Home Cinema ಕಿಚ್ಚ ಸುದೀಪ್‌ಗೆ ಆಗಿದ್ಯಂತೆ ಅಪಘಾತ..!! ನಿಜಾನಾ..??? ಕಿಚ್ಚನ ಬಗ್ಗೆ ಕಿಡಿಗೇಡಿಗಳು ಹಬ್ಬಿಸಿದ್ದು ಅದ್ಯಾವ ವದಂತಿ..!!

ಕಿಚ್ಚ ಸುದೀಪ್‌ಗೆ ಆಗಿದ್ಯಂತೆ ಅಪಘಾತ..!! ನಿಜಾನಾ..??? ಕಿಚ್ಚನ ಬಗ್ಗೆ ಕಿಡಿಗೇಡಿಗಳು ಹಬ್ಬಿಸಿದ್ದು ಅದ್ಯಾವ ವದಂತಿ..!!

3604
0
SHARE

ಅಭಿನಯ ಚಕ್ರವರ್ತಿ ಸುದೀಪಗೆ ಅಪಘಾತವಾಗಿದೆ, ಹೀಗೊಂದು ಸುದ್ದಿ ಕಳೆದ ನಾಲ್ಕೈದು ದಿನಗಳಿಂದ ಗಿರಕಿ ಹೊಡೆಯುತ್ತಾನೇ ಇದೆ. ಹೌದು, ಸುದೀಪ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿಯಲ್ಲಿ ಚಿರಂಜೀವಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.

ಇದೇ ಸೈರಾ ನರಸಿಂಹ ರೆಡ್ಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿಯೇ ಸುದೀಪ್ ಕುದುರೆಯಿಂದ ಕೆಳ ಬಿದ್ದಿದ್ದರು. ಒಂದಷ್ಟು ದೂರ ಕುದುರೆ ಅವರನ್ನು ಎಳೆದುಕೊಂಡು ಹೋಗಿತ್ತು. ಆದರೆ ಸುದೀಪ್ ಅವರಿಗೆ ಯಾವುದೇ ರೀತಿಯ ಗಾಯಗಳೂ ಆಗಿಲ್ಲ.

ಮಹಾ ಅವಘಡವೊಂದರಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ ಅನ್ನುವ ಸುದ್ದಿ ಅನೇಕ ಕಡೆ ಇತ್ತೀಚಿಗೆ ಸದ್ದು ಮಾಡಲು ಶುರುವಿಟ್ಟುಕೊಂಡಿದೆ. ಇದೇ ಅವಘಡದ ಸದ್ದು ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ.

ಆದ್ರೀದು, ನಿಜಾನಾ.. ನಿಜಕ್ಕೂ ಸೈರಾ ನರಸಿಂಹ ರೆಡ್ಡಿ ಚಿತ್ರೀಕರಣದಲ್ಲಿ ಅವಘಡವಾಗಿತ್ತಾ, ಹೀಗೊಂದು ಪ್ರಶ್ನೆಗುತ್ತರವೆನ್ನುವಂತೆ ಇದೀಗ ಸುದೀಪ ಅಭಿಮಾನಿ ಸಂಘಗಳು ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕೊಡಲು ಶುರುವಿಟ್ಟುಕೊಂಡಿದ್ದಾರೆ.

ಹರಿದಾಡ್ತಿರುವ ಅವಘಡದ ಸುದ್ದಿಯನ್ನ ನಂಬಬೇಡಿ, ಕಿವಿಗೊಡಬೇಡಿ ಅನ್ನುತ್ತಿದ್ದಾರೆ. ಸುದೀಪ ಅವ್ರಿಗೆ ಏನು ಆಗಿಲ್ಲ.. ಕಿಚ್ಚ ಪೈಲ್ವಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ, ನೆಮ್ಮದಿಯಾಗಿರಿ ಅನ್ನುವ ಮನವಿಯನ್ನೂ ಅಭಿಮಾನಿಗಳಲ್ಲಿ ಮಾಡಿಕೊಳ್ಳುತ್ತಿವೆ ಸುದೀಪ ಫ್ಯಾನ್ಸ್ ಅಸೋಸಿಯೆಶನ್ಸ್..

LEAVE A REPLY

Please enter your comment!
Please enter your name here