Home Crime  ‘ಕಿಲ್ಲರ್ BMTC’ಗೆ ಮತ್ತೆ ಇಬ್ಬರು ವಿದ್ಯಾರ್ಥಿಗಳು ಬಲಿ..!  ಕಮರಿದ ಇಬ್ಬರು ಯುವಕರ ಕನಸು:ನಗರ ಸಾರಿಗೆ ಬಸ್...

 ‘ಕಿಲ್ಲರ್ BMTC’ಗೆ ಮತ್ತೆ ಇಬ್ಬರು ವಿದ್ಯಾರ್ಥಿಗಳು ಬಲಿ..!  ಕಮರಿದ ಇಬ್ಬರು ಯುವಕರ ಕನಸು:ನಗರ ಸಾರಿಗೆ ಬಸ್ ಗಳಿಗೆ ಇನ್ನೆಷ್ಟು ಅಮಾಯಕರ ಬಲಿ ಬೇಕು..???

723
0
SHARE

ಡೆಡ್ಲಿ ಡಿಸೆಂಬರ್ ಇವತ್ತು ಬೆಂಗಳೂರಿನಲ್ಲೂ ತನ್ನ ಆರ್ಭಟ ತೂರಿದೆ.. ಬೆಳಗ್ಗೆ 4 ಗಂಟೆಗೆ ಎದ್ದು ಮನೆ ಮನೆಗೆ ನ್ಯೂಸ್ ಪೆಪರ್ ಹಾಕಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಮಸಣ ಸೇರಿದ್ದಾರೆ.. ಕೃಷ್ಣನಿಗೆ ಕೈ ಮುಗಿದು ಕಾಲೇಜಿಗೆ ಹೊರಟ್ಟಿದ್ದ ಹುಡುಗರನ್ನ, ಕಿಲ್ಲರ್ ಬಿಎಂಟಿಸಿ ವೈಕುಂಠಕ್ಕೆ ಟಿಕೆಟ್ ಕೊಟ್ಟು ಕಳುಹಿಸಿದೆ.ಬೆಂಗಳೂರಿಗರೇ ನೀವು ರೋಡ್ ಬಿಟ್ಟು ಫುಟ್ ಪಾತ್ ನಲ್ಲಿ ನಡೆದ್ಕೊಂಡು ಹೋಗ್ತಾ ಇದ್ರೂ, ಒಮ್ಮೆ ಪಕ್ಕದಲ್ಲಿ ಬಿಎಂಟಿಸಿ ಬಸ್ ಬರ್ತಿದ್ಯಾ ಅನ್ನೋದನ್ನ ಗಮನಿಸಿ..

ಒಂದು ವೇಳೆ ನೀವು ಬಸ್ ಬರೋದನ್ನ ಗಮನಿಸಿಲ್ಲ ಅಂದ್ರೆ ಕ್ಷಣ ಮಾತ್ರದಲ್ಲಿ ನಿಮ್ಮ ಪ್ರಾಣಪಕ್ಷಿ ಹಾರಿ ಹೋಗೋದ್ರಲ್ಲಿ ಡೌಟೇ ಬೇಡ.. ಯಾಕಾಂದ್ರೆ ಇವತ್ತು ಬೆಳಗ್ಗೆ ಕೃಷ್ಣನಿಗೆ ಕೈ ಮುಗಿದು ಕಾಲೇಜಿಗೆ ಹೋಗ್ತಾ ಇದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ, ಯಮದೂತ ಬಿಎಂಟಿಸಿ ಬಸ್ ವೈಕುಂಠಕ್ಕೆ ಕಳುಹಿಸಿದೆ.

ಪಾಲಿಕೆ ವಿದ್ಯಾರ್ಥಿ ಚಂದ್ರಕಾಂತ್ ಆಗ ತಾನೆ ಎದ್ದು ಮಲಗಿದ್ದ ಅಮ್ಮನನ್ನು ಎಚ್ಚರಿಸದೇ ಟೀ ಮಾಡಿಕೊಂಡು ಅಮ್ಮನಿಗೂ ಉಳಿಸಿ ಬಂದಿದ್ದ, ಖರ್ಚಿಗೆ ಇಪ್ಪತ್ತು ರೂಪಾಯಿ ಕೇಳಿದ್ದ, ಅಮ್ಮ ಪರ್ಸಲ್ಲಿ ಇದೆ ತೆಗೆದುಕೊಂಡು ಹೋಗು ಎಂದಿದ್ರು, ಆದ್ರೆ ಪರ್ಸಲ್ಲಿ ಬರೀ ಇಪ್ಪತ್ತೇ ರೂಪಾಯಿ ಇರೋದನ್ನ ನೋಡಿ ಬರೀ ಗೈಯಲ್ಲಿ ಕಾಲೇಜಿಗೆ ನಡೆದಿದ್ದ, ಆದ್ರೇ ದಾರಿಯಲ್ಲಿ ಬಿಎಂಟಿಸಿ ಆತನ ಬದುಕಿನ ವ್ಯವಹಾರವನ್ನೇ ಮುಗಿಸಿ ಬಿಟ್ಟಿತು..

ಯೆಸ್, ಬೆಂಗಳೂರಿನ ಮೈಸೂರು ರಸ್ತೆಯಲ್ಲಿರೋ ಗೋಪಾಲನ್ ಸಿನಿಮಾಸ್ ಬಳಿ ಬಿಬಿಎಂಪಿ ಕಾಲೇಜಿಗೆ ಹೋಗುತ್ತಿದ್ದ ಯದು ಕುಮಾರ್ ಹಾಗೂ ಚಂದ್ರಕಾಂತ್ ರನ್ನು ಬಿಎಂಟಿಸಿ ಬಸ್ ಬಲಿ ಪಡೆದಿದೆ.. ಮೂವರು ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮೈಸೂರು ರಸ್ತೆಯ ಪಕ್ಕದಲ್ಲೇ ನಡೆದುಕೊಂಡು ಕಸ್ತೂರಬಾ ನಗರದಲ್ಲಿರೋ ಪಾಲಿಕೆ ಕಾಲೇಜಿಗೆ ಹೋಗ್ತಾ ಇದ್ರು, ಇದೇ ವೇಳೆ ಬ್ರೇಕ್ ಫೇಲ್ ಆಗಿದ್ದ, ಕೆಎ 57 294 ನಂಬರಿನ್ ಬಿಎಂಟಿಸಿ ಬಸ್ ಫುಟ್ ಪಾತ್ ನಲ್ಲಿ ಬರ್ತಾ ಇದ್ದ ಈ ಇಬ್ಬರ ಮೇಲೆ ಎರಗಿದೆ..

ಇನ್ನು, ಬ್ರೇಕ್ ಫೇಲೂರ್ ಬಸ್ ವಿದ್ಯಾರ್ಥಿಗಳ ಮೇಲೆ ಹರಿಯುತ್ತಿದ್ದಂತೆ ಚಾಲಕ ಲೋಕೇಶ್ ಸ್ಥಳದಲ್ಲೇ ಪ್ರಜ್ಞಾಹೀನನಾಗಿದ್ದ.. ಸ್ಥಳದಲ್ಲಿ ಕುಸಿದು ಬಿದ್ದವನಂತೆ ನಾಟಕ ಮಾಡಿ ಸ್ಥಳೀಯರಿಂದ ಬಚಾವ್ ಆಗಿದ್ದ, ಬಳಿಕ ಪೋಲಿಸರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದಾಗ ಖಾಕಿ ಎದುರು ನಿಜ ಬಾಯಿಬಿಟ್ಟಿದ್ದಾನೆ.. ಇತ್ತ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಮೃತಪಟ್ಟಿದ್ರು, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.. ಬಳಿಕ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾಗೆ ಮೃತ ದೇಹಗಳನ್ನು ರವಾನಿಸಿದ್ರು..

ಇತ್ತ, ಘಟನೆ ನಡೆಯುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಥಳಕ್ಕೆ ದೌಡಯಿಸಿದ್ರು, ಜೊತೆಗೆ ಬಿಬಿಎಂಪಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸ್ಟುಡೆಂಟ್ಸ್ ಆಗಿದ್ದರಿಂದ ಸ್ವತಃ ಮೇಯರ್ ಗಂಗಾಭಿಕೆ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದ್ರು, ಬಳಿಕ ಮೃತ ಚಂದ್ರಕಾಂತ್ ಹಾಗೂ ಯದು ಕುಮಾರ್ ಕುಟುಂಬಸ್ಥರಿಗೆ ಪರಿಹಾರವಾಗಿ ತಲಾ 10 ಲಕ್ಷ ರೂಪಾಯಿ ಘೋಷಿಸಿದ್ರು.. ಇತ್ತ ಬಿಎಂಟಿಸಿ ನಿಗಮದಿಂದಲೂ ಮೃತ ಕುಟುಂಸ್ಥರಿಗೆ ತಲಾ 2 ಲಕ್ಷ ರೂಪಾಯಿಗಳನ್ನ ನೀಡಲಾಗಿದೆ..

ಒಟ್ಟಾರೆ, ಬಾಳಿ ಬದುಕು ಬೇಕಿದ್ದ ಇಬ್ಬರು ಚಿರ ಯುವಕರನ್ನ ಯಮದೂತ ಬಿಎಂಟಿಸಿ ಬಲಿ ಪಡೆದಿದೆ.. ಬ್ರೇಕ್ ಕಟ್ ಆಗಿದ್ರೂ ಡಿಪೋ ಮ್ಯಾನೇಜರ್ ಸ್ಥಳದಲ್ಲೇ ಸರಿ ಪಡಿಸದೇ ಚಲಾಯಿಸಿಕೊಂಡು ಬಂದಿದ್ದೇ ಘಟನೆಗೆ ಪ್ರಮುಖ ಕಾರಣವಾಗಿದೆ.. ಬಿಎಂಟಿಸಿಯ ನಿರ್ಲಕ್ಷ್ಯಕ್ಕೆ ಇವತ್ತು ಎರಡು ಕುಟುಂಬಗಳು ವಯಸ್ಸಿಗೆ ಬಂದ ಮಗನನ್ನ ಕಳೆದುಕೊಂಡು ಶೋಕದಲ್ಲಿ ಮುಳುಗಿವೆ.. ಈ ಘಟನೆಯಿಂದಾದ್ರು, ಮುಂದೆ ಆಗುವ ಅಪಘಾತಗಳಿಗೆ ಬಿಎಂಟಿಸಿ ಬ್ರೇಕ್ ಹಾಕೋಕೆ ಮುಂದಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ..

LEAVE A REPLY

Please enter your comment!
Please enter your name here