Home Cinema ಕಿಚ್ಚ ಸುದೀಪ್‌ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ “ಕೋಟಿಗೊಬ್ಬ-3 ಚಿತ್ರಕ್ಕೆ ಬಾಲಿವುಡ್ ನಟ ಎಂಟ್ರಿ.??!! ಇನ್ನೂ ಯಾರೆಲ್ಲಾ...

ಕಿಚ್ಚ ಸುದೀಪ್‌ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ “ಕೋಟಿಗೊಬ್ಬ-3 ಚಿತ್ರಕ್ಕೆ ಬಾಲಿವುಡ್ ನಟ ಎಂಟ್ರಿ.??!! ಇನ್ನೂ ಯಾರೆಲ್ಲಾ ಇದ್ದಾರೆ ಗೊತ್ತಾ ಕೋಟಿಗೊಬ್ಬನ ಜೊತೆಯಲ್ಲಿ..?? ಸ್ಟೋರಿ ಓದಿ…

99
0
SHARE

ಕೋಟಿಗೊಬ್ಬ-3,ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಮಹತ್ವತಾಂಕ್ಷಿಯ ಚಿತ್ರ…ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಿಚ್ಚ ಸದ್ಯ ಕೋಟಗೊಬ್ಬ-3 ಚಿತ್ರದ ಚಿತ್ರೀಕರಣದಲ್ಲಿದ್ದಾರೆ..ಈಗಾಗಲೆ ಚಿತ್ರದ ನಾಯಕ ಮತ್ತು ನಾಯಕಿ ಇಲ್ಲದೆ ಒಂದಿಷ್ಟು ಭಾಗದವನ್ನು ಶೂಟ್ ಮಾಡಿ ಮುಗಿಸಿದ್ದ ಚಿತ್ರತಂಡವೀಗ ನಾಯಕ ಮತ್ತು ನಾಯಕಿಯೊಂದಿಗೆ ಚಿತ್ರೀಕರಣದ ಕಣಕ್ಕೆ ದುಮ್ಮುಕ್ಕಿದೆ…ಅಂದಹಾಗೆ ಕೋಟಿಗೊಬ್ಬ-3 ಶಿವಕಾರ್ತಿಕ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರ…ಬಹುನಿರೀಕ್ಷೆಯ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಣದ ಹೊಣೆ ಹೊತ್ತಿಕೊಂಡಿದ್ದಾರೆ. ಇಂಟ್ರಸ್ಟಿಂಗ್ ಅಂದ್ರೆ ಈ ಬಾರಿ ಕೋಟಿಗೊಬ್ಬನ ಜೊತೆಯಾರೆಲ್ಲ ಇರ್ತಾರೆ ಅನ್ನೋದು..ಯೆಸ್, ಈಗಾಗಲೆ ಕೋಟಿಗೊಬ್ಬನಿಗೆ ಪಕ್ಕದ ಮನೆಯಿಂದ ನಾಯಕಿನ್ನು ಕರೆತಂದು ಅಚ್ಚರಿ ಮೂಡಿಸಿತ್ತು ಚಿತ್ರತಂಡ.. ಮಲಯಾಳಿ ಕುಟ್ಟಿ ಮಡೋನ್ನಾ ಸಬಾಸ್ಟಿಯನ್ ಕಿಚ್ಚನ ಜೋತೆ ಅಭಿನಯಿಸೊ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟಿದ್ದಾರೆ…ಅಷ್ಟರಲ್ಲೆ ಈಗ ಕೋಟಿಗೊಬ್ಬನ ಅಡ್ಡಾದಿಂದ ಹೊರಬಿದ್ದ ಮತ್ತೊಂದು ಇಟ್ರಸ್ಟಿಂಗ್ ಸುದ್ದಿ ಅಂದ್ರೆ ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ನಟನ ಎಂಟ್ರಿಯಾಗಿದೆ..ಯೆಸ್, ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಕೋಟಿಗೊಬ್ಬನ ಜೊತೆ ಕಾಣಿಸಿಕೊಳ್ಳುತಿದ್ದಾರೆ..ಅಪ್ತಾಬ್ ಇಲ್ಲಿ ಇಂಟರ್ ಫೋಲ್ ಅಧಿಕಾರಿಯಾಗಿ ಮಿಂಚಲಿದ್ದಾರೆ..ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಅಫ್ತಾಬ್..ಅಷ್ಟಕ್ಕು ಕೋಟಿಗೊಬ್ಬನ ಜೊತೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಸಿಸಿಎಲ್ ಗೆಳೆತನ..ಕಿಚ್ಚ ಮತ್ತು ಅಫ್ತಾಬ್ ನಡುವಿನ ಸೆಲೆಬ್ರಿಟಿ ಕ್ರಿಕೇಟ್ ಲೀಗ್‌ನ ಸ್ನೇಹ ಅಫ್ತಾಬ್‌ರನ್ನ ಈಗ ಕನ್ನಡ ಚಿತ್ರರಂಗದವರೆಗು ಕರೆತಂದಿದೆ..ಮಿಸ್ಟರ್ ಇಂಡಿಯಾ,ಶೆಹೆನ್ಷಾ ಚಿತ್ರಗಳಲ್ಲಿ ಬಾಲನಟನಾಗಿ ಮಿಂಚಿದ್ದ ಅಪ್ತಾಬ್ ನಂತರ ಬಾಲಿವುಡ್‌ನ ಭರವಸೆಯ ನಟನಾಗಿ ಬೆಳೆದ ಶಿವದಾಸಾನಿ..ಓಂ ಶಾಂತಿ ಓಂ, ಪ್ಲೇಯರ್ಸ್, ಬಾಸ್ಕರ್ ಔರ್ ರಾಸ್ಕಲ್ ಸೇರಿದಂತೆ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ್ದಾರೆ..ಸದ್ಯ ಶಿವದಾಸನಿ ಕನ್ನಡ ಚಿತ್ರರಸಿಕರಮುಂದೆ ಬರ್ತಿದ್ದಾರೆ..ಇನ್ನು,ಕೋಟಿಗೊಬ್ಬನ ಎದುರಾಳಿಯಾಗಿ ಬಾಲಿವುಡ್‌ನ ಡಾನ್-೨ ಖ್ಯಾತಿಯ ನವಾಬ್ ಷಾ ಅಖಾಡಕ್ಕೆ ಇಳಿಯುತಿದ್ದಾರೆ..ಯೆಸ್ ನವಾಬ್ ಇಲ್ಲಿ ವಿಲನ್ ಆಗಿ ಕಾಣಿಸಿಕೊಳಳುತ್ತಿರವುದು ಚಿತ್ರದ ನಿರೀಕ್ಷೆಯ ಮೈಲೇಜ್‌ನ್ನು ದುಪ್ಪಟ್ಟು ಮಾಡಿದೆ..ಕಿಚ್ಚನ ಎದುರು ಘಟಾನುಘಟಿ ನಾಯಕರೆಲ್ಲ ಕಣಕ್ಕೆ ಇಳಿಯುತ್ತಿರುವುದು ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ..ವಿಶೇಷ ಅಂದ್ರೆ ದಿ ವಿಲನ್ ಚಿತ್ರದಲ್ಲಿ ವಿಲನ್ ಆಗಿ ಮಿಥುನ್ ಚಕ್ರವರ್ತಿ ಕಾಣಿಸಿಕೊಂಡ್ರೆ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತನಟ ಸುನಿಲ್ ಶೆಟ್ಟಿ ಮತ್ತು ಕಬೀರ್ ದುಹಾನ್ ಸಿಂಗ್ ಕಿಚ್ಚನ ಜೊತೆ ಕಾಣಿಸಿಕೊಳ್ಳುತಿದ್ದಾರೆ..ಇದ್ರಜತೆಗೀಗ ಕೋಟಿಗೊಬ್ಬ೩ ಚಿತ್ರದಲ್ಲೂ ಬಾಲಿವುಡ್ ನಟರ ಎಂಟ್ರಿಯಾಗಿದೆ..

 

LEAVE A REPLY

Please enter your comment!
Please enter your name here