ಕನ್ನಡ ಚಲನಚಿತ್ರ ಕಪ್… ಅಭಿನಯ ಚಕ್ರವರ್ತಿ ಸುದೀಪ ಅನಾವರಣ ಮಾಡಿದ ಕೆಸಿಸಿ ಮೊದಲ ಸೀಸನ್ ಯಶಸ್ಸಿನ ಜೊತೆಗೆ ಚಿತ್ರರಂಗದವ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಯಶಸ್ಸಿನ ಬೆನ್ನಲ್ಲೇ ಎರಡನೇ ಸೀಸನ್ ಗೆ ಕಿಚ್ಚನ ನೇತೃತ್ವದಲ್ಲಿ ರೆಡಿಯಾಗ್ತಿದೆ ಚಂದನವನ….ಕ್ರಿಕೆಟ್ ಹೆಸರಲ್ಲಿ ಚಿತ್ರರಂಗದವರನ್ನ ಒಂದೇ ಸೂರಿನಡಿ ಸೇರಿಸಿ, ಚಿತ್ರರಂಗದಲ್ಲಿ ಸ್ನೇಹ ಸಂಬಂಧ ಬೆಸೆಯುವ, ಗಟ್ಟಿಗೊಳಿಸುವ ಸುದೀಪನ ಹೊಸ ಮಂತ್ರವೇ ಈ ಕನ್ನಡ ಚಲನಚಿತ್ರ ಕಪ್..
ಏಪ್ರಿಲ್ ನಲ್ಲಿ ನಡೆದ ಕೆಸಿಸಿ ಕಪ್ ಭರಪೂರ ಮನರಂಜನೆ ಜೊತೆಗೆ ಕಲಾವಿದರು, ನಿರ್ದೇಶಕರು, ತಂತ್ರಜ್ಞರನ್ನು ಒಂದು ಗೂಡಿಸಿ ಚಂದನವನದಲ್ಲಿ ಹೊಸ ಸಂದೇಶ ಸಾರಿದ್ರು ಒನ್ ಎಂಡ್ ಓನ್ಲಿ ಕಿಚ್ಚ ಸುದೀಪ.ಇದೀಗ ಎರಡನೇ ಸೀಸನ್ ನಲ್ಲಿ ಹೊಸ ಮಾರ್ಪಾಡುಗಳ ಜೊತೆಗೆ ಇನ್ನಷ್ಟು ಮನರಂಜನೆ ನೀಡಲು ಕೆಸಿಸಿ ಕ್ರಿಕೆಟ್ ಟೀಂ ರೆಡಿಯಾಗಿದೆ..
ಸೆಪ್ಟೆಂಬರ್ 8,9 ರಂದು ನಡೆಯುವ ಕೆಸಿಸಿ ಕಪ್ ಗೆ ಭರಪೂರ ತಯಾರಿ ನಡೆಸುತ್ತಿದ್ದಾರೆ ಚಂದನವನದ ತಾರೆಯರು..…ನೆಟ್ಸ್ ನಲ್ಲಿ ಬೆವರು ಸುರಿಸಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ಕೆಸಿಸಿ ಸೀಸನ್ 2 ಗೆ ಇನ್ನು ಕೆಲವೇ ಕೆಲವು ದಿನ ಬಾಕಿ ಇದೆ..ಇದ್ರಿಂದ ಸೋಶಿಯಲ್ ಮೀಡಿಯಾದಲ್ಲಿ ಕೆಸಿಸಿ ಹೊಸ ಬಝ್ ಕ್ರಿಯೇಟ್ ಮಾಡ್ತಿದ್ದು, ಸ್ಟಾರ್ ನಟರುಗಳು ಕೆಸಿಸಿಗೆ ಆದರದ ಸ್ವಾಗತವನ್ನ ಕೋರುತ್ತಿದ್ದಾರೆ..
ಪವರ್ ಸ್ಟಾರ್ ಪುನೀತ ರಾಜ್ ಕುಮಾರ್, ಶಿವರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರುಳಿ,ಡಾಲಿ ಧನಂಜಯ್,ಉಪೇಂದ್ರ ಸೇರಿದಂತೆ ಸ್ಟಾರ್ ನಟರು ಸೆಪ್ಟೆಂಬರ್ 8,9 ರಂದು ನಡೆಯುವ ಕಲರ್ ಫುಲ್ ಕೆಸಿಸಿ ಕಪ್ ಗೆ ಎಲ್ಲರಿಗೂ ಆಧರದ ಆಮಂತ್ರಣ ಕೋರಿದ್ದಾರೆ. ಚಿತ್ರರಂಗದ ಸಂತಸದ ಜೊತೆ ಭಾಗಿಯಾಗಿ ಎಂದಿದ್ಧಾರೆ…
ಇನ್ನ ಕೆಸಿಸಿಯ ರೂವಾರಿ ಅಭಿನಯ ಚಕ್ರವರ್ತಿ ಸುದೀಪ ಕೂಡ ಪ್ರೀತಿಯ ಕರೆಯೋಲೆ ನೀಡಿದ್ದಾರೆ..ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ ಕೂಡ ಕೆಸಿಸಿ ಅಂಗಳವನ್ನ ಸೇರಿಕೊಂಡಿದ್ದು ಮತ್ತಷ್ಟು ರಂಗು ನೀಡಿದೆ..ಇನ್ನೂ ಸೀಸನ್ ಟು ಕಲರ್ ಫುಲ್ ,ಭರಪೂರ ಮನರಂಜನೆ ನೀಡೋದ್ರ ಜೊತೆ ಅಂತರಾಷ್ಷ್ಟ್ರೀಯ ಕ್ರಿಕೆಟ್ ದಿಗ್ಗಜರನ್ನು ಇಲ್ಲಿ ಕಣ್ತುಂಬಿಕೊಳ್ಳೋ ಅವಕಾಶ ಕಲ್ಪಸಿದ್ದಾರೆ ಕಿಚ್ಚ ಸುದೀಪ..
ಇಂಟರ್ ನ್ಯಾಷನಲ್ ಕ್ರಿಕೆಟ್ ದಿಗ್ಗಜರುಗಳಾದ ವಿರೇಂದ್ರ ಸೆಹ್ವಾಗ್, ಓವೆನ್ ಶಾ, ಲ್ಯಾನ್ಸ್ ಕ್ಲೂಸರ್, ತಿಲಕರತ್ನೆ ದಿಲ್ಷ್ಯಾನ್, ಗಿಲ್ ಕ್ರಿಸ್ಟ್, ಹರ್ಷಲ್ ಗಿಬ್ಸ್ ಈ ಬಾರಿಯ ಕೆಸಿಸಿ ಕಪ್ ನ ಮೈನ್ ಅಟ್ರ್ಯಾಕ್ಷನ್. ಇನ್ನು ಕೆಸಿಸಿ ಕಪ್ ಇನಾಗ್ರೇಶನ್ ಗೆ ಪಕ್ಕದ ಇಂಡಸ್ಟ್ರಿಯ ಚಲನಚಿತ್ರ ದಿಗ್ಗಜರು ಆಗಮಿಸುತ್ತಿರೋದು ಅಭಿಮಾನಿಗಳ ಸಂತಸಕ್ಕೆ ಮತ್ತೊಂದು ರೀಸನ್.
ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಸೆಪ್ಟೆಂಬರ್ 8,9ರಂದು ನಡೆಯುವ ಚಂದನವನದ ತಾರೆಗಳ ಕ್ರಿಕೆಟ್ ಕಪ್ ಗೆ ಎಲ್ಲಾ ತಾರೆಯರು ನೆಟ್ಸ್ ನಲ್ಲಿ ಬೆವರು ಹರಿಸುತ್ತಿದ್ದು, ಈ ಬಾರಿಯೂ ಕೂಡ ಕಳೆದ ಬಾರಿ ಇದ್ದ ಆರು ತಂಡಗಳು ಮುಂದುವರೆಯಲಿವೆ..ಕೆಸಿಸಿ ಮೊದಲ ಸೀಸನ್ ನಲ್ಲಿ ಶಿವರಾಜ್ ಕುಮಾರ್ ತಂಡ ಗೆದ್ದು ಕೆಸಿಸಿ ಕಪ್ ತನ್ನದಾಗಿಸಿಕೊಂಡಿತ್ತು..
ಈ ಬಾರಿ ಕೂಡ ಅದೇ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯಲಿದೆ ಶಿವಣ್ಣ ಟೀಂ.ಒಟ್ನಲ್ಲಿ ಸ್ನೇಹ ಸಂಬಂಧ ಬೆಸೆಯುವ ಎಲ್ಲರನ್ನು ಒಂದುಗೂಡಿಸುವ ಅಭಿನಯ ಚಕ್ರವರ್ತಿಯ ಕೆಸಿಸಿ ಕಫ್ ಈ ಬಾರಿ ಭರ್ತಿ ಮನರಂಜನೆ ಪ್ಯಾಕ್ ನೀಡೋದಂತೂ ಕನ್ ಫರ್ಮ್..ಇದ್ನೆಲ್ಲ ಎಂಜಾಯ್ ಮಾಡ್ಬೇಕು, ಎಲ್ಲಾ ತಾರೆಗಳನ್ನ ಒಂದೆಡೆ ನೋಡ್ಬೇಕು ಅಂದ್ರೆ ಸೆಪ್ಟೆಂಬರ್ 8,9 ನೀವು ಪ್ರೀ ಮಾಡ್ ಕೊಂಡು ಕನ್ನಡ ಚಲನ ಚಿತ್ರ ಕಪ್ ನೋಡ್ಲೇಬೇಕು..