Home Cinema ಕಿಂಗ್ ಖಾನ್ ದಯನೀಯ ಸ್ಥಿತಿಗೆ, ಅಭಿಮಾನಿಗಳು ಕಣ್ಣೀರು..! ಶಾರುಖ್ ಎಡವಿದ್ರು ಎಳೆಯುವಲ್ಲಿ 100 ಕೋಟಿ ತೇರು..!

ಕಿಂಗ್ ಖಾನ್ ದಯನೀಯ ಸ್ಥಿತಿಗೆ, ಅಭಿಮಾನಿಗಳು ಕಣ್ಣೀರು..! ಶಾರುಖ್ ಎಡವಿದ್ರು ಎಳೆಯುವಲ್ಲಿ 100 ಕೋಟಿ ತೇರು..!

2370
0
SHARE

’ನಥಿಂಗ್ ಇಸ್ ಪರ್ಮಾನೆಂಟ್’ ಎನ್ನುವ ಹಳೆಗಾದೆ ಮಾತು ಈಗ ಬಾಲಿವುಡ್ ಕಾ ಬಾದ್‌ಷಾ ಶಾರುಕ್‌ಖಾನ್ ಲೈಫ್‌ನಲ್ಲಿ ಗಹಗಹಿಸಿ ನಕ್ತಿದೆ. ಇಷ್ಟುವರ್ಷಗಳ ಕಾಲ ತಮ್ಮ ಅಭಿಮಾನಿಗಳ ಬಾಯಲ್ಲಿ ’ಕಿಂಗ್ ಖಾನ್’ ಎನ್ನೋ ಬಿರುದು ಗಿಟ್ಟಿಸಿಕೊಂಡಿದ್ದ ಶಾರುಕ್‌ನ ಸಾಮ್ರಾಜ್ಯದ ಪತನಕಾಲ ಹತ್ತಿರ ಬಂದಿದೆ ಅನ್ಸುತ್ತೆ. ಶಾರುಕ್ ಸಿನಿಕೆರಿಯರ್‌ನಲ್ಲಿ ವಿಧಿ ಆಡ್ತಿರೋ ಅದೃಷ್ಟದ ಆಟದ ಮುಂದೆ ಕಿಂಗ್‌ಖಾನ್ ಕ್ಲೀನ್ ಬೋಲ್ಡ್ ಆಗಿಬಿಟ್ಟಿದಾರೆ.

ಒಂದು ಕಾಲವಿತ್ತು ಕಣ್ರೀ. ಶಾರುಕ್‌ಖಾನ್ ಆಕ್ಟ್ ಮಾಡಿದ ಸಿನಿಮಾಗಳು ಅಂದ್ರೆ ಬಾಲಿವುಡ್‌ನ ಫಿಲಂ ಡಿಸ್ಟ್ರಿಬ್ಯೂಟರ್‌ಗಳು ಕಣ್ಣು ಮುಚ್ಚಿಕೊಂಡು ಸಿನಿಮಾ ಹಂಚಿಕೆ ಮಾಡ್ತಿದ್ರು, ಅಭಿಮಾನಿಗಳು ಶಾರುಕ್ ಪೋಸ್ಟರ್ ನೋಡಿಯೇ ಬ್ಲಾಕ್ ಟಿಕೆಟ್ ಪರ್‌ಚೇಸ್ ಮಾಡ್ತಿದ್ರು. ಬಾಲಿವುಡ್‌ನ ದೊಡ್ಡದೊಡ್ಡ ಪ್ರೊಡ್ಯೂಸರ್‌ಗಳು ನಮಗೂ ಒಂದು ಕಾಲ್‌ಶೀಟ್ ಕೊಡಿಪ್ಪಾ ಅಂತ ಶಾರುಕ್ ಮನೆಮುಂದೆ ಕ್ಯೂ ನಿಲ್ತಿದ್ರು. ಆದರೆ ಈ ದೊಡ್ಡ ಹಿಸ್ಟರಿಗೆ ಈಗ ಫುಲ್‌ಸ್ಟಾಪ್ ಬೀಳೊ ಬ್ಯಾಡ್‌ಟೈಮ್ ಬಂದಿದೆ.

ಹಿಂದಿ ಚಿತ್ರರಂಗವನ್ನ ಅಕ್ಷರಶಃ ರೂಲ್ ಮಾಡಿದ ಕಿಂಗ್‌ಖಾನ್ ಮ್ಯಾಜಿಕ್ ಯಾಕೋ ಠುಸ್ ಆಗಿಬಿಟ್ಟಿದೆ.ಯಾರು ಏನೇ ಹೇಳಿದ್ರೂ ’ಐ ಎಮ್ ದಿ ಬೆಸ್ಟ್’ ಅಂತ ವಾದ ಮಾಡ್ತಿದ್ದ ಶಾರುಕ್ ಬಾಯಿಗೆ ಈಗ ಲಗಾಮು ಬಿದ್ದಿದೆ. ಇತ್ತೀಚೆಗೆ ಶಾರುಕ್ ಅಭಿನಯಿಸಿದ ಯಾವ ಸಿನಿಮಾಗಳು ಮ್ಯಾಜಿಕ್ ಮಾಡ್ತಿಲ್ಲ ಅನ್ನೋದೆ ಘೋರ ದುರಂತ. ಅದರಲ್ಲೂ ಭಾರತೀಯ ಸಿನಿಮಾರಂಗವನ್ನೇ ಅಲ್ಲಾಡಿಸಿಬಿಡುತ್ತೆ ಎಂದುಕೊಂಡು ಮೊನ್ನೆಯಷ್ಟೇ ೪೬೦೦ ಸ್ಕ್ರೀನ್‌ಗಳಲ್ಲಿ ರಿಲೀಸ್ ಆದ ’ಜೀರೊ’ ಸಿನಿಮಾ ೧೦೦ ಕೋಟಿ ಕ್ಲಬ್ ದಾಟೋಕೂ ಇನ್ನಿಲ್ಲದ ಹರಸಾಹಸ ಪಡುತ್ತಿದೆ.

ಇದುವೇ ಅಭಿಮಾನಿಗಳ ಬೇಸರಕ್ಕೆ ಹಾಗೂ ಅಸಮಾಧಾನಕ್ಕೆ ಸದ್ಯ ಕಾರಣವಾಗಿದೆ.ನಿಮಗೆ ಗೊತ್ತಿರಲಿ, ಝೀರೋ ತೆರೆಗೆ ಬಂದ ಘಳಿಗೆಯಲ್ಲಿ ಇದ್ದಿದ್ದು ಸಾಲು ಸಾಲು ರಜೆ. ರಜೆ ಮಜೆಯನ್ನ ಮತ್ತಷ್ಟು ಹೆಚ್ಚಿಸುವ ಉಮೇದಿಯೊಂದಿಗೆ ಶಾರುಕ್ ಬರಲು ಸಿದ್ಧನಾದಾಗ, ಅಭಿಮಾನಿಗಳೆಲ್ಲಾ ಅಂದುಕೊಂಡಿದ್ದು.. ಸಿನಿಮಾ ಅನಾಯಾಸವಾಗಿ ನೂರು ಕೋಟಿ, ಇನ್ನೂರು ಕೋಟಿ ಕೊಳ್ಳೆ ಹೊಡೆಯುತ್ತೆ ಅಂಥಾನೇ. ಇದಕ್ಕೆ ತಕ್ಕಂತೆ ರಜೆಗಳು ಇದ್ದ ಕಾರಣ, ಬಿಟೌನ್ ಪಂಡಿತರು ಶಾರುಕ್‌ನ ಝೀರೋಗೆ ೨೦೦ ಕೋಟಿ ಕೇಕ್ ವಾಕ್ ಅಂಥನೇ ಅಂದುಕೊಂಡಿದ್ದರು.

ಬಟ್, ಟೈಮು ಖರಾಬ್ ಆಗಿದ್ದಾಗ, ಮಾಡಿದ ಪ್ರಯತ್ನಗಳೆಲ್ಲಾ ನೆಲಕಚ್ಚುತ್ತಿರುವಾಗ.. ಏನ್ ಹೇಳುವದು ಕಷ್ಟ. ಇದಕ್ಕೆ ಬೆಸ್ಟ್ ಎಕ್ಸಾಂಫಲ್ ಅನ್ನುವಂತೆ ರಜೆಗಳ ನಡುವೆಯೂ ಶಾರುಕ್ ಸಿನಿಮಾ ಮೂರು ದಿನಗಳಲ್ಲಿ ಗಳಿಸಿದ್ದು ಬರೀ ೫೯ಕೋಟಿ. ಅದು, ಪ್ರಯಾಸಕರವಾಗಿ.ಶಾರುಕ್ ಅಭಿನಯದ ಹಿಂದಿನ ಚಿತ್ರಗಳಾದ ದಿಲ್‌ವಾಲೆ, ರಯಿಸ್ ಹಾಗೂ ಜಬ್ ಹ್ಯಾರಿ ಮೆಟ್ ಸೆಝಲ್’ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಸೌಂಡ್ ಮಾಡ್‌ಲಿಲ್ಲ. ಇದಕ್ಕೆ ಮುಖ್ಯ ಕಾರಣ ಶಾರುಕ್ ಆಯ್ಕೆ ಮಾಡಿಕೊಳ್ತೀರೊ ಡಮ್ಮಿ ಕಥೆಗಳು ಎಂದು ಬಾಲಿವುಡ್ ಪಂಡಿತರು ಪಾಯಿಂಟ್‌ಔಟ್ ಮಾಡಿದಾರೆ.

ಈಗ ಅದೇ ಫ್ಲಾಪ್ ಲಿಸ್ಟ್‌ಗೆ ’ಜೀರೊ’ ಕೂಡ ಸೇರ್ತಿ ರೋದು ಶಾರುಕ್ ಫ್ಯಾನ್ಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಹೋಗಿದೆ.ಅದೇನೇ ಆಗ್ಲಿ, ಹೆಸರಿಗೆ ತಕ್ಕಂತೆ ’ಜೀರೊ’ ಸಿನಿಮಾ ನಿಜಕ್ಕೂ ಜೀರೊ ಆಗಿಬಿಡ್ತಲ್ಲಪ್ಪ ಅಂತ ಶಾರುಕ್ ಫ್ಯಾನ್ಸ್ ತಲೆ ಮೇಲೆ ಕೈ ಹೊತ್ತು ಕುಳಿತಿದಾರೆ. ಇನ್ನೂ ಕೆಲವರು ಮಾತ್ರ ’ಎಕ್ಸಾಪರಿಮೆಂಟಲ್ ಸಿನಿಮಾ ಮಾಡೋವಾಗ ಒಮ್ಮೊಮ್ಮೆ ಹೀಗಾಗಿಬಿಡುತ್ತೆ’ ಅಂತ ತಮ್ಮ ನೆಚ್ಚಿನ ಕಿಂಗ್‌ಖಾನ್‌ರನ್ನ ಸರ್ಮಥಿಸಿಕೊಂಡಿದಾರೆ.

ಹಾಗೂ ಹೀಗೂ ಈ ’ಜೀರೊ’ ೧೦೦ ಕೋಟಿಕ್ಲಬ್ ದಾಟಿಬಿಟ್ರೆ ಸಾಕಪ್ಪ ಎನ್ನುವ ಪ್ರಾರ್ಥನೆ ಶುರುಹಚ್ಚಿಕೊಂಡಿದಾರೆ ಶಾರುಕ್ ಫ್ಯಾನ್ಸ್.ಒಟ್ಟಾರೆಯಾಗಿ ಶಾರುಕ್‌ರ ಈ ’ಹೀರೊ ಟು ಜೀರೊ’ ಸ್ಯಾಡ್ ಸ್ಟೋರಿ ಶಾರುಕ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ. ಒಂದು ಟೈಮ್‌ನಲ್ಲಿ ಪೈಸಾವಸೂಲ್ ಸಿನಿಮಾಗಳನ್ನೇ ಕೊಡ್ತಿದ್ದ ಶಾರುಕ್ ಈಗೀಗ ಡಲ್ ಹೊಡಿತಿರೋದು ಎಲ್ಲರಲ್ಲೂ ಒಂದು ರೀತಿಯ ಆತಂಕ ಮೂಡಿಸಿದೆ.

ಹೀಗೆ ಮುಂದುವರೆದ್ರೆ ಶಾರುಕ್ ಬಾಲಿವುಡ್‌ನ ಘಟನುಘಟಿಗಳ ರೇಸ್‌ನಿಂದ ಸದ್ಯದಲ್ಲೇ ಔಟ್ ಆಗೋದಂತೂ ಗ್ಯಾರಂಟಿ. ಇನ್ನಾದ್ರೂ ಈ ರೋಮ್ಯಾನ್ಸ್ ಕಿಂಗ್ ಒಳ್ಳೆ ಸಿನಿಮಾಗಳಿಗೆ ಓಕೆ ಎನ್ನುವುದರ ಮೂಲಕ ತಮ್ಮ ಸಿಂಹಾಸನವನ್ನ ಭದ್ರ ಪಡಿಸಿಕೊಳ್ತಾರಾ.. ಅಥ್ವಾ.. ನಟನೆ ಸಹವಾಸ ಸಾಕು ಅಂಥ ಸಿನಿಮಾದಿಂದ ದೂರ ಉಳಿದು ಬರೀ ನಿರ್ಮಾಪಕರಾಗಿ ಇರ‍್ತಾರಾ ಎನ್ನುವುದಷ್ಟೇ ಸದ್ಯದ ಪ್ರಶ್ನೆ . !

LEAVE A REPLY

Please enter your comment!
Please enter your name here