಿ ಬಗ್ಗೆ ಪ್ರಶ್ನೆ ಎದುರಾಯ್ತು. ಅದಕ್ಕೆ ಪವನ್ ಡಿಸೇಂಟ್ ಆಗೇ ಉತ್ತರ ಕೊಟ್ಟಿದ್ರು.

ಹೀಗೆ ಬಟ್ಟೆ ಬಿಚ್ಚಿ ಪ್ರತಿಭಟನೆ  ಅಂತಾ ಮಾಧ್ಯಮಗಳಲ್ಲಿ ಸುದ್ದಿ ಮಾಡೋದ್ರ ಬದಲು ಶ್ರೀ ರೆಡ್ಡಿ ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ಕೊಡಲಿ ಅಂತ ಪವನ್ ಪ್ರತಿಕ್ರಿಯೆ ಕೊಟ್ಟಿದ್ರು.ತನ್ನ  ಕುರಿತು ಪವನ್ ಇಂಥಾ ಹೇಳಿಕೆ ನೀಡಿದ್ದೇ ತಡ ಕೆಂಡಾಮಂಡಲಳಾದ ಶ್ರೀ ರೆಡ್ಡಿ ಮಾಧ್ಯಮಗಳ ಮುಂದೆ ಬಂದು ಪವನ್ ನ ಹಿಗ್ಗಾಮುಗ್ಗಾ ನಿಂದಿಸಿದ್ಳು…ಈ ಮೊದಲು ಪವನ್ ರನ್ನ ಅಣ್ಣಾ ಅಂತ ಭಾವಿಸಿದ್ದೆ. ಆದ್ರೆ ಅವರನ್ನ ಅಣ್ಣಾ ಅಂತ ನಂಬಿದ ತಪ್ಪಿಗೆ ಚಪ್ಪಲಿಯಿಂದ ಹೊಡೆದುಕೊಳ್ತಿನಿ ಅಂತ ಮಾಧ್ಯಮಗಳ ಎದುರು ಹೈಡ್ರಾಮಾ ಆಡಿದ್ಳು.ಇಷ್ಟೇ ಆಗಿದ್ರು ಮುಗಿದಿರೋದೇನೋ..

ಪವನ್ ಕಲ್ಯಾಣ್ ಗೆ ಅಸಭ್ಯಭಾಷೆಯಲ್ಲಿ ನಿಂದಿಸ್ತಾಳೆ. ಮಿಡಲ್ ಫಿಂಗರ್ ತೋರಿಸಿ ಕೆಟ್ಟದಾಗಿ ಸನ್ನೇ ಮಾಡ್ತಾಳೆ.ಪವನ್ ಕಲ್ಯಾಣ್ ಎಂಬ ಸೂಪರ್ ಸ್ಟಾರ್ ರನ್ನ ಯಕಃಶ್ಚಿತ್ ಎರಡನೇ ಧರ್ಜೆ ನಟಿಯೊಬ್ಳು ಹೀಗೆ ನಿಂದಿಸಿದ್ದು. ಕೆಟ್ಟ ಕೊಳಕ ಭಾಷೆಯಲ್ಲಿ ಜರಿದಿದ್ದನ್ನ ನೋಡಿ ಟಾಲಿವುಡ್ ಸ್ಟನ್ ಆಗಿ ಹೋಯ್ತು. ತೆಲಗು ಮಾಧ್ಯಮಗಳು ಇದನ್ನ ದೊಡ್ಡ ಸುದ್ದಿ ಮಾಡಿದ್ವು.ಒಂದು ಹಂತದವರೆಗೂ ಸುಮ್ಮನಿದ್ದ ಮೆಗಾಫ್ಯಾಮಿಲಿ…ಆಂದ್ರ ಮಾಧ್ಯಮಗಳು ಪದೇ ಪದೇ ಶ್ರೀ ರೆಡ್ಡಿ ಪವನ್ ಗೆ ಬೈದ ಪದವನ್ನ ಹೈಲೈಟ್ ಮಾಡಿ ತೋರಿಸ್ತಾ ಇದ್ದಿದ್ದನ್ನ ನೋಡಿ ಕ್ರುದ್ದರಾಗಿ ಹೋದ್ರು. ಮೆಗಾ ಬ್ರದರ್ಸ್ ಇದನ್ನ ಸಿರಿಯಸ್ಸಾಗಿ ತೆಗೆದುಕೊಂಡು ಹೊರಬಂದ್ರು.

ಅಭಿಮಾನಿಗಳು ದೊಡ್ಡ ಮಟ್ಟದ ಪ್ರತಿಭಟನೆಗೆ ಇಳಿದ್ರು. ಅಲ್ಲಿಗೆ ಕಾಸ್ಟಿಂಗ್ ಕೌಚ್ ನೆಪದಲ್ಲಿ ಶುರುವಾದ ವಿವಾದ ಬೇರೆಯದ್ದೇ ಸ್ವರೂಪ ಪಡೆದುಕೊಂಡು ಟಾಲಿವುಡ್ ಅಲ್ಲೋಲ ಕಲ್ಲೋಲವಾಯ್ತು. ಖುದ್ದು ಪವನ್ ಕಲ್ಯಾಣ್ ಶ್ರೀ ರೆಡ್ಡಿ ವಿರುದ್ದ ಕಲಾವಿದರ ಸಂಘದಲ್ಲಿ ಕಂಪ್ಲೆಂಟ್ ಕೊಟ್ಟಿದಾರೆ. ಆದ್ರೆ ಶ್ರೀ ರೆಡ್ಡಿ ಅಂತೂ ಸುಮ್ಮನಾಗಿಲ್ಲ. ದಿನಕೊಬ್ಬರಂತೆ ತಾರೆಯರನ್ನ ಬೆತ್ತಲೆ ಮಾಡ್ತಾನೇ ಇದಾಳೆ. ಸದ್ಯ ತ್ರಿಶಾ, ನಯನತಾರಾ, ಕಾಜಲ್, ಸಮಂತಾರ ಬೆನ್ನು ಬಿದ್ದಿದಾಳೆ…

LEAVE A REPLY

Please enter your comment!
Please enter your name here